Saturday, August 29, 2009

ಸದುಪಯೋಗಕ್ಕಾಗಿ

ಹಲೋ ಗೆಳೆಯರೇ ಇತ್ತಿಚಿನ ದಿನಗಳಲ್ಲಿ ನಾವು ಅರೋಗ್ಯದ ಕಡೆ ಗಮನವನ್ನೇ ಕೊಡುತ್ತಿಲ್ಲ ,ಆದ್ದರಿಂದ  ಹಲವು ರೋಗಗಳು ನಮ್ಮನು ಕಾಡುತ್ತವೆ.ಇದರಿಂದ ಮುಕ್ತರಗಬೇಕಾದರೆ ನಾವು ಸಮಲೋಲನ ಆಹಾರಗಳನ್ನು ಸೇವಿಸಬೇಕು,ಮತ್ತು ಯಾವ ಕಾಯಿಲೆಗೆ ಯಾವ ಮದ್ದು ಉತ್ತಮವೆಂದು ತಿಳಿಸಿಕೊಡುವ ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ ಇದನ್ನು ಓದಿ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬಾಳು ಹಸನಾಗುತ್ತದೆ ಅನ್ನುವುದು ನನ್ನ ಬಾವನೆ,

ಮನೆ ಮದ್ದು
ಹೊಟ್ಟೆನೋವಿಗೆ: ಬೆಲ್ಲದಲ್ಲಿ ಕಾಳುಮೆಣಸಿನಪುಡಿ ಬೆರೆಸಿ ಸೇವಿಸಿದರೆ ನೋವು ಶಮನವಾಗುತ್ತದೆ
ಒಣಕೆಮ್ಮು: ಬೆಲ್ಲದಲ್ಲಿ ಅರಿಶಿಣಪುಡಿ ಸೇರಿಸಿ ಸೇವಿಸಿದರೆ ಒಣಕೆಮ್ಮು ನಿವಾರಣೆಯಾಗಿ ಗಂಟಲಿಗೆ ಹಿತವಾಗಿರುತ್ತದೆ.
ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿ
ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿಯನ್ನೇ ಯಾವಾಗಲೂ ಊಟಕ್ಕೆ ಉಪಯೋಗಿಸಿ ಆನಂದವನ್ನು ಪಡೆಯಿರಿ. ಈ ಅಕ್ಕಿಗೆ ಆಡು ಭಾಷೆಯಲ್ಲಿ ಕೆಂಪು ಮುಂಡಗ ಅಕ್ಕಿ ಅಥವಾ ಕಜ್ಜಾಯ ಅಕ್ಕಿ ಎಂದೂ ಕರೆಯುತ್ತಾರೆ. ಈ ಅಕ್ಕಿಯಲ್ಲಿ ಬೇಕಾದಷ್ಟು ಪೌಷ್ಟಿಕಾಂಶಗಳು ಇವೆ. ಹೊರಗಡೆ ಯಾವುದೇ ಅಂಗಡಿಯಲ್ಲಿ ಇದು ದೊರಕುವಂತಾದ್ದಲ್ಲ. ಕೋಟಿ ರೂಪಾಯಿಗಳನ್ನು ಕೊಟ್ಟರೂ ಸಿಗುವುದಿಲ್ಲ. ಊಟ ಮಾಡುತ್ತಿರುವಾಗಲೇ ಈ ಪೌಷ್ಟಿಕಾಂಶಗಳು ದೇಹದಲ್ಲಿರುವ ಎಲ್ಲ ಕಸಕಡ್ಡಿಗಳನ್ನೂ, ಅತಿಯಾದ ವಾತ ಪಿತ್ತ ಕಫಗಳನ್ನೂ, ಯಾವುದೇ ರೀತಿಯ ಬೆನ್ನುನೋವು, ತಲೆನೋವು, ಸೊಂಟನೋವು, ಕಾಲುನೋವು, ತಲೆಭಾರ, ನಿದ್ರೆ ಸರಿಯಾಗಿ ಬಾರದಿರುವುದು, ಕೊಲೆಸ್ಟರಾಲನ್ನು ಪೂರ್ತಿಯಾಗಿ ಕರಗಿಸುವುದು. ಮುಂದೆ ಎಂದೆಂದಿಗೂ ಕೊಲೆಸ್ಟರಾಲ್ ದೇಹದಲ್ಲಿ ಸೇರಲು ಅವಕಾಶ ಕೊಡುವುದಿಲ್ಲ, ಬ್ಲಡ್ ಶುಗರನ್ನು ೧೦೦ ಕ್ಕೆ ೧೦೦ ರಷ್ಟು ಕಡಿಮೆಮಾಡುವುದು. ಇದನ್ನೆಲ್ಲ ವಿಜ್ನಾನಿಗಳು ದೃಡಪಡಿಸಿದ್ದಾರೆ. ಮನೆಯಲ್ಲಿ ಪಿ.ಸಿ. ಇದ್ದು ಇಂಟರ್ನೆಟ್ ಹಾಕಿಸಿಕೊಂಡಿರುವವರು ಗೂಗಲ್ ನಲ್ಲಿ ಜಾಲಾಡಿನೋಡಿ. ಈ ಕಜ್ಜಾಯ ಅಕ್ಕಿಗೆ ೧೦೦ ಕ್ಕೆ ೧೦೦ ರಷ್ಟು ಕ್ಯಾನ್ಸರ್ ವಾಸಿಮಾಡುವ ಶಕ್ತಿ ಇದೆ.
ಇದಲ್ಲದೆ ಆಸಿಡಿಟಿ, ಗ್ಯಾಸ್ಟ್ರೈಟಿಸ್, ಬೊಜ್ಜು ಈ ಎಲ್ಲವೂ ೧೦೦% ವಾಸಿಯಾಗುತ್ತದೆ. ಇದಲ್ಲದೇ ಮುಖವೂ ಕಾಂತಿಯುಕ್ತವಾಗುತ್ತದೆ. ಕಣ್ಣುಗಳು ಮಿನುಗುತ್ತವೆ. ಚಟುವಟಿಕೆ ಜಾಸ್ತಿಯಾಗುತ್ತದೆ. ಊಟ ಮಾಡಿದ ತಕ್ಷಣ ಹೊಟ್ಟೆ ಭಾರವಾಗುವುದಿಲ್ಲ. ಬ್ಲೋಟಿಂಗ್ ಅನುಭವ ಇರುವುದಿಲ್ಲ. ಹೊಟ್ಟೆಯಲ್ಲಿ ಸಂಕಟವಾಗುವುದೂ ನಿಂತುಹೋಗುತ್ತದೆ. ಹೊಟ್ಟೆ ಯಾವಾಗಲೂ ತಂಪಾಗಿರುತ್ತದೆ. ಮಲಬದ್ದತೆ ನಿರ್ನಾಮವಾಗಿ ದೊಡ್ಡಕರುಳಿನಲ್ಲಿ ಕಟ್ಟಿಕೊಂಡಿರುವ ಅತ್ಯಂತ ಕಟ್ಟಕಡೆ ಪಾಚಿಯೂ ಸಹ ಕೊಚ್ಚಿಕೊಂಡು ಹೋಗುತ್ತದೆ. ಮಲವಿಸರ್ಜನೆಯ ಬಳಿಕ ದೇಹ ಮತ್ತು ಮನಸ್ಸು ಆನಂದಮಯವಾಗುತ್ತದೆ. ಪ್ರತಿದಿನ ಮಲವಿಸರ್ಜನೆಯ ನಂತರ ದೇಹ ಮತ್ತು ಮನಸ್ಸು ಹಗುರವಾಗಿ ಚಟುವಟಿಕೆಯಿಂದ ಕೂಡಿರುತ್ತದೆ. ಕೆಂಪು ಅಕ್ಕಿಯಲ್ಲಿರುವ ಅತ್ಯಂತ ಶಕ್ತಿ ಬೇರೆ ಯಾವುದೇ ಇಲ್ಲ ಎಂದು ಕಾಣಿಸುತ್ತದೆ. ಎಲ್ಲ ಧಾನ್ಯಗಳಿಗೂ ತನ್ನದೇ ಆದ ಶಕ್ತಿ ಇರುತ್ತದೆ. ಎಲ್ಲಾ ಕಾಲಕ್ಕೂ ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿಯೇ ಸರ್ವಶ್ರೇಷ್ಟ ವಾದುದು.
ಬೇಸಿಗೆಯ ಆರೋಗ್ಯಕರ ಪಾನೀಯಗಳು
ಸಿಹಿ ಲಸ್ಸಿ:
ಸಿಹಿ ಮೊಸರಿಗೆ ಕಲ್ಲುಸಕ್ಕರೆ ಬೆರೆಸಿ ಮಿಕ್ಸರ್ ನಲ್ಲಿ ತಿರುವಿ ಲಸ್ಸಿ ತಯಾರಿಸಬೇಕು.
ಕಬ್ಬಿನ ಹಾಲು :
ಇದಕ್ಕೆ ನಿಂಬೆರಸ ಬೆರೆಸಿ ಸೇವಿಸಬೇಕು. ಇದು ಬೇಸಿಗೆಯಲ್ಲಿ ಮಾತ್ರ. ಬೇರೆ ಕಾಲಗಳಲ್ಲಿ
ಬರೀ ಕಬ್ಬಿನ ರಸ ಸೇವಿಸಬೇಕು. ಅದಕ್ಕೆ ಸಕ್ಕರೆ, ಬೆಲ್ಲ, ಜೇನುತುಪ್ಪ ಇತ್ಯಾದಿಗಳನ್ನು ಬೆರೆಸಬಾರಾದು.
ಕಲ್ಲಂಗಡಿ ಜ್ಯೂಸ್:
ಕಲ್ಲಂಗಡಿ ಹಣ್ಣಿನ ತಿರುಳಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾಳುಮೆಣಸಿನಪುಡಿ ಬೆರೆಸಿ ಮಿಕ್ಸಿ ಯಲ್ಲಿ ತಿರುವಬೇಕು.
ರಾಗಿ ಪಾನೀಯ:
ಮೊಳಕೆ ಬರಿಸಿದ ರಾಗಿ ರುಬ್ಬಿ ಸೋಸಿ, ಅದಕ್ಕೆ ಬೆಲ್ಲ ಹಾಕಿ ತಣ್ಣಗೆ ಅಥವಾ ಬಿಸಿ ಮಾಡಿ ಸೇವಿಸಬಹುದು.
ಟೊಮೇಟೋ ಪಾನೀಯ:
ಮೂರು ಟೋಮೇಟೋಗಳನ್ನು ಹೆಚ್ಚಿ ರುಬ್ಬಿ, ಅದಕ್ಕೆ ಕಿತ್ತಳೆ, ನಿಂಬೆ ಅಥವಾ ಮೋಸಂಬಿ ರಸ ಬೆರೆಸಿ.
ಹೆಸರಿನ ಪೇಯ:
ಹೆಸರು ಕಾಳನ್ನು ಹುರಿದು ಪುಡಿ ಮಾಡಿ, ನೀರು ಹಾಗೂ ಬೆಲ್ಲ ಸೇರಿಸಿ ಸೇವಿಸಿ. 
ಕಿತ್ತಳೆ ಲಸ್ಸಿ:
ಸಿಹಿ ಮೊಸರು ೧ ಕಪ್, ಕಿತ್ತಳೆ ರಸ ೧ ಕಪ್, ಸ್ವಲ್ಪ ಸಕ್ಕರೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ.
ರಸಾಯನ: ಸಿಹಿ ಮಾವಿನಹಣ್ಣನ್ನು ಕತ್ತರಿಸಿ ಸಕ್ಕರೆ ಜೊತೆ ಬೆರೆಸಿ ಮಿಕ್ಸರ್ ನಲ್ಲಿ ರುಬ್ಬಿ ನೀರಿನ ಬದಲು ಹಾಲು ಬೆರೆಸಿದರೆ ಮಾವಿನ ರಸಾಯನ ಅಥವಾ ಮಿಲ್ಕ್ ಶೇಕ್ ಸಿದ್ಧ. ಮಾವಿನ ಹಣ್ಣಿನ ಬದಲು ಬಾಳೆಹಣ್ಣಿನಿಂದಲೂ ತಯಾರಿಸಬಹುದು.
ಎಳ್ಳಿನ ನೀರು:
ಬಿಳಿ ಎಳ್ಳನ್ನು ಹುರಿದು ಪುಡಿ ಮಾಡಿ ಅದಕ್ಕೆ ನೀರು, ಬೆಲ್ಲ, ಚಿಟಿಕೆ ಏಲಕ್ಕಿ ಪುಡಿ ಬೆರೆಸಬೇಕು. 
ಈ ಮೇಲಿನ ಪಾನೀಯಗಳು ದೇಹವನ್ನು ತಂಪಾಗಿಡುತ್ತವೆ. ಬಾಯಾರಿಕೆ, ಸುಸ್ತು ನೀಗಿಸುತ್ತದೆ. ಅಗತ್ಯ ಪೋಷಕಾಂಶಗಳು, ನೀರಿನ ಅಂಶವನ್ನು ದೇಹಕ್ಕೆ ಪೂರೈಸುತ್ತದೆ.
ಕೂದಲು ಉದುರುವುದು
ಕೂದಲು ಉದುರುವುದಕ್ಕೆ ಶಕ್ತಿಹೀನತೆಯೇ ಮುಖ್ಯ ಕಾರಣ. ಪೋಷಕಾಂಶಗಳ ಅಭಾವದಿಂದ ಶಕ್ತಿಯ ಕೊರತೆಯುಂಟಾಗುವುದರಿಂದ ಇಳಿ ವಯಸ್ಸಿನಲ್ಲಿ ಹೆಚ್ಚು ಹೆಚ್ಚಾಗಿ ಕೂದಲು ಉದುರುವುದು. ಆದುದರಿಂದ ಉತ್ತಮ ಪೋಷಕಾಂಶಗಳುಳ್ಳ ಆಹಾರ ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿದ್ದಲ್ಲಿ ಕೂದಲು ಉದುರುವಿಕೆ ಅಷ್ಟಾಗಿ ಕಂಡುಬರುವುದಿಲ್ಲ. ಕೂದಲು ಉದುರುವುದನ್ನು ತಡೆಗಟ್ಟಬೇಕಾದರೆ ಮಾಂಸ, ಮೀನು, ಹಾಲು, ಬೆಣ್ಣೆ, ತುಪ್ಪ, ಮೊಳೆತ ಕಡಲೆಕಾಳು, ಮೊಳೆತ ಹೆಸರುಕಾಳು ಕ್ರಮವಾಗಿ ಸೇವಿಸಬೇಕು. ಕರಿದ ತಿಂಡಿ, ತಿನಸುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಕೋಪ, ವ್ಯಥೆ, ನಿರೀಕ್ಷೆ, ಕುತೂಹಲ, ಭಯ, ಚಿಂತೆ ಮತ್ತಿತರ ಕಾರಣಗಳಿಂದ ಮನಸ್ಸು ಕೆರಳದಂತೆ ಎಚ್ಚರಿಕೆ ವಹಿಸಬೇಕು. ನಿದ್ದೆ ಕೆಡುವುದು, ಅತಿಯಾದ ಲೈಂಗಿಕ ಸಂಭೋಗ, ಮಲಮೂತ್ರಗಳ ಒತ್ತಡ ತಡೆಹಿಡಿಯುವುದು ಸಾಧುವಲ್ಲ. ಪ್ರತಿದಿನವೂ ತಲೆಗೆ ತಣ್ಣೀರಿನ ತುಂತುರು ಸ್ನಾನ ಮಾಡುವ ಅಭ್ಯಾಸವಿಟ್ಟುಕೊಳ್ಳಬೇಕು. ಇದಿಷ್ಟೂ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದೇ ಅಲ್ಲದೆ, ಪ್ರತಿದಿನ ತಲೆಕೂದಲಿಗೆ ಎಳ್ಳೆಣ್ಣೆ ಅಥವಾ ಅಪ್ಪಟ ಕೊಬ್ಬರಿ ಎಣ್ಣೆ ಹಚ್ಚಿ ಬಾಚುತ್ತಿರಬೇಕು. ವಾರಕ್ಕೊಮ್ಮೆ ಅಭ್ಯಂಜನ ಸ್ನಾನ ಮಾಡಲು ಮರೆಯಬಾರದು. ಈ ಕ್ರಮ ಅನುಸರಿಸುವುದರಿಂದ ಕೂದಲು ಉದುರುವುದನ್ನು ಹಾಗೂ ತಲೆಯಲ್ಲಿ ಹೊಟ್ಟು ಏಳುವುದನ್ನು ಬಹುಮಟ್ಟಿಗೆ ನಿವಾರಿಸಬಹುದು.
ಮನೆ ಮದ್ದು:
೧)-ಸುಮಾರು ೧೦೦ ಗ್ರಾಂ ಕೊಬ್ಬರಿ ಎಣ್ಣೆಗೆ ಒಂದು ಟೀ ಚಮಚ ನಿಂಬೆರಸ ಹಿಂಡಿ. ನಂತರ, ಆ ಎಣ್ಣೆಯೊಂದಿಗೆ ಅಷ್ಟೇ ಪ್ರಮಾಣ ಸುಣ್ಣದ ತಿಳಿ ಮಿಶ್ರ ಮಾಡಿ ಚೆನ್ನಾಗಿ ಕುಲುಕಿ. ಈ ಮಿಶ್ರಣವನ್ನು ಪ್ರತಿದಿನವೂ ಕೂದಲಿಗೆ ಹಚ್ಚುವ ಅಭ್ಯಾಸವಿಟ್ಟುಕೊಳ್ಳಿ.
೨)-ರಾತ್ರಿ ಮಲಗುವುದಕ್ಕಿಂತ ಮುಂಚೆ ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ತಲೆಬುರುಡೆಗೆ ಹಚ್ಚಿ ಚೆನ್ನಾಗಿ ತಿಕ್ಕಿ, ಮರುದಿನ ಬೆಳಿಗ್ಗೆ ತಲೆಗೆ ಸ್ನಾನ ಮಾಡಿ. ವಾರಕ್ಕೆ ಎರಡು ಬಾರಿ ಈ ಕ್ರಮ ಅನುಸರಿಸಿ. 
೩)-ಕೂದಲಿನ ಬುಡಕ್ಕೆ ನಿಂಬೆ ರಸ ಹಚ್ಚಿ ಚೆನ್ನಾಗಿ ತಿಕ್ಕಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತಲೆ ತೊಳೆಯಿರಿ. 
೪)-ಮೆಂತ್ಯವನ್ನು ತಂಗಿನ ಹಾಲಿನೊಂದಿಗೆ ನುಣ್ಣಗೆ ಅರೆಯಿರಿ. ಈ ಸರಿಯನ್ನು ತಲೆಗೆ ಹಚ್ಚಿ ಚೆನ್ನಾಗಿ ತಿಕ್ಕಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತಲೆ ತೊಳೆಯಿರಿ.
೫)-ವಾರಕ್ಕೊಮ್ಮೆ ಬೇವಿನ ಎಲೆಗಳ ಕಷಾಯದಿಂದ ತಲೆ ತೊಳೆಯಿರಿ.
ಮನೆ ಮದ್ದುಗಳು
ವಸ್ತು : ಸೌತೆಕಾಯಿ
ಉಪಯೋಗ : ಜೀರ್ಣಶಕ್ತಿ ಹೆಚ್ಚಳ ಮತ್ತು ಉತ್ತಮ ನಿದ್ರೆ.
ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು. ಸೌತೆಕಾಯಿ ತಿರುಳಿನಿಂದ ಅಂಗಾಲು ಉಜ್ಜಿಕೊಂಡರೆ ಕಣ್ಣುಗಳ ಉರಿ ಶಾಂತವಾಗಿ ಚೆನ್ನಾಗಿ ನಿದ್ದೆ ಬರುತ್ತದೆ. ಮುಖದ ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ತಿಕ್ಕಿದರೆ ಮುಖ ಕಾಂತಿಯುಕ್ತವಾಗುವುದು. 
ವಸ್ತು : ಏಲಕ್ಕಿ
ಶಮನ : ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿರುವವರು ಏಲಕ್ಕಿ ಸೇವಿಸಿದರೆ ಶಮನಗೊಳ್ಳುವುದು. ಏಲಕ್ಕಿ ಯಿಂದ ಆಹಾರ ಜೀರ್ಣವಾಗಿ ಬಾಯಿಗೆ ರುಚಿಯುಂಟಾಗುತ್ತದೆ. ಒಣಕೆಮ್ಮು ಕಾಣಿಸಿಕೊಂಡಾಗ ಏಲಕ್ಕಿ ಪುಡಿಗೆ ಸ್ವಲ್ಪ ಶುಂಠಿ ಪುಡಿಯನ್ನು ಸೇರಿಸಿ ಸೇವಿಸಿದರೆ ಪರಿಣಾಮ ಬೀರುವುದು. ಮೇಲಿಂದ ಮೇಲೆ ಭೇದಿಯಾಗುತ್ತಿದ್ದರೆ ಸ್ವಲ್ಪ ಏಲಕ್ಕಿಯನ್ನು ಬೆಣ್ಣೆಯೊಡನೆ ಅರೆದು ತಿನ್ನುವುದರಿಂದ ಭೇದಿ ಕಡಿಮೆಯಾಗುತ್ತದೆ. 
ವಸ್ತು : ಮೆಣಸು
ಶಮನ : ಅಜೀರ್ಣ, ಮೊಡವೆ, ಜಂತುಹುಳು.
ಮೆಣಸನ್ನು ಚೆನ್ನಾಗಿ ಪುಡಿ ಮಾಡಿ ಶುಂಠಿಯ ರಸದೊಡನೆ ಸೇವಿಸುವುದರಿಂದ ಅಜೀರ್ಣವು ನಿವಾರಣೆಯಾಗುತ್ತದೆ. ಕೆಲವು ಮೆಣಸಿನ ಕಾಳುಗಳನ್ನು ನೀರಿನಲ್ಲಿ ತೇಯ್ದು ಮೊಡವೆಗಳಿರುವ ಜಾಗಕ್ಕೆ ಹಚ್ಚಿದರೆ ವಾಸಿಯಾಗುತ್ತವೆ. ಹೊಟ್ಟೆಯಲ್ಲಿ ಜಂತುಹುಳುಗಳ ಉಪಟಳ ಜಾಸ್ತಿಯಾದಾಗ ಬೆಳಗ್ಗೆ ಮತ್ತು ರಾತ್ರಿ ಮೆಣಸಿನ ಕಷಾಯವನ್ನು ಕುಡಿಯುವುದು ಪರಿಣಾಮಕಾರಿ. 
ವಸ್ತು : ಈರುಳ್ಳಿ
ಶಮನ : ರಕ್ತಹೀನತೆ, ಗಾಯದ ನೋವು, ರಕ್ತಸ್ರಾವ.
ಊಟದ ಜತೆ ಹಲವು ದಿನಗಳವರೆಗೆ ಪ್ರತಿನಿತ್ಯ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ರಕ್ತಹೀನತೆ ವಾಸಿಯಾಗುತ್ತದೆ. ಪಟಾಕಿ ಸಿಡಿದು ಉಂಟಾದ ಗಾಯಗಳಿಗೆ ಈರುಳ್ಳಿಯನ್ನು ಜಜ್ಜಿ ಕಟ್ಟುವುದರಿಂದ ನೋವು ಕಡಿಮೆಯಾಗುತ್ತದೆ. ಮೂಗಿನಿಂದ ಆಗಾಗ್ಗೆ ರಕ್ತ ಒಸರುತ್ತಿದ್ದರೆ, ಮೂಗಿಗೆ ಒಂದೆರಡು ತೊಟ್ಟು ಈರುಳ್ಳಿ ರಸವನ್ನು ಹಾಕುವುದರಿಂದ ರಕ್ತ ಒಸರುವುದು ನಿಲ್ಲುವುದು. 
ವಸ್ತು : ಕಡಲೆಕಾಳು
ಉಪಯೋಗ : ತೂಕ ಹೆಚ್ಚಳ, ಬಿಕ್ಕಳಿಕೆಗೆ ಕಡಿವಾಣ.
ಕಡಲೇಬೇಳೆಯನ್ನು ಚೆನ್ನಾಗಿ ಬೇಯಿಸಿ ಬೆಲ್ಲದೊಡನೆ ರುಬ್ಬಿ ತಯಾರಿಸಿದ ಹೂರಣವನ್ನು ಮಿತ ಪ್ರಮಾಣದಲ್ಲಿ ಹಲವು ದಿವಸ ತಿಂದರೆ ಶರೀರದ ತೂಕವು ಹೆಚ್ಚಾಗುವುದು. ಹುರಿದ ಕಡಲೆಯ ಹಿಟ್ಟನ್ನು ಕೆಂಡದ ಮೇಲೆ ಹಾಕಿ ಬಂದ ಹೊಗೆಯನ್ನು ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.
ವಸ್ತು : ಹಲಸಿನ ಹಣ್ಣು
ಶಮನ : ತಲೆನೋವು, ನಿತ್ರಾಣ
ಸಾಮಾನ್ಯ ತಲೆನೋವು ಇರುವಾಗ, ಸ್ವಲ್ಪ ತುಪ್ಪದೊಡನೆ ಬೆಲ್ಲ ಸೇರಿಸಿ ಸೇವಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಗರ್ಭಿಣಿಯರಿಗೆ ಮತ್ತು ಇತರರಿಗೆ ಆಗಾಗ್ಗೆ ನಿತ್ರಾಣವೆನಿಸಿದಾಗ ಬಿಸಿ ಹಾಲಿನ ಜೊತೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿಯುವುದರಿಂದ ಚೈತನ್ಯ ಮೂಡುವುದು.
ವಸ್ತು : ಶುಂಠಿ
ಶಮನ : ಗಂಟಲು ಕಟ್ಟುವಿಕೆ, ಬಾಯಿ ವಾಸನೆ
ಶೀತ ಅಥವಾ ಇನ್ನಾವುದೇ ತೊಂದರೆಗಳಿಂದ ಗಂಟಲು ಕಟ್ಟಿ ಸರಿಯಾಗಿ ಮಾತನಾಡಲು ತೊಂದರೆಯಾದರೆ, ಹಸಿಶುಂಠಿ, ಲವಂಗ ಮತ್ತು ಸ್ವಲ್ಪ ಅಡುಗೆ ಉಪ್ಪು ಸೇರಿಸಿ ಬಾಯಿಗೆ ಹಾಕಿಕೊಂಡು ಚಪ್ಪರಿಸಿದರೆ ಗಂಟಲು ಕಟ್ಟುವುದು ನಿವಾರಣೆಯಾಗುತ್ತದೆ. ಶುಂಠಿ ಸುಟ್ಟು ಬೂದಿ ಮಾಡಿಟ್ಟುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಹಲ್ಲುಜ್ಜುವುದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ. 
ವಸ್ತು : ಮೆಂತ್ಯಸೊಪ್ಪು
ಶಮನ : ಸಕ್ಕರೆ ಕಾಯಿಲೆ
ಸಕ್ಕರೆ ರೋಗ ನಿಯಂತ್ರಣದಲ್ಲಿ ಮೆಂತ್ಯಸೊಪ್ಪು ಸಹಕಾರಿ.
ಸಕ್ಕರೆ ಕಾಯಿಲೆ ಕಾಣಿಸಿಕೊಂಡ ಆರಂಭದಲ್ಲಿಯೇ ಪ್ರತಿದಿವಸ ಬೆಳಿಗ್ಗೆ ಮೆಣ್ತ್ಯಸೊಪ್ಪಿನ ರಸವನ್ನು ಕುಡಿಯುತ್ತಾ ಬಂದರೆ ಪರಿಣಾಮ ಬೀರುವುದು. ಮೆಂತ್ಯಸೊಪ್ಪಿನಂತೆಯೇ ಮೆಂತ್ಯ ಕೂಡ ಔಷಧೀಯ ಗುಣಗಳನ್ನು ಹೊಂದಿದೆ. 
ವಸ್ತು : ಎಳ್ಳು
ಶಮನ : ಸುಟ್ಟ ಗಾಯ, ಉರಿಮೂತ್ರ
ಸುಟ್ಟಗಾಯಕ್ಕೆ ಎಳ್ಳೆಣ್ಣೆ ಹಚ್ಚುವುದರಿಂದ ಗಾಯ ಬೇಗ ವಾಸಿಯಾಗುತ್ತದೆ. ಎಳ್ಳು ಮತ್ತು ಸೌತೆಬೀಜವನ್ನು ಅರೆದು ಹಾಲು, ತುಪ್ಪದೊಡನೆ ಸೇರಿಸಿ ಕುಡಿಯುವುದರಿಂದ ಎಲ್ಲ ರೀತಿಯ ಕಟ್ಟು ಮೂತ್ರ ಮತ್ತು ಉರಿಮೂತ್ರ ಗುಣವಾಗುತ್ತದೆ. 
ಸಾಸಿವೆ(ಮಸ್ಟರ್ಡ್)
ಶಮನ : ಹಲ್ಲು ನೋವು, ಉಪ್ಪಿನಕಾಯಿ ಶಿಲೀಂದ್ರ
ಹಲ್ಲು ನೋವಿರುವವರು ಸ್ವಲ್ಪ ಸಾಸಿವೆ ಕಾಳನ್ನು ಅಗಿದು ಸ್ವಲ್ಪ ಹೊತ್ತಿನ ನಂತರ ಉಗಿಯಬೇಕು. ಇದರಿಂದ ಹಲ್ಲುನೋವು ನಿವಾರಣೆಯಾಗುತ್ತದೆ. ಜತೆಗೆ ಹಸಿವನ್ನೂ ಹೆಚ್ಚಿಸುತ್ತದೆ. ಉಪ್ಪಿನಕಾಯಿಯಲ್ಲಿ ಸಾಸಿವೆಯನ್ನು ಸ್ವಲ್ಪ ಹೆಚ್ಚು ಬಳಸಿದರೆ, ಬೇಗ ಕೆಡುವುದಿಲ್ಲ. ಸಾಮಾನ್ಯವಾಗಿ ಉಪ್ಪಿನಕಾಯಿ ಹಾಳಾಗಲು ಆಸ್ಟರ್ಜಲಿನ್ ಎಂಬ ಶಿಲೀಂದ್ರ ಕಾರಣವಾಗಿದ್ದು, ಇದು ಬೆಳೆಯುವುದನ್ನು ಸಾಸಿವೆ ತಡೆಯುತ್ತದೆ. 
ವಸ್ತು : ಗೋಧಿ 
ಶಮನ : ಹೊಟ್ಟೆ ಹುಣ್ಣು, ಕೀಲುನೋವು
ಗೋಧಿ ಹಿಟ್ಟಿನಲ್ಲಿ ಚಪಾತಿ ಮಾಡಿ ತಿನ್ನುವುದರಿಂದ ಹೊಟ್ಟೆಯಹುಣ್ಣು ನಿವಾರಣೆಯಾಗುವುದು. ಜತೆಗೆ ಹಲ್ಲು ಮತ್ತು ವಸಡುಗಳಿಗೆ ಶಕ್ತಿ ಬರುವುದು. ಗೋಧಿ ಹಿಟ್ಟಿನ ತಂಬಿಟ್ಟು ಮಾಡಿಕೊಂಡು ತಿಂದರೆ ಕೀಲು ಮತ್ತು ಎಲುಬು ನೋವು ಶಮನಗೊಳ್ಳುವುದು.
ವಸ್ತು : ಶುಂಠಿ
ಶಮನ : ಅಜೀರ್ಣ, ನೆಗಡಿ, ಹಲ್ಲುನೋವು.
ಊಟ ಮಾಡುವುದಕ್ಕೆ ಮೊದಲು ಅವರೆಕಾಳಿನಷ್ಟು ಹಸಿಶುಂಠಿಯನ್ನು ನಾಲ್ಕು ಹರಳು ಉಪ್ಪು ಸಹಿತ ಅಗಿದು ತಿಂದರೆ ಅಜೀರ್ಣದ ಸಮಸ್ಯೆ ಇಲ್ಲವಾಗುವುದು. ಹಸಿಶುಂಠಿಯ ಕಷಾಯಕ್ಕೆ ಸಕ್ಕರೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ನೆಗಡಿ ನಿವಾರಣೆಯಾಗುವುದು. ಒಣಶುಂಠಿಯನ್ನು ಕೆಂಡದ ಮೇಲೆ ಸುಟ್ಟು ಪುಡಿ ಮಾಡಿ ಅದಕ್ಕೆ ಉಪ್ಪಿನ ಪುಡಿ ಬೆರೆಸಿ ಹಲ್ಲು ತಿಕ್ಕಿದರೆ ಹಲ್ಲು ನೋವು ಶಮನವಾಗುವುದು. 
ವಸ್ತು : ಜೇನುತುಪ್ಪ
ಶಮನ : ಸುಟ್ಟ ಗಾಯ, ಚರ್ಮರೋಗ.
ಸುಟ್ಟ ಗಾಯಕ್ಕೆ ತಕ್ಷಣ ಜೇನುತುಪ್ಪ ಹಚ್ಚುವುದರಿಂದ ಉರಿ ಶಮನವಾಗಿ ಗಾಯ ಶೀಘ್ರ ಮಾಗುತ್ತದೆ. ಹುಳುಕಡ್ಡಿ, ಇಸಬು ಮುಂತಾದ ಚರ್ಮರೋಗಗಳಿಗೆ ಮತ್ತು ಹುಣ್ಣುಗಳ ಮೇಲೆ ಜೇನುತುಪ್ಪ ಸವರುವುದರಿಂದ ಗುಣವಾಗುವುದು. 
ವಸ್ತು : ಕಡಲೇ ಕಾಳು 
ಶಮನ : ನಿಶ್ಯಕ್ತಿ, ನೆಗಡಿ
ನಿಶ್ಯಕ್ತಿಯಿಂದ ಬಳಲುವವರು, ಹೆಚ್ಚು ವ್ಯಾಯಾಮ ಮಾಡುವವರು ಎರಡು ಮೂರು ಚಮಚದಷ್ಟು ಕಡಲೇ ಕಾಳನ್ನು ತಣ್ಣೀರಿನಲ್ಲಿ ರಾತ್ರಿ ನೆನೆಸಿಟ್ಟು ಬೆಳಗ್ಗೆ ಒಣದ್ರಾಕ್ಷಿಯ ಜತೆ ಅಗಿದು ಸೇವಿಸಿ ನಂತರ ಹಾಲು ಕುಡಿದರೆ ನಿಶ್ಯಕ್ತಿ ಕಡಿಮೆಯಾಗುವುದು. ನೆಗಡಿಯಿರುವವರು ಬಿಸಿಯಾದ ಕಡಲೆಯನ್ನು ತಿನ್ನುವುದರಿಂದ ಶೀತ ಕಡಿಮೆಯಾಗುತ್ತದೆ. 
ವಸ್ತು : ಹಲಸಿನ ಹಣ್ಣು
(ಜ್ಯಾಕ್ ಫ್ರೂಟ್)
ಶಮನ : ಪಿತ್ತ ವಿಕಾರ, ನರಗಳ ದೌರ್ಬಲ್ಯ.
ಹಲಸಿನ ಹಣ್ಣನ್ನು ಜೇನುತುಪ್ಪದೊಡನೆ ತಿನ್ನುತ್ತಾ ಬಂದರೆ ಪಿತ್ತವಿಕಾರಗಳು ಶಮನಗೊಳ್ಳುವುದು. ತೊಳೆಗಳನ್ನು ಸಣ್ಣದಾಗಿ ತುಂಡುಮಾಡಿ ಬಾಳೆಹಣ್ಣು, ಜೇನುತುಪ್ಪದೊಡನೆ ಸೇವಿಸಿದರೆ ದೈಹಿಕ ಶಕ್ತಿ ಹೆಚ್ಚುವುದಲ್ಲದೇ ನರಗಳ ದೌರ್ಬಲ್ಯ ಕಡಿಮೆಯಾಗುತ್ತದೆ. ಹಲಸಿನ ಸೇವನೆಯಿಂದ ವೀರ್ಯ್ ವೃದ್ಧಿಯೂ ಆಗುತ್ತದೆ. ಅತಿಯಾಗಿ ತಿಂದರೆ ಹೊಟ್ಟೆನೋವು ಬರುವ ಸಾಧ್ಯತೆ ಇದೆ. 
ವಸ್ತು : ಸೀತಾಫಲ (ಕಸ್ಟರ್ಡ್ ಆಪಲ್)
ಉಪಯೋಗ : ಜೀರ್ಣಶಕ್ತಿ ಹೆಚ್ಚಳ, ರಕ್ತವೃದ್ಧಿ.
ಪ್ರತಿದಿನ ಊಟದ ನಂತರ ಈ ಹಣ್ಣನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುವುದು. ಇದು ತಂಪುಕಾರಕವಾಗಿದ್ದು ಸೇವನೆಯಿಂದ ರಕ್ತವೃದ್ಧಿಯಾಗುವುದರ ಜತೆಗೆ ಸ್ನಾಯುಗಳು ಬಲಗೊಳ್ಳುತ್ತವೆ. ವಾಂತಿ ಹಾಗೂ ಹೊಟ್ಟೆ ಉರಿ ಶಮನವಾಗುತ್ತದೆ. ಕುರುಗಳನ್ನು ಪಕ್ವಗೊಳಿಸಲು ಹಣ್ಣಿನ ತಿರುಳನ್ನು ಉಪ್ಪಿನ ಜತೆ ಬೆರೆಸಿ ಲೇಪಿಸಬೇಕು. 
ವಸ್ತು : ಹಾಗಲಕಾಯಿ 
(ಬಿಟ್ಟರ್ ಗೌರ್ಡ್)
ಶಮನ : ಮಧುಮೇಹ, ಕರುಳಿನ ಹುಣ್ಣು, ಮೂಲವ್ಯಾಧಿ.
ಮಧುಮೇಹದಿಂದ ನರಳುತ್ತಿರುವ ರೋಗಿಗಳು ಹಾಗಲಕಾಯಿಯನ್ನು ಹಸಿಯಾಗಿ ತಿಂದರೆ ರೋಗ ಉಲ್ಬಣಿಸದೆ ಬಹುಪಾಲು ಗುಣವಾಗುವುದು. ಹಾಗಲಕಾಯಿಯ ಗೊಜ್ಜು ಮಾಡಿಕೊಂಡು ಕ್ರಮವಾಗಿ ಸೇವಿಸುತ್ತಿದ್ದರೆ ರಕ್ತ ಶುದ್ಧಿಯಾಗುವುದು. ಕರುಳಿನ ಹುಣ್ಣು, ಮೂಲವ್ಯಾಧಿ ಹಾಗೂ ಕೆಮ್ಮು ನಿವಾರಣೆಯಾಗುವುದು.
ವಸ್ತು : ಅಂಜೂರ (ಫಿಗ್)
ಶಮನ : ಒತ್ತಡ, ಮಲಬದ್ಧತೆ, ಮೂಲವ್ಯಾಧಿ.
ಅಂಜೂರದ ಹಣ್ಣುಗಳ ಸೇವನೆಯಿಂದ ಅಧಿಕ ಕೆಲಸದಿಂದ ಉಂಟಾದ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಯಾಗುವುದು. ನವ ಚೈತನ್ಯ ಮೂಡುವುದು. ಈ ಹಣ್ಣಿನಲ್ಲಿ ನಾರಿನಂಶವಿರುವುದರಿಂದ ಮಲಬದ್ಧತೆ ಶಮನವಾಗುವುದು. ಮೂಲವ್ಯಾಧಿಯಿಂದ ಬಳಲುವವರು ಮೂರು ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಗುಣವಾಗುವುದು. 
ವಸ್ತು ಸೇಬು (ಆಪಲ್) 
ಶಮನ : ತಲೆನೋವು, ಮರೆವು, ಮೊಡವೆ.
ಸೇಬಿನ ಹಣ್ಣನ್ನು ತುಂಡುಮಾಡಿಕೊಂಡು ಉಪ್ಪು ಸಹಿತ ನಿರಂತರ ಸೇವಿಸಿದರೆ ತಲೆನೋವು ಕಡಿಮೆಯಾಗುವುದು. ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಂಡರೆ ಮೊಡವೆಗಳು ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚುವುದು. ಊಟವಾದ ಬಳಿಕ ಸೇಬನ್ನು ತಿಂದರೆ ಜ್ನಾಪಕ ಶಕ್ತಿ ಹೆಚ್ಚುವುದು. 
ವಸ್ತು : ಪರಂಗಿ ಹಣ್ಣು
(ಪಪಾಯ)
ಶಮನ : ಹೃದಯ ದೌರ್ಬಲ್ಯ
ಪರಂಗಿಹಣ್ಣಿನ ಜತೆ ಹಾಲು ಮತ್ತು ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಹೃದಯ ದೌರ್ಬಲ್ಯ ನಿವಾರಣೆಯಾಗಿ ಹೊಸ ಚೈತನ್ಯ ಮೂಡುವುದು. ಹಾಲುಣಿಸುವ ತಾಯಂದಿರು ಹಣ್ಣನ್ನು ನಿಯಮಿತವಾಗಿ ಬಳಸುವುದರಿಂದ ಶಕ್ತಿ ಹೆಚ್ಚುವುದು. ಊಟದ ನಂತರ ಹಣ್ಣನ್ನು ಸೇವಿಸುತ್ತಾ ಬಂದರೆ ಆಹಾರ ಚೆನ್ನಾಗಿ ಜೀರ್ಣವಾಗುವುದು. 
ವಸ್ತು : ಕಡಲೇಕಾಯಿ 
ಉಪಯೋಗ : ಮುಖದ ಕಾಂತಿ ಹೆಚ್ಚಳ, ಮಧುಮೇಹಿಗಳಿಗೆ ಅನುಕೂಲ.
ಒಂದು ಚಮಚ ಕಡಲೇಕಾಯಿ ಎಣ್ಣೆಗೆ ಅಷ್ಟೇ ಪ್ರಮಾಣದ ನಿಂಬೆ ರಸ ಬೆರೆಸಿ ರಾತ್ರಿ ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಗೋಧಿ ಹಿಟ್ಟು ಹಾಗೂ ಶೇಂಗಾ ಹಿಟ್ಟು ಬೆರೆಸಿದ ರೊಟ್ಟಿಯು ಮಧುಮೇಹಿಗಳಿಗೆ ಹಿತ. ಶೇಂಗಾ ಹಿಂಡಿಯಲ್ಲಿ ಉತ್ತಮ ಸಸಾರಜನಕವಿದ್ದು, ದನಕರುಗಳಿಗೆ ಉತ್ತಮ. 
ವಸ್ತು : ಮಾವು (ಮ್ಯಾಂಗೊ)
ಶಮನ : ಮೂಲವ್ಯಾಧಿ, ವಾತ-ಪಿತ್ತ, ಮಲಬದ್ಧತೆ, ಅಜೀರ್ಣ.
ಹುಣಸೆ ಚಿಗುರು ಮತ್ತು ಎಳೆ ಮಾವಿನಕಾಯಿಯನ್ನು ಬೇಯಿಸಿಕೊಂಡು ತಿಂದರೆ ಮೂಲವ್ಯಾಧಿ ಗುಣವಾಗುವುದು. ಹಣ್ಣನ್ನು ಹಿತಮಿತವಾಗಿ ತಿಂದರೆ ವಾಯು ಶಮನಗೊಳ್ಳುವುದು. ವಾತ-ಪಿತ್ತ ನಾಶಗೊಳಿಸಿ ಹೃದಯಕ್ಕೆ ಹಿತವಾಗುವುದು. ಉಪ್ಪು ಮತ್ತು ಜೇನುತುಪ್ಪವನ್ನು ನಂಚಿಕೊಂಡು ಮಾವಿನಕಾಯಿ ಹೀಚು ತಿಂದರೆ ಮಲಬದ್ಧತೆ ಮತ್ತು ಅಜೀರ್ಣ ನಿವಾರಣೆಯಾಗುವುದು. 
ವಸ್ತು : ಅಡುಗೆ ಉಪ್ಪು
ಶಮನ : ಬಾಯಿ ಹುಣ್ನು
ಒಂದು ಬಟ್ಟಲು ಬಿಸಿನೀರಿನಲ್ಲಿ ಅರ್ಧ ಟೀ ಚಮಚ ಉಪ್ಪನ್ನು ಕರಗಿಸುವುದು. ನಂತರ ಈ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಶಮನವಾಗುವುದು.
ವಸ್ತು : ಮೆಣಸು 
ಶಮನ : ಹಲ್ಲುನೋವು
ಮೆಣಸನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚುವುದರಿಂದ ಕೆಟ್ಟ ನೀರು ಸುರಿದುಹೋಗಿ ನೋವು ಕಡಿಮೆಯಾಗುವುದು. ವಸಡಿಗೆ ನಿಂಬೆರಸ ಹಚ್ಚುವುದರಿಂದ ಹಲ್ಲುನೋವು ಶಮನವಾಗುವುದು. 
ವಸ್ತು : ಕಿತ್ತಳೆ
ಶಮನ : ಮುಖದಲ್ಲಿ ಕಲೆ
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಮುಖದಲ್ಲಿ ಕಲೆಯಿರುವ ಭಾಗದಲ್ಲಿ ಮೃದುವಾಗಿ ತಿಕ್ಕಬೇಕು. ಪ್ರತಿದಿನ ಹೀಗೆ ಮಾಡುತ್ತಿದ್ದರೆ ಮುಖದಲ್ಲಿನ ಮೊಡವೆಗಳು ಹಾಗೂ ಕಪ್ಪು ಕಲೆಗಳು ನಿವಾರಣೆಯಗುವುವು. 
ವಸ್ತು : ಕೊತ್ತಂಬರಿ
ಶಮನ : ತಲೆನೋವು, ಬಾಯಿಯ ದುರ್ಗಂಧ.
ಕೊತ್ತಂಬರಿ ಸೊಪ್ಪಿನ ರಸವನ್ನು ಹಣೆಗೆ ಲೇಪ ಹಾಕುವುದರಿಂದ ತಲೆನೋವು ನಿವಾರಣೆಯಾಗುವುದು. ಬರೀ ಕೊತ್ತಂಬರಿಸೊಪ್ಪನ್ನು ಬಾಯಿಯಲ್ಲಿ ಜಗಿಯುವುದರಿಂದ ಬಾಯಿಯಿಂದ ದುರ್ಗಂಧ ಬರುವುದಿಲ್ಲ. ಜತೆಗೆ ದಂತ ಕ್ಷಯವೂ ನಿವಾರಣೆಯಾಗುತ್ತದೆ.
ವಸ್ತು : ಉದ್ದು
ಶಮನ : ವೀರ್ಯ ವೃದ್ಧಿಯಾಗಿ ಶಾರೀರಿಕ ಬಲ.
ಉದ್ದಿನ ಬೇಳೆಯನ್ನು ಹುರಿದು ಹಾಲಿನಲ್ಲಿ ಬೇಯಿಸಿ ಸಕ್ಕರೆ, ಏಲಕ್ಕಿ ಸೇರಿಸಿ ಪಾಯಸ ಮಾಡಿ ಸೇವಿಸುವುದರಿಂದ ವೀರ್ಯ ವೃದ್ಧಿಯಾಗಿ ಶಾರೀರಿಕ ಬಲ ಹೆಚ್ಚುವುದು. ಉದ್ದಿನ ಬೇಳೆ ತೊವ್ವೆಯನ್ನು ತಯಾರಿಸಿ ಊಟದ ಜತೆ ಸೇವಿಸಿದರೆ ಅಂಗಾಂಗಗಳು ಬಲಗೊಳ್ಳುವುವು. 
ವಸ್ತು : ನಿಂಬೆ
ಶಮನ : ಸೊಳ್ಳೆಗಳ ಕಾಟ, ಬಾಯಿಯ ದುರ್ವಾಸನೆ.
ಸೊಳ್ಳೆಗಳು ಹೆಚ್ಚಾಗಿರುವ ಪ್ರದೇಶದಲ್ಲಿ ವಾಸಿಸುವ ಜನರು ಮೈಕೈಗೆ ನಿಂಬೆರಸ ಸವರಿಕೊಂಡರೆ ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ. ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ನಿಂಬೆರಸವನ್ನು ನೀರಿನಲ್ಲಿ ಬೆರೆಸಿ ಆಗಾಗ ಬಾಯಿ ಮುಕ್ಕಳಿಸುವುದರಿಂದ ನಿವಾರಣೆಯಾಗುವುದು. 
ವಸ್ತು : ಲವಂಗ
ಶಮನ : ಹಲ್ಲು ನೋವು, ಕೆಮ್ಮು.
ಹಲ್ಲು ನೋವಿಗೆ ಲವಂಗದ ಎಣ್ಣೆ ಅಥವಾ ಲವಂಗದ ಮುಲಾಮನ್ನು ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ. ಸಾಧಾರಣ ಕೆಮ್ಮು ಕಾಣಿಸಿಕೊಂಡಾಗ ಕಲ್ಲುಸಕ್ಕರೆ ಮತ್ತು ಲವಂಗವನ್ನು ಬಾಯಿಗೆ ಹಾಕಿಕೊಂಡು ಜಗಿದು ರಸ ನುಂಗುವುದರಿಂದ ಶಮನವಾಗುವುದು.
ವಸ್ತು : ತುಳಸಿ
ಶಮನ : ಮೈಕೈನೋವು
ಒಂದು ಲೋಟ ನೀರಿನಲ್ಲಿ ಹತ್ತು ತುಲಸಿ ಎಲೆಗಳನ್ನು ಚೆನ್ನಾಗಿ ಕುದಿಸುವುದು. ನೀರು ಚೆನ್ನಾಗಿ ಕುದಿದು ಅರ್ಧ ಲೋಟ ಆದಮೇಲೆ ಸೋಸಿಕೊಳ್ಳುವುದು. ತಣ್ಣಗಾದ ಕಷಾಯಕ್ಕೆ ಉಪ್ಪನ್ನು ಹಾಕಿ ಕುಡಿಯುವುದು. ಮೈಕೈನೋವು ನಿಲ್ಲುವವರೆಗೂ ಪ್ರತಿದಿನ ಈ ಕಷಾಯ ಬಳಸುವುದು. ಜತೆಗೆ, ಅರ್ಧ ಗ್ರಾಂ ದಾಲ್ಚಿನ್ನಿ (ಚಕ್ಕೆ) ಪುಡಿಯನ್ನು ಒಂದು ಟೀ ಚಮಚ ಜೇನುತುಪ್ಪದೊಂದಿಗೆ ಕನಿಷ್ಟ ಪಕ್ಷ ದಿನಕ್ಕೆರಡು ಬಾರಿ ಸೇವಿಸಿದರೆ ನೋವು ಬೇಗ ಶಮನವಾಗುವುದು.
ವಸ್ತು : ಮಾವಿನ ಎಲೆಗಳು
ಶಮನ : ಕಿವಿ ಸೋಂಕು
ಕೆಲವು ತಾಜಾ ಮಾವಿನ ಎಲೆಗಳನ್ನು ಚೆನ್ನಾಗಿ ಅರೆದು ಅವುಗಳಿಂದ ಒಂದು ಟೀ ಚಮಚ ರಸವನ್ನು ತಯಾರಿಸಿಕೊಳ್ಳುವುದು. ಈ ರಸವನ್ನು ಸ್ವಲ್ಪ ಬೆಚ್ಚಗೆ ಮಾಡಿ ಸೋಂಕಿಗೆ ಒಳಗಾಗಿರುವ ಕಿವಿಗೆ ಔಷಧವಾಗಿ ಬಳಸಬಹುದು. ದಿನಕ್ಕೆರಡು ಬಾರಿ ಪ್ರತಿಸಲವೂ ಒಂದೆರಡು ಹನಿ ಬಳಸಿದರೆ ಸೋಂಕು ನಿವಾರಣೆಯಾಗುವುದು.
ವಸ್ತು : ಖರ್ಜೂರ
ಶಮನ : ಜಂತುಹುಳು, ಭೇದಿ.
ಜಂತುಹುಳುಗಳಿಂದ ಬಳಲುತ್ತಿರುವವರು ಐದು ಖರ್ಜೂರ ತಿಂದು ನಿಂಬೆಹಣ್ಣಿನ ಪಾನೀಯ ಕುಡಿದರೆ ಶಮನವಾಗುವುದು. ಪರಿಣಾಮ ಬೀರುವವರೆಗೂ ಮುಂದುವರಿಸುವುದು ಒಳ್ಳೆಯದು. ಭೇದಿಯಾಗುತ್ತಿರುವಾಗ ಖರ್ಜೂರ ಸೇವಿಸಿದರೆ ನಿವಾರಣೆಯಾಗುವುದು. 
ವಸ್ತು : ಉದ್ದು
ಶಮನ : ಸ್ತ್ರೀಯರ ಬಿಳುಪು ರೋಗ.
ಉದ್ದಿನ ಹಿಟ್ಟು, ಅತಿಮಧುರ, ಕುಂಬಳದ ಬೇರು ಹಾಗೂ ಅಶ್ವಗಂಧ, ಇವುಗಳನ್ನು ಸಮನಾಗಿ ಕುಟ್ಟಿ ಶೋಧಿಸಿಟ್ಟುಕೊಂಡು ಹಲವು ದಿನಗಳವರೆಗೆ ಬಿಡದೆ ಒಂದೊಂದು ಚಮಚದಂತೆ ಜೇನುತುಪ್ಪದೊಡನೆ ಸೇರಿಸಿ ದಿನಕ್ಕೆರಡು ಬಾರಿ ಸೇವಿಸುವುದರಿಂದ ಸ್ತ್ರೀಯರ ಬಿಳುಪುರೋಗ ವಾಸಿಯಾಗುತ್ತದೆ.
ವಸ್ತು : ಬಿಲ್ವ
ಶಮನ : ಕಫ, ಊತ.
ಕಫ ಕಟ್ಟಿಕೊಂಡು ಎದೆ ನೋವು ಬರುತ್ತಿದ್ದರೆ ಬಿಲ್ವದ ಎಲೆಗಳ ರಸವನ್ನು ಕುಡಿದರೆ ಶಮನವಾಗುವುದು. ಊತವಿರುವಾಗ ಎಲೆಗಳನ್ನು ಬಿಸಿ ಮಾಡಿ ಪಟ್ಟು ಹಾಕಿದರೆ ಪರಿಣಾಮ ಬೀರುವುದು. 
ವಸ್ತು : ವೀಳ್ಯದೆಲೆ
ಶಮನ : ಕೆಮ್ಮು, ನೋವು.
ಒಂದು ವೀಳ್ಯದೆಲೆ, ಸ್ವಲ್ಪ ಕರೀ ತುಳಸಿ ಹಾಗೂ ಒಂದು ಲವಂಗವನ್ನು ಅರೆದು ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುವುದು. ವೀಳ್ಯದೆಲೆಗೆ ಹರಳೆಣ್ಣೆಯನ್ನು ಹಚ್ಚಿ ಅದನ್ನು ಬಿಸಿ ಮಾಡಿ ಹೊಟ್ಟೆ ಉಬ್ಬರದಿಂದ ನರಳುತ್ತಿರುವ ಮಗುವಿನ ಹೊಟ್ಟೆಗೆ ಕಾವು ಕೊಟ್ಟರೆ ನೋವು ಮಾಯವಾಗಿ ಮೂತ್ರ ಸುಲಭವಾಗಿ ಆಗುವುದು.
ವಸ್ತು : ಅರಿಶಿನ
ಶಮನ : ರಕ್ತ ಸ್ರಾವ, ಮೊಡವೆ.
ದೇಹದ ಯಾವುದೇ ಭಾಗ ಕೊಯ್ದುಕೊಂಡು ರಕ್ತ ಒಸರುತ್ತಿದ್ದರೆ, ಆ ಗಾಯದ ಮೇಲೆ ಅರಿಶಿನ ಹುಡಿಯನ್ನು ಉದುರಿಸಿದರೆ ರಕ್ತ ಬರುವುದು ನಿಲ್ಲುವುದು. ಮೊಡವೆಗಳಿಗೆ ಅರಿಶಿನದ ಕೊರಡನ್ನು ತೇಯ್ದು ಲೇಪಿಸುವುದರಿಂದ ಅವುಗಳು ಕ್ರಮೇಣ ಕಡಿಮೆಯಾಗುತ್ತವೆ. 
ವಸ್ತು : ತುಳಸಿ
ಶಮನ : ಹುಳುಕಡ್ಡಿ.
ತುಳಸಿ ಗಿಡದ ಕಾಂಡದಿಂದ ಹುಳುಕಡ್ಡಿಯ ಭಾಗವನ್ನು ಚೆನ್ನಾಗಿ ಕೆರೆದು, ಅನಂತರ ತುಳಸಿ ಸೊಪ್ಪಿನ ಕಷಾಯದಿಂದ ಆ ಭಾಗವನ್ನು ಚೆನ್ನಾಗಿ ತೊಳೆಯಬೇಕು. ಇದಾದ ಮೇಲೆ ತುಳಸಿ ಸೊಪ್ಪನ್ನು ಚೆನ್ನಾಗಿ ಅರೆದು ಹುಳುಕಡ್ಡಿಯ ಮೇಲೆ ಲೇಪಿಸುವುದರಿಂದ ಶೀಘ್ರ ಗುಣ ಕಂಡುಬರುವುದು. 
ವಸ್ತು : ಶ್ರೀಗಂಧ
ಶಮನ : ಚರ್ಮದ ಅಲರ್ಜಿ.
ಚರ್ಮದ ಅಲರ್ಜಿಯಿಂದ ಬಳಲುತ್ತಿರುವವರು ಶ್ರ್‍ಈಗಂಧವನ್ನು ಬಳಸಿದರೆ ಪರಿಣಾಮ ಬೀರುವುದು. ಒಂದು ಟೀ ಚಮಚ ನಿಂಬೇಹಣ್ಣಿನ ರಸದೊಂದಿಗೆ ಶ್ರ್‍ಈಗಂಧದ ಪುಡಿಯನ್ನು ಬೆರೆಸಿ ಅಲರ್ಜಿಯಿರುವ ಚರ್ಮದ ಮೇಲೆ ಲೇಪಿಸುತ್ತಾ ಬಂದರೆ ಗುಣವಾಗುವುದು. 
ವಸ್ತು : ಪರಂಗಿಹಣ್ಣು
ಉಪಯೋಗ : ರೋಗ ನಿರೋಧಕ ಶಕ್ತಿ ಹೆಚ್ಚಳ, ಬೊಜ್ಜು ಕರಗುವಿಕೆ.
ಪ್ರತಿದಿನ ಪರಂಗಿಹಣ್ಣನ್ನು ಸೇವಿಸುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅತಿಯಾದ ಬೊಜ್ಜಿನಿಂದ ಬಳಲುತ್ತಿರುವವರು ಹಣ್ಣು ಸೇವಿಸಿದರೆ ಪರಿಣಾಮ ಬೀರುವುದು. ಬಾಣಂತಿಯರು ಸೇವಿಸಿದರೆ ಹಾಲಿನ ಉತ್ಪತ್ತಿ ಹೆಚ್ಚುವುದು.
ಬಿಗಿ ಹೊಟ್ಟೆ ಸಡಿಲಿಸಲು ನಾರು.
ಆಹಾರದಲ್ಲಿ ನಾರಿನ ಅಂಶ ಇಲ್ಲದಿರುವುದೇ ಮಲಬದ್ಧತೆ ಉಂಟಾಗಲು ಮುಖ್ಯ ಕಾರಣ. ನಾರಿನಂಶವಿರುವ ಆಹಾರ ಸೇವನೆ ಮಾಡುತ್ತಿದ್ದರೆ ಸಾಮಾನ್ಯವಾಗಿ ಎಂದೂ ಮಲಬದ್ಧತೆ ಆಗುವುದಿಲ್ಲ.
ನಾರು ನಮ್ಮ ಹೊಟ್ಟೆಯಲ್ಲಿ ಜೀರ್ಣವಾಗುವುದಿಲ್ಲ. ಆದರೆ ಈ ನಾರು ಕರುಳಿನಲ್ಲಿರುವ ವಿಷ ಪದಾರ್ಥಗಳನ್ನು ಹೀರಿಕೊಂಡು ಗಾತ್ರಧಲ್ಲಿ ಹೆಚ್ಚುತ್ತದೆ. ಇದರ ಪರಿಣಾಮವಾಗಿ ದೊಡ್ಡ ಕರುಳಿನಲ್ಲಿ ಉಪಯುಕ್ತ ಬ್ಯಾಕ್ಟೀರಿಯ ಸಂಖ್ಯೆ ಹೆಚ್ಚುತ್ತದೆ. ಈ ಉಪಯುಕ್ತ ಬ್ಯಾಕ್ಟೀರಿಯ ನಮ್ಮ ಕರುಳಿನಲ್ಲಿಯ ನೈಟ್ರೋಜೆನ್, ಗ್ಲೂಕೋಸ್, ಕೊಲೆಸ್ಟರಾಲ್ ಉಪಯೋಗಿಸಿ ವೃದ್ಧಿಹೊಂದುತ್ತವೆ. ಆದ್ದರಿಂದ ಈ ನಾರು ಮಲಬದ್ದತೆ ತಡೆಯುವುದಲ್ಲದೆ ಸಕ್ಕರೆ ಕಾಯಿಲೆ ಉಳ್ಳವರಿಗೆ, ಬೊಜ್ಜು ಇರುವ ವ್ಯಕ್ತಿಗಳಿಗೆ, ಪಿತ್ತಕೋಶದಲ್ಲಿ ಕಲ್ಲು ಇರುವವರಿಗೆ, ಹೃದಯ ರೋಗಿಗಳಿಗೆ ಪ್ರಯೋಜಕವಾಗುತ್ತವೆ. 
ಪಾಶ್ಚಿಮಾತ್ಯ ಜನರು ಕಡಿಮೆ ಪ್ರಮಾಣದ ನಾರು ಸೇವಿಸುವುದರಿಂದ (೨೦ ಗ್ರಾಮ್) ಅವರಲ್ಲಿ ಅನೇಕ ರೋಗಗಳು ಉದಾ: ಕರುಳಿನ ಕ್ಯಾನ್ಸರ್, ಪಿತ್ತಕೋಶದ ಕಲ್ಲುಗಳು ಹೆಚ್ಚಾಗುತ್ತವೆ.
ಆಫ್ರಿಕಾದಲ್ಲಿ ಜನರು ಸರಾಸರಿ ೧೫೦ ಗ್ರಾಮ್ ನಷ್ಟು ನಾರು ಪದಾರ್ಥ ಸೇವಿಸುವುದರಿಂದ ಅಲ್ಲಿಯ ಜನರಿಗೆ ಈ ತೊಂದರೆಗಳು ಅಷ್ಟೇನು ಕಂಡುಬರುವುದಿಲ್ಲ. ದಿನಕ್ಕೆ ಸರಾಸರಿ ೫೦ ಗ್ರಾಮ್ ನಾರು ಉಪಯೋಗಿಸಿದರೂ ಸಾಕು, ಬಿಗಿ ಹೊಟ್ಟೆ ಸಡಿಲವಾಗುತ್ತದೆ, ಜತೆಗೆ ಇತರ ರೋಗಗಳನ್ನೂ ತಡೆಗಟ್ಟಬಹುದಾಗಿದೆ.
ಔಷಧಗಳಿಗೆ ಶರಣು ಹೋಗುವುದು ಒಳ್ಳೆಯದಲ್ಲ. ಅವು ಅಭ್ಯಾಸ ಅಥವಾ ಚಟ ಉಂಟು ಮಾಡುತ್ತವೆ ಹಾಗೂ ಮಲಬದ್ಡತೆ ಗುಣ ಹೊಂದುವುದಿಲ್ಲ. ನಾರಿನಂಶ ಇರುವ ಆಹಾರ ಪದಾರ್ಥಗಳೆಂದರೆ - ಸೊಪ್ಪು, ಬೀಟ್ ರೂಟ್, ಕ್ಯಾಬೇಜ್, ಆಲೂಗೆಡ್ಡೆ, ಕೆಂಪು ಅಕ್ಕಿ, ರಾಗಿ, ಜೋಳ, ನವಣೆ, ಸಜ್ಜೆ, ತೊಗರೆ, ಹೆಸರು, ಉದ್ದು, ಅಂಟು, ಸೇಬು, ಬಾಳೆಹಣ್ಣು, ದ್ರಾಕ್ಷಿ ಇತ್ಯಾದಿ. ಮೇಲೆ ಹೇಳಿದ ಕೆಲವು ಪದಾರ್ಥಗಳಲ್ಲಿ ಅಂದರೆ ಜೋಳ, ನವಣೆ, ಸಜ್ಜೆ, ಉದ್ದು, ಬಾಳೇಹಣ್ಣು ಕೆಲವರಿಗೆ ಆಗದೇ ಇರಬಹುದು. ಅಂಥಹವರು ಕೆಂಪು ಅಕ್ಕಿಯನ್ನು ಉಪಯೋಗಿಸಿದರೆ ಬಹಳ ಅನುಕೂಲವಾಗುತ್ತದೆ. 
ರಾಗಿ ಅಭ್ಯಾಸ ಇರುವವರಿಗೆ ಏನೂ ತೊಂದರೆ ಇರುವುದಿಲ್ಲ. ಪಾಲೀಶ್ ಮಾಡಿದ ಅಕ್ಕಿ, ಬೇಕರಿ ತಿಂಡಿಗಳು, ಹೋಟೆಲ್ ನಲ್ಲಿ ತಿನ್ನುವ ಅಭ್ಯಾಸ, ಎಣ್ಣೆಯಲ್ಲಿ ಕರಿದ ತಿಂಡಿಗಳು, ಇತ್ಯಾಧಿಗಳನ್ನು ಉಪಯೋಗಿಸುವವರು ಮಲಬದ್ದತೆಗೆ ಸುಲಭವಾಗಿ ತುತ್ತಾಗುವರು. ಆದ್ದರಿಂದ ಹೇರಳವಾಗಿ ಹೊಟ್ಟು ಇರುವ(ಅಂದರೆ ಭತ್ತ ಮಾತ್ರ ತೆಗೆದ ಕೆಂಪು ಅಕ್ಕಿ) ಕೆಂಪು ಅಕ್ಕಿಯನ್ನು ನಿಮ್ಮ ಊಟದಲ್ಲಿ ಪ್ರತಿದಿನವೂ ಊಟಮಾಡುತ್ತಿದ್ದರೆ ಮಲಬದ್ದತೆಯ ತೊಂದರೆಗಳೇ ಇರುವುದಿಲ್ಲ. 
ಆಹಾರದಲ್ಲಿನ ಸತ್ವ
ಪ್ರಕೃತಿ : ಏನಯ್ಯಾ ನಿಮ್ಮನೇಲಿ ಎಲ್ಲ ೧೪ 
ಜನಾನು ಒಂದಲ್ಲ ಒಂದು ಕಾಯಿಲೆಯಿಂದ ನರಳುತ್ತಿದ್ದಾರಲ್ಲ, ಡಾಕ್ಟರಿಗೆ ತೋರಿಸ್ಲಿಲ್ವಾ? 
ಮನುಷ್ಯ : ಅಯ್ಯೋ, ಡಾಕ್ಟರುಗಳಿಗೆ ತೋರ್‍ಸಿ ತೋರ್‍ಸಿ ಸಾಕಾಗಿದೆ, ಪ್ರಕೃತಿ. ಯಾವ ಡಾಕ್ಟರರ ಹತ್ರ ಹೋದ್ರೂ ಒಂದೇ ಕತೆ, ಔಷಧಿ ಕೊಡ್ಸಿ ಕೊಡ್ಸಿ ಸಾಕಾಗಿದೆ. ಹಾವು ಸಾಯೋಲ್ಲ, ಕೋಲು ಮುರಿಯೋಲ್ಲ ಅನ್ನೋ ಹಾಗಾಗಿದೆ ನಮ್ಮ ಪರಿಸ್ಥಿತಿ. ಬೇಜಾರಾಗೋಗಿದೆ. 
ಔಷಧಿಗಳು ಕೆಲಸವೇ ಮಾಡ್ತಾಇಲ್ವೇನೋ ಅನ್ನಸ್ತಾ ಇದೆ. ಒಂದು ಔಷಧಿ ಕೊಟ್ರೆ ಇನ್ನೊಂದು ಕಾಯಿಲೆ ಶುರುವಾಗುತ್ತೆ. ಶುರುವಿನಲ್ಲಿ ಒಂದೇ ಒಂದು ಕಾಯಿಲೆ ಇತ್ತು. ಅದಕ್ಕೆ ಔಷಧಿ ಕೊಡಿಸೋಕ್ಕೆ ಹೋಗಿ ಈಗ ನೂರೆಂಟು ಕಾಯಿಲೆ ಅಂಟಿಕೊಂಡುಬಿಟ್ಟಿದೆ. ಈಗ ಬೆಳಿಗ್ಗೆಯಿಂದ ರಾತ್ರಿ ಮಲಗೋವರೆಗೂ ೧ ಕೇಜಿ ಔಷಧಿ ತಿನ್ನೋದೆ ಆಗ್ತಿದೆ. ಆಹಾರಕ್ಕಿಂತ ಔಷಧಿಗಳೇ ಜಾಸ್ತಿ ಆಗೋಗಿದೆ. ಏನು ಮಾಡಬೇಕೋ ದಿಕ್ಕೇ ತೋಚ್ತಾ ಇಲ್ಲ. ನೀನಾದ್ರೂ ದಾರಿ ತೋರ್‍ಸಯ್ಯಾ, ಪ್ರಕೃತಿ ದೇವರೇ. ನಿನಗೆ ಪುಣ್ಯ ಬರುತ್ತೆ.
ಪ್ರಕೃತಿ : ಅಲ್ಲಾಯ್ಯ, ನೀನು ಪ್ರಜಾವಾಣಿ, ವಿಜಯಕರ್ನಾಟಕ ಪೇಪರ್ ಗಳನ್ನ ಓದ್ತಾಇದೀಯ? ಅದರಲ್ಲಿ ಎರಡು ವರ್ಷದಿಂದ ಪ್ರತಿಯೊಬ್ಬರೂ ಆರೋಗ್ಯವನ್ನು ಹೇಗೆ ಕಾಪಾಡ್ಕೋಬೇಕು ಅಂತ ಬರೀತಾ ಇದಾರಲ್ಲ, ಅದನ್ನು ಓದಿದೀಯ? ಔಷಧಿಗಳ ಗೋಜೇ ಇಲ್ಲದೆ ಎಲ್ಲ ಕಾಯಿಲೆಗಳನ್ನು ನಾವು ಉಪಯೋಗಿಸುವ ಆಹಾರಗಳಲ್ಲೇ ಸರಿಮಾಡಬಹುದು ಎಂದು ಬರೀತಿದಾರಲ್ಲ! ಹಿಂದೆ ಯಾರೂ ಯಾವ ಪೇಪರ್‍ನೋರೂ ಹೀಗೆ ಜನಗಳಿಗೆ ಎಚ್ಚರಿಕೆ ಕೊಡ್ತಾಇರ್‍ಲಿಲ್ಲ. ಈಚೆಗೆ ಎಲ್ಲ ಪೇಪರ್‍ನೋರೂ ಜನಗಳಿಗೆ ತಿಳಿಸಿಕೊಡ್ತಾ ಇದಾರೆ.
ಮನುಷ್ಯ : ಏನಂತ ಇದೆ ಅದರಲ್ಲಿ! ಅಂಥಾ ವಿಶೇಷ ಏನು? ನಮ್ಮ ಆಹಾರದಲ್ಲೇ ಕಾಯಿಲೆ ವಾಸಿಮಾಡಬಹುದು ಅಂತ ಮತ್ತು ಅದು ಹೇಗೆ ಸಾಧ್ಯ ಡಾಕ್ಟರು ಗಳಿಗೆ ವಾಸಿಮಾಡೋಕೆ ಆಗದೇ ಇರುವುದು ಬರೀ ಆಹಾರದಲ್ಲೇ ಹೇಗೆ ವಾಸಿಯಾಗುತ್ತದೆ!
ಪ್ರಕೃತಿ : ಅಯ್ಯಾ, ಪೆದ್ದಪ್ಪ, ಈ ಇಡೀ ಜಗತ್ತಿನಲ್ಲಿ ಇರುವ ಕಾಯಿಲೆಗಳನ್ನೆಲ್ಲಾ ನಮ್ಮ ಆಹಾರಗಳಲ್ಲೇ ೧೦೦ ಕ್ಕೆ ೧೦೦ ರಷ್ಟು ವಾಸಿಮಾಡಬಹುದು ಕಣಯ್ಯಾ. ಅದೂ ಅಲ್ಲದೇ ಈಗ ನರಳುತ್ತಿರುವ ಕಾಯಿಲೆಗಳಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದಿ ಇನ್ನು ಮುಂದೆಯೂ ಯಾವ ಕಾಯಿಲೆಯೂ ಬರದಂತೆ ನೋಡಿಕೊಳ್ಳಬಹುದು ಕಣಯ್ಯಾ. 
ಮನುಷ್ಯ : ಅದು ಹೇಗೆ ನನಗೂ ತಿಳಿಸಿಕೊಡಯ್ಯಾ. 
ಪ್ರಕೃತಿ : ಹಿಂದಿನ ಕಾಲದಲ್ಲಿ ಕೆಂಪು ಅಕ್ಕಿ ಅಂತ ಬೆಳೀತ ಇದ್ರು ಗೊತ್ತಾ? ಅಥವಾ ಕೊಟ್ಟಣದ ಅಕ್ಕಿ ಅಂತ ಕರೀತಾ ಇದ್ರು ಗೊತ್ತಾ? ಅದನ್ನ ತಿಂದು ಜನ ಎಷ್ಟು ಗಟ್ಟಿಮುಟ್ಟಾಗಿದ್ರು ಗೊತ್ತಾ? ಆಗೆಲ್ಲಾ ಈಗ ಬರುತ್ತಿರುವ ಕಾಯಿಲೆಗಳೆಲ್ಲ ಇತ್ತಾ? ಯೋಚನೆ ಮಾಡಿ ನೋಡು. ಇತ್ತೀಚಿನ ವರ್ಷಗಳಲ್ಲಿ ಪಾಲೀಶ್ ಮಾಡಿದ ಅಕ್ಕಿ ತಿಂದು ಈ ಕಾಯಿಲೆಗಳೆಲ್ಲ ಬಂದಿರುವುದು ಗೊತ್ತಾ? ಈ ಅಕ್ಕಿಯನ್ನು ಊಟಮಾಡುವವರಿಗೆ ಈ ಕಾಯಿಲೆಗಳೆಲ್ಲಾ ಸಾಮಾನ್ಯ. ಜೊತೆಗೆ ಈ ಅಕ್ಕಿಯನ್ನು ತಿನ್ನುವವರಿಗೆ ಆಸಿಡಿಟಿ, ಗ್ಯಾಸ್ಟ್ರ್‍ಐಟಿಸ್ ಎಂಬ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಇದರಿಂದಲೇ ಬೇರೆಲ್ಲ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ.
ದಣಿದ ದೇಹಕ್ಕೆ ತಂಪನೆ ಪಾನೀಯ
ಸೌತೆಕಾಯಿ ಜ್ಯೂಸ್:-
ಸಾಮಗ್ರಿ: ಒಂದು ಮಂಗಳೂರು ಸೌತೇಕಾಯಿ, ಎರಡು ಲೋಟ ನೀರು, ಒಂದು ಅಚ್ಚು ಬೆಲ್ಲ, ಚಿಟಿಕೆ ಏಲಕ್ಕಿ ಪುಡಿ।
ವಿಧಾನ: ಸೌತೇಕಾಯಿಯ ಸಿಪ್ಪೆ ಹಾಗೂ ತಿರುಳನ್ನು ತೆಗೆದೆಸೆದು ಉಳಿದ ಭಾಗವನ್ನು ಸಣ್ಣದಾಗಿ ಕತ್ತರಿಸಿ ರುಬ್ಬಿ ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ನೀರು, ಬೆಲ್ಲ, ಏಲಕ್ಕಿ ಪುಡಿ ಸೇರಿಸಿದರೆ ಜ್ಯೂಸ್ ಸಿದ್ಧ।
ಬೀಟ್ ರೂಟ್ ಜ್ಯೂಸ್:-
ಸಾಮಗ್ರಿ: ಒಂದು ಬೀಟ್ ರೂಟ್, ಅರ್ಧ ಅಚ್ಚು ಬೆಲ್ಲ, ನೀರು, ಅರ್ಧ ಚಮಚ ಏಲಕ್ಕಿ ಪುಡಿ।
ವಿಧಾನ: ಸಿಪ್ಪೆ ತೆಗೆದ ಬೀಟ್ ರೂಟನ್ನು ಸಣ್ಣದಾಗಿ ಹೆಚ್ಚಿ, ನುಣ್ಣಗೆ ರುಬ್ಬಿ ಶೋಧಿಸಿ। ಈ ರಸಕ್ಕೆ ಬೆಲ್ಲ ಮತ್ತು ಏಲಕ್ಕಿ ಪುಡಿ ಬೆರೆಸಿದರೆ
ಜ್ಯೂಸ್ ಸಿದ್ಧ.
ಧನ, ಮಧ್ಯ ಮತ್ತು ರುಣಾತ್ಮಕ ಆಹಾರ
ಧನಾತ್ಮಕ ಆಹಾರ
ಧನಾತ್ಮಕ, ಸತ್ವಯುತ, ಅಮೃತಾನ್ನ, ಸಾತ್ವಿಕ(ಪ್ರೈಮರಿ, ಪಾಸಿಟೀವ್)
೧. ಹಣ್ಣುಗಳು
೧. (ಅ) ಸಿಹಿ/ಖಂಡಭರಿತ : ಬಾಳೆ, ಪಪಾಯಿ, ಮಾವು, ಸೀಬೆ, ಹಲಸು, ಕರಬೂಜ, ಸಪೋಟ(ಚಿಕ್ಕು), ಸೇಬು, ರಾಮಫಲ, ಸೀತಾಫಲ, ಕಲ್ಲಂಗಡಿ, ಬೆಟ್ಟನೆಲ್ಲೀಕಾಯಿ ಇತ್ಯಾದಿ.
(ಆ) ಹುಳಿಹಣ್ಣುಗಳು : ಕಿತ್ತಲೆ, ದ್ರಾಕ್ಷಿ, ಮೂಸಂಬಿ, ನೇರಳೆ, ದಾಳಿಂಬೆ, ಚಕ್ಕೋತ, ನಿಂಬೆ, ಟೊಮೇಟೋ ಇತ್ಯಾದ.
(ಇ) ಒಣಹಣ್ಣುಗಳು : ಒಣದ್ರಾಕ್ಷಿ, ಖರ್ಜೂರ, ಅಂಜೂರ ಇತ್ಯಾದಿ
೨. ತರಕಾರಿಗಳು
(ಅ) ಸೊಪ್ಪುಗಳು : ಬಸಳೆ, ಮೆಂಥ್ಯ, ಕೊತ್ತಂಬರಿ, ಪುದೀನ, ಲೆಟ್ಯೂಸ್, ಪಾಲಕ್, ಸಬ್ಬಸಿಗೆ, ಕರಿಬೇವು, ದೊಡ್ಡಪತ್ರೆ, ಒಂದೆಲಗ, ಗರಗ ಇತ್ಯಾದಿ.
(ಆ) ಹಸಿರು ತರಕಾರಿಗಳು : ಪಡ್ವಲ, ಹೀರೇಕಾಯಿ, ಎಲೆಕೋಸು, ಸೌತೇಕಾಯಿ, ಟೊಮೇಟೋ, ಬುದುಗುಂಬಳ, ಸಿಹಿಗುಂಬಳ ಇತ್ಯಾದಿ.
(ಇ) ಗೆಡ್ಡೆಗೆಣಸುಗಳು : ಕ್ಯಾರಟ್, ಗೆಡ್ಡೆಕೋಸು, ಬೀಟ್ ರೂಟ್, ಮರಗೆಣಸು, ಸಿಹಿ ಗೆಣಸು, ಮೂಲಂಗಿ.
೩. ಕಾಯಿಗಳು(ನಟ್ಸ್) : ತೆಂಗಿನಕಾಯಿ, ಕಡ್ಲೇಕಾಯಿಬೀಜ, ಬಾದಾಮಿ, ಗೋಡಂಬಿ, ಪಿಸ್ತ, ವಾಲ್ ನಟ್ ಇತ್ಯಾದಿ.
೪. ರಸಗಳು : ಎಳೆನೀರು, ಹಣ್ಣಿನ ರಸಗಳು, ತರಕಾರಿ ರಸಗಳು, ದೊಡ್ಡಪತ್ರೆ ರಸ, ಒಂದೆಲಗದ ರಸ, ಗರಗದ ರಸ, ತುಳಸೀ ರಸ, ಬಿಲ್ಪತ್ರೇ ರಸ, ಗರಿಕೆಹುಲ್ಲಿನ ರಸ, ಗೋಧೀಹುಲ್ಲಿನ ರಸ, ಕಬ್ಬಿನ ರಸ ಇತ್ಯಾದಿ.
೫) ಮೊಳಕೆ ಕಾಳುಗಳು : ಗೋಧಿ, ಹೆಸರುಕಾಳು, ಕಡಲೆಕಾಳು, ಬಟಾಣಿ, ಮೆಂಥ್ಯ, ಎಳ್ಳು, ರಾಗಿ, ಕಡ್ಲೇಕಾಯಿಬೀಜ, ಆಲ್ಫಾಲ್ಪಾ ಇತ್ಯಾದಿ.
ಮಧ್ಯಸ್ಥ ಆಹಾರ
ಮಧ್ಯಸ್ಠ,ನಿಗದಿತ ಸತ್ವ, ಮಧ್ಯಮಾನ್ನ, ರಾಜಸ(ಸೆಕೆಂಡರಿ,ನೂಟ್ರಲ್)
೧. ಸೊಪ್ಪುಗಳು : ದಂಟು, ಚಕ್ಕೋತ, ಕಿರುಕುಸಾಲೆ, ಬೆರಕೆ ಸೊಪ್ಪು, ನುಗ್ಗೆ, ಅಗಸೆ, ಹೊನಗೊನೆ, ಗೋಣಿ, ವಿಷ್ಣುಕ್ರಾಂತಿ ಇತ್ಯಾದಿ.
೨. ಹಸಿರು ತರಕಾರಿಗಳು : ಹುರುಳೀಕಾಯಿ, ಜವಳಿಕಾಯಿ, ಕೆಸವಿನ ದಂಟು, ಬಾಳೇಕಾಯಿ, ಹಲಸಿನಕಾಯಿ, ಬದನೆಕಾಯಿ, ಪರಂಗಿಕಾಯಿ, ಸೀಮೇಬದನೆ, ಹಾಗಲಕಾಯಿ, ಸೋರೇಕಾಯಿ, ಸಿಹಿಗುಂಬಳ ಇತ್ಯಾದಿ.
೩. ಈರುಳ್ಳಿ, ಬೆಳ್ಳುಳ್ಳಿ, ಆಲೂಗೆಡ್ಡೆ ಇತ್ಯಾದಿ.
೪. ಕೊಟ್ಟಣದ ಅಕ್ಕಿ, ಹೊಟ್ಟು ತೆಗೆಯದ ಹಿಟ್ಟು, ಹೊಟ್ಟು ತೆಗೆಯದ ಬೇಳೆಗಳು, ನೆನೆಸಿದ ಕಾಳುಗಳು.
೫. ಬೆಲ್ಲ, ವೀಳೇದೆಲೆ.
೬. ಹಾಲು, ಮಸರು, ಬೆಣ್ಣೆ, ತುಪ್ಪ, ಜೇನುತುಪ್ಪ.
೭. ಹಬೆಯಲ್ಲಿ ಬೇಯಿಸಿದ ಆಹಾರ, ಕಡಿಮೆ ಉಪ್ಪು, ಹುಳಿ, ಕಾರದಿಂದ ಕೂಡಿದ ಆಹಾರ, ಹುದುಗಿಸಲ್ಪಟ್ಟ ಆಹಾರ(ಇಡ್ಲಿ, ದೋಸೆ), ಕಂದು ಬ್ರೆಡ್(ಬ್ರೌನ್ ಬ್ರೆಡ್) ಇತ್ಯಾದಿ.
೮. ಕೆಂಡದಲ್ಲಾಗಲಿ, ಓವನ್ನಿನಲ್ಲಾಗಲಿ ಸುಟ್ಟ ಆಲೂಗೆಡ್ಡೆ, ಕಡ್ಲೇಕಾಯಿ, ಕ್ಯಾರಟ್, ಇತ್ಯಾದಿಗಳು.
೯. ಗಾಣದಿಂದ ತೆಗೆದ ಎಣ್ಣೆ.
ಋಣಾತ್ಮಕ ಆಹಾರ
ಋಣಾತ್ಮಕ, ನಿಸ್ಸತ್ವ, ಮೃತಾನ್ನ, ತಾಮಸ(ನೆಗೆಟೀವ್)
೧. ಕಾಫಿ, ಟೀ, ಸಾರಾಯಿ, ನಿಕೋಟಿನ್ ಇತ್ಯಾದಿ
೨. ಮಾಂಸ, ಮೊಟ್ಟೆ ಇತ್ಯಾದಿ.
೩. ಪಾಲೀಶ್ ಅಕ್ಕಿ, ಮೈದಾ, ಪಾಲೀಶ್ ಮಾಡಿದ ಬೇಳೆ.
೪. ಬಿಳಿಯ ಬ್ರೆಡ್, ಬೇಕರಿಯ ಇತರ ತಿಂಡಿಗಳು.
೫. ಸಕ್ಕರೆ, ಮೈದಾ, ಅದರಿಂದ ತಯಾರಿಸಲ್ಪಟ್ಟ ಆಹಾರ ಪದಾರ್ಥಗಳು.
೬. ಅತಿ ಉಪ್ಪು, ಹುಳಿ, ಖಾರಗಳಿಂದ ಪದಾರ್ಥಗಳು.
೭. ಹುರಿದ, ಕರಿದ ತಿಂಡಿಗಳು.
೮. ಐಸ್ ಕ್ರೀಮ್, ಚಾಕೋಲೇಟ್, ಬಿಸ್ಕತ್ ಇತ್ಯಾದಿಗಳು.
೯. ಪಾಶ್ಚರೈಸ್ ಮಾಡಿದ ಹಾಲು, ಕೆನೆ, ಕೆನೆಯಿಂದ ತಯಾರಿಸಿದ ಆಹಾರಗಳು.
೧೦. ರೀಫೈನ್ ಮಾಡಿದ ಎಣ್ಣೆ, ಡಾಲ್ಡ.
೧೧. ರೆಫ್ರಿಜಿರೇಟರ್ನಲ್ಲಿಟ್ಟ ಆಹಾರ.
೧೨. ಹಿಂದಿನ ದಿನ ಮಾಡಿ ಕುದಿಸಿಟ್ಟ ಆಹಾರ.
೧೩. ಡಬ್ಬದ ಆಹಾರಗಳು, ಫಾಸ್ಟ್ ಫ಼ುಡ್, ಇತ್ಯಾದಿಗಳು.
ಯುವಕ ಯುವತಿಯರ ಆಹಾರ
'ಯುವಕಸ್ತಾವತ್ ಯುವತೀಸಕ್ತಃ'- ಯುವಕನ ಆಸಕ್ತಿ ಯುವತಿಯಲ್ಲಿ! ಯುವಕರಿಗೆ ಆಹಾರದ ವಿಷಯದಲ್ಲಿ ವಿಶೇಷ ಆಸಕ್ತಿಯಿರುವುದಿಲ್ಲ. ಹೋಟೆಲುಗಳು, ರಸ್ತೆಯ ಪಕ್ಕದ ಪಾನೀಪೂರಿ ಇತ್ಯಾದಿಗಳಲ್ಲಿ ಗಮನ ಹೆಚ್ಚು. ಕಾರಣ ಸ್ನೇಹಿತೆಯರೊಂದಿಗೆ ಸ್ವಚ್ಚಂದವಾಗಿ ತಿನ್ನಬಹುದಲ್ಲ. ಆದರೆ ಯುವತಿಯರೂ ಆ ರೀತಿಯೇ ತಿಂದರೂ ಸಹ ದಿನಕ್ಕೊಮ್ಮೆ ವಾರ್ ಡ್ರೋಬ್ ನ ಕನ್ನಡಿ ನೋಡಿಕೊಂಡು ದಪ್ಪಗಾದೆನೆಂದು ಕೊರಗುತ್ತಾರೆ! ಡಯಟ್ ಮಾಡಲು ಅನೇಕ ಸ್ತ್ರೀಯರ ಮ್ಯಾಗಝೀನ್ ಗಳು ಸಹಾಯಕ್ಕೆ ಬರುತ್ತವೆ.
ಮೊದಲ ಒಂದು ವಾರ ಡಯಟ್
ಮುಂದಿನ ವಾರ ಪೂರ್ಣ ಹೋಟೆಲ್ ವಿಸಿಟ್
ಹೀಗೆ ಮಾನಸಿಕವಾಗಿ ನರಳುವವರು ಕೆಲವರು. ನಿಜವಾಗಿ ಆಹಾರ ಬಿಟ್ಟು ನರಳುವವರು ಕೆಲವರು. ಈಚೆಗೆ 'ಫಿಗರ್' ಬಗ್ಗೆ ಕಾಳಜಿಯ ಹೆಣ್ಣುಮಕ್ಕಳು ಹೆಚ್ಚುತ್ತಿದ್ದಾರೆ. ಅವರು ಅನ್ನವೇ ತಮ್ಮ ಸಕಲ ದುಃಖಕ್ಕೂ ಕಾರಣವೆಂದು ಅನ್ನವನ್ನು ದ್ವೇಷಿಸಿ ತೃಪ್ತರಾಗುತ್ತಿದ್ದಾರೆ. ಆದರೆ ಅವರ ತೂಕವೇನು ಕಡಿಮೆಯಾಗುತ್ತಿಲ್ಲ. ಯುವಕರು ಈ ಬಗ್ಗೆ ಚಿಂತಿಸುವುದೇ ಇಲ್ಲ. ನಲವತ್ತರ ಮೇಲೆ ಹೊಟ್ಟೆ ಗಣಪನ ಹೊಟ್ಟೆಯೊಂದಿಗೆ ಸ್ಪರ್ಧಿಸಿ ಗೆದ್ದಮೇಲೆ ಡಾಕ್ಟರರ ಸಲಹೆಯಂತೆ ಡಯಟ್ ಮಾಡಲು ಒಲ್ಲದ ಮನಸ್ಸಿನಿಂದ ಪ್ರಾರಂಭ. ಇಬ್ಬರೂ ವೈಜ್ನಾನಿಕವಾಗಿ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಅವರವರ ಎತ್ತರಿಕ್ಕಿರಬೇಕಾದ ತೂಕದ ಚಾರ್ಟ್, ಕ್ಯಾಲೋರಿ, ಡಯಟ್ ಯಾವುದೂ ಅವರ ಸಹಾಯಕ್ಕೆ ಬರುತ್ತಿಲ್ಲ. ಅದಕ್ಕೆಲ್ಲಾ ಅವರು ತಿನ್ನುತ್ತಿರುವ ಸತ್ತ ಆಹಾರ(ಜಂಕ್ ಫುಡ್) ಕಾರಣ. ರಸ್ತೆಯ ಬದಿಯ ಆಹಾರ ಸೇವಿಸುವುದು ಆರೋಗ್ಯಕರವೇ? ಅವರಿಗೆ ಅದು ಗೊತ್ತಿಲ್ಲವೇ? ಎಲ್ಲವೂ ಗೊತ್ತಿದೆ. ಆದರೆ ಅನುಷ್ಠಾನದಲ್ಲಿಲ್ಲ. ಹೋಟೆಲ್ಗಳು, ಪಾನೀಪುರಿ ಅಂಗಡಿಗಳು, ನಾರ್ತ್ ಇಂಡಿಯನ್, ಚೈನೀ, ಬೇಕರಿಗಳು ಇತ್ಯಾದಿ ಹೊಸ ತರಹೆಯ ನಾನಾ ನಮೂನೆಯ ಆಕರ್ಷಣೀಯವಾದ ಆಹಾರದ ತಾಣಗಳು ಇಂದು ಹೆಚ್ಚು ಹೆಚ್ಚು ಯುವಕ ಯುವತಿಯರನ್ನು ತನ್ನತ್ತ ಆಕರ್ಷಿಸಿಕೊಳ್ಳುತ್ತಿದೆ.
ಮುಖ್ಯವಾದ ವಿಷಯ, ವ್ಯಾಯಾಮ ಹಾಗೂ ಸರಿಯಾದ ಆಹಾರವನ್ನು ಅವರು ಅಳವಡಿಸಿಕೊಳ್ಳಬೇಕು. ಯುವಕ ಯುವತಿಯರ ವಿಷಯದಲ್ಲಿ ಸರಿಯಾದ ಮೊದಲ ಆದ್ಯತೆಯ ಆಹಾರವೆಂದರೆ ಹಲ್ಲಿಗೆ ವ್ಯಾಯಾಮವನ್ನು ಒದಗಿಸುವ(ಚ್ಯೂಯಿಂಗ್ ಗಮ್ ಅಲ್ಲ) ಆಹಾರವೇ, ಮಿಕ್ಕ ಆಹಾರಗಳೆಲ್ಲವೂ ದ್ವಿತೀಯ ದರ್ಜೆಯ ಆಹಾರ. ಇಡ್ಲಿ, ದೋಸೆ, ಬಿಳಿಯ ಬ್ರೆಡ್ ಇತ್ಯಾದಿಗಳಿಗೆಲ್ಲಾ ಹಲ್ಲಿನ ಅವಶ್ಯಕತೆ ಇದೆಯೇ? ಇವಕ್ಕೇ ಈಗ ಪ್ರಥಮ ಸ್ಥಾನ. ಅದಕ್ಕೇ ಬೇಗ ಹಲ್ಲುಗಳನ್ನು ಕಳೆದುಕೊಳ್ಳುವಿಕೆ. ಮೇಲಿನ ಆಹಾರವನ್ನು ಹಲ್ಲು ಹೋದ ಮೇಲೆ ತಿನ್ನುವಿರಂತೆ. ಆದರೆ, ಮೊಳಕೇಕಾಳುಗಳನ್ನು ಅಗಿದು ತಿನ್ನುವ, ಸೀಬೆ, ಸೇಬು ಇತ್ಯಾದಿಗಳನ್ನು ಕಚ್ಚಿ ತಿನ್ನುವ, ಚಪಾತಿಯನ್ನು ಅಗಿಯುವ, ಕಬ್ಬನ್ನು ಸಿಗಿಯುವ ಆನಂದ, ಇದನ್ನೆಲ್ಲಾ ಯಾವಾಗ ಅನುಭವಿಸುತ್ತೀರಿ?
ಇದಕ್ಕೆಲ್ಲಾ ವೇಳೆಯಿಲ್ಲ! ಹಾಗಾದರೆ ವೇಳೆಯನ್ನು ಹೇಗೆ ಉಪಯೋಗಿಸುತ್ತೀರಿ? "ಓದಿಗೆ, ಆಟಕ್ಕೆ" "ಏನು ಆಟ ಆಡುತ್ತೀರ?" "ಇಲ್ಲ, ಟಿ.ವಿ.ಯಲ್ಲಿ ಕ್ರಿಕೆಟ್ ನೋಡುತ್ತೇವೆ." ಸಾರ್ಥಕವಾಯಿತು!! ಆಟ ಆಡಲಿಕ್ಕೋ ಅಥವ ಬರೀ ನೋಡಲಿಕ್ಕೋ? ಇಂತಹ ಆಟ, ಅಂತಹ ಊಟದ ನಮ್ಮ ಭವ್ಯ ಭಾರತದ ಮುಂದಿನ ಪ್ರಜೆಗಳನ್ನು ನೆನೆಸಿಕೊಂಡರೆ ಭಯವಾಗುತ್ತದೆ!!
ಮೊದಲ ಸ್ಥಾನ ಮೊಳಕೆಯ ಕಾಳುಗಳು, ಕ್ಯಾರಟ್, ಬೀಟ್ ರೂಟ್ ಇತ್ಯಾದಿ ಹಸಿಯ ತರಕಾರಿಗಳು, ಸೇಬು, ಸೀಬೆ, ಹಲಸು ಇತ್ಯಾದಿ ಹಣ್ಣುಗಳು, ಕಬ್ಬು. ಬೇಯಿಸಿದ ಆಹಾರಕ್ಕೆ ಎರಡನೆಯ ಸ್ಥಾನ. ಅದರಲ್ಲೂ ಚಪಾತಿ, ರೊತ್ತಿ ಇತ್ಯಾದಿಗಳು ಮುಖ್ಯ. ಮೆತ್ತಗಿರುವ ಆಹಾರ ಹಲ್ಲು ಬಾರದ ಮಕ್ಕಳಿಗೂ ಅದಕ್ಕಿಂತ ಹೆಚ್ಚಾಗಿ ಮಿದುಕರಿಗೇ ಇರಲಿ ಬಿಡಿ! ಯುವಕರು ಹಲ್ಲಿಗೆ ಕೆಲಸ ಕೊಡದೆ ಆಹಾರ ಸೇವಿಸುವುದು ಮಹಾಪರಾಧ. ಹುಡುಗರಾಗಿದ್ದಾಗ ಮಾಡಿದ ತಪ್ಪಿನಿಂದ ಹಲ್ಲುಗಳು ಆಗಲೇ ಸಾಕಷ್ಟು ಹಾಳಾಗಿರುತ್ತವೆ.
ಈಗಲೂ ಮೃದುವಾದ ಆಹಾರ ಸೇವಿಸಿ ಬೇಗ ಹಲ್ಲುಗಳ ಗೋರಿಯನ್ನು ತೋಡುವುದೇ! ಅಗಿಯುವುದರ ಆನಂದ ಅಗಿದೇ ಅನುಭವಿಸಬೇಕು. ಬರೀ ಬರೆದು ಏನು ಪ್ರಯೋಜನ? ಯುವಕ, ಯುವತಿಯರು ದಪ್ಪ, ಸಣ್ಣ ಇತ್ಯಾದಿಗಳ ಬಗ್ಗೆ ವೃಥಾ ಚಿಂತಿಸದೆ ಹಲ್ಲನ್ನು ಉಪಯೋಗಿಸಿ ಹೆಚ್ಚು ನೈಸರ್ಗಿಕ ಆಹಾರವನ್ನು ಸೇವಿಸಿದರೆ ತನ್ನ ತಂದೆ, ತಾಯಿಯರಿಂದ ಪಡೆದ ಜೀನ್ ಗೆ ಅನುಗುಣವಾಗಿ ತೂಕ, ಎತ್ತರ ಎಲ್ಲವೂ ಸಹಜವಾಗಿ ಬರುತ್ತದೆ. ವಂಶವಾಹಿನಿಯಲ್ಲಿ ಬಾರದಿರುವುದನ್ನು ಯಾವ ಸಾಧನದಿಂದಲೂ ಸಾಧಿಸಲು ಸಾಧ್ಯವಿಲ್ಲ. ಉತ್ತಮ ಆಹಾರ, ಉತ್ತಮ ವ್ಯಾಯಾಮ ನೀವು ಮಾಡಬೇಕಾದ ಜೀವವಿಮೆ. ಇದರ ಬಗ್ಗೆ ಚಿಂತಿಸಿ.
ಒಂದು ದಿನದ ಆಹಾರದ ಮಾದರಿ :
ಬೆಳಿಗ್ಗೆ : ೦೫-೦೦ ಒಂದು ಚೊಂಬು ನೀರು, (ನಂತರ ವ್ಯಾಯಾಮ, ಯೋಗಾಸನ, ಈಜು, ಓಟ, ಆಟ ಇತ್ಯಾದಿ)
೦೭-೦೦ ಬಿಸಿ ನೀರು + ಬೆಲ್ಲ + ನಿಂಬೆಹಣ್ಣು
೦೯-೦೦ ರೊಟ್ಟಿ, ಚಪಾತಿ(ಸೂಖ) ಇತ್ಯಾದಿ ೪೦% + ತರಕಾರಿಗಳ ಸಲಾಡ್ ೬೦%
ಮಧ್ಯಾನ್ಹ ೧೨-೦೦ ಹಿಟ್ಟು + ಬೇಯಿಸಿದ ತರಕಾರಿ + ಮಜ್ಜಿಗೆ + ಒಂದು ಹಸಿಯ ಕ್ಯಾರಟ್(ಈರುಳ್ಳಿ) ಕಡಿದು ತಿನ್ನಬೇಕು.
ಸಂಜೆ ೦೫-೦೦ ಬಾಳೆಯ ಹಣ್ಣು + ಋತುಮಾನದ ಹಣ್ಣು(ಬೇಕಿದ್ದಲ್ಲಿ).
ಆಟ-ಬೆವರು ಬೀಳುವಂತೆ)
ರಾತ್ರಿ ೦೮-೦೦ ಮೊಳಕೆಯ ಗೋಧಿ ೨ ಹಿಡಿ + ಬೆಂಡ ಖರ್ಜೂರ + ತೆಂಗಿನಕಾಯಿ + ೧ ಲೋಟ ಹಾಲು + ಹಣ್ಣುಗಳು, ಅಥವಾ ಮೊಳಕೆಯ ಹೆಸರುಕಾಳು(ಮೆಂಥ್ಯ, ಬಟಾಣಿ, ಕಡ್ಲೆ) + ತೆಂಗಿನ ತುರಿ + ತರಕಾರಿಯ ಸಲಾಡ್ = ಮಜ್ಜಿಗೆ.
ಸಮ್ಅತೋಲನ ಆಹಾರ
ಸಮತೋಲನ ಆಹಾರ(ಬ್ಯಾಲನ್ಸಡ್ ಡಯಟ್)
ಇಂದು ಯಾರೇ ಡಾಕ್ಟರರ ಹತ್ತಿರ ಹೋದರೂ ಒಂದು ಪದ ಉಪಯೋಗಿಸುತ್ತಾರೆ. 'ನೀವು ಸಮತೋಲನ ಆಹಾರ ತೆಗೆದುಕೊಳ್ಳುತ್ತಿಲ'. ಯಾವುದೇ ಡಯಟೀಷಿಯನ್ ಬಳಿ ಹೋದರೂ ಇದೇ ಮಾತು.
ಈ ಸಮತೋಲನ ಆಹಾರವೆಂದರೇನು? ಆಹಾರದಲ್ಲಿ ಆರೂ ಘಟಕಗಳೂ ಇರಬೇಕು. ಅದೂ ಪ್ರಮಾಣಬದ್ಧವಾಗಿರಬೇಕು. ಒಂದೇ ಒಂದು ಘಟಕವನ್ನು ಹೊಟ್ಟೆಯ ತುಂಬಾ ತಿಂದರೂ ಪ್ರಯೋಜನವಿಲ್ಲ.
ಯಾವ ಯಾವ ಗುಂಪಿನ ಆಹಾರ ಎಷ್ಟೆಷ್ಟು?
ಒಂದು ದಿನದ ಒಬ್ಬನ ಆಹಾರ :
೧. ಏಕದಳ ಧಾನ್ಯಗಳು ೪೬೦ ಗ್ರಾಂ 
೨. ಬೇಳೆಗಳು ೪೦ ಗ್ರಾಂ
೩. ಹಸಿ ತರಕಾರಿಗಳು ೪೦ ಗ್ರಾಂ
೪. ಇತರೆ ತರಕಾರಿಗಳು ೪೦ ಗ್ರಾಂ
೫. ಗೆಡ್ಡೆ, ಗೆಣಸುಗಳು ೫೦ ಗ್ರಾಂ
೬. ಹಣ್ಣುಗಳು ೩೦ ಗ್ರಾಂ
೭. ಹಾಲು ೧೫೦ ಗ್ರಾಂ
೮. ಕೊಬ್ಬು ೪೦ ಗ್ರಾಂ
೯. ಬೆಲ್ಲ ೩೦ ಗ್ರಾಂ 
ಈ ಸಮತೋಲನ ಆಹಾರವೂ ಸಹ ಎಲ್ಲರಿಗೂ, ಯಾವಾಗಲೂ ಸಮತೋಲನವಾಗುವುದಿಲ್ಲ.
೧) ಮಕ್ಕಳ ಬೆಳೆಯುವ ವಯಸ್ಸಿನಲ್ಲಿ: ಬೆಳವಣಿಗೆಗಾಗಿ ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಬೇಕಾಗುತ್ತದೆ. ಮೂಳೆಗಳ ಬೆಳವಣಿಗೆಗೆ ಹೆಚ್ಚು ಕ್ಯಾಲ್ಷಿಯ್ಂ ಮತ್ತು ರಂಜಕ, ವಿಟಮಿನ್ 'ಎ' ಕಣ್ಣುಗಳ ಆರೋಗ್ಯಕ್ಕಾಗಿ, ವಿಟಮಿನ್ 'ಸಿ' ಶರೀರದ ರಕ್ಷಣೆಗಾಗಿ, ಹಾಗೂ ವಿಟಮಿನ್ 'ಡಿ' ಬೆಳವಣಿಗೆಗಾಗಿ, ಈ ವಿಷಯಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಆಹಾರ ಕೊಡಬೇಕಾಗುತ್ತದೆ.
೨. ಶ್ರಮ ಜೀವಿಗಳಿಗೆ : ಇವರಿಗೆ ಹೆಚ್ಚು ಕಾರ್ಬೋಹೈಡ್ರ್‍ಏಟ್ ಮತ್ತು ಕೊಬ್ಬಿರುವ ಆಹಾರ ಕೊಡಬೇಕು.
೩. ಬಸುರಿಯರಿಗೆ : ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಬೇಕು. ಜತೆಗೆ ಕಬ್ಬಿಣ, ಕ್ಯಾಲ್ಷಿಯಂ,ಮತ್ತು ರಂಜಕ, ಅಲ್ಲದೆ ಎಲ್ಲಾ ವಿಟಮಿನ್ ಗಳೂ ಹೆಚ್ಚು ಹೆಚ್ಚು ಬೇಕು. ಬಾಣಂತಿಗೂ ಇಂತಹ ಆಹಾರದ ಅವಶ್ಯಕತೆ ಇದೆ.
೪. ಕಾಯಿಲೆಯಿಂದ ಗುಣಮುಖರಾಗುತ್ತಿರುವ ವ್ಯಕ್ತಿಗೆ : ಹೆಚ್ಚು ಪ್ರೊಟೀನ್ ಬೇಕು. ಹೆಚ್ಚು ವಿಟಮಿನ್, ಖನಿಜಗಳು ಅವಶ್ಯಕ. ಜತೆಗೆ ಸುಲಭವಾಗಿ ಜೀರ್ಣವಾಗುವ ಆಹಾರವಿರಬೇಕು.
೫. ವೃದ್ಧಾಪ್ಯದಲ್ಲಿ : ಕಾರ್ಬೋಹೈಡ್ರ್‍ಏಟ್, ಪ್ರೋಟೀನ್ ಗಳಿಗಿಂತ ಹೆಚ್ಚು ವಿಟಮಿನ್, ಲವಣಗಳು, ಕಿಣ್ವಗಳಿರುವ ಆಹಾರ ಮುಖ್ಯ. ಜತೆಗೆ ಸುಲಭವಾಗಿ ಜೀರ್ಣವಾಗುವಂತಿರುವುದು ಅವಶ್ಯಕ.
ಹೀಗೆ ಪ್ರತಿಯೊಬ್ಬರೂ ಅವರವರ ಅವಶ್ಯಕತೆಯನ್ನು ಅನುಸರಿಸಿ ಆಹಾರದ ಆರೂ ಘಟಕಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ತರಕಾರಿಗಳನ್ನು ತಾಜಾ ಆಗಿ ಉಪಯೋಗಿಸಬೇಕು. ವೇಳೆ ಕಳೆದಂತೆ ಜೀವಸತ್ವಗಳು ನಾಶವಾಗುತ್ತವೆ. ಆಗತಾನೆ ಕಿತ್ತ ೧೦೦ ಗ್ರಾಂ ಆಲೂಗೆಡ್ಡೆಯಲ್ಲಿ ೩೦ ಮಿ.ಗ್ರಾಂ 'ಸಿ' ಜೀವಸತ್ವವಿದೆ. ಒಂದು ತಿಂಗಳು ಹಳತಾದರೆ ೨೦ ಮಿ.ಗ್ರಾಂ ಗೆ ಇಳಿಯುತ್ತದೆ. ಆರು ತಿಂಗಳು ಕಳೆದರೆ ೧೦ ಮಿ.ಗ್ರಾಂ.
ಸೊಪ್ಪು, ಹಸಿರು ತರಕಾರಿಗಳಲ್ಲಿ ಇದು ಇನ್ನು ಬೇಗ. ತರಕಾರಿಗಳನ್ನು ಹೆಚ್ಚು ಹೊತ್ತು ನೀರಿನಲ್ಲಿ ನೆನೆಸಿಡಬಾರದು. ನೀರಿನಲ್ಲಿ ಕರಗುವ ಜೀವಸತ್ವಗಳಾದ 'ಬಿ' ಮತ್ತು 'ಸಿ' ನೀರಿನಲ್ಲಿ ಕರಗಿಹೋಗುತ್ತವೆ. ತರಕಾರಿಗಳನ್ನು ಸಣ್ಣ, ಸಣ್ಣದಾಗಿ ಕತ್ತರಿಸುವುದರಿಂದ ೨೦ ರಿಂದ ೭೦ ಶತಾಂಶ ಜೀವಸತ್ವಗಳು ನಾಶವಾಗುತ್ತವೆ.
ತರಕಾರಿಗಳನ್ನು ಬೇಯಿಸಿದ ನೀರನ್ನು ಹೊರಕ್ಕೆ ಚೆಲ್ಲದೇ 'ಸೂಪ್'ನಂತೆ ಕುಡಿಯಬೇಕು. ಪದೇ,ಪದೇ ಬೇಯಿಸಿ ಉಪಯೋಗಿಸುವುದರಿಂದ ವಿಟಮಿನ್ ನಾಶ. ಅಕ್ಕಿಯನ್ನು ಹೆಚ್ಚು ಪಾಲೀಶ್ ಮಾಡಿದಷ್ಟೂ ಜೀವಸತ್ವಗಳ ನಾಶ.
ಪೋಷಕಾಂಶಗಳು : ಪಾಲೀಶ್ ಆಗದ ಅಕ್ಕಿ ಪಾಲೀಶ್ ಆದ ಅಕ್ಕಿ (೧೦೦ ಗ್ರಾಂ ನಲ್ಲಿ ಮಿ.ಗ್ರಾಂ ಮಿ.ಗ್ರಾಂ 
ಕ್ಯಾಲ್ಸಿಯಂ ೧೦.೦೦ ೧೦.೦೦
ಕಬ್ಬಿಣ ೩.೨೦ ೩.೧೦
ಥಯಾಮಿನ್ ೦.೨೧ ೦.೦೬
ರಿಬೋಫ್ಲೇವಿನ್ ೦.೧೬ ೦.೦೬
ನಯಾಸಿನ್ ೩.೯೦ ೧.೯೦
ನಾರು ೦.೬೦ ೦.೨೦
ಥಯಾಮಿನ್, ನಯಾಸಿನ್ ಮುಂತಾದವು ಬಹಳಷ್ಟು ನಾಶವಾಗುತ್ತದೆ. ಗೋಧಿಯ ಹಿಟ್ಟಿನಲ್ಲಿ ಹೊಟ್ಟು ತೆಗೆಯುವುದರಿಂದ ಪೋಷಕಾಂಶಗಳು ನಾಶವಾಗುತ್ತವೆ.
ಪೋಷಕಾಂಶಗಳು ಗೋಧಿಯ ಹಿಟ್ಟು ಮೈದಾ ಹಿಟ್ಟು
(೧೦೦ ಗ್ರಾಂ ನಲ್ಲಿ) ಮಿ.ಗ್ರಾಂ ಮಿ. ಗ್ರಾಂ
ಕ್ಯಾಲ್ಸಿಯಂ ೪೧.೦೦ ೨೩.೦೦
ಕಬ್ಬಿಣ ೦.೪೯ ೦.೧೨
ರಂಜಕ ೩೫೫.೦೦ ೧೨೧.೦೦
ನಯಾಸಿನ್ ೪.೩೦ ೨.೪೦
ರಿಬೋಫ್ಲೇವಿನ್ ೦.೧೭ ೦.೦೭
ಥಯಾಮಿನ್ ೦.೪೯ ೦.೧೨
ನಾರಿನ ಅಂಶ ೧.೯೦ ೦.೩೦
ಕರಿಯುವುದು ಹಾಗೂ ಎಣ್ಣೆಯಲ್ಲಿ ಹುರಿಯುವುದು : ಇದರಿಂದ ೪೦% 'ಸಿ', ೭೦% 'ಇ' ಜೀವಸತ್ವಗಳು ನಾಶವಾಗುತ್ತವೆ. ಹೆಚ್ಚಿದ ಹಣ್ಣುಗಳು, ತುರಿದ ತರಕಾರಿಗಳನ್ನು ಹೆಚ್ಚು ವೇಳೆ ಗಾಳಿಯಲ್ಲಿ ಬಿಡಬಾರದು.
ಜೀರ್ಣಕ್ರಿಯೆ
ಗುರುಗಳು : ಬೆಳಗಿನ ತಿಂಡಿ ಏನು?
ಒಂದನೇ ವಿದ್ಯಾರ್ಥಿ : ಚಪಾತಿ, ಸಾಗು 
ಎರಡನೇ ವಿದ್ಯಾರ್ಥಿ : ಪೂರಿ, ಪಲ್ಯ
ಮೂರನೇ ವಿದ್ಯಾರ್ಥಿ : ಇಡ್ಲಿ, ಸಾಂಬಾರ್
ನಾಲ್ಕನೇ ವಿದ್ಯಾರ್ಥಿ : ಹಣ್ಣುಗಳು
ಗುರುಗಳು : ಹೀಗೆ, ಬೇರೆ ಬೇರೆ ತಿಂಡಿಗಳನ್ನು ತಿಂದಿದ್ದೀರಿ. ಇವೆಲ್ಲಾ ಹೇಗೆ ರಕ್ತಗತವಾಗುತ್ತವೆ?
ವಿದ್ಯಾರ್ಥಿಗಳು (ಒಟ್ಟಿಗೆ): ನಮಗೆ ಗೊತ್ತಿಲ್ಲಾ ಸಾರ್, ನೀವೇ ತಿಳಿಸಿ.
ಗುರುಗಳು : ಜೀರ್ಣಕ್ರಿಯೆ ನಿಸರ್ಗದ ಒಂದು ಚಮತ್ಕಾರ. ನಾವು ತಿನ್ನುವ ಆಹಾರ ಬಾಯಿಯಿಂದ ಗುದದ್ವಾರದವರೆವಿಗೂ ಪಯಣಿಸುತ್ತದೆ. ಇದರ ಒಟ್ಟು ಉದ್ದ ಮೂವತ್ತಮೂರು ಅಡಿ. ಅನೇಕ ಅಂಗಗಳು ಈ ಕ್ರಿಯಯಲ್ಲಿ ಭಾಗವಹಿಸುತ್ತವೆ. ಆ ಅಂಗಗಳೇ ಅವುಗಳ ಕತೆಯನ್ನು ಹೇಳುತ್ತವೆ, ಕೇಳೋಣ.
ಬಾಯಿ : ಮೂಗು, ಆಹಾರದ ವಾಸನೆಯನ್ನು ಗ್ರಹಿಸುತ್ತದೆ. ಕಣ್ಣು ಬಣ್ಣವನ್ನು ನೋಡುತ್ತದೆ. ಆಗ ನನ್ನಲ್ಲಿ ನೀರು ದ್ರವಿಸಲು ಪ್ರಾರಂಭವಾಗುತ್ತದೆ. ಅದು ಬರಿಯ ನೀರಲ್ಲ, ಅದನ್ನು ಜೊಲ್ಲು ಎಂದು ಕರೆಯುತ್ತಾರೆ. ದಿನಕ್ಕೆ ಸುಮಾರು ಎರಡು ಲೀಟರಿನಷ್ಟು ಜೊಲ್ಲು ತಯಾರಾಗುತ್ತದೆ. ಜೀರ್ಣಕ್ರಿಯೆ ಹೊಟ್ಟೆಯಲ್ಲಿ ಪ್ರಾರಂಭವಾಗುವುದೆಂದು ಬಹಳ ಜನರ ನಂಬಿಕೆ. ಇಲ್ಲ, ಅದು ಪ್ರಾರಂಭವಾಗುವುದು ನನ್ನಿಂದ. ಜೀರ್ಣಕ್ರಿಯೆಯಲ್ಲಿ ಎರಡು ವಿಧ. ೧) ಯಾಂತ್ರಿಕ ಕ್ರಿಯೆ ೨) ರಾಸಾಯಿನಿಕ ಕ್ರಿಯೆ
ಯಾಂತ್ರಿಕ ಕ್ರಿಯೆಯು ಆಹಾರವನ್ನು ನುರಿಸಿ ನುಣ್ಣಗೆ ಮಾಡುವುದು. ಇದು ಜೀರ್ಣಕ್ರಿಯೆಯ ಮೊದಲ ಹಂತ. ಇದನ್ನು ನನ್ನಲ್ಲಿರುವ ಹಲ್ಲುಗಳು ಮಾಡುವುವು.
ಹಲ್ಲುಗಳು : ಮಕ್ಕಳೇ, ನಿಮಗೆ ನಮ್ಮ ಮೇಲಿರುವಷ್ಟು ಕೋಪ ಬಹುಶಃ ಯಾವ ಅಂಗದ ಮೇಲೂ ಇಲ್ಲವೆಂದು ಕಾಣುತ್ತದೆ. ನೀವು ಚಿಕ್ಕವರಾದಾಗಿನಿಂದಲೂ ಹಲ್ಲುಜ್ಜಿಕೊಳ್ಳುವುದು ಬೇಸರದ ಕೆಲಸ. ನೀವು ಉಪಾಧ್ಯಾಯರಿಂದ ಬೈಸಿಕೊಳ್ಳುವುದೂ ಸಹ ನಮ್ಮಿಂದಲೇ. "ಲೋ! ಏಕೋ ಹಲ್ಲು ಕಿಸಿಯುತ್ತಿ." ಒಟ್ಟಿನಲ್ಲಿ ನಮ್ಮ ಬಗ್ಗೆ ನಿಮಗೆ ಆಸಕ್ತಿ ಕಡಿಮೆ. ನಿಮಗೆ ನಾವು ಜ್ನಾಪಕ ಬರುವುದು ನೀವು ಸೀಬೇಕಾಯಿಯನ್ನು ನೋಡಿದಾಗ ಮಾತ್ರ. ಮುಂದೆ ಯುವಕ, ಯುವತಿಯರಾದ ಮೇಲೆ ನಮ್ಮ ಬಗ್ಗೆ ಕರುಣೆ ಬರುತ್ತದೆ. ಅಷ್ಟರಲ್ಲಿ ಅಚಾತುರ್ಯ ನಡೆದುಹೋಗಿರುತ್ತದೆ. ಹೃದಯ ಮುಂತಾದ ಅಂಗಗಳು ನಿಮ್ಮ ಸಹಾಯವನ್ನು ಹೆಚ್ಚು ಬಯಸುವುದಿಲ್ಲ. ಆದರೆ ನಾವು ಹಾಗಲ್ಲ. ನಮ್ಮ ಇರುವಿಕೆಗೆ ನಿಮ್ಮ ಸಹಾಯ ಅಗತ್ಯ. ನಿಮ್ಮ ಸಹಾಯಕ್ಕಾಗಿಯೇ ನಾವು ಇದ್ದೇವೆ. ನಾವು ಬಹಳ ಮಾನಧನರು. ನಮ್ಮನ್ನು ನಿರ್ಲಕ್ಷಿಸಿದರೆ ನಾವು ಬೇಗ ಜಾಗ ಖಾಲಿ ಮಾಡುತ್ತೇವೆ! ನೀವು ಇನ್ನೂ ಚಿಕ್ಕವರಿದ್ದಾಗ ಹಾಲುಹಲ್ಲುಗಳೆಂಬ ಇಪ್ಪತ್ತು ಹಲ್ಲುಗಳ ಒಂದು ಜೋಡಣೆಯಿತ್ತು. ಅದು ಬಿದ್ದು ಶಾಶ್ವತ ಹಲ್ಲುಗಳಾದ ನಾವು ಹುಟ್ಟಿದೆವು. ಕಡೆಯದಾಗಿ ಬರುವವು ಕಡೆಯ ಎರಡು ದವಡೆಯ ಹಲ್ಲುಗಳು. ಅವಕ್ಕೆ "ಬುದ್ಧಿವಂತ ಹಲ್ಲು' ಗಳೆಂದು ಹೆಸರು (ವಿಸ್ಡಮ್ ಟೀತ್). ಆ ವಯಸ್ಸಿಗೆ ನಿಮಗೆ ಬುದ್ಧಿ ಬಂದಿದೆ ಎಂದು ಅರ್ಥ. ನಿಮಗೆ ಬುದ್ಧಿ ಬಂದಿಲ್ಲದಿದ್ದರೆ ಅದು ನಮ್ಮ ತಪ್ಪಲ್ಲ! ಒಟ್ಟು ನಾವು ಮೂವತ್ತೆರಡು ಹಲ್ಲುಗಳು. ಕೆಳಗಿನ ಸಾಲಿನಲ್ಲಿ ಹದಿನಾರು, ಮೇಲಿನ ಸಾಲಿನಲ್ಲಿ ಹದಿನಾರು. ಬಾಚಿ ಹಲ್ಲುಗಳು, ಕೋರೆಹಲ್ಲು, ದವಡೆಹಲ್ಲುಗಳು, ಮುಂತಾಗಿ ನಮ್ಮ ನಮ್ಮ ಕೆಲಸಗಳನ್ನು ಅನುಸರಿಸಿ ನಮಗೆ ಹೆಸರುಗಳನ್ನು ಇಟ್ಟಿದ್ದಾರೆ. ಆಹಾರವನ್ನು ಹರಿಯಲು, ಕಡಿಯಲು, ಸಿಗಿಯಲು, ಅರೆಯಲು ಬೇರೆ ಬೇರೆ ಹಲ್ಲುಗಳೇ ಅವಶ್ಯ. ಕೋರೆಯ ಹಲ್ಲಿಗೆ 'ಕಣ್ಣು ಹಲ್ಲು' (ಐ ಟೀತ್) ಎಂದೂ ಕರೆಯುತ್ತಾರೆ. ಅದು ಕಣ್ಣಿನವರೆಗೂ ಹೋಗಿದೆಯೆಂದು ಹಿಂದಿನವರು ನಂಬಿದ್ದರು. ಅದು ತುಂಬಾ ಆಳಕ್ಕೆ ಇಳಿದಿದೆಯೆಂಬುದು ನಿಜವೇ. ನಾವು ಕ್ಯಾಲ್ಸಿಯಂ ಫಾಸ್ಫೇಟ್ ನಿಂದ ತಯಾರಾಗಿದ್ದೇವೆ. ಆದ್ದರಿಂದಲೇ ಕ್ಯಾಲಿಯಂ ಮತ್ತು ರಂಜಕಯುಕ್ತವಾದ ಆಹಾರವನ್ನು ನೀವು ಹೆಚ್ಚಿಗೆ ಸೇವಿಸಬೇಕು. ಅವುಗಳು ಯಾವುದರಲ್ಲಿರುತ್ತವೆನ್ನುವುದನ್ನು ಆಗಲೇ ಹೇಳಿಯಾಗಿದೆ. ನಮ್ಮ ಮೇಲಿರುವ ಮೊದಲನೆಯ ಪರೆ ಎನಾಮಲ್, ಅದರ ಹಿಂದಿರುವುದೇ ಡೆಂಟೈನ್. ಇದು ಪೂರ್ತಿ ಮೂಳೆಯಿಂದಲೇ ಆಗಿದೆ. ಈ ಡೆಂಟೈನ್ ನ ಹಿಂದೆ ಮೃದುವಾದ ಭಾಗವಿದೆ. ಅಲ್ಲಿ ನರಗಳು, ರಕ್ತನಾಳಗಳು ಎಲ್ಲವೂ ಇವೆ. ನೀವು ದಿನಕ್ಕೆ ಎರಡು ಸಲ ಬೇಕಾಬಿಟ್ಟಿಯಾಗಿ ಉಜ್ಜಿ ಬಹಳ ಶುಚಿಯಾಗಿಟ್ಟುಕೊಂಡಿರುವೆವು ಎಂದು ಭಾವಿಸಿದ್ದೀರಿ. ಬಾಯಿ, ಅಣುಗಳ ಅಕ್ಷಯಸಾಗರ. ಉಳಿದ ಆಹಾರದ ಕಣಗಳ ಮೇಲೆ ಬ್ಯಾಕ್ಟೀರಿಯಾಗಳ ಧಾಳಿಯಿಂದ ಒಂದು ಪೊರೆಯುಂಟಾಗುತ್ತದೆ. ಅದನ್ನು ಫ್ಲೇಕ್ ಎನ್ನುತ್ತಾರೆ. ಇದು ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿರುತ್ತದೆ. ಇದರಲ್ಲಿ ಆಹಾರದ ಕಣಗಳು ಕೊಳೆತು ಆಮ್ಲತೆಯುಂಟಾಗುತ್ತದೆ. ಈ ಆಮ್ಲ ಎನಾಮಲ್ ಅನ್ನು ಕರಗಿಸುತ್ತದೆ. ಇದು ಸಿಹಿ ಬಾಯಿಗೂ ಕಾರಣವಾಗುತ್ತದೆ. ಅಂದರೆ ತಿಂದ ಸಿಹಿ ಪದಾರ್ಥಗಳ ಕಣಗಳು ಬಾಯಿಯಲ್ಲಿ ಉಳಿದರೆ ಅದು ಬಾಯಿಯಲ್ಲಿಯ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳಿಗೆ ಧಾಳಿ ಮಾಡಲು ಅನುಕೂಲವಾಗುತ್ತದೆ. ಕಣ್ಣಿಗೆ ಕಾಣದ ಫ್ಲೇಕ್(ಪ್ಲೇಕ್) ಜೊಲ್ಲಿನಲ್ಲಿರುವ ಲವಣಗಳನ್ನು ತೆಗೆದುಕೊಂಡು ಬಹಳ ಗಟ್ಟಿಯಾದ 'ಟಾರ್ ಟಾರ್' ಎಂಬ ವಸ್ತುವನ್ನು ತಯಾರಿಸಿ ಸಂದುಗಳಲ್ಲಿ ಕಟ್ಟುವಂತೆ ಮಾಡುತ್ತದೆ. ನೀವು ಮಧ್ಯವಯಸ್ಕರ ಹಲ್ಲಿನಲ್ಲಿ ಕರಿಯಬಣ್ಣದ ಈ ಟಾರ್ ಟಾರ್ ಕಟ್ಟಿರುವ ಹಲ್ಲುಗಳನ್ನು ನೋಡಿರಬಹುದು. ಇದು ನಮ್ಮ ಅಡಿಪಾಯವಾದ ವಸಡನ್ನು ನಮ್ಮಿಂದ ಬೇರ್ಪಡಿಸಿಬಿಡುತ್ತದೆ.
ನಾವು ನಿಮ್ಮ ಶರೀರವೆಂಬ ಮನೆಯ ಕಾಂಪೌಂಡಿನ ಗೇಟಿನಂತೆ. ನಿಮ್ಮ ಶರೀರದ ಆರೋಗ್ಯ, ನಿಮ್ಮ ಸೌಂದರ್ಯ ಎಲ್ಲವೂ ನಮ್ಮನ್ನು ಅವಲಂಬಿಸಿವೆ. ನಾವು 'ಉಪಯೋಗಿಸು, ಇಲ್ಲದಿದ್ದರೆ ಕಳೆದುಕೋ' (ಯೂಸ್ ಆರ್ ಲೂಸ್) ಎಂಬ ತತ್ವಕ್ಕೆ ಬದ್ಧರು. ನೀವು ನಮ್ಮನ್ನು ಉಪಯೋಗಿಸದಿದ್ದರೆ ಕಳೆದುಕೊಳ್ಳುತ್ತೀರಿ. ನಮ್ಮನ್ನು ಕಳೆದುಕೊಂಡರೆ ಗೇಟಿಲ್ಲದ ಮನೆಯಂತೆ, ಯಾವುದೇ ದನವಾದರೂ ನುಗ್ಗೀತು ಎಚ್ಚರಿಕೆ!
ಮಕ್ಕಳೇ! ಗ್ರ್‍ಐಂಡರ್ ನೋಡಿದ್ದೀರಾ ? ಅದು ಹೇಗೆ ಕೆಲಸ ಮಾಡುತ್ತದೆ. ಅರೆಯುತ್ತದೆ. ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರು ಬಿದ್ದರೆ ಮಾತ್ರ ಚೆನ್ನಾಗಿ ನುರಿಸಬಲ್ಲದು. ಹಾಗೆಯೇ ಬಾಯಿಯಲ್ಲಿನ ಲಾಲಾಗ್ರ್‍ಅಂಥಿಗಳು ಸ್ವಲ್ಪಸ್ವಲ್ಪವೇ ಲಾಲಾರಸವನ್ನು ಸುರಿಸಿ ನಾವು ಆಹಾರವನ್ನು ನುರಿಸಲು ಸಹಾಯ ಮಾಡುವುವು. ಆಹಾರ ಜೀರ್ಣವಾಗಲು ಕಿಣ್ವಗಳು (ಎಂಜ಼ೈಮ್) ಬೇಕೇಬೇಕು. ಜೊಲ್ಲು ರಸದಲ್ಲಿನ ಕಿಣ್ವ ಟಯಲಿನ್. ಈ ಕಿಣ್ವವು ಪಿಷ್ಟಪದಾರ್ಥವನ್ನು ಜಂಟಿ ಸಕ್ಕರೆಯಾದ ಮಾಲ್ಟೋಸ್ ಆಗಿ ಪರಿವರ್ತಿಸುತ್ತದೆ. ಈ ಕ್ರಿಯೆಗೆ ಪ್ರತ್ಯಾಮ್ಲೀಯ ವಾತಾವರಣ ಬೇಕು. ಆಹಾರದಲ್ಲಿರುವ ಸಸಾರಜನಕ ಮತ್ತು ಮೇದಸ್ಸು ನನ್ನಿಂದ ಸಣ್ಣ ಸಣ್ಣ ಕಣಗಳಾಗಿ ಒಡೆಯಲ್ಪಡುತ್ತವೆ. ಆದರೆ ಅವುಗಳ ಜೀರ್ಣಕ್ರಿಯೆ ಬಾಯಿಯಲ್ಲಿ ಪ್ರಾರಂಭವಾಗುವುದಿಲ್ಲ. ಅದಕ್ಕೆ ಬೇಕಾದ ವಾತಾವರಣವಾಗಲಿ, ಕಿಣ್ವವಾಗಲಿ ನನ್ನಲ್ಲಿಲ್ಲ.
ಘನಾಹಾರ ದ್ರವರೂಪವನ್ನು ಪಡೆದು ನಿಧಾನವಾಗಿ ಅನ್ನನಾಳದ ಮುಖಾಂತರ ಜಠರಕ್ಕೆ ಒಯ್ಯಲ್ಪಡುತ್ತದೆ. ಈ ಕ್ರಿಯೆ ಒಮ್ಮೆಗೇ ಆಗುವುದಿಲ್ಲ. ಸ್ವಲ್ಪ, ಸ್ವಲ್ಪವೇ ನೂಕಲ್ಪಟ್ಟು ಜಠರವನ್ನು ಸೇರುತ್ತದೆ. ಮುಂದಿನದು ಜಠರದ ಕೆಲಸ.
ಜಠರ : 
ಮನುಷ್ಯ ನನಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಬಹುಶಃ ಶರೀರದ ಯಾವ ಅಂಗಕ್ಕೂ ಕೊಟ್ಟಿಲ್ಲ. ಅದಕ್ಕೇ ಅನೇಕ ಗಾದೆಗಳು. "ಎಲ್ಲಾ ಮಾಡುವುದು ಹೊಟ್ಟೆಗಾಗಿ" "ಜಠರ-ದೇಹದ ಕಮ್ಮಟ". "ಜಠರ-ಹೋಟೆಲಿದ್ದಂತೆ-ಬರುವವರೂ ಹೋಗುವವರೂ ಸದಾ ಇರುತ್ತಾರೆ." ನನ್ನನ್ನು ಮೊದಲು ಸಾಮಾನ್ಯವಾಗಿ ಹೊಗಳುವವರೇ ಹೆಚ್ಚು. ಕಡೆಗೆ ಹೇಳುತ್ತಾರೆ, "ಅಯ್ಯೋ! ಹೊಟ್ಟೆ! ನಿನ್ನನ್ನು ನಂಬಿ ನಾ ಕೆಟ್ಟೆ." ಇವರನ್ನು ಕೆಡಿಸುವುದು ನನ್ನ ಉದ್ದೇಶ್ಯವಲ್ಲ. ನಿಜವಾಗಿ ಅವರೇ ನನ್ನನ್ನು ಕೆಡಿಸುತ್ತಾರೆ. ಹೊರಗೆ ಕಾಣುವ ಹೊಟ್ಟೆ ನಾನಲ್ಲ, ಅದರೊಳಗಿನ ಬೆಲೂನಿನಂತಹ ಒಂದು ಅಂಗ ನಾನು. ನನ್ನ ಶಕ್ತಿ ಸಾಮಾನ್ಯವಾಗಿ ೨ ಲೀಟರ್ ವಸ್ತು ಹಿಡಿಸುವಷ್ಟು. ನೀವು ಅದಕ್ಕಿಂತ ಜಾಸ್ತಿ ತುರುಕುತ್ತೀರಿ ಅನ್ನುವ ವಿಷಯ ಬೇರೆ. ನಾನು ಸ್ಥಿತಿಸ್ಥಾಪಕತೆಯಿರುವ ಮಾಂಸದ ಚೀಲ. ನನ್ನಲ್ಲಿ ಹಲ್ಲುಗಳಿಲ್ಲ. ಹಲ್ಲುಗಳನ್ನು ಉಪಯೋಗಿಸಿ ಆಹಾರವನ್ನು ನುರಿಸಿದ್ದರೆ ನನಗೆ ನೀವು ಉಪಕಾರ ಮಾಡಿದಂತಾಗುತ್ತದೆ. ಆಹಾರವನ್ನು ನಾನು ಕಡೆಯುತ್ತೇನೆ. ಅದರಿಂದ ಕೊಂಚ ನುರಿಸಿ ಆಹಾರವನ್ನು ದ್ರವರೂಪಕ್ಕೆ ತರಬಲ್ಲೆ. ನನ್ನ ಪದರದಲ್ಲಿರುವ ಅನೇಕ ಗ್ರಂಥಿಗಳು ಸುಮಾರು ೩ ಲೀಟರ್ ನಷ್ಟು ಹೈಡ್ರೋಕ್ಲೋರಿಕ್ ಆಮ್ಲವನ್ನು ಸುರಿಸುತ್ತವೆ. ನನ್ನಲ್ಲಿ ತಯಾರಾಗುವ ಕಿಣ್ವ ಪೆಪ್ಸಿನ್. ಇದು ಪ್ರೊಟೀನನ್ನು ಪಾಲಿಪೆಪ್ ಟೈಡ್ ಎಂಬ ರೂಪಕ್ಕೆ ಒಡೆಯುತ್ತದೆ. ಬಾಯಿಯಲ್ಲಿ ಪ್ರಾರಂಭವಾಗದಿದ್ದ ಸಸಾರಜನಕದ ಜೀರ್ಣಕ್ರಿಯೆ ಇಲ್ಲಿ ಪ್ರಾರಂಭವಾಗುವ ರೀತಿ ಇದು. ನನ್ನ ಮಾಂಸಖಂಡಗಳ ತರಂಗದಂತಹ ಕ್ರಿಯೆಯಿಂದ ಆಹಾರವು ನುಣ್ಣಗೆ ದೋಸೆಯ ಹಿಟ್ಟಿನಂತಾಗುತ್ತದೆ. ಆಹಾರ ೩-೪ ಗಂಟೆಗಳ ಕಾಲ ನನ್ನಲ್ಲಿ ಉಳಿಯುತ್ತದೆ. ಎಣ್ಣೆಯಲ್ಲಿ ಕರಿದ, ರುಚಿರುಚಿಯಾದ ಬೆಳಗಿನ ತಿಂಡಿ ಪೂರಿಯನ್ನು ಊಟದ ಹೊತ್ತಾದರೂ ನನ್ನಿಂದ ಅರಗಿಸಲು ಸಾಧ್ಯವಿಲ್ಲ. ನನಗೆ ತೊಂದರೆ ಕೊಡುವ ಮತ್ತೊಂದು ವಸ್ತು ಐಸ್ ಕ್ರೀಂ. ಅದು ನನ್ನ ಶಾಖವನ್ನು ಒಮ್ಮೆಗೆ ೯೯ಡಿಗ್ರಿ 'ಎಫ್' ನಿಂದ ೨೦ಡಿಗ್ರಿ 'ಎಫ್' ಗೆ ಇಳಿಸಿಬಿಡುತ್ತದೆ. ಇದರಿಂದ ನನ್ನ ಕೆಲಸ ತಣ್ಣಗಾಗುತ್ತದೆ, ಅಂದರೆ ನಿಂತು ಹೋಗುತ್ತದೆ. ಮಕ್ಕಳೇ, ಐಸ್ ಕ್ರೀಂ ತಿನ್ನುವ ಮುಂಚೆ ಕೊಂಚ ಯೋಚಿಸಿ!
ಹಸಿಯ ಮಾಂಸವನ್ನೇ ಬೇಕಾದರೂ ಕರಗಿಸುವ ನಾನು ಖಾಲಿಯಾಗಿದ್ದರೆ ನನ್ನನ್ನೇ ತಿಂದು ಬಿಡುವುದಿಲ್ಲವೇ? ಇದು ಬಹಳ ಜನರ ಆತಂಕ. ನನ್ನ ಪದರದಲ್ಲಿರುವ ಆಮ ನನ್ನನ್ನು ರಕ್ಷಿಸುತ್ತದೆ. "ನನಗೆ ಆಮಶಂಕೆಯಾದಾಗ ಹೊರಕ್ಕೆ ಹೋಗುತ್ತದಲ್ಲ, ಆ ಆಮವೇ?" ಹೌದು, ಅದೇ ಆಮ. ಆದರೆ ಆಮಶಂಕೆಯಲ್ಲಿ ಹೆಚ್ಚಾದ ಆಮ ಹೊರಕ್ಕೆ ಹೋಗುತ್ತದೆ. ನನ್ನಲ್ಲಿ ಉತ್ಪತ್ತಿಯಾಗುವ ಅಥವ ಬಂದು ಸೇರುವ ಕಿಣ್ವಗಳು, ಪೆಪ್ಸಿನ್, ರೆನಿನ್, ಮತ್ತು ಲಿಪೇಸ್.
ಮನುಜನ ಮುಖದಲ್ಲಾಗುವ ಬದಲಾವಣೆಗನುಗುಣವಾಗಿ ನನ್ನ ಬದಲಾವಣೆಯಾಗುತ್ತದೆ. ಮುಖದ ಬಣ್ಣ ಕೆಂಪಾದರೆ ನಾನು ಕೆಂಪಗಾಗುತ್ತೇನೆ. ಮುಖ ಮಂಕಾದರೆ ನಾನೂ ಮಂಕು. ಮನುಷ್ಯನ ಮನಸ್ಸಿನ ಒತ್ತಡ, ಖಿನ್ನತೆ ಎಲ್ಲವೂ ನನ್ನಲ್ಲಿ ಬದಲಾವಣೆಯನ್ನು ಉಂಟುಮಾಡುತ್ತವೆ. ಸಾಸುವೆ, ಉರಿಯುವಂತೆ ಮಾಡುತ್ತದೆ. ಅದಕ್ಕಿಂತ ಹೆಚ್ಚು ಮೆಣಸು ಉರಿಸುತ್ತದೆ. ಮೆಣಸಿನಕಾಯಿ ಉರಿ ಊತವನ್ನೇ ತರುತ್ತದೆ. ಕರಿದ ಮೆಣಸಿನಕಾಯಿ ಬಜ್ಜಿಯನ್ನು ತಿನ್ನುವಾಗ ನನ್ನ ಸ್ಥಿತಿಯನ್ನು ಜ್ನಾಪಿಸಿಕೋ. ಕಾಫಿ, ಟೀ, ಆಲ್ಕೋಹಾಲ್ ಎಲ್ಲವೂ ಆಮ್ಲತೆಯನ್ನು ಹೆಚ್ಚಿಸುತ್ತವೆ. ಇದೇ ಗುಂಪಿಗೆ ಔಷಧವೂ ಸೇರುತ್ತದೆ. ನನಗೆ ಗೌರವ ಕೊಟ್ಟು ತೊಂದರೆಯಿಲ್ಲದೇ ನೋಡಿಕೊಂಡರೆ ನಾನೂ ತೊಂದರೆ ಕೊಡದೆ ಸೇವೆ ಸಲ್ಲಿಸುತ್ತೇನೆ. ಮೊದಲು ನಾನು ಸಣ್ಣಗೆ ನೋವುಂಟುಮಾಡಿ ನನ್ನ ತೊಂದರೆಯನ್ನು ಹೇಳಿಕೊಳ್ಳುತ್ತೇನೆ. ಅದಕ್ಕೆ ಲಕ್ಷಕೊಡದೆ ಆ ನೋವನ್ನು ನಿರ್ಲಕ್ಷಿಸಿ, ನೋವುಶಮನ ಮಾತ್ರೆಯನ್ನು ನುಂಗಿ, ನನ್ನ ಶಕ್ತಿಗೆ ಮೀರಿ ಆಹಾರವನ್ನು ಸದಾ ತುರುಕುತ್ತಿದ್ದರೆ, ನಾನು ಬಿರುಕುಬಿಡಲು ಪ್ರಾರಂಭಿಸುತ್ತೇನೆ. ನೋವು ನಿತ್ಯದ ನಿಯಮವಾಗುತ್ತದೆ.
ಡಿಯೋಡಿನಂ :
ಆ ದೊಡ್ಡ ಜಠರದಿಂದ ಸಣ್ಣಕರುಳಿನ ಮಧ್ಯಭಾಗದಲ್ಲಿ ಸಿಕ್ಕಿ ನಜ್ಜುಗುಜ್ಜಾಗುತ್ತಿರುವ ಹತ್ತು ಅಂಗುಲ ಉದ್ದದ ಸಣ್ಣ ಅಂಗವೇ ನಾನು. ಜಠರದಲ್ಲಿ ದ್ರವರೂಪಕ್ಕೆ ಬಂದ ಆಹಾರ, ಅದಕ್ಕೆ ಚೈಮ್ ಎನ್ನುತ್ತಾರೆ, ಇದು ಪೈಲೋರಿಕ್ ಸ್ಪಿಂಕ್ ಸ್ಟರ್ ಮೂಲಕ ನನ್ನಲ್ಲಿಗೆ ಬರುತ್ತದೆ. ಅದಿಲ್ಲದಿದ್ದರೆ ಆ ದ್ರವದ ಜತೆಯಲ್ಲಿ ಆಮ್ಲವೂ ಸಹ ನುಗ್ಗಿಬಿಡುತ್ತಿತ್ತು. ಹಾಗಾಗಿದ್ದರೆ ನಾನು ಸತ್ತೇಹೋಗುತ್ತಿದ್ದೆ. ಆದ್ದರಿಂದ ನಿಧಾನವಾಗಿ ಆಹಾರವು ಮಾತ್ರ ನನ್ನಲ್ಲಿಗೆ ತಳ್ಳಲ್ಪಡುತ್ತದೆ. ನನ್ನಲ್ಲಿ ಮೇದೋಜೀರಕಗ್ರ್‍ಅಂಥಿಯಿಂದ ಬಂದ ಮೇದೋಜೀರಕ ರಸ, ಪಿತ್ತಕೋಶದಿಂದ ಬಂದ ಪಿತ್ತ ರಸ, ಇವೆಲ್ಲವೂ ಸೇರುತ್ತವೆ. ಬಾಯಿಯಲ್ಲಿ, ಜಠರದಲ್ಲಿ ಜೀರ್ಣವಾಗದೇ ಉಳಿದಿದ್ದ ಆಹಾರ ನನ್ನಲ್ಲಿ ಜೀರ್ಣವಾಗಲು ಪ್ರಾರಂಭವಾಗುವುದು. ನನ್ನಲ್ಲಿ ಪಚನಕ್ರಿಯೆ ಕ್ಷಾರಮಾಧ್ಯಮದಲ್ಲಿ ಮುಖ್ಯವಾಗಿ ಮೇದಸ್ಸಿನ ಜೀರ್ಣಕ್ರಿಯೆಯ ಪ್ರಾರಂಭ.
ಮೇದೋಜೀರಕಗ್ರ್‍ಅಂಥಿ :
ನಾನು ನಿನ್ನ ಮೇದೋಜೀರಕ ಗ್ರ್‍ಅಂಥಿ. ನನ್ನ ಬಣ್ಣ ಕಂದು ಕೆಂಪು(ಗ್ರ್‍ಏ ಪಿಂಕ್), ತೂಕ ೮೫ ಗ್ರಾಂ. ನಾನು ನಿನ್ನ ಹೊಟ್ಟೆಯ ಅಂತರಾಳದಲ್ಲಿದ್ದೇನೆ. ಜಠರದ ಕೆಳಗೆ ಡಿಯೋಡಿನಂ ಗೆ ಹೊಂದಿಕೊಂಡು, ಅನೇಕ ಅಂಗಗಳ ಮಧ್ಯೆ ಹುದುಗಿ ಹೋಗಿದ್ದೇನೆ. ನಾಯಿಯ ನಾಲಗೆಯಷ್ಟು, ಸುಮಾರು ೧೫ ಸೆಂ.ಮಿ. ಉದ್ದವಾಗಿದ್ದೇನೆ. ನನ್ನ ಇರುವಿಕೆಯ ಅರಿವು ನಿನಗಿಲ್ಲ. ನನ್ನ ಪ್ರಾಮುಖ್ಯತೆಯೂ ನಿನಗೆ ಗೊತ್ತಿಲ್ಲ. ಡಾಕ್ಟರ್ ನಿನಗೆ ಸಕ್ಕರೆ ಕಾಯಿಲೆಯಿದೆ ಎಂದು ಹೇಳಿದಾಗ ನೀನು ನನ್ನ ಬಗ್ಗೆ ಮಾಹಿತಿ ಸಂಗ್ರಹಣೆಗೆ ಪ್ರಯತ್ನಿಸುವಿಯೆಂದು ಕಾಣುತ್ತದೆ. ಹಾಗಾಗದಿರಲಿ ಎಂದು ನನ್ನ ಅಪೇಕ್ಷೆ. ಹಾಗಾಗದಿರಲು ನೀನು ನನ್ನ ಬಗ್ಗೆ ಮೊದಲೇ ತಿಳಿದುಕೊಳ್ಳುವುದು ಅವಶ್ಯ. ನಾನು ಸದಾ ಚಟುವಟಿಕೆಯಿಂದ ಕೂಡಿದ ಅಂಗ. ನಾನು ಅದನ್ನು ಕಡಿಮೆ ಮಾಡಿದರೆ ನಿನಗೆ ಸುಸ್ತು ಪ್ರಾರಂಭ. ನನ್ನಲ್ಲಿ ಎರಡು ವಿಧವಾದ ರಸಗಳು ಉತ್ಪತ್ತಿಯಾಗುತ್ತವೆ. ಮೊದಲನೆಯದು ಹಾರ್ಮೋನ್, ಎರಡನೆಯದು ಕಿಣ್ವ. ಸುಮಾರು ೯೦೦ ಗ್ರಾಂ ರಸಗಳು ನನ್ನಲ್ಲಿ ಉತ್ಪತ್ತಿಯಾಗುತ್ತವೆ. ೮೫ ಗ್ರಾಂ ಗ್ರ್‍ಅಂಥಿಯಿಂದ ೯೦೦ ಗ್ರಾಂ ರಸ! ನಿನಗೆ ಆಶ್ಚರ್ಯವಾಗುವುದಿಲ್ಲವೇ ? ಜಠರವನ್ನು ಬಿಟ್ಟ ಚೈಮ್ ಆಮ್ಲೀಯ ಗುಣ ಉಳ್ಳದ್ದು. ಡಿಯೋಡಿನಂ ಗೆ ಪ್ರತ್ಯಾಮ್ಲೀಯ ವಾತಾವರಣ ಬೇಕು. ಇದನ್ನು ಆಗಲೇ ತಿಳಿಸಿರಬೇಕು. ಆ ಪ್ರತ್ಯಾಮ್ಲೀಯ ವಾತವರಣವನ್ನು ಸೃಷ್ಟಿಸುವ ಕ್ರಿಯೆ ನನ್ನದು. ಮತ್ತೊಂದು ಮುಖ್ಯ ಕ್ರಿಯೆ ನಾನು ಸುರಿಸುವ ಕಿಣ್ವಗಳು. ಮೊದಲನೆಯದು ಟ್ರೈಪ್ಸಿನ್. ಇದು ಸಸಾರಜನಕವಸ್ತುಗಳನ್ನು ಅಮೈನೋಆಮ್ಲವಾಗಿ ಒಡೆಯುತ್ತದೆ. ಈ ಸ್ಥಿತಿಯಲ್ಲಿ ಮಾತ್ರ ರಕ್ತ ಸಸಾರಜನಕವನ್ನು ತನ್ನದಾಗಿಸಿಕೊಳ್ಳಬಲ್ಲದು. ಇದು ನಿನಗೆ ಆಗಲೇ ಗೊತ್ತಿದೆ. ಮತ್ತೊಂದು ಕಿಣ್ವ ಅಮೈಲೇಸ್, ಇದು ಪಿಷ್ಠವನ್ನು ಸಕ್ಕರೆಯನ್ನಾಗಿ(ಗ್ಲೂಕೋಸ್) ಪರಿವರ್ತಿಸುತ್ತದೆ. ಮೂರನೆಯದು ಹಾಗೂ ಬಹು ಮುಖ್ಯವಾದದ್ದು ಲಿಪೇಸ್. ಇದು ಮೇದಸ್ಸಿನ ಕಣಗಳನ್ನು ಫ್ಯಾಟಿ ಆಮ್ಲ ಮತ್ತು ಗ್ಲಿಸರೀನ್ ಆಗಿ ಒಡೆಯುತ್ತದೆ. ಹೀಗೆ ಮೂರು ರೀತಿಯ ಆಹಾರ ದ್ರವ್ಯಗಳನ್ನೂ ರಕ್ತಗತವಾಗುವ ಹಂತಕ್ಕೆ ತಂದು ಬಿಡುವುದು ನನ್ನ ಕೆಲಸ. ನಾಲಗೆಯ ಚಪಲಕ್ಕೆ ನೀನು ತಿಂದ ಅನೇಕ ಆಹಾರಗಳನ್ನು ರಕ್ತಗತ ಮಾಡಲು ಅನೇಕ ಅಂಗಗಳು ನಿನಗೆ ಅರಿವಿಲ್ಲದಂತೆ ಶ್ರಮಿಸುತ್ತಿವೆ. ಅಂತಹವುಗಳಲ್ಲಿ ನಾನೂ ಒಂದು.
ಮೇಲಿನ ಕೆಲಸಗಳ ಜೊತೆಗೆ ಅತಿ ಮುಖ್ಯವಾದ ಕೆಲಸವೊಂದಿದೆ. ಅದೇ ಇನ್ಸುಲಿನ್ ತಯಾರಿಕೆ. ಇದು ಒಂದು ಹಾರ್ಮೋನ್. ನಿನ್ನ ಶರೀರದಲ್ಲಿ ಕೋಟ್ಯಾಂತರ ಕೋಶಗಳಿವೆ. ಒಂದೊಂದೂ ಜೀವಕೋಶವೂ ಒಂದೊಂದು ರೈಲ್ವೆ ಎಂಜಿನ್ನಿನಂತೆ. ಇಂಜನ್ನಿನ ಚಾಲನೆಗೆ ಅದರಲ್ಲಿ ಕಲ್ಲಿದ್ದಲು ಉರಿಯಬೇಕು. ಒಂದು ಕಡೆ ಕಲ್ಲಿದ್ದಲಿದೆ. ಮತ್ತೊಂದು ಕಡೆ ಇಂಜಿನ್ನಿದೆ. ಇಂಜಿನ್ನು ತಾನೇ ಅದನ್ನು ತೆಗೆದುಕೊಳ್ಳಲಾರದು. ಮಧ್ಯೆ ಒಬ್ಬ ಕೋಲ್ಮನ್ ಬೇಕು. ಒಂದು ಕಡೆ ರಕ್ತದಲ್ಲಿ ಸಕ್ಕರೆ (ಗ್ಲೂಕೋಸ್) ಇದೆ. ಮತ್ತೊಂದೆಡೆ ಜೀವಕೋಶವಿದೆ. ಸಕ್ಕರೆ ಜೀವಕೋಶಕ್ಕೆ ತಲುಪಬೇಕು. ಜೀವಕೋಶ ತನ್ನಷ್ಟಕ್ಕೆ ತಾನೇ ತೆಗೆದುಕೊಳ್ಳಲಾರದು. ಒಬ್ಬ ಮಧ್ಯಸ್ಥಗಾರ (ಕೋಲ್ಮನ್ ರೀತಿ) ಬೇಕು. ಅದೇ ಇನ್ಸುಲಿನ್. ನನ್ನಲ್ಲಿ ಇನ್ಸುಲಿನ್ ತಯಾರಿಕೆ ಕಡಿಮೆಯಾದರೆ ಆಗ ರಕ್ತದಲ್ಲಿರುವ ಗ್ಲೂಕೋಸ್ ಜೀವಕೋಶವನ್ನು ಸೇರಲಾರದು. ಆ ಗ್ಲೂಕೋಸ್ ಶರೀರದಲ್ಲಿಯೇ ಉಳಿದರೆ ಶರೀರಕ್ಕೆ ಹಾನಿ. ಅದಕ್ಕಾಗಿ ಅದನ್ನು ಮೂತ್ರಜನಕಾಂಗಗಳು ಹೊರಕ್ಕೆ ಹಾಕಿಬಿಡುತ್ತವೆ. ಇದೇ ಸಕ್ಕರೆಯ ಖಾಯಿಲೆ. ಇನ್ನೂ ಹೆಚ್ಚಾದಲ್ಲಿ ರಕ್ತದಲ್ಲಿಯೇ ಉಳಿದುಬಿಡುತ್ತದೆ. ಇದರಿಂದ ಇನ್ನೂ ತೊಂದರೆ ಹೆಚ್ಚು.
ನನ್ನಲ್ಲಿ ಸಾಕಾಗುವಷ್ಟು ಇನ್ಸುಲಿನ್ ಇದೆ. ಆಗ ಏನಾಗುತ್ತದೆ ಕೊಂಚ ನೋಡುವ. ನಿನಗೆ ಅನ್ನ, ಚಪಾತಿ, ಹಿಟ್ಟು ಅಂದರೆ ಬಹಳ ಪ್ರೀತಿಯಲ್ಲವೇ? ನಿತ್ಯದ ನಿನ್ನ ಆಹಾರದಲ್ಲಿ ಇವಕ್ಕೇ ಮುಖ್ಯ ಪಾತ್ರ. ಅಕ್ಕಿಯೇ ಆಗಲಿ, ಗೋಧಿಯೇ ಆಗಲಿ, ರಾಗಿಯೇ ಆಗಲಿ ಕಡೆಗೆ ಗ್ಲೂಕೋಸ್ ಆಗಿಯೇ ರಕ್ತ ಸೇರಬೇಕು. ನೀನು ಎಷ್ಟು ಹೆಚ್ಚು ಈ ಗುಂಪಿನ ಆಹಾರ ಸೇವಿಸುವೆಯೋ ಅಷ್ಟು ಹೆಚ್ಚು ಗ್ಲೂಕೋಸ್ ರಕ್ತಕ್ಕೆ ಸೇರುತ್ತದೆ. ಅದನ್ನು ಜೀವಕೋಶದಲ್ಲಿ ಉರಿಸುವುದು ಇನ್ಸುಲಿನ್ ನ ಕೆಲಸ. ಎಲ್ಲವನ್ನೂ ಒಮ್ಮೆಯೇ ಉಪಯೋಗಿಸಿಬಿಡುವುದು ಬುದ್ಧಿವಂತಿಕೆಯೇ? ಮುಂದೆ ನಿನಗೆ ಅವಶ್ಯಕತೆ ಬಿದ್ದಾಗ ಬೇಕಾಗುತ್ತದೆ. ಅದಕ್ಕಾಗಿ ಆ ಹೆಚ್ಚಾದ ಗ್ಲೂಕೋಸನ್ನು ಗ್ಲೈಕೋಜಿನ್ ಮತ್ತು ಮೇದಸ್ಸಿನ ರೂಪಕ್ಕೆ ಪರಿವರ್ತಿಸಿ ಪಿತ್ತಕೋಶದಲ್ಲಿ ಶೇಖರಿಸುವ ಕೆಲಸವೂ ಸಹ ಇನ್ಸುಲಿನ್ನಿನದೇ. ನೀನು ಉಪವಾಸಮಾಡಿದಾಗ, ನಿನಗೆ ಅವಶ್ಯಕತೆಯುಂಟಾದಾಗ ಅದನ್ನು ಮತ್ತೆ ಗ್ಲೂಕೋಸ್ ಆಗಿ ಪರಿವರ್ತಿಸಿ ಕೊಡುವುದನ್ನೂ ಸಹ ಈ ಇನ್ಸುಲಿನ್ ನಿರ್ವಹಿಸುತ್ತದೆ. ಪಿತ್ತಕೋಶದಲ್ಲಿ ಸಂಗ್ರಹಿಸಿಡುವುದಕ್ಕಿಂತಲೂ ಹೆಚ್ಚು ಗ್ಲೂಕೋಸ್ ತಯಾರಾದರೆ ಅದನ್ನು ಮಾಂಸಖಂಡಗಳಲ್ಲಿ ಕೊಬ್ಬಿನ ರೂಪದಲ್ಲಿ ಶೇಖರಿಸಿಡುವುದೂ ಸಹ ಇನ್ಸುಲಿನ್. ಬರೀ ಪಿಷ್ಟವಷ್ಟೇ ಅಲ್ಲ, ನೀನು ತಿನ್ನುವ ಕೊಬ್ಬನ್ನು ಸಹ ಇದೇ ಕರಗಿಸಬೇಕನ್ನ. ನನ್ನ ಹೆಸರೇ ಸೂಚಿಸುವಂತೆ ಮೇದಸ್ಸನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುವ ಗ್ರಂಥಿಯಾಗಿರುವುದರಿಂದಲೇ ನಾನು ಮೇದೋಜೀರಕ ಗ್ರಂಥಿ. ಸಸಾರಜನಕದ ಜೀರ್ಣಕ್ರಿಯೆಯಲ್ಲಿಯೂ ಸಹ ಇನ್ಸುಲಿನ್ ನ ಪಾತ್ರವಿದೆ. ನಿನಗೆ ಇಷ್ಟೊಂದು ಉಪಯುಕ್ತವಾದ ಇನ್ಸುಲಿನ್ ತಯಾರಿಸುವ ಪುಟ್ಟ ಗ್ರಂಥಿ ನಾನೇ. ನನ್ನ ಬಗ್ಗೆ ಕೊಂಚ ಕರುಣೆಯನ್ನು ತೋರಿಸಲಾರೆಯಾ ? ಇಲ್ಲದಿದ್ದರೆ ಡಯಾಬಿಟಿಸ್ !
ಪಿತ್ತಕೋಶ :
'ನಾನು ನಿನ್ನ ಲಿವರ್' (ಪಿತ್ತಜನಕಾಂಗ)
'ನನಗೆ ಫೀವರ್ ಅಂದರೆ ಗೊತ್ತು ಆದರೆ ಈ ಲಿವರ್ ಅಂದರೇನೆಂದು ಗೊತ್ತೇ ಇಲ್ಲವೇ'!
'ಫೀವರ್ ಒಂದು ಕಾಯಿಲೆ, ನಾನು ನಿನ್ನ ಒಳಗಿರುವ ಒಂದು ಅಂಗ. ಮೊನ್ನೆ ನಿನಗೆ ವಾಂತಿ ಆಯ್ತಲ್ಲ ಎಂತಹ ಅನಾಹುತವಾಯ್ತು.'
'ಬರೀ ಕಹಿ, ಹಳದಿ ಹಸುರು ಮಿಶ್ರಿತ ನೀರು. ಒಂದೇ ಸಮನೆ ವಾಂತಿಯಾಯ್ತು.'
'ಅದನ್ನು ಪಿತ್ತರಸವೆನ್ನುತ್ತಾರೆ. ಅದನ್ನು ನಾನೇ ತಯಾರಿಸುತ್ತೇನೆ.'
'ಅಂತಹ, ಕೆಲಸಕ್ಕೆ ಬಾರದ, ವಾಂತಿಗೆ ಕಾರಣವಾದ ರಸವನ್ನು ಸುರಿಸುವುದೇ ನಿನ್ನ ಕೆಲಸವೇ?'
ಅಯ್ಯೋ! ಮೂರ್ಖ, ನನ್ನ ಬಗ್ಗೆ ನಿನ್ನ ತಿಳಿವಳಿಕೆ ಇಷ್ಟೊಂದು ಅಜ್ನಾನದಿಂದ ಕೂಡಿದೆಯಲ್ಲ ಎಂದು ದುಃಖವಾಗುತ್ತದೆ. ನಾನು ನಿನ್ನ ಶರೀರದ ರಾಸಾಯಿನಿಕ ಕಾರ್ಖಾನೆ. ನನ್ನಂತಹದೇ ಒಂದು ರಾಸಾಯಿನಿಕ ಕಾರ್ಖಾನೆಯನ್ನು ಹೊರಗಡೆ ತಯಾರಿಸಲು ಅನೇಕ ಎಕರೆ ಜಮೀನು ಬೇಕಾಗುತ್ತದೆ. ಬೇರೆ ಬೇರೆ ರೀತಿಯ ಒಂದು ಸಾವಿರ ಕೆಲಸಗಳನ್ನು ಮಾಡಲು ಬೇಕಾದ ಕಿಣ್ವಗಳು ನನ್ನಲ್ಲಿ ತಯಾರಾಗುತ್ತವೆ. ಗ್ರಂಥಿಗಳಲ್ಲೆಲ್ಲಾ ದೊಡ್ಡವನು ನಾನೇ. ನನ್ನ ತೂಕ ಸುಮಾರು ೨ ಕಿ.ಗ್ರಾಂ. ನಾನು ಜಠರದ ಬಲ ಮೇಲ್ಭಾಗವನ್ನೆಲ್ಲಾ ಆಕ್ರಮಿಸಿದ್ದೇನೆ. ನೋಟಕ್ಕೆ ಒಂದು ಟೋಪಿಯಂತೆ ಕಾಣುತ್ತೇನೆ. ನಿಸರ್ಗ, ಜೀರ್ಣಾಂಗಗಳಿಗೆ ಹಾಕಿದ ಟೋಪಿ! ''ಟೋಪಿ ಹಾಕುವುದು'-ಎಂದರೆ ಮೋಸ ಮಾಡುವುದೆಂದು ನೀನು ಅರ್ಥ ಮಾಡಿಕೊಳ್ಳುತ್ತೀಯೇ. ಇದು ಮನುಷ್ಯನ ಅನರ್ಥಕೋಶದಲ್ಲಿಯ ಅರ್ಥ! ನಮ್ಮ ಅರ್ಥದಲ್ಲಿ ರಕ್ಷಣೆಗಾಗಿ ಉಪಯೋಗಿಸುವುದು. ನಾನು ನಿನ್ನ ಶರೀರಕ್ಕಾಗಿ ಮಾಡುವ ಕೆಲಸವನ್ನು ನೋಡಿದರೆ ಯಾವ ರೀತಿ ಅರ್ಥ ಮಾಡುವುದು ಸರಿಯೆಂದು ನಿನಗೇ ತೋರುತ್ತದೆ. ನನ್ನ ಕೆಲಸವನ್ನು ನಿಲ್ಲಿಸಿದರೆ ಕೆಲವೇ ಕ್ಷಣಗಳಲ್ಲಿ ನಿನ್ನ ಸ್ಮಶಾನಯಾತ್ರೆಗೆ ತಯಾರಿ ನಡೆಸಬೇಕಾಗುತ್ತದೆ. ಆದರೆ ನಾನು ಅಷ್ಟು ಬೇಗ ನನ್ನ ಕೆಲಸವನ್ನು ಒಮ್ಮೆಗೇ ನಿಲ್ಲಿಸುವುದಿಲ್ಲ. ನನ್ನ ಜೀವಕಣಗಳಲ್ಲಿ ೮೫% ಹಾಳಾಗಿದ್ದರೂ ನಾನು ಕೆಲಸ ಮಾಡುತ್ತಲೇ ಇರುತ್ತೇನೆ. ಇದು ನಿನಗೆ ವರವೂ ಹೌದು, ಶಾಪವೂ ಹೌದು. ಹೇಗೆ ವರವೆಂದರೆ, ಮುಕ್ಕಾಲು ಭಾಗ ನಾನು ತೊಂದರೆಗೆ ಒಳಗಾಗಿದ್ದರೂ ನಿನಗೆ ತೊಂದರೆ ಕೊಡದೆ ಕೆಲಸವನ್ನು ತೂಗಿಸಿಕೊಂಡು ಹೋಗುತ್ತೇನೆ. ಶಾಪ ಹೇಗೆಂದರೆ, ನಿನಗೆ ನಾನು ಕಿರಿಕಿರಿ ಉಂಟುಮಾಡದುದರಿಂದ ನೀನು ಸುಮ್ಮನಿದ್ದುಬಿಡುತ್ತೀಯೆ. ಕಡೇ ಗಳಿಗೆಯಲ್ಲಿ ಕಷ್ಟಕ್ಕೆ ಸಿಲುಕಿಹಾಕಿಕೊಳ್ಳುತ್ತೀಯೆ. ೮೦% ನನ್ನನು ಕಿತ್ತೊಗೆದಿದ್ದರೂ ಸಹ ಮತ್ತೆ ಪೂರ್ಣ ಅಂಗವಾಗಿ ನಾನು ಬೆಳೆಯಬಲ್ಲೆ. ನನ್ನ ಕೆಲಸಗಳ ಬಗ್ಗೆ ಕೆಲವನ್ನು ಮಾತ್ರ ತಿಳಿಸುತ್ತೇನೆ.
ನೀನು ಆಟವಾಡಲು ಮಾಂಸಖಂಡಕ್ಕೆ ಶಕ್ತಿಯನ್ನು ಒದಗಿಸುವವನು ನಾನು. ರಾತ್ರಿಯ 'ಇರುಳುಗಣ್ಣು' ಬರದಂತೆ ತಡೆಯುವವನು ನಾನು. ನೀನು ಬೆರಳನ್ನು ಕೊಯ್ದುಕೊಂಡರೆ ರಕ್ತವನ್ನು ಹೆಪ್ಪುಗಟ್ಟುವಂತೆ ಮಾಡುವವನು ನಾನು. ಕಾಯಿಲೆ ಬರದಂತೆ ತಡೆಯುವ ರೋಗನಿರೋಧಕ ವಸ್ತು(ಆಂಟಿಬಾಡಿ) ವನ್ನು ತಯಾರಿಸುವವನು ನಾನು.
ಶರೀರದ ಕೆಲಸದಾಳುಗಳು ಜೀವಕೋಶಗಳು. ನನ್ನ ಜೀವಕೋಶಗಳನ್ನು ಬೇರೆಯ ಹೆಸರಿನಿಂದಲೇ ಕರೆಯುತ್ತಾರೆ-ಅವುಗಳಿಗೆ ಹೆಸರು ಹೆಪಟೊಸೈಟ್ ಗಳೆಂದು. ಇವು ಆಹಾರದ ಮೂರು ಘಟಕಗಳ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತವೆ. ಮೂರರಲ್ಲಿ ಮುಖ್ಯವಾದದ್ದು ಮೇದಸ್ಸಿನ ಜೀರ್ಣಕ್ರಿಯೆ.
ಮೇದಸ್ಸಿನ ಜೀರ್ಣಕ್ರಿಯೆ : ಇದೇ ನನ್ನ ಮುಖ್ಯ ಕೆಲಸ-ಪಿತ್ತರಸದ ಉತ್ಪತ್ತಿ. ಒಂದು ಸೆಕೆಂಡಿನಲ್ಲಿ ಹತ್ತು ಮಿಲಿಯನ್ ಕೆಂಪು ರಕ್ತಕಣಗಳು ಸಾಯುತ್ತವೆ. ಅದರಲ್ಲಿ ಸ್ವಲ್ಪ ಭಾಗವನ್ನು ಮತ್ತೆ ಹೊಚ್ಚಹೊಸ ಕೆಂಪುರಕ್ತಕಣಗಳನ್ನಾಗಿ ಪರಿವರ್ತಿಸಿಕೊಳ್ಳುತ್ತೇನೆ. ಉಳಿದುದನ್ನು ಪಿತ್ತರಸವನ್ನಾಗಿ ಮಾಡಿಕೊಳ್ಳುತ್ತೇನೆ. ಇನ್ನೂ ಹೆಚ್ಚಾದುದನ್ನು ಹೊರಕ್ಕೆ ಹಾಕುತ್ತೇನೆ. ಹಸಿರು ಮಿಶ್ರಿತ ಹಳದಿಯಾದ ಕಹಿಯಿಂದ ಕೂಡಿದ ಜುಗುಟಾದ ದ್ರವವೇ ಪಿತ್ತ ರಸ(ಬೈಲ್). ಇದು ಕೊಬ್ಬನ್ನು ಕರಗಿಸುತ್ತದೆ. ನನ್ನಲ್ಲಿ ತಯಾರಾದ ಈ ದ್ರವ, ಗಾಲ್ ಬ್ಲಾಡರ್‍ ನಲ್ಲಿ ಶೇಖರವಾಗುತ್ತದೆ. ಕೊಬ್ಬಿನ ಪದಾರ್ಥ ಡಿಯೋಡಿನಂ ಸೇರಿದ ತಕ್ಷಣ ಗಾಲ್ ಬ್ಲಾಡರ್ ನಿಂದ ಪಿತ್ತ ರಸ ಅಲ್ಲಿಗೆ ಸೇರುತ್ತದೆ. ಡಿಜರ್ಜೆಂಟ್ ಸೋಪು ಕೊಳೆಯನ್ನು ಹೇಗೆ ನೊರೆಯ ರೂಪಕ್ಕೆ ತರುತ್ತದೆಯೋ ಹಾಗೆ ಈ ಪಿತ್ತರಸವು ಕೊಬ್ಬನ್ನು ನೊರೆ ಬರಿಸಿ ಜೀರ್ಣಿಸಲು ಅನುಕೂಲವಾಗುವ ಫ್ಯಾಟಿ ಆಮ್ಲವಾಗಿ ಪರಿವರ್ತಿಸುತ್ತದೆ. ಒಮ್ಮೊಮ್ಮೆ ನನ್ನ ಈ ಪಿತ್ತರಸ ರಕ್ತಕ್ಕೆ ಸೇರಿದರೆ ಕಣ್ಣು ಮತ್ತು ಮೂತ್ರ ಹಳದಿಯಾಗಿ 'ಅರಿಶಿನ ಕಾಮಾಲೆ' ಎಂಬ ರೋಗ ಬರುತ್ತದೆ.
ಸಸಾರಜನಕದ ಜೀರ್ಣಕ್ರಿಯೆ : ಸಸಾರಜನಕ ವಸ್ತುಗಳು ಶರೀರದಲ್ಲಿ ಕಿಣ್ವಗಳ ಸಹಾಯದಿಂದ ಅಮೈನೋ ಆಮ್ಲಗಳಾಗಿ ಒಡೆಯಲ್ಪಡುತ್ತವೆ. ಇದು ರಕ್ತಕ್ಕೆ ಹಾಗೆಯೇ ಸೇರಿದರೆ ವಿಷವಾಗಿ ಪರಿವರ್ತನೆಯಾಗುತ್ತದೆ. ಇದನ್ನು ಮಾನವಶರೀರ ತನ್ನದಾಗಿಸಿಕೊಳ್ಳುವ ರೂಪಕ್ಕೆ ತರುವವನು ನಾನು. ನೀನು ಹೆಚ್ಚು ದುರಾಸೆಯಿಂದ ಹೆಚ್ಚು ಹೆಚ್ಚು ಸಸಾರಜನಕ ವಸ್ತುಗಳನ್ನು ತಿಂದಿದ್ದರೆ ಅದನ್ನು 'ಯೂರಿಯಾ' ಆಗಿ ಪರಿವರ್ತಿಸಿ ಮೂತ್ರಜನಕಾಂಗದ ಮೂಲಕ ಹೊರದೂಡುವವನು ನಾನು.
ಪಿಷ್ಠದ ಜೀರ್ಣಕ್ರಿಯೆ : ಪಿಷ್ಠವು ಗ್ಲೂಕೋಸ್ ಆಗಿ ರಕ್ತದಲ್ಲಿರುತ್ತದೆ. ಈ ಸಕ್ಕರೆಯನ್ನು ಗ್ಲೈಕೋಜಿನ್ ಎಂಬ ರೂಪಕ್ಕೆ ಪರಿವರ್ತಿಸಿ ನನ್ನಲ್ಲಿ ಅಡಗಿಸಿಟ್ಟುಕೊಂಡಿರುತ್ತೇನೆ. ಸುಮಾರು ೨೫೦ ಗ್ರಾಂ ಸಕ್ಕರೆ ಈ ರೀತಿ ಶೇಖರಿಸಲ್ಪಡುತ್ತದೆ. ಸಕ್ಕರೆ ರಾಜಕೀಯವನ್ನು ನಾನು ಮಾಡುವುದಿಲ್ಲ. ಅವಶ್ಯಕತೆಯಿದ್ದಾಗ ನಾನು ಈ ಗ್ಲೈಕೋಜಿನ್ನನ್ನು ಮತ್ತೆ ಗ್ಲೂಕೋಸ್ ಆಗಿ ಪರಿವರ್ತಿಸಿ ಶರೀರಕ್ಕೆ ಕೊಡುತ್ತೇನೆ. ಮುಖ್ಯವಾಗಿ ಮೆದುಳಿಗೆ ಸಕ್ಕರೆ ಸದಾ ಬೇಕೇಬೇಕು. ಕೆಲವೊಮ್ಮೆ ಉಪವಾಸಮಾಡುತ್ತೀಯೆ, ಮತ್ತೆ ಕೆಲವು ಸಲ ಕಾಯಿಲೆಯ ಕಾರಣದಿಂದ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಶರೀರ ಹಾಗೆಯೇ ಇರಬಲ್ಲದು. ಆದರೆ ಮೆದುಳಿಗೆ ಸಕ್ಕರೆ ಬೇಕೇಬೇಕು. ಅಂತಹ ಸನ್ನಿವೇಶದಲ್ಲಿ ನಾನು ಸಕ್ಕರೆಯನ್ನು ಮೆದುಳಿಗೆ ಒದಗಿಸುತ್ತೇನೆ.
ನಾನು ಅಡ್ರಿನಲ್ ಗ್ರಂಥಿಯ ಆರೋಗ್ಯವನ್ನು ಕಾಪಾಡುತ್ತೇನೆ. ಹಾಗೆಯೇ ಹೃದಯಕ್ಕೆ ಒಂದು ಸುರಕ್ಷಿತ ಕವಾಟದಂತೆ ವರ್ತಿಸುತ್ತೇನೆ. ನನ್ನಿಂದ ಹೃದಯಕ್ಕೆ ಹೆಪ್ಟಿಕ್ ರಕ್ತನಾಳದ ಮುಖಾಂತರ ನೇರ ಸಂಪರ್ಕ ಉಂಟು. ನೀನು ಕೋಪಗೊಂಡ ಸಂದರ್ಭದಲ್ಲಿ ರಕ್ತ ಜೋರಾಗಿ ಹೃದಯಕ್ಕೆ ನುಗ್ಗುತ್ತದೆ. ಅಂತಹ ಸನ್ನಿವೇಶದಲ್ಲಿ ಹೃದಯಾಘಾತವಾಗುವ ಸಂಭವ ಉಂಟು. ಆಗ ಸ್ಪಂಜಿನಂತೆ ನಾನೇ ರಕ್ತವನ್ನು ಹೀರಿಕೊಂಡು ನಿಧಾನವಾಗಿ ಅದನ್ನು ಹೃದಯಕ್ಕೆ ರವಾನಿಸುತ್ತೇನೆ. ಆಗ ಹೃದಯ ಸುಲಲಿತವಾಗಿ ಕೆಲಸ ಮಾಡಬಲ್ಲದು.
ನಾನು ಶರೀರದ ಒಂದು ದೊಡ್ಡ ವಿಷಾಪಹಾರಿ. ನಿಕೋಟಿನ್, ಕೆಫೀನ್, ತ್ಯಾನಿನ್ ಮುಂತಾದ ವಿಷಗಳನ್ನು ನೀನು ನುಂಗುವೆಯಲ್ಲ, ಅದು ಹಾಗೆಯೇ ರಕ್ತ ಸೇರಿದ್ದರೆ ನಿಮಿಷದಲ್ಲಿ ನೀನು ಇಲ್ಲವಾಗುತ್ತಿದ್ದೆ. ಆದರೆ ನನ್ನ ಮುಖಾಂತರ ಹೋಗುವಾಗ ನಾನು ಮೊದಲೇ ನುಂಗಿ ನೀರು ಕುಡಿದುಬಿಡುತ್ತೇನೆ. ಅದರಿಂದ ಹೃದಯ ಸುರಕ್ಷಿತ. ಅಲ್ಲದೆ ಶರೀರ ಎನ್ನುವ ಕಾರ್ಖಾನೆಯು ಪ್ರತಿಕ್ಷಣವೂ ವಿಷವಸ್ತುಗಳನ್ನು ಉಪವಸ್ತುಗಳನ್ನಾಗಿ ತಯಾರಿಸುತ್ತಲೇ ಇರುತ್ತದೆ. ಇದನ್ನು ಕೂಡಲೇ ಹೊರಕ್ಕೆ ಹಾಕಬೇಕು. ಇಲ್ಲದಿದ್ದರೆ ಜೀವಕ್ಕೇ ಅಪಾಯ. ಆ ವಿಷವಸ್ತುಗಳನ್ನು ತಕ್ಷಣವೇ ನಿವಾರಿಸಿಬಿಡುತ್ತೇನೆ. ನೀನು ಸೇವಿಸುವ ಆಲ್ಕೋಹಾಲ್ ರಕ್ತ ಸೇರುತ್ತದೆ. ನಾನು ಅದನ್ನು ನಿರುಪದ್ರವಿಯಾದ ಕಾರ್ಬನ್ ದೈ ಆಕ್ಸೈಡ್ ಮತ್ತು ನೀರನ್ನಾಗಿ ಒಎಯುತ್ತೇನೆ. ನೀನು ಮದ್ಯಪಾನಾಸಕ್ತನಾದರೆ ನನ್ನ ಶಕ್ತಿ ಮೀರಿ ದುಡಿದು ದುಡಿದು ನಿಷ್ಕ್ರ್‍ಇಯನಾಗುತ್ತೇನೆ. ಮುಂದಿನದು ನಿನ್ನ ಹಣೆಯ ಬರಹ. ನನ್ನ ಪುರಾಣ ಬೆಳೆಸಿದಷ್ಟೂ ಬೆಳೆಯುತ್ತದೆ.
ನೆನು ದಪ್ಪನಾದರೆ ನಾನೂ ದಪ್ಪವಾಗುತ್ತೇನೆ. ಒಳ್ಳೆಯ ಆಹಾರ, ವ್ಯಾಯಾಮದಿಂದ ನಾನು ಆರೋಗ್ಯವಾಗಿರುತ್ತೇನೆ. ನಾನು ಆರೋಗ್ಯವಾಗಿದ್ದರೆ ಮಾತ್ರ ನೀನು ಆರೋಗ್ಯವಾಗಿರಲು ಸಾಧ್ಯ. ನನ್ನ ಹೆಸರು ಲಿವರ್, ಅಂದರೆ ನಾನು ಶರೀರದ ಲೀವರ್(ಸನ್ನೆ), ನಾನು ಶರೀರದ ಆರೋಗ್ಯದ ಸಮತೋಲನೆಯ ಸಂಕೇತ. ಸನ್ನೆ ಸಮವಾಗಿದ್ದರೆ ಆರೋಗ್ಯ, ಏರುಪೇರಾದರೆ ಆರೋಗ್ಯ ಸೊನ್ನೆ.
ಸಣ್ಣ ಕರುಳು : 
ನಾನು ನಿನ್ನ ಸಣ್ಣ ಕರುಳು. ಜಠರದಿಂದ ಕೆಳಗೆ ಹಾವಿನಂತೆ ಸುತ್ತಿಕೊಂಡು ಇಪ್ಪತ್ತನಾಲ್ಕು ಅಡಿ ಇದ್ದೇನೆ. ನೀನು ನನಗೆ ಆಹಾರ ಕೊಡುತ್ತೇನೆಂದು ಬೀಗುತ್ತೀಯೆ. ನಿಜವಾಗಿ ನಾನು ನಿನಗೆ ಆಹಾರ ಕೊಡುತ್ತಿದ್ದೇನೆ! ನೀನು ತಿಂದ ಆಹಾರ ಹಾಗೆಯೇ ರಕ್ತ ಸೇರಿದರೆ ನಿಮಿಷಾರ್ಧದಲ್ಲಿ ನಂಜಾಗಿ ಸಾಯುತ್ತೀಯೆ. ಆ ಆಹಾರವನ್ನು ರಕ್ತವಾಗುವಂತೆ ಮಾಡುವವ ನಾನು. ಆಹಾರ ರಕ್ತಕ್ಕೆ ಸೇರಿದ ನಂತರ ಶರೀರದ ಕೋಟ್ಯಾಂತರ ಜೀವಕೋಶಗಳಿಗೆ ಶಕ್ತಿ. ಬಾಯಿಯಿಂದ ಜೀರ್ಣಕ್ರಿಯೆ ಪ್ರಾರಂಭವಾದರೂ ಅದನ್ನು ಅಂತ್ಯಗೊಳಿಸುವವನು ನಾನು. ಆಹಾರದಲ್ಲಿನ ಕೊಬ್ಬನ್ನು ಫ್ಯಾಟಿ ಆಮ್ಲ ಮತ್ತು ಗ್ಲಿಸರಾಲ್ ಗಳಾಗಿ ಒಡೆಯುತ್ತೇನೆ. ಸಸಾರಜನಕ ವಸ್ತುಗಳನ್ನು ಅಮೈನೋ ಆಮ್ಲಗಳಾಗಿ ಬೇರ್ಪಡಿಸುತ್ತೇನೆ. ಪಿಷ್ಠವನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತೇನೆ. ನಾರು-ಬೇರುಗಳನ್ನು ಬಿಟ್ಟು ಉಳಿದ ಎಲ್ಲಾ ಆಹಾರಾಂಶಗಳನ್ನು ರಕ್ತಕ್ಕೆ ಸೇರಿಸುತ್ತೇನೆ. ನಾನು ಹೊರಕ್ಕೆ ನೂಕುವ ವಸ್ತುಗಳಲ್ಲಿ ಅರ್ಧದಷ್ಟು ಸತ್ತ ಬ್ಯಾಕ್ಟೀರಿಯಾಗಳೂ, ಮತ್ತರ್ಧ, ದಾರಿಯುದ್ದಕ್ಕೂ ನಾನು ಸ್ರವಿಸಿದ ಆಮ, ಜತೆಗೆ ನಾನು ಅರಗಿಸಿಕೊಳ್ಳಲಾರದ ವಸ್ತುಗಳು.
ಡಿಯೋಡಿನಂ ಬಿಟ್ಟನಂತರ ನನ್ನ ರಾಜ್ಯಭಾರ. ಡಿಯೋದಿನಂ ಮುಂದೆ ೮ ಅಡಿ ಉದ್ದದ ಜೆಜುನಂ. ಅದು ನಾಲ್ಕು ಸೆಂ.ಮಿ. ವ್ಯಾಸದಿಂದ ಕೂಡಿದೆ. ಅಲ್ಲಿಂದ ಮುಂದೆ ಹನ್ನೆರಡಡಿ, ಅದಕ್ಕಿಂತಲೂ ಕಿರಿದಾದ ಇಲಿಯಮ್, ನನ್ನಲ್ಲಿ ಮಿಣಿ ಜೀವಿಗಳು(ಬ್ಯಾಕ್ಟೀರಿಯಾ) ವೃದ್ಧಿಯಾಗಲಾರವು. ಕಾರಣ, ಜಠರದ ಆಮ್ಲ ಅವುಗಳನ್ನು ಕೊಂದಿರುತ್ತವೆ. ನೀನು ತೆಗೆದುಕೊಂಡ ಒಂದು ಲೋಟ ನೀರು ಹತ್ತು ನಿಮಿಷಗಳಲ್ಲಿ ನನ್ನಲ್ಲಿಗೆ ಬಂದಿರುತ್ತದೆ. ಆದರೆ ಘನಾಹಾರ ನಾಲ್ಕು ಘಂಟೆ ತೆಗೆದುಕೊಳ್ಳುತ್ತದೆ. ಮೇದೋಜೀರಕಗ್ರಂಥಿ ಪ್ರತ್ಯಾಮ್ಲೀಯ ರಸಗಳನ್ನು ಉತ್ಪತ್ತಿಮಾಡಿ ನನ್ನ ಮುಂಭಾಗಕ್ಕೆ ರವಾನಿಸುತ್ತದೆ. ಇದು ಸುಮಾರು ೧ ಲೀಟರಿನಷ್ಟಿರುತ್ತದೆ. ಆದ್ದರಿಂದ ಆಮ್ಲೀಯ ಗುಣದ ರಸ ತನ್ನ ಆಮ್ಲೀಯತೆಯನ್ನು ಕಡಿಮೆ ಮಾಡಿಕೊಂಡು ಪ್ರತ್ಯಾಮ್ಲೀಯ ಗುಣವನ್ನು ಹೊಂದಿರುತ್ತದೆ. ಆ ಕೆಲಸ ನಿಂತರೆ ಹುಣ್ಣು ಪ್ರಾರಂಭವಾಗುತ್ತದೆ. ಮುಕ್ಕಾಲು ಭಾಗ, ಹುಣ್ಣಿಗೆ ಡಿಯೋಡಿನಂ ಒಳ್ಳೆಯ ಫಲವತ್ತಾದ ಜಾಗ. ನನ್ನಲ್ಲಿ ತಯಾರಾಗುವ ಕಿಣ್ವಗಳು ಹಲವು. ಟ್ರಿಪ್ಸಿನ್, ಚೈಮೋಟ್ರಿಪ್ಸಿನ್, ಕಾರ್ಬಾಕ್ಸಿಪೆಪ್ ಟೈಡ್ಸ್, ಪ್ಯಾಂಕ್ರಿಯಾಟಿಕ್ ಲಿಪೇಸ್, ಪ್ಯಾಂಕ್ರಿಯಾಟಿಕ್ ಅಮೈಲೇಸ್.
ನನ್ನಲ್ಲಿ ೨ ಲೀ.ನಷ್ಟು ಲಾಲಾರಸ, ೩ ಲೀ.ನಷ್ಟು ಗ್ಯಾಸ್ಟ್ರಿಕ್ ರಸ, ಪಿತ್ತಜನಕಾಂಗದಿಂದ ೧ ಲೀ.ನಷ್ಟು ಪಿತ್ತರಸ, ಮತ್ತು ೨ ಲೀ.ನಷ್ಟು ನನ್ನ ಸ್ವಂತ ರಸಗಳು ಹೀಗೆ ಒಟ್ಟು ೮ ಲೀ.ನಷ್ಟು ರಸಗಳು ಸಂಗಮವಾಗುತ್ತವೆ.
ನನ್ನ ಒಳಭಾಗ ರೇಷ್ಮೆಯಂತೆ ನುಣುಪಾಗಿರುವಂತೆ ತೋರುತ್ತದೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಕೈ ಬೆರಳಿನಂತಹ ವಿಲ್ಲೈ ಎಂಬ ಸೂಕ್ಷ್ಮ ಅಂಗಗಳಿಂದ ನನ್ನ ಒಳಭಾಗ ಆವೃತವಾಗಿದೆ. ಈ ವಿಲ್ಲೈಗಳು ಆಹಾರದಲ್ಲಿನ ಪಿಷ್ಠ, ಸಾರಜನಕ, ಕೊಬ್ಬು, ಜೀವಸತ್ವಗಳು, ಲವಣಗಳು ಮುಂತಾದವುಗಳನ್ನು ಹೀರಿ ರಕ್ತಕ್ಕೆ ಸೇರಿಸುವ ಕಾರ್ಯಮಾಡುತ್ತವೆ.
ನಾನು ಹೊಟ್ಟೆಯ ಗೋಡೆಗೆ ಬಲವಾಗಿ ಬಿಗಿಯಲ್ಪಟ್ಟಿಲ್ಲ. ಆದ್ದರಿಂದ ಎರಡು ರೀತಿಯ ಚಲನೆ ಸಾಧ್ಯ. ನನ್ನಲ್ಲಿಯ ಮಾಂಸಖಂಡಗಳು ಅಲೆಯ ರೂಪದ ಚಲನೆಯನ್ನು ಉಂಟುಮಾಡುತ್ತವೆ. ಮತ್ತೊಂದು ರೀತಿಯ ಮಾಂಸಖಂಡಗಳು ಜಿಗಿತವನ್ನು ಉಂಟುಮಾಡುತ್ತವೆ. ಇವೆರಡು ರೀತಿಯ ಚಲನೆಯಿಂದ ದ್ರವರೂಪದ ಆಹಾರ ಸ್ವಲ್ಪಸ್ವಲ್ಪವೇ ನಿಧಾನವಾಗಿ ಮುಂದಕ್ಕೆ ತಳ್ಳಲ್ಪಡುತ್ತದೆ. ಆಹಾರ, ನನ್ನಲ್ಲಿ ೩ ರಿಂದ ೮ ಗಂಟೆಗಳ ಕಾಲ ಉಳಿದು, ರಕ್ತಕ್ಕೆ ಸೇರಲು ಯೋಗ್ಯವಾದ ಅಂಶ ರಕ್ತಕ್ಕೆ ಸೇರಿ ಉಳಿದದ್ದು ಮುಂದಕ್ಕೆ ದೂಡಲ್ಪಡುತ್ತದೆ.
ನನ್ನ ಹೆಸರು ಸಣ್ಣಕರುಳೆಂದಿರಬಹುದು. ಆದರೆ ನಾನು ಮಡುವ ಕೆಲಸ ಸಣ್ಣದಲ್ಲ!
'ಹೆಂಗರುಳಿನವ' ಎಂದು ಗಂಡಸನ್ನು ಆಡಿಕೊಳ್ಳುತ್ತಾರೆ. ಅದರಥ ಇಷ್ಟೇ, ನಾನು ಭಾವನೆಗಳಿಗೆ ಬೇಗ ಸ್ಪಂದಿಸುತ್ತೇನೆ. ಹೆಂಗಸರಿಗೇ ಆಗಲಿ, ಗಂಡಸರಿಗೇ ಆಗಲಿ ಈ ಭಾವನೆಗಳ ತಾಕಲಾಟ ಅತಿಯಾದರೆ ನನಗೆ ಅನವಶ್ಯಕ ಶ್ರಮ. ಇದರಿಂದ ನನ್ನ ಆಯಸ್ಸು ಕಡಿಮೆಯಾಗುತ್ತದೆ.
ಆಹಾರಾಂಶವು ಹೀರಲ್ಪಟ್ಟು ಉಳಿದ ಭಾಗ, ದ್ರವರೂಪದಲ್ಲಿರುವುದು. ಅದನ್ನು ನಿಧಾನವಾಗಿ ದೊಡ್ಡ ಕರುಳಿಗೆ ನೂಕಿಬಿಡುತ್ತೇನೆ. ಮುಂದಿನದು ನನ್ನ ದೊಡ್ಡಣ್ಣನ ಕಾರ್‍ಯ.
ದೊಡ್ಡ ಕರುಳು :
ನಾನು ನಿನ್ನ ದೊಡ್ಡ ಕರುಳು. ಅಡ್ಡಕರುಳು, ಉದ್ದಕರುಳು, ನೆಟ್ಟಕರುಳು ಎಂದು ಮೂರು ಭಾಗವಾಗಿ ಒಟ್ಟು ಆರಡಿ ಇದ್ದೇನೆ. ನನ್ನ ತಮ್ಮ ಸಣ್ಣ ಕರುಳು ಆಹಾರಾಂಶವನ್ನು ಹೀರಿ ಉಳಿದ ದ್ರವದ ರೂಪವನ್ನು ನನಗೆ ತಳ್ಳುತ್ತಾನೆ. ನಾನು ನನ್ನ ಅಡ್ಡಕರುಳು ಮತ್ತು ಉದ್ದಕರುಳಿನಲ್ಲಿ ನೀರನ್ನು ಹೀರಿ ರಕ್ತಕ್ಕೆ ಕಳುಹಿಸುತ್ತೇನೆ. ಎ ನೀರನ್ನು ಹೀರಿ ರಕ್ತಕ್ಕೆ ಏಕೆ ಕಳುಹಿಸಬೇಕು? ಅದು ಬರೀ ನೀರಲ್ಲ, ಬಾಯಿಯಿಂದ ಪ್ರಾರಂಭವಾಗಿ ದಾರಿಯುದ್ದಕ್ಕೂ ಸೇರಿಸಿಕೊಂಡು ಬಂದ ಅತ್ಯಮೂಲ್ಯ ಜೀವರಸಗಳು ಅದರಲ್ಲಿದೆ. ಲವಣಗಳ ಅಗರವೇ ಅದಾಗಿದೆ. ಅದನ್ನು ರಕ್ತಕ್ಕೆ ಕಳುಹಿಸದಿದ್ದರೆ ಕೆಲವೇ ಗಂಟೆಗಳಲ್ಲಿ ಸಾವು ಬರಬಹುದು. ಈ ನೀರನ್ನು ಹೀರುವ ಕ್ರಿಯೆಗೆ ನನಗೇನೂ ಅವಸರವಿಲ್ಲ. ಹನ್ನೆರಡರಿಂದ ಇಪ್ಪತ್ತುನಾಲ್ಕು ಗಂಟೆಗಳನ್ನು ತೆಗೆದುಕೊಳ್ಳುತ್ತೇನೆ, ನಾನು ನೀರನ್ನು ಹೀರದೆ ಹಾಗೆಯೇ ಹೊರಕ್ಕೆ ನೂಕಿದ್ದರೆ ಏನಾಗುತ್ತಿತ್ತು ಎಂದು ಕೇಳಿದೆಯಲ್ಲವೇ? ಹಾಗೂ ಒಮ್ಮೊಮ್ಮೆ ಮಾಡುತ್ತೇನೆ. ನನಗೆ ಕಿರಿಕಿರಿಯಾದರೆ ಮಾತ್ರ. ನಾನು ಹಾಗೆ ಮಾಡಿದರೆ ತಕ್ಷಣ ದಾಕ್ಟರಲ್ಲಿಗೆ ಓಡುತ್ತೀಯೆ. ಅದೇ ಅತಿಸಾರ.
ನನ್ನ ತಮ್ಮನಿಗಿಂತ ನಾನು ಬಹಳ ಉದಾರಿ. ಅವನು ಯಾವುದೇ ರೀತಿಯ ಮಿಣಿಜೀವಿಗಳೂ(ಮೈಕ್ರೋಬ್ಸ್) ಬೆಳೆಯಲು ಅವಕಾಶ ಕೊಡುವುದಿಲ್ಲ. ಆದರೆ ನಾನು ಹಾಗಲ್ಲ. ಅವುಗಳ ಬಗ್ಗೆ ನನಗೆ ತುಂಬಾ ಅನುಕಂಪ! ಐವತ್ತಕ್ಕೂ ಹೆಚ್ಚು ಮಿಣಿಜೀವಿಗಳಿಗೆ ನಾನು ಆಶ್ರಯ ಕೊಡುತ್ತೇನೆ! ಜಂತು ಮುಂತಾದ ಹುಳುಗಳು ಬೆಳೆದರೆ ನಾನು ಅಡ್ಡಿಪಡಿಸುವುದಿಲ್ಲ!!
ಹೊಟ್ಟೆಯಲ್ಲಿ 'ಗುಡು' 'ಗುಡು' ಎಂದು ಶಬ್ದ ಮಾಡುವವನು ನಾನೇ. ಇದು ಬರೀ ವಾಯು. ನೀನು ಮಾತಾಡುವಾಗ ನುಂಗಿರುವ ಗಾಳಿ, ಜೀರ್ಣಕ್ರಿಯೆಯಲ್ಲಿ ಉತ್ಪತ್ತಿಯಾದ ವಾಯು ಎಲ್ಲವನ್ನೂ ಈ ರೂಪದಲ್ಲಿ ಹೊರಕ್ಕೆ ಹಾಕುತ್ತೇನೆ. ಜತೆಗೆ ನಾನು ಕೆಲವು ಗ್ಯಾಸ್ಗಳನ್ನು ತಯಾರಿಸುತ್ತೇನೆ. ಅವುಗಳಲ್ಲಿ ಮೀಥೇನ್ ಮತ್ತು ಹೈಡ್ರೋಜಿನ್ ಮುಖ್ಯವಾದವು. ಹೆಚ್ಚೂ ಕಡಿಮೆ ೧ ಲೀ. ಗ್ಯಾಸ್ ಹೊರಕ್ಕೆ ಹಾಕುತ್ತೇನೆ. ಇದು ಹೆಚ್ಚಾದಲ್ಲಿ ಹೊಟ್ತೆಯಲ್ಲಿ ನೋವು ಉಂಟಾಗುತ್ತದೆ. ನಿನ್ನ ಎಲ್ಲಾ ಒಳ ಅಂಗಗಳಂತೆ ನಿನ್ನ ಮಾನಸಿಕ ಸ್ಥಿತಿಯನ್ನು ನಾನೂ ಅನುಸರಿಸುತ್ತೇನೆ. ನಿನಗೆ ಕೋಪ ಬಂದರೆ ನನಗೆ ತಾಪ ಉಂಟಾಗುತ್ತದೆ. ಆಗ ನಿನಗೆ ಹಸಿವೆಯಾಗದಂತೆ ತಡೆದುಬಿಡುತ್ತೇನೆ. ನೀನು ಬುದ್ಧಿವಂತನಾದರೆ ಆಗ ಏನೂ ಆಹಾರ ತೆಗೆದುಕೊಳ್ಳಬಾರದು. ಅಂತೆಯೇ ನೆನ್ನು ತುಂಬಾ ಸುಸ್ತಾಗಿದ್ದಾಗ, ಚಿಂತೆಗೊಳಗಾಗಿದ್ದಾಗಲೂ ಇದೇ ನಿಯಮ. ನಿನ್ನ ತಲೆಗೂ ನನಗೂ ಸಂಬಂಧವಿದೆ. ನಿನ್ನ ತಲೆಯಲ್ಲಿ ನಡೆಯುವ ಯುದ್ಧಕ್ಕೆ ನಾನು ಬಲಿ, ತಲೆ ಉತ್ತರ ಹುಡುಕುವವರೆಗೂ ನನ್ನ ಸ್ವಂತ ಕೆಲಸ ನಿಧಾನವಾಗುತ್ತದೆ. ನರಗಳಲ್ಲಿನ ಒತ್ತಡ, ಔಷಧ, ಬ್ಯಾಕ್ಟೀರಿಯಾ ಇವೆಲ್ಲಾ ನಾನು ನೀರನ್ನು ಪೂರ್ಣವಾಗಿ ಹೀರದಂತೆ ಮಾಡುತ್ತವೆ. ಅದೇ ಭೇಧಿ. ಚಿಂತೆ, ನಾರು-ಬೇರಿಲ್ಲದ ಆಹಾರ, ನನ್ನ ಕೆಲಸಕ್ಕೆ ತಡೆ ಉಂಟುಮಾಡುತ್ತವೆ. ಅದರಿಂದ ಮಲ ಗಟ್ಟಿಯಾಗಿ ಕುರಿಯ ಹಿಕ್ಕೆಯಂತಾಗುತ್ತದೆ. ಇದೇ ಮಲಬದ್ಧತೆ.
ಈ ಮಲಬದ್ಧತೆಯದೇ ಒಂದು ದೊಡ್ಡ ಪುರಾಣ. ಮಲಬದ್ಧತೆಯಿರುವ ಅನೇಕರು ತಮಗೆ ಮಲಬದ್ಧತೆಯಿಲ್ಲವೆಂದು ತಿಳಿದಿದ್ದಾರೆ. ಮಲಬದ್ಧತೆಯಿರದ ಅನೇಕರು ತಮಗೆ ಮಲಬದ್ಧತೆಯಿದೆ ಎಂದು ಹೇಳುತ್ತಾರೆ. 'ಮಲಬದ್ಧತೆಯಾದರೆ ಏನೂ ತಲೆ ಬೀಳುವುದಿಲ್ಲ' ಎಂದು ಹೇಳುವುದು ಒಂದು ವರ್ಗ. ' ಎಲ್ಲಾ ಕಾಯಿಲೆಗಳಿಗೂ ಈ ಮಲಬದ್ಧತೆಯೇ ಮೂಲ' ಎನ್ನುವುದು ಇನ್ನೊಂದು ವರ್ಗ. ಸತ್ಯ ಇವೆರಡರ ಮಧ್ಯೆ ಇದೆ. ನಾನು ತುಂಬಾ ಸೂಕ್ಷ್ಮ. ನೀನು ಗಮನಿಸಿರಬಹುದು. ಬೇರೆಯ ಊರಿಗೆ ಹೋದರೆ ಮಲವಿಸರ್ಜನೆ ಮುಂದೂಡಲ್ಪಡುತ್ತದೆ. ಅದಕ್ಕೆಲ್ಲಾ ಹೆದರಬೇಡ. ನಾನು ಬಹಳ ಮೂಡಿ.. ಒಮ್ಮೊಮ್ಮೆ ಮಲವಿಸರ್ಜನೆಯನ್ನು ಮುಂದಕ್ಕೆ ಹಾಕಿಬಿಡುತ್ತೇನೆ. ಆದರೆ ಇದು ನಿತ್ಯದ ಕತೆಯಾದರೆ ಜಾಗ್ರತೆ ವಹಿಸಬೇಕು. ಮುಖ್ಯವಾಗಿ ಮಲಬದ್ಧತೆಯೆಂದರೇನೆಂದು ಅರ್ಥ ಮಾಡಿಕೋ. ದಿನಕ್ಕೊಮ್ಮೆ ಕಾಲಪ್ರವೃತ್ತಿಯಾದರೆ ಮಲಬದ್ಧತೆಯಿಲ್ಲವೆಂದು ಬಹಳ ಜನರ ಅಭಿಪ್ರಾಯ.
ದಿನಕ್ಕೆ ಊಟ ಮೂರು ಮತ್ತೊಂದು, ಮಲವಿಸಜನೆ ಸಾಕೆ ಒಂದೇ ಒಂದು?
ನೀನು, ಮೇಲೆ ಮೇಲೆ ತುರುಕುತ್ತಿರುವ ಆಹಾರವನ್ನು ದಾರಿಯಲ್ಲಿ ಜೀರ್ಣಮಾಡಲಾರದೆ ಕಡೆಗೆ ನನ್ನಲ್ಲಿಗೆ ತಳ್ಳಿಬಿಡುತ್ತಾರೆ. ( ಈಗ ಪ್ರೈಮರಿ ಸ್ಕೂಲಿನಿಂದ ಹುಡುಗರನ್ನು ಮುಂದು ಮುಂದಕ್ಕೆ ನೂಕುವಂತೆ!) ನಾನು ತಾನೇ ಏನು ಮಾಡಲಿ? ಮುಂದಕ್ಕೆ ತಳ್ಳಿಬಿಡುತ್ತೇನೆ. ನೀನು ಇದನ್ನೇ ಉತ್ತಮ ಮಲವಿಸರ್ಜನೆಯೆಂದುಕೊಳ್ಳುತ್ತೀಯೆ. ಈ ವಿಷಯದಲ್ಲಿ ಓಮ್ದು ಘಟನೆ ನೆನಪಿಗೆ ಬರುತ್ತದೆ. ಒಮ್ಮೆ, ಒಂದು ಟ್ರೈನ್ ವೇಳೆಗೆ ಸರಿಯಾಗಿ ನಿಲ್ದಾಣಕ್ಕೆ ಬಂತು. ಪ್ರಯಾಣಿಕರೆಲ್ಲಾ ಬಹಳ ಖುಷಿಯಾದರು. ಸ್ಟೇಷನ್ ಮಾಸ್ಟರ್ ಹೇಳಿದರು, 'ಅದು ನಿನ್ನೇ ಬರಬೇಕಾಗಿದ್ದ ಗಾಡಿ, ಇಂದಿನ ವೇಳೆಗೆ ಸರಿಯಾಗಿ ಬಂದಿದೆ. ಸರಿಯಾಗಿ ಇಪ್ಪತ್ತನಾಲ್ಕು ಗಂಟೆಗಳ ತಡ ಅಷ್ಟೆ!' ಹೀಗಾಗಿದೆ ಮಲವಿಸರ್ಜನೆಯ ಸ್ಥಿತಿ. ಆಹಾರದ ಪ್ರಯಾಣ ಇಪ್ಪತ್ತನಾಲ್ಕು ಗಂಟೆಯಲ್ಲಿ ಮುಗಿಯಬೇಕು. ಆದರೆ ನವನಾಗರೀಕತೆಯ ಪ್ರಭಾವದಿಂದ, ಅದರಲ್ಲೂ ವೇಳೆಯಿಲ್ಲವೆಂದು ಒದ್ದಾಡುವ ಐರೋಪ್ಯ ಜನಾಂಗವನ್ನು ಅವರ ಟಾಯ್ಲೆಟ್ಟಿನಲ್ಲಿ ಕಟ್ಟಿಹಾಕಿಬಿಡುತ್ತೇನೆ. ಅಲ್ಲಿ ವೇಳೆ ಅವರ ಅಧೀನವಲ್ಲ, ನನ್ನ ಅಧೀನ. ಕೆಲವರು ಕಾಫಿ, ಕೆಲವರು ಪೇಪರ್, ಕೆಲವರು ಸಿಗರೇಟ್, ಮತ್ತೆ ಕೆಲವರು ರೋಮಾಂಚಕರವಾದ ಕಾದಂಬರಿ ಎಲ್ಲಕ್ಕೂ ಮೊರೆಹೋಗುತ್ತಾರೆ! ಐವತ್ತರ ನಂತರ ಅಣೆಕರು ವಿರೇಚಕಗಳಿಗೆ ಶರಣಾಗುತ್ತಾರೆ. ಚಿಕ್ಕಪ್ರಾಯದಲ್ಲಿ ಹೇಗೋ ನಡೆಯುತ್ತದೆ. ನಿನಗೆ ವಯಸ್ಸಾದಂತೆ ನನಗೂ ವಯಸ್ಸಾಗುತ್ತದೆ. ಹೆಚ್ಚಿಗೆ ಆಹಾರ ಸೇವಿಸಿದರೆ ಅದರಲ್ಲೂ ಕರಿದ ಆಹಾರ, ಈರುಳ್ಳಿ, ಕೋಸು, ಹುರುಳೀಕಾಯಿ ಇತ್ಯಾದಿಗಳು ಹೆಚ್ಚು ವಾಯುವನ್ನು ಉಂಟುಮಾದಿ ತೊಂದರೆ ಕೊಡುತ್ತವೆ. ಮನಸ್ಸಿನಲ್ಲಿ ಉದ್ವೇಗಗಳನ್ನು ಉಂಟುಮಾಡಿಕೊಳ್ಳದೆ, ಹಣ್ಣುಗಳನ್ನೂ ತರಕಾರಿಗಳನ್ನೂ ಹೆಚ್ಚು ಸೇವಿಸಿದರೆ ನಾನು ಕಾರ್ಯವನ್ನು ಚೆನ್ನಾಗಿ ನಿರ್ವಹಿಸುತ್ತೇನೆ. ಆದಷ್ಟೂ ನೀರು ಕುಡಿಯುವುದು ಒಳ್ಳೆಯದು. ನನ್ನನ್ನು ನೀನು ಗೌರವದಿಂದ ನೋಡಿಕೊಂಡರೆ ನಾನು ನಿನಗೆ ತೊಂದರೆ ಕೊಡುವುದಿಲ್ಲ.
ಗುರುಗಳು : ಮಕ್ಕಳೇ ಹೀಗೆ ಬಾಯಿಯಿಂದ ಗುದದ್ವಾರದವರೆಗೂ ಆಹಾರದ ಪ್ರಯಾಣ. ಎಲ್ಲಾ ಅಂಗಗಳೂ ತಮ್ಮ ತಮ್ಮ ಕತೆಯನ್ನು ಹೇಳಿವೆ. ಅವುಗಳ ಕೆಲಸವನ್ನು ಸುಲಭ ಮಾಡಿಕೊಡುವುದೇ ನಿಮ್ಮ ಜವಾಬ್ದಾರಿ. ಹಾಗೆ ಆಹಾರ ಸೇವಿಸಬೇಕು. ಆಹಾರದಷ್ಟೇ ವ್ಯಾಯಾಮವೂ ಮುಖ್ಯ ಮಕ್ಕಳೇ. ವ್ಯಾಯಾಮವಿಲ್ಲದಿದ್ದರೆ ಆಹಾರ ರಕ್ತಗತವಾಗುವುದಿಲ್ಲ. ಆಟ, ಓಟ, ಯೋಗಾಸನ, ಈಜು ಇತ್ಯಾದಿಗಳೆಲ್ಲಾ ಬೇಕೇಬೇಕು.
ವಿದ್ಯಾರ್ಥಿಗಳು : ಈಗ ಆಹಾರ ಹೇಗೆ ಜೀರ್ಣವಾಗುವುದೆಂದು ತಿಳಿಯಿತು. ಅದನ್ನು ಅನುಸರಿಸಿ ಆಹಾರ ತೆಗೆದುಕೊಳ್ಳುತ್ತೇವೆ ಗುರುಗಳೇ! 
ಸೂರ್ಯ ಬೇಯಿಸಿದ ಅಡುಗೆ
ಹಣ್ಣು-ಹಂಪಲುಗಳು, ಗೆಡ್ಡೆಗೆಣಸುಗಳು, ಇದನ್ನು ಹಸಿಯ ಆಹಾರ, ಕಚ್ಚಾ ಆಹಾರ, ಕಚ್ಚಾ ನಿರಗ್ನಿ ಆಹಾರ, ಋಷಿಗಳ ಆಹಾರ ಎನ್ನುತ್ತಾರೆ. ಅದನ್ನು ಕಚ್ಚಾ ಎಂದು ಕರೆಯುವುದು ಸರಿಯಲ್ಲ, ಅದೂ ಸಹಾ ಬೇಯಿಸಿದ ಆಹಾರವೇ! ಮನುಷ್ಯನಿಂದಲ್ಲ, ಅಗ್ನಿಯಿಂದಲ್ಲ, ಸೂರ್ಯನಿಂದ.
ಸೂರ್ಯ ಬೇಯಿಸಿದ ಅಡುಗೆ ಅದರ ರುಚಿ ಅಡಿಗಡಿಗೆ, ಹಣ್ಣು-ಹಂಪಲೇ ನಮ್ಮ ಸೌಭಾಗ್ಯ! ಅದನರಿಯದೇ ನಾನಾದೆ ನಿರ್ಭಾಗ್ಯ, ಗೆಡ್ಡೆಗೆಣಸುಗಳು ಭೂಮಿಯಾ ಕೊಡುಗೆ, ಹಣ್ಣು ಹಂಪಲುಗಳು ಸೂರ್ಯನಾ ಕೊಡುಗೆ.
ಗೆಡ್ಡೆಗಳಲ್ಲಿ ಆಹಾರ ಸಂಗ್ರಹಿಸಿಡಲೂ ಸೂರ್ಯ ಬೇಕೇಬೇಕು. ಒಟ್ಟಿನಲ್ಲಿ ಸೂರ್ಯನೇ ನಮ್ಮ ಜೀವನಾಧಾರ. ಆ ಸೂರ್ಯಶಕ್ತಿಯನ್ನು ಜೀವಂತ ರೂಪದಲ್ಲಿ ಹಿಡಿದಿಡುವ ಹೆಚ್ಚು ಶಕ್ತಿಯಿರುವುದು ಹಣ್ಣುಗಳಿಗೆ ಮಾತ್ರ. ಅವು ಹಿಡಿದಿಟ್ಟ ಸೂರ್ಯಶಕ್ತಿಯನ್ನು ಶರೀರಕ್ಕೆ ಒದಗಿಸಬಲ್ಲವು, ಕಾಯಿಲೆ ಬರದಂತೆ ತಡೆಯಬಲ್ಲವು, ಬಂದ ಕಾಯಿಲೆಯನ್ನು ನೀಗಬಲ್ಲವು.
ಹಣ್ಣು ಮತ್ತು ತರಕಾರಿಗಳ ಜೀವಂತಿಕೆ ಬರುವುದು ಸೂರ್ಯನಿಂದಲೇ. ಬೆಳಕಿನ ಶಕ್ತಿ ಇವುಗಳಲ್ಲಿ ಅಡಗಿದೆ. ಆಹಾರ ಒಂದು ಕೂಡಿಟ್ಟ ಶಕ್ತಿ. ಇದನ್ನು ಅಳೆಯಲು ಉಪಯೋಗಿಸುವ ಅಳತೆ ಸೂರ್ಯಪ್ರಕಾಶ ಮೌಲ್ಯ. ಆಹಾರ ಎಷ್ಟು ತಾಜಾ ಇದ್ದರೆ ಅದರ ಸೂರ್ಯಪ್ರಕಾಶ ಮೌಲ್ಯ ಅಷ್ಟು ಹೆಚ್ಚು, ಇದನ್ನು ವಿವರಿಸಿದರು ಡಾ. ಬೆರ್ಚರ್ ಬೆನ್ನರ್. ಸೂರ್ಯಪ್ರಭೆಯನ್ನು ಉಂಡ ಆಹಾರಗಳು ಅದಿಲ್ಲದೆ ಬೆಳೆದ ಆಹಾರಕ್ಕಿಂತ ಹೆಚ್ಚು ರೋಗಪ್ರತಿಬಂದಕ ಗುಣವನ್ನು ಸಂಗ್ರಹಿಸುತ್ತವೆ. 'ಡಿ' ಅನ್ನಾಂಗವಿಲ್ಲದೆ 'ಸಿ' ಅನ್ನಾಂಗ ಶರೀರಕ್ಕೆ ಒದಗದು. ಟೊಮೇಟೋನಲ್ಲಿ 'ಸಿ' ಅನ್ನಾಂಗ ೧೦೦% ಹೆಚ್ಚಿಸುವುದು. ಟರ್ನಿಪ್ನಲ್ಲಿ ೮೦೦% ರಷ್ಟು ಹೆಚ್ಚುತ್ತದೆ. ಸೂರ್ಯನಿಗೆ ಎದುರಾದ ಹಣ್ಣಿನ ಭಾಗ ಹೆಚ್ಚು ಕೆಂಪಾಗಿದ್ದು ಹೆಚ್ಚು 'ಸಿ' ಅನ್ನಾಂಗವನ್ನು ಹೊಂದಿ ರುಚಿಯೂ ಹೆಚ್ಚಾಗಿರುತ್ತದೆ. ಅಲ್ಲದೆ ಕ್ಯಾರೋಟಿನ್, ಥಯಾಮಿನ್ ಇತ್ಯಾದಿ ಅನ್ನಾಂಗಗಳ ಪ್ರಮಾಣದ ಮೇಲೂ ಪ್ರಭಾವ ಬೀರುತ್ತದೆ.
ಬಹಳ ವರ್ಷಗಳ ಹಿಂದೆ ಇನ್ನೂ ಸೂರ್ಯನ ಬೆಳಕಿನ ಜೀವಸಂಬಂಧಿ ಕ್ರಿಯೆಯ ಅರಿವು ಇಲ್ಲದಿದ್ದಾಗ ಡಾ. ಬೆರ್ಚರ್ ಬೆನ್ನರ್ ಆಹಾರದಲ್ಲಿ ಸೂರ್ಯಮೌಲ್ಯವನ್ನು ಮುಂದಿಟ್ಟ. ಈಗ ಆಧುನಿಕ ವಿಜ್ನಾನವೂ ಅದನ್ನು ಒಪ್ಪಿದೆ. ಸೂರ್ಯ ಬೇಯಿಸಿದ ಆಹಾರಕ್ಕೂ ಬೆಂಕಿಯಲ್ಲಿ ಬೆಂದ ಆಹಾರಕ್ಕೂ ಇರುವ ವ್ಯತ್ಯಾಸ ಪ್ರಯೋಗಾಲಯದ ಪ್ರನಾಳಕ್ಕೆ ಅರ್ಥವಾಗದಿರಬಹುದು, ಆದರೆ ಜೀವಂತ ಜೀವಕೋಶಗಳಿಗೆ ಅರ್ಥವಾಗುತ್ತದೆ.
ಡಾ. ಜಿಯೋ (ಡಾ.ಜಿಯೋ.ಜೆ.ಡ್ರೆಸ್, ಎಮ್.ಡಿ.,ಚಿಕಾಗೋ) ರ ಪ್ರಕಾರ ಬೇಯಿಸುವಿಕೆ ಆಹಾರದಲ್ಲಿನ ಜೀವ ರಾಸಾಯಿನಿಕ ಕ್ರಿಯೆಯನ್ನು ವ್ಯತ್ಯಾಸಮಾಡುತ್ತದೆ. ಸೂರ್ಯಶಕ್ತಿ ಬಿಡುಗಡೆ ಹೊಂದುತ್ತದೆ. ಅದು ಬೇಯಿಸುವಾಗ ಬರುವ ವಾಸನೆಯ ರೂಪದಲ್ಲಿ ಹೊರಕ್ಕೆ ಹೋಗುತ್ತದೆ; ಜೀವಂತಿಕೆ ಹೊರದೂಡಲ್ಪಡುತ್ತದೆ; ಸಸಾರಜನಕ ಗಟ್ಟಿಯಾಗುತ್ತದೆ; ಪಿಷ್ಟ ಜೀರ್ಣವಾಗದೆ ರಕ್ತಕ್ಕೆ ಸೇರುತ್ತದೆ. ಸೊಪ್ಪುಗಳು ಬೇಯಿಸಲ್ಪಟ್ಟಾಗ ಅವು ಬಣ್ಣ ಕಳೆದುಕೊಳ್ಳುವುದೇ ಜೀವಶಕ್ತಿಯನ್ನು ಕಳೆದುಕೊಂಡ ಸಂಕೇತ. ನೈಸರ್ಗಿಕ ಆಹಾರದಲ್ಲಿನ ಬಣ್ಣ, ವಾಸನೆಯೆ ಬೇರೆ, ಬೇಯಿಸಿದ ಆಹಾರದ ಬಣ್ಣ, ವಾಸನೆಯೇ ಬೇರೆ. ಇದು ರಸನೇಂದ್ರಿಯವನ್ನು ಮೋಸಗೊಳಿಸಿ, ಜೀರ್ಣಾಂಗಗಳನ್ನು ಹಾಳುಮಾಡುತ್ತದೆ. ಶರೀರದಲ್ಲಿ ಕಫಪ್ರವೃತ್ತಿ ಹೆಚ್ಚುತ್ತದೆ. ಜೀರ್ಣಾಂಗಗಳ ಸವೆತದಿಂದ ವಾತಪ್ರವೃತ್ತಿಯೂ ಹೆಚ್ಚುತ್ತದೆ. ಡಾ. ಆರ್ನಾಲ್ಡ್ ಎಹರೇಟ್ ಎಂಬ ಅಮೇರಿಕಾದ ವೈದ್ಯರು, ಎಲ್ಲಾ ಪಿಷ್ಟ ಪದಾರ್ಥಗಳು ಕಫಕಾರಕವೆಂದು ತಮ್ಮ ಮ್ಯೂಕಸ್ ಲೆಸ್ ಡಯಟ್ ಎಂಬ ಪುಸ್ತಕದಲ್ಲಿ ಬರೆಯುತ್ತಾರೆ.
ಸಾಧಾರಣವಾಗಿ ಎಲ್ಲರೂ ಕಚ್ಚಾ ಆಹಾರದಿಂದಲೇ ಆರೋಗ್ಯವಂತರಾಗಿ ಜೀವಿಸಬಹುದು. ಬಹಳ ಜನ ಹಳೆಯ ರೋಗಿಗಳೂ ಸಹ ಎಲ್ಲಾ ವಿಧವಾದ ಔಷಧಿಯ ಪದ್ಧತಿಗಳನ್ನೂ ಪೂರೈಸಿ, ಕಡೆಗೆ ಹಸಿಯಾದ ಆಹಾರಕ್ಕೆ ಬಂದು, ತಮ್ಮ ಕಾಯಿಲೆಗಳನ್ನು ಸಂಪೂರ್ಣವಾಗಿಯೋ ಅಥವಾ ಬಹಳಷ್ಟು ಭಾಗವನ್ನೋ ಕಳೆದುಕೊಂಡಿರುತ್ತಾರೆ.
ಮನುಜನ ಆಹಾರವೆಂದೊಡನೆಯೇ ನಿಸರ್ಗ, ನೈಸರ್ಗಿಕ ಆಹಾರದೆಡೆಗೆ ಕೈತೋರಿಸುತ್ತದೆ. ಮೊದಲನೆಯ ವರ್ಗದ ಆಹಾರವೇ ಮನುಜನ ನಿಜವಾದ ಆಹಾರ. ಅದೇ ನಿರಗ್ನಿ ಆಹಾರ. ನಿಸರ್ಗದಿಂದ ನೇರವಾಗಿ ಬಂದದ್ದು. ಬರೀ ನೀರಿನಿಂದ ತೊಳೆದು ಉಪಯೋಗಿಸಬಹುದಾದದ್ದು. ಅದರ ಸಂಸ್ಕರಣ ಅಂದರೆ, ನೈಸರ್ಗಿಕವಾದ ಎರಡು ಅಥವ ಇನ್ನೂ ಹೆಚ್ಚನ್ನು ಮಿಶ್ರಣ ಮಾಡಿದ್ದು, ಮೊಳಕೆ ಬರಿಸಿದ್ದು, ರಸ ತೆಗೆದದ್ದು ಇತ್ಯಾದಿಗಳು ಮೊದಲ ವರ್ಗದಲ್ಲಿ ಕೆಳಹಂತದವು-ಇವುಗಳನ್ನು 'ನೈಸರ್ಗಿಕ ಮಿಶ್ರಣ' ವೆನ್ನಬಹುದು. ಮುಂದಿನ ಹಂತ ಅಗ್ನಿಯಿಂದ ಸಂಸ್ಕರಿಸಿದ್ದು. ಇದೇ ಮಧ್ಯಸ್ಥದಲ್ಲಿ ಮೊದಲ ಹಂತ. ಉದಾಹರಣೆಗೆ, ಅತಿ ಕಡಿಮೆ ಹುಳಿ, ಉಪ್ಪು, ಕಾರ, ಸಿಹಿಗಳ ಮಿಶ್ರಣ, ಹಬೆಯಲ್ಲಿ ಬೇಯಿಸಿಯಾಗಲಿ ತಿನ್ನಬಹುದು. ಕೊಂಚ ಉಪ್ಪು ಹಾಕಬಹುದು. ಬಹಳ ದಿವಸಗಳಿಂದ ಬೆಂಕಿಗೆ ಒಗ್ಗಿದ ಮನುಷ್ಯ ನಿರಗ್ನಿ ಆಹಾರಕ್ಕೆ ಬರುವ ಹಂತದಲ್ಲಿ ಈ ರೀತಿ ಬಳಸಬಹುದು. ಇದಕ್ಕಿಂತ ಹೆಚ್ಚು ಮಿಶ್ರಣ ಋಣಾತ್ಮಕತೆಯ ಕಡೆಗೆ ವಾಲಿದುದು. ಮುಂದಿನ ಅಸಹಜ ಆಹಾರಗಳೆಲ್ಲವೂ ಋಣಾತ್ಮಕ. ಆರೋಗ್ಯ ಬೇಕೆನ್ನುವವರು ಋಣಾತ್ಮಕ ಆಹಾರವನ್ನು ನಿಷೇಧಿಸಲೇಬೇಕು. ಇಲ್ಲದಿದ್ದರೆ ಆರೋಗ್ಯವನ್ನೇ ಬೆಲೆಯಾಗಿ ತೆರಬೇಕು. ನೈಸರ್ಗಿಕ ಆಹಾರ, ಸಹಜ ಆಹಾರ, ನಮ್ಮ ಗುರಿ. ಶರೀರ, ಜಡ ಭೌತಶಾಸ್ತ್ರದ ನಿಯಮಗಳಿಗೆ ಒಳಪಡುವುದಿಲ್ಲ. ಜೀವಂತ ದೇಹಕ್ಕೆ ಜೀವಂತವಾದ ಆಹಾರ ಬೇಕು. ಹಣ್ಣುಗಳನ್ನು ತಿಂದು ಬೀಜವನ್ನು ಬಿಟ್ಟುಬಿಡುತ್ತೇವೆ. ಅದು ಮತ್ತೆ ಮರವಾಗುವ ಸೃಷ್ಟಿಕ್ರಿಯೆಗೆ ತೊಡಗುತ್ತದೆ. ಅಂತಹ ಜೀವಂತ ಹಣ್ಣುಗಳು ನಮ್ಮ ಮುಖ್ಯ ಆಹಾರ. ಹಿಂದೆ ನಮ್ಮ ಋಷಿಗಳು ಆ ಆಹಾರದಲ್ಲಿಯೇ ಇದ್ದರು. ನಾವೂ ಮತ್ತೆ ಅಲ್ಲಿಗೇ ಹೋಗಬೇಕು. ಮಿಕ್ಕೆಲ್ಲವೂ ಅದಕ್ಕಿಂತ ಕೆಳದರ್ಜೆಯ ಆಹಾರಗಳು. ಒಮ್ಮೆಗೇ ಜಿಗಿಯಲು ಆಗದಿರುವುದರಿಂದ ಕೊಂಚ ನಿಧಾನವಾಗಿ ಪ್ರಯಾಣ ಮಾಡೋಣ. ಅದಕ್ಕೆ ಮಧ್ಯಸ್ಥ ಆಹಾರವನ್ನು ಮೆಟ್ಟಲಾಗಿ ಮಾಡಿಕೊಂಡು ಅಸಹಜತೆಯನ್ನು ಬಿಟ್ಟು ಸಹಜತೆಯ ಕಡೆಗೆ ನಮ್ಮ ಪಯಣ. ಸಧೃಡ ಶರೀರವಿಲ್ಲದೆ ಯಾವ ಸಾಧನೆಯೂ ಸಾಧ್ಯವಿಲ್ಲ.
ನೈಸರ್ಗಿಕ ಆಹಾರದಿಂದ ದೇಹ ಸಧೃಡ, ರೋಗಕೆ ಕಾರಣ ಬರೀ ಚಪಲವೋ ಮೂಢ !
ನಾರಿನಿಂದ ಆರೋಗ್ಯಭಾಗ್ಯ
ಹೂವಿನಿಂದ ನಾರು ಸೇರುವುದು ಸ್ವರ್ಗ
ಆಹಾರದಲಿ ನಾರಿಲ್ಲದಿರೆ ಸ್ವರ್ಗಕೆ ಬೇಗ ಶರೀರದ ವರ್ಗ.
'ನಾರು-ಬೇರುಗಳು' ಎಂಬ ಉಪ ಅಧ್ಯಾಯದಲ್ಲಿ ವಿಜ್ನಾನದ ಅಭಿಪ್ರಾಯವನ್ನು ತಿಳಿಸಿ ಆಗಿದೆ. ನಿಸರ್ಗಜೀವನಕ್ಕೆ ಮುಂಚಿನಿಂದಲೂ ನಾರಿನ ಪಾತ್ರದ ಬಗ್ಗೆ ಅಭಿಮಾನವಿತ್ತು. ಋಷಿಗಳ ಆಹಾರವಾದ ಹಣ್ಣು-ಹಂಪಲು, ಗೆಡ್ಡೆ-ಗೆಣಸುಗಳಲ್ಲಿ ನಾರು-ಬೇರುಗಳು ಸಹಜವಾಗಿದ್ದವು. ಮುಂದೆ ಬೇಯಿಸಿದ ಆಹಾರವನ್ನು ಪ್ರಾರಂಭಮಾಡಿದಮೇಲೂ ಸಹ ಅವುಗಳು ಹೆಚ್ಚು ಹಾಳಾಗುತ್ತಿರಲಿಲ್ಲ. ತಾಂತ್ರಿಕತೆ ಬೆಳೆದಂತೆ ನಾರು-ಬೇರುಗಳು ಆಹಾರದಿಂದ ದೂರವಾಗುತ್ತಾ ಬಂದವು.
ನಾರನ್ನು ಆಹಾರದಿಂದ ತೆಗೆದಷ್ಟೂ ನಾಗರೀಕ ಜೀವನವೆಂಬ ಭ್ರಮೆ! ಸಂತೆಯಿಂದ ತಂದ ತರಕಾರಿಗಳಿಗೆ ಮೊದಲ ಮೋಕ್ಷ- 'ಚಮ್ಡಾ ನಿಕಾಲ್!'. ಕೆಲವು ಹೆಂಗಸರು ಈ ಕಲೆಯಲ್ಲಿ ಬಹಳ ನಿಪುಣರು! ಅವರ ಕೈಗೆ ಸಿಕ್ಕಿದ ಯಾವುದೇ ತರಕಾರಿಗಾದರೂ ಬಹಳ ಕಲಾತ್ಮಕವಾಗಿ ಚರ್ಮ ಸುಲಿದುಬಿಡುತ್ತಾರೆ! ಅದರಲ್ಲೂ ಮನೆಗೆ ಗೌರವಾನ್ವಿತ ಅತಿಥಿ ಬಂದರನಕ ತೀರಿತು, ಆಗ ತರಕಾರಿಗಳ ಸ್ಥಿತಿ ತುಂಬಾ ಚಿಂತಾಜನಕ. ಯಾವಾಗಲೋ ಯಾರೋ ಹಲ್ಲಿಲ್ಲದ ಅತಿಥಿ ಮನೆಗೆ ಬಂದಿರಬೇಕು. ಅವನು ಸೇಬಿನ ಹಣ್ಣನ್ನು ಸಿಪ್ಪೇ ತೆಗೆಸಿ ತಿಂದಿರಬೇಕು. ಅಂದಿನಿಂದ ಪ್ರಾರಂಭವಾಯ್ತು ನೋಡಿ ಈ ಸಿಪ್ಪೆ ಸುಲಿಯುವ ಸಂತತಿ.
ಬಣ್ಣ ಬಣ್ಣದ ಸೇಬಿನ ಸಿಪ್ಪೆ
ಸೇರುವುದೆಲ್ಲಾ ಮನೆಯಾ ತಿಪ್ಪೆ,
ಹೊಟ್ಟೇ ತಿಪ್ಪೆಗೆ ಸಿಪ್ಪೇ ತೆಗೆದಾ ಹಣ್ಣು
ಕಡೆಗೆ ತರುವುದು ಹೊಟ್ಟೆಯಾ ಹುಣ್ಣು.
ನಮ್ಮ ಜನಗಳು ಹೇಳುತ್ತಾರೆ, "ತರಕಾರಿಗಳನ್ನು ಹಸಿಯದಾಗಿಯೇ ತಿನ್ನುವುದು ಒಳ್ಳೆಯದು". "ಅದಕ್ಕಾಗಿಯೇ ನಮ್ಮ ಮಗುವಿಗೆ ಹಸಿಯ ಕ್ಯಾರಟ್ ತಿನ್ನಲು ಕೊಡುತ್ತೇನೆ." "ಯಾವಾಗ?" " ಯಾವಾಗಾದರೊಮ್ಮೆ, ತಂದಾಗ". "ಎಷ್ಟು?" "ಒಂದು ಸಣ್ಣದು." ಏನೋ ಕ್ಯಾರಟ್ ಗೆ ಸಹಾಯ ಮಾಡುವಂತೆ ಹೇಳುವ ಧ್ವನಿ!
"ಹೆಚ್ಚು ತರಕಾರಿಗಳನ್ನು ಉಪಯೋಗಿಸಿ". ತರಕಾರಿಗಳು ತುಂಬಾ ದುಬಾರಿ. ಇದು ಮೊದಲ ಅಡಚಣೆ. ದುಬಾರಿಯ ತರಕಾರಿಗಳನ್ನೇ ತಿನ್ನಿರೆಂದು ಯಾರು ಹೇಳಿದರು? ಯಾವಾಗಲೂ ಒಂದೆರಡಾದರೂ ತರಕಾರಿಗಳು ಅಗ್ಗವಾಗಿಯೇ ಇರುತ್ತವೆ. ಇಂದು ತಂದ ತರಕಾರಿಯನ್ನು ನಾಳೆ ತರುವಂತಿಲ್ಲ. ಯಜಮಾನರ ಹಾಗೂ ಮಗನ ಕಟ್ಟಪ್ಪಣೆ. ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ತರಕಾರಿ ಸೇರುವುದಿಲ್ಲ. ಸೇರುವುದಿಲ್ಲವೆಂದರೇನು? ನಾವು ಬೆಳೆಸಿಕೊಂಡ ಭಾವನೆ. ಅದನ್ನು ತಿದ್ದಿಕೊಳ್ಳಬೇಕು. ಋತುಗಳನ್ನು ಅನುಸರಿಸಿ ತರಕಾರಿಗಳು ಬರುತ್ತವೆ. ಅದನ್ನೇ ಆಗ ತರಬೇಕು. ಆ ಋತುಪೂರ್ಣ ಆ ತರಕಾರಿಯನ್ನೇ ತಿನ್ನಬೇಕು. ಆಗ ಅದು ಕಡಿಮೆ ಬೆಲೆಗೂ ಸಿಕ್ಕುತ್ತದೆ. ಹಸಿಯಾಗಿಯೇ ಉಪಯೋಗಿಸಿದರೆ ಹೆಚ್ಚು ತಿನ್ನಲು ಆಗುವುದಿಲ್ಲ. ಅದರಿಂದ ಹಣದ ಉಳಿತಾಯ.
ಹಣ್ಣು ಹಂಪಲುಗಳ ಜತೆಗೆ ಏಕದಳ-ದ್ವಿದಳ ಧಾನ್ಯಗಳನ್ನೂ ತನ್ನ ಆಹಾರದಲ್ಲಿ ಮನುಜ ಸೇರಿಸಿದ ಮೇಲೆ ಬಹುಶಃ ಮೊದಲು ಅವುಗಳನ್ನೂ ಹಸಿಯದಾಗಿಯೇ ತಿಂದಿರಬೇಕು. ಬೆಂಕಿಯ ಆಗಮನದ ನಂತರ ಹೆಚ್ಚು ಸಂಸ್ಕರಣವಿಲ್ಲದೆ ಉಪಯೋಗಿಸಿದ್ದಾನೆ. ಕಾರಣ ಸಂಸ್ಕರಣ ಮಾಡಲು ತಾಂತ್ರಿಕತೆಯ ಅರಿವಿರಲಿಲ್ಲ. ಆದ್ದರಿಂದ ಹೊಟ್ಟೆ ಹಾಳಾಗುತ್ತಿರಲಿಲ್ಲ. ಸಹಜ ನಾರು-ಬೇರುಗಳು ತೆಗೆಯಲ್ಪಡುತ್ತಿರಲಿಲ್ಲ.
ವಿಜ್ನಾನ ತಿಳಿಯದೇ ಆಹಾರ ಆಗಿತ್ತು ಅಂದು ವೈಜ್ನಾನಿಕ
ವಿಜ್ನಾನ ತಿಳಿದೂ ಇಂದು ಆಗಿದೆ ಅದು ಅವೈಜ್ನಾನಿಕ!
ಅಕ್ಕಿಯ ಪಾಡು : ಕೆಂಪು ಅಕ್ಕಿಯ ಅನ್ನ-ಮಕ್ಕಳಿಗೆ ಬಣ್ಣ ಇಷ್ಟವಿಲ್ಲ. ಮುದುಕರಿಗೆ ಜೀರ್ಣವಾಗುವುದಿಲ್ಲ.(ಮೂವತ್ತಕ್ಕೆ ಮುಪ್ಪು ಬಂದಿರುವುದಲ್ಲ!) ಮಡದಿಗೆ ಮಾಡಲು ಬರುವುದಿಲ್ಲ. ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ವಿಜ್ನಾನ ಏನು ಹೇಳುತ್ತದೆ 'ಸಮತೋಲನ ಆಹಾರ' ಅನ್ನುವ ವಿಭಾಗದಲ್ಲಿ ನೋಡಿ.
ಹೆಚ್ಚು ಪಾಲೀಶ್ ಮಾಡಿದಷ್ಟೂ ಹೆಚ್ಚು ಜೀವಸತ್ವಗಳ ನಾಶ. ಬಿಳಿಯ ಅಕ್ಕಿಯ ಬಗ್ಗೆ ನಮಗಿರುವ ಮೋಹ ಅದನ್ನು ಹೆಚ್ಚು ಹೆಚ್ಚು ಪಾಲೀಶ್ ಮಾಡಲು ಪ್ರೇರೇಪಿಸುತ್ತದೆ.
ಬಿಳಿಯ ಅಕ್ಕಿಯಿಂದ ಬಿಳಿಚಿಕೊಳ್ಳಣ್ಣ
'ಅನೀಮಿಯ' ನಿನ್ನ ಸಂಗಾತಿಯಾಗುವುದಣ್ಣ,
ಪುಸ್ತಕದಿ ಹೇಳುವಿರಿ ತಿನ್ನಿ ಕೊಟ್ಟಣದ ಅಕ್ಕಿ
ಹಿಂದೆ ದಿನವೂ ಕುಟ್ಟುತ್ತಿದ್ದಳು ಭತ್ತವನು ಲಕ್ಕಿ,
ಅಕ್ಕಿಯನು ಕುಟ್ಟುವವರು ಯಾರು ಇಂದು?
ನೀವೇ ಕುಟ್ಟಿರೆಂದು ಹೇಳಲಾಗುವುದೇ ಧೈರ್ಯ ತಂದು?
ಎರಡಕ್ಕೂ ಏನು ವ್ಯತ್ಯಾಸ? ಜೀವಸತ್ವಗಳು ಹಾಗೂ ಲವಣಗಳು, ಧಾನ್ಯಕ್ಕೂ ಅದರ ಹೊರ ಕವಚಕ್ಕೂ ಮಧ್ಯೆ ಶೇಖರವಾಗಿರುವುವು. ಧಾನ್ಯಕ್ಕೆ ಅದು ಕವಚದ ಹತ್ತಿರವಿದ್ದಷ್ಟೂ ಮೊಳಕೆಯೊಡೆಯಲು ಬೇಗ ಉಪಯೋಗಿಸಿಕೊಳ್ಳಲು ಸಹಾಯವಾಗಲೆಂದು ನಿಸರ್ಗದ ಬಯಕೆಯಿರಬಹುದು. ನಾವು ಅದನ್ನು ತೆಗೆದು ಒಗೆದುಬಿಡುತ್ತೇವೆ. ಜತೆಗೆ ಅಕ್ಕಿಯ ಮೇಲಿನ ತೌಡು, ನಾರಿನ ಕಾರ್ಯವನ್ನೂ ಎಸಗುತ್ತದೆ.
ಹಾಡು ನೀ ಹಾಡು ಅಕ್ಕಿಯಾ ಹಾಡು
ಸತ್ವವನು ಕಳಕೊಂಡ ಅದರ ಪಾಡು.
ಹೊಟ್ಟೆಯಿಂದ ಹೊರಗೆ ಹೋಗಲೂ ಆಗದು
ಒಳಗೆ ಉಳಿಯಲು ಜೀವಶಕ್ತಿ ಬಿಡದು.
ಪಾಲೀಶ್ ಅಕ್ಕಿಗೆ ಬಂದಿದೆ ಈ ನಾಯಿ ಪಾಡು
ಹಾದು, ನೀ ಹಾಡು, ಅಕ್ಕಿಯಾ ಹಾಡು.
ತಿಂದವಗಿಲ್ಲ ಇದರಿಂದ ಉಪಯೋಗ ತಂದಿಹುದು ಅನೇಕ ಹೊಸ ಬಗೆಯ ರೋಗ.
"ಕುಟ್ಟಿದ ಅಕ್ಕಿ ನಮಗೆ ಸಿಗುವುದಿಲ್ಲ." ಸರಳವಾದ ಉತ್ತರ. ಯಾರಾದರೂ ಇಂತಹ ಅಕ್ಕಿ ಬೇಕೆಂದು ಕೇಳಿದ್ದಾರೆಯೇ? ನಮಗೆ ಬೇಕು ಅನ್ನಿಸುವುದೇ ಬಿಳಿಯ ಅಕ್ಕಿ. ಅದನ್ನೇ ನಾವು ಕೇಳುತ್ತೇವೆ. ಬಿಳಿಯ ಅಕ್ಕಿಯನ್ನು ತಿನ್ನಲು ಕಾರಣ, ನೋಡಲು ಬೆಳ್ಳಗಿರುತ್ತದೆ. ಬಿಳಿ, ಮನುಷ್ಯನ ಮೋಹಕ ಬಣ್ಣ. ಅದು ಸಾರು, ಚಟ್ಣಿ, ಹುಳಿ, ಸಾಂಬಾರ್ ಇತ್ಯಾದಿಗಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಕಾರಣ ಅದಕ್ಕೆ ಸ್ವಂತಿಕೆ ಇಲ್ಲ. ಜೀರ್ಣವಾಗಲು ಸುಲಭ. ಮೂರು ತಿಂಗಳಲ್ಲಿ ಬೆಳೆ ಬರುತ್ತದೆ. ಇದರಿಂದ ರೈತನಿಗೆ ಅನುಕೂಲ. ವ್ಯಾಪಾರಿಗೂ ಇದೇ ಉತ್ತಮ. ಕೆಂಪುಭತ್ತ ಇನ್ನೂ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಕೆಂಪಕ್ಕಿಗೆ ಬೇಗ ಹುಳು ಬೀಳುತ್ತದೆ. ಕಾರಣ ತೌಡಿನಲ್ಲಿರುವ ಎಣ್ಣೆಯಿಂದ ಅದು ಸಿಹಿ. ಬಿಳಿ ಅಕ್ಕಿಗೆ ಅಷ್ಟು ಬೇಗ ಹುಳು ಬೀಳುವುದಿಲ್ಲ.
ಗೋಧಿಯಾ ಗಾನಾ : ಇನ್ನು ಗೋಧಿಯಾ ಪಾಡು. ಮಿಷನ್ ಗೆ ಹಾಕಿದ ನಂತರ ಅದನ್ನು ಚೆನ್ನಾಗಿ ಜರಡಿ ಮಾಡಿ ಹೊಟ್ಟನ್ನು ಹೊರಕ್ಕೆ ಎಸೆಯಲೇಬೇಕೆಂಬ ತೀರ್ಮಾನ ಮಾಡಿಕೊಂಡಿದೆ ಇಂದಿನ ನಾರೀ ಜಗತ್ತು. ವ್ಯಾಪಾರೀ ಬುದ್ಧಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಯಿತು. ಹೆಚ್ಚು ದಿನ ಹಾಳಾಗದಂತೆ ಈ ಹಿಟ್ಟನ್ನು ಶೇಖರಿಸಿಡುವುದು ಹೇಗೆ? ಶೇಖರಣೆಗೆ ತೊಂದರೆ ಮಾಡುವವು ಕಿಣ್ವಗಳು ಹಾಗೂ ಜೀವಸತ್ವಗಳು. ಅವುಗಳನ್ನು ಬೇರ್ಪಡಿಸಿದರೆ? ತಂತ್ರಜ್ನಾನದ ಸಹಾಯ ಇದ್ದೇ ಇದೆಯಲ್ಲ, ದ್ರೌಪದಿಯ ಗತಿ ಗೋಧಿಗೂ ಬಂತು! ಕೃಷ್ಣ ಕೊಟ್ಟ ಒಂದೊಂದೇ ಸೀರೆಯನ್ನು ದುಶ್ಶಾಸನ ಸೆಳೆದಂತೆ, ಗೋಧಿಯ ಒಂದೊಂದು ಪೊರೆಯನ್ನೂ ಬೇರ್ಪಡಿಸಲಾಯ್ತು. ಮೊದಲನೆಯ ಪೊರೆ ಕೋಳಿಗೆ, ಎರಡನೆಯ ಪೊರೆ ದನ್ನಕ್ಕೆ, ಮೂರನೆಯದು ಎಣ್ಣೆಗೆ, ಕಡೆಗೆ ಉಳಿದ ಪಿಷ್ಟ ಮಾನವನಿಗೆ!! ಹೀಗೆ ಮೈದಾ ಹಿಟ್ಟಿನ ಜನನವಾಯ್ತು. ಮುಂದೆ ಅದರ ಮಕ್ಕಳು, ಮೊಮ್ಮಕ್ಕಳು ಆದ ಬಿಳಿಯ ಬ್ರೆಡ್, ಬನ್, ಬಿಸ್ಕತ್ಗಳು ಹುಟ್ಟಿಕೊಂಡವು. ಮನೆಯಲ್ಲಿನಾ ಮುದುಕಿ ಗೊಣಗುತ್ತಲೇ ಇದ್ದಾಳೆ, ಅವುಗಳು ಮಂದ.
ಅಜ್ಜಿಯ ಗೊಣಗಾಟ ಬೇಕರಿಯ ತಿಂಡಿಗಳು ಮಂದ
ಅವಳಿಗೇನು ಗೊತ್ತು ಅವುಗಳಿಂದ ಸಿಗುವ ಆನಂದ!
ಮಂದ ಅಂದರೇನು? ಗತಿ ನಿಧಾನ. ಮಲರೂಪದಲ್ಲಿ ಹೊರಕ್ಕೆ ದೂಡಲು ಹೊಟ್ಟು ಇಲ್ಲದುದರಿಂದ ಮಲಬದ್ಧತೆ. ಮೈದಾಹಿಟ್ಟನ್ನು ಲೋಕಕ್ಕೆ ಕೊಟ್ಟ ಸಂಸ್ಕೃತಿ ಮಲಬದ್ಧತೆಯನ್ನೂ ಶಾಶ್ವತವಾಗಿ ನೀಡಿತು. ಹಾಗಾದರೆ ಈ ಮೈದಾದಿಂದ ಏನನ್ನು ತಯಾರಿಸಬಹುದು? ಸಿನೆಮಾ ಪೋಸ್ಟರ್ ಗಳನ್ನು ಗೋಡೆಗೆ ಅಂಟಿಸುವ ಗೋಂದನ್ನು ತಯಾರಿಸಬಹುದು! ಅದೊಂದಕ್ಕೇ ಅದು ಅತ್ಯುತ್ತಮ ವಸ್ತು. ಅದೇ ಕೆಲಸವನ್ನು ಅದು ಹೊಟ್ಟೆಯ ಒಳಗೂ ಮಾಡಿ, ದೊಡ್ಡಕರುಳಿನ ನೆರಿಗೆಗಳಿಗೆ ಅಂಟಿಕೊಂಡು ಅದನ್ನು ಒಂದು ಕೊಳಾಯಿಯ ಪೈಪಿನಂತೆ ಮಾಡಿಬಿಡುತ್ತದೆ. ಮಲ, ಒಂದರಿಂದ ಏಳುದಿನಗಳವರೆಗೆ ತಡೆಯಲ್ಪಡುತ್ತದೆ. ಮತ್ತೆ ಮೂರು ದಿನ ಭೇದಿ, ಕೊಳಾಯಿಯಿಂದ ನೀರು ಬರುವಂತೆ ಬರುತ್ತದೆ.
ಬಿಸ್ಕತ್, ಬಿಳಿಯ ಬ್ರೆಡ್ ಗಳ ಮಾಟ
ಅದೇ ನಾಗರೀಕನ ಇಂದಿನ ಊಟ,
ಅದರಿಂದಲೇ ಇಷ್ಟೊಂದು ರೋಗಗಳ ಕಾಟ!!
ಬೇಕರಿಯ ತಿಂಡಿಯನು ತಿನ್ನೋಣ
'ಬಿ' ಕಾಂಪ್ಲೆಕ್ಸ್ ಮಾತ್ರೆಯನು ನುಂಗೋಣ,
ತಿನ್ನಬೇಕಾದ ಹೊಟ್ಟನ್ನು ಹೊರಕ್ಕೆ ಚೆಲ್ಲೋಣ
ಅದಕೇ ದುಡ್ಡು ಕೊಟ್ಟು ಮಾತ್ರೆಯ ರೂಪದಿ ಕೊಳ್ಳೋಣ!
ನಾವು ನಾಗರೀಕರು!
ನಮಗ್ಯಾರು ಸಮಾನರು?!
ಹಾಗಾದರೆ ಬ್ರೆಡ್ ತಿನ್ನುವುದು ತಪ್ಪೇ? ಮನುಷ್ಯ ಕಂಡುಹಿಡಿದ ಆಹಾರಗಳಲ್ಲಿ ಬ್ರೆಡ್ ಒಂದು ಉತ್ತಮ ಆಹಾರವೆನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅದು ಮೈದಾದಿಂದ ತಯಾರಿಸಿದುದಲ್ಲ. ಹೊಟ್ಟು ಸಮೇತ ಇರುವ ಗೋಧೀಹಿಟ್ಟಿನಿಂದ ತಯಾರಿಸಿದ ಕಂದು ಬ್ರೆಡ್. ಅದನ್ನು 'ಗ್ರಹಾಂಸ್' ಎಂದೂ ಕರೆಯುತ್ತಾರೆ. ಅಮೇರಿಕದ ಡಾ.ಗ್ರಹಾಂ ಇದರ ಚಿಂತಕ. ಮಲಬದ್ಧತೆಯ ನಿವಾರಣೆಗೆ ಈ ಬ್ರೆಡ್ ಅವಶ್ಯಕವೆಂದು ಅವನ ಮತ. ಬಿಳಿಯ ಬ್ರೆಡ್ ಒಬ್ಬರ ಬಾಯಿಗೆ, ಮತ್ತೊಬ್ಬರ ಗಲ್ಲಾಪೆಟ್ಟಿಗೆಗೆ ಹಿತವಾಗಿರುವುದರಿಂದ ಬ್ರೌನ್ ಬ್ರೆಡ್ ಬಜಾರಿನಿಂದ ಮಾಯ! ಬ್ರಿಟನ್ ತಾನು ಆಳಿದ ದೇಶಗಳಲ್ಲೆಲ್ಲಾ ಈ ಬಿಳಿಯ ಬ್ರೆಡ್, ಬಿಳಿಯ ಸಕ್ಕರೆಯನ್ನು ತಿನ್ನುವ ಕಲೆಯನ್ನು ಕಲಿಸಿ ಶಾಶ್ವತವಾಗಿ ರೋಗಿಗಳಾಗುವಂತೆ ಮಾಡಿತು. ಆಫ್ರಿಕಾ, ಏಷ್ಯಾದ ಅರೋಗ್ಯವಂತ ಜನಾಂಗ ಇದರ ಮೋಹಕ್ಕೆ ಬಿದ್ದು ನರಳುವಂತಾಯ್ತು.
ರಾಗಿಯ ರಾಗ : ಹಿಂದೆ ಯಾವುದಾದರೂ ಹಳ್ಳಿಗೆ ಬೆಳಿಗ್ಗೆ ನಾಲ್ಕು ಗಂಟೆಗೆ ನೀವು ಹೋಗಿದ್ದರೆ, ಪ್ರತಿಮನೆಯಲ್ಲೂ ಹಾಡುಗಳು ಕೇಳುತ್ತಿದ್ದವು. ಈಗ ಆಕಾಶವಾಣಿಯಲ್ಲಷ್ಟೇ ಅವು ಜೀವಂತವಾಗಿವೆ. ಅದೂ ಕೆಲವು ಮುದುಕಿಯರು ಬಂದು ಹಾಡುತ್ತಾರೆ. ಬಹುಶಃ ಅವರ ನಂತರ ಆ ಹಾಡುಗಳು ಅವರ ಜಾಡನ್ನೇ ಹಿಡಿಯಬಹುದು.! ಈಗ ನಿಸರ್ಗ ಚಿಕಿತ್ಸಾಲಯದಲ್ಲಿ ರಾಗಿಯನ್ನು ಬೀಸುವ ಹಗುರವಾದ ಕಲ್ಲನ್ನು ಇಟ್ಟಿರುತ್ತಾರೆ. ಅಲ್ಲಿ ಶರೀರದ ತೂಕವನ್ನು ಇಳಿಸಿಕೊಳ್ಳಲು ಬಂದಿರುವ ಹೆಂಗಸರು ರಾಗಿಯನ್ನು ಬೀಸುವ ವ್ಯಾಯಾಮ(ನಾಟಕ) ವನ್ನು ಮಾಡುತ್ತಾರೆ! ರಾಗಿಯದು ಒಂದು ಒಳ್ಳೆಯ ಗುಣ, ಹಿಟ್ಟಿನಿಂದ ಹೊಟ್ಟನ್ನು ಬೇರ್ಪಡಿಸಲಾಗುವುದಿಲ್ಲ. ಆದರೆ, ಮಿಷನ್ ಗೆ ಹಾಕಿ ಹೆಚ್ಚು ನುಣುಪು ಮಾಡುವುದರಿಂದ ಅದರ ಗುಣ ಹಾಳಾಗುತ್ತದೆ.
ಪ್ರ್ರಣಿಗಳ ಆರೋಗ್ಯದಾ ಗುಟ್ಟು
ಅವು ತಿನ್ನುವ ತಾಜಾ ಆಹಾರದ ಹೊಟ್ಟು.
ಮಾನವನ ರೋಗದ ಜೀವನ ರಟ್ಟು
ಕಾರಣ, ಮಿಷನ್ ಗೆ ಹಾಕಿದ ಹಿಟ್ಟು.
ತಿಂದು ತಿಂದು ಬರಿಯ ಬೂದಿ
ಬೇಗ ಹಿಡಿವುದು ಶರೀರ ಸ್ಮಶಾನದ ಹಾದಿ.
ಶರೀರದಲ್ಲಿ ನಾರು-ಬೇರು, ಹೊಟ್ಟು, ಇವುಗಳ ಕೆಲಸವೇನು? ಇವು ಜೀರ್ಣವಾಗುವುದಿಲ್ಲ. ದೊಡ್ಡ ಕರುಳಿನ ಕಡೆಯ ಭಾಗ ಹೆಗ್ಗರಳು(ಕೊಲೋನ್). ಇದನ್ನು ಸ್ವಚ್ಚವಾಗಿಡುವುದೇ ಇವುಗಳ ಕೆಲಸ, ಅಂದರೆ ಪೊರಕೆಯ ಕೆಲಸ. ಎಂದೋ ಒಮ್ಮೆ ಒಂದು ಚೂರು ಹಸಿಯ ತರಕಾರಿಯನ್ನಾಗಲಿ, ಹಣ್ಣನ್ನಾಗಲಿ ತಿನ್ನುವುದರಿಂದ ಯಾವುದೇ ವಿಧವಾದ ಅನುಕೂಲವೂ ಇಲ್ಲ. ಪ್ರತಿ ಆಹಾರದಲ್ಲೂ ನಾರು-ಬೇರಿನ ಅಂಶ ಇರಲೇಬೇಕು. ಅನೇಕರು ತರಕಾರಿಗಳನ್ನು ಹೆಚ್ಚು ಉಪಯೋಗಿಸುತ್ತಿದ್ದಾರೆ. ಆದರೆ ಯಾವ ರೀತಿ? ಹಿಂದೆ ತಿಳಿಸಿದಂತೆ ಅವುಗಳ ಚರ್ಮ ಸುಲಿದು, ಸಣ್ಣ ಸಣ್ಣ ಹೋಳುಗಳನ್ನಾಗಿ ಹೆಚ್ಚಿ ನೀರಿನಲ್ಲಿ ತೊಳೆದು, 'ಸಿ' ಜೀವಸತ್ವವನ್ನು ಚರಂಡಿಗೆ ಚೆಲ್ಲಿ, ಎಣ್ಣೆಯ ಒಗ್ಗರಣೆಯಲ್ಲಿ ಚೆನ್ನಾಗಿ ಹುರಿದು, ನಂತರ ಉಪ್ಪು, ಹುಳಿ, ಕಾರ ಇತ್ಯಾದಿ ಮಸಾಲೆ ಪದಾರ್ಥಗಳನ್ನು ಲೇಪಿಸಿ, ಪಲ್ಯ, ಗೊಜ್ಜು, ಸಾಂಬಾರ್.... ಇತ್ಯಾದಿ. ಇದರ ಜೊತೆಗೆ ಬಿಳಿಯ ಅಕ್ಕಿಯ ಇಡ್ಲಿ, ದೋಸೆ, ಚಿತ್ರಾನ್ನ, ಹೊಟ್ಟು ತೆಗೆದ ಹಿಟ್ಟಿನ ಚಪಾತಿ.
ಒಟ್ಟಿನಲ್ಲಿ ಇದು ಹೇಗಾಗುತ್ತದೆಂದರೆ, ಒಂದು ಮೆತ್ತನೆಯ ಪೊರಕೆಯನ್ನು ತೆಗೆದುಕೊಂಡು ನೀರಿನಲ್ಲಿ ನೆನೆಸಿ, ಎಣ್ಣೆಯಲ್ಲಿ ಅದ್ದಿ, ಮನೆಯನ್ನು ಗುಡಿಸಲು ಪ್ರಾರಂಭಿಸಿದಂತೆ! ಈ ಪೊರಕೆ ಕಸ ಗುಡಿಸಲು ಸಾಧ್ಯವೇ?! ಈಗ ನಾವು ತರಕಾರಿಗಳನ್ನು ಉಪಯೋಗಿಸುತ್ತಿರುವ ರೀತಿಯೂ ಹೀಗೆಯೇ. ಅದಕ್ಕಾಗಿಯೇ ನಿರೀಕ್ಷಿತ ಫಲ ದೊರಕುತ್ತಿಲ್ಲ. ಪ್ರತಿ ಬೇಯಿಸಿದ ಆಹಾರದ ಜೊತೆ ಅದರಷ್ಟೆ ಅಂಶದ ಹಸಿಯ ತರಕಾರಿಗಳ 'ಸಲಾಡ್' ಅವಶ್ಯಕತೆಯಿದೆ. ಬೇಯಿಸುವುದರಿಂದ ನಾರಿನ ಅಂಶವೇನು ನಾಶವಾಗುವುದಿಲ್ಲ. ಆದರೆ ಅದು ತುಂಬಾ ಮೃದುವಾಗುತ್ತದೆ. ಹೀಗೆ ಮೃದುವಾದ ನಾರು-ಬೇರು, ಹೊಟ್ಟು, ಸರಿಯಾದ ಪೊರಕೆಯ ಕೆಲಸವನ್ನು ಮಾಡಲಾರವು. ಪ್ರತಿ ಊತದಲ್ಲಿಯೂ ಅರ್ಧದಷ್ಟು ಹಸಿಯ ತರಕಾರಿಗಳ ಸಲಾಡ್ ಇದ್ದರೆ, ಅವುಗಳ ನಾರು-ಬೇರು ತಾನು ಜೀರ್ಣವಾಗದೆ, ಜೀರ್ಣಕ್ರಿಯೆಗೆ ತನ್ನಲ್ಲಿರುವ ಕಿಣ್ವಗಳ ಮುಖಾಂತರ ಸಹಾಯ ಮಾಡಿ, ಉಳಿದ ಅಂಶವು ಪೊರಕೆಯ ಕೆಲಸ ಮಾಡಿ ಕೊಳೆಯನ್ನು ಶರೀರದಿಂದ ಹೊರಕ್ಕೆ ದೂಡುತ್ತವೆ. ಮಿಲ್ಲಿಗೆ ಹಾಕುವುದರಿಂದ ಧಾನ್ಯಗಳ ಹೊಟ್ಟು ತುಂಬ ಮೃದುವಾಗಿ, ನೀರನ್ನು ಹೀರುವ ಅಂಶ ಕಡಿಮೆಯಾಗುತ್ತದೆ. ಅದು ನೈಸರ್ಗಿಕವಾಗಿದ್ದರೆ ಹೆಚ್ಚು ನೀರನ್ನು ಹೀರಿ ಉಬ್ಬುತ್ತದೆ. ಅದರ ಸಂಪರ್ಕದಿಂದ ಮಲ ಮೃದುವಾಗಿ, ಹೊರಗೆ ಹೋಗಲು ಸಹಾಯವಾಗುತ್ತದೆ. ಆದ್ದರಿಂದ ಧಾನ್ಯಗಳ ಮೇಲಿನ ಹೊಟ್ಟು, ತರಕಾರಿ, ಹಣ್ಣುಗಳ ಮೇಲಿನ ಸಿಪ್ಪೆ ಮುಂತಾದ ನಾರು-ಬೇರಿನ ಅಂಶಗಳನ್ನು ಆಹಾರವಾಗಿ ನೈಸರ್ಗಿಕವಾಗಿಯೇ ಉಪಯೋಗಿಸಿದಲ್ಲಿ, ಕ್ಯಾನ್ಸರ್, ಮೂಲವ್ಯಾಧಿ, ಸಕ್ಕರೆ ಕಾಯಿಲೆ, ಮಲಬದ್ಧತೆ, ಅಧಿಕ ಕೊಲೆಸ್ಟರಾಲ್, ಬೊಜ್ಜು, ಹೃದಯಾಘಾತ, ಎಲ್ಲವನ್ನೂ ತಪ್ಪಿಸಿಕೊಳ್ಳಬಹುದು.
*ಬೇಯಿಸಿದ ಹಾಗೂ ಹಸಿಯ ಆಹಾರ ಬೆರೆಸಬಹುದೇ? ಕೆಲವರ ಮತ ಇವೆರಡನ್ನೂ ಬೆರೆಸಬಾರದೆಂದು. ಆದರೆ ಬೇಯಿಸಿದ ಆಹಾರದೊಂದಿಗೆ ಹಸಿಯ ತರಕಾರಿಗಳ ಸಲಾಡ್ ಚೆನ್ನಾಗಿ ಹೊಂದುತ್ತದೆ. ಅನ್ನದ ತಪ್ಪಲೆಯಾಗಲಿ, ಹಿಟ್ಟು ಬೇಯಿಸಿದ ಪಾತ್ರೆಯಾಗಲಿ ತೊಳೆಯಲು ಏನು ಉಪಯೋಗಿಸುತ್ತೇವೆ? ತೆಂಗಿನ ಗುಂಜು. ಶರೀರದ ಒಳಗೆ ನಾರು-ಬೇರುಗಳು ಆ ಪಾತ್ರ ವಹಿಸುತ್ತವೆ. ಆದರೆ, ಹಣ್ಣುಗಳು ಬೆರೆಯುವುದಿಲ್ಲ.
ನೈಸರ್ಗಿಕ ನಾರು-ಬೇರು ಶರೀರಕ್ಕೆ ವರ
ಅದಿಲ್ಲದ ಆಹಾರ ತಂದಿದೆ ಆರೋಗ್ಯಕ್ಕೆ ಬರ.
"ವಿಜ್ನಾನ ತನ್ನ ವೈಜ್ನಾನಿಕ ಜ್ನಾನದ ಮೂಲಕ ಅರಿತಿರುವುದು ಮೃತ ಪ್ರಕೃತಿಯನ್ನಷ್ಟೇ; ಆತ್ಮವಿಲ್ಲದ ದೇಹದಲ್ಲಿರುವ ಭೂತವನ್ನಷ್ಟೇ"
- (ಮಸನೋಬು ಪುಕುವೋಕಾ, ಜಪಾನಿನ ಆಧುನಿಕ ಕೃಷಿಋಷಿ.)
"ನೀವು ಖರೀದಿಸುವ ವಿಟಮಿನ್ ಮಾತ್ರೆಗಳು ನಿಮಗೇನೂ ಒಳಿತನ್ನು ಮಾಡುವುದಿಲ್ಲ. ಬದಲಾಗಿ ದುಬಾರಿಯಾದ ಮೂತ್ರವನ್ನು ವಿಸರ್ಜಿಸಲು ಸಹಕಾರಿಯಾಗುತ್ತದೆ."
-(ಮೌಂಟ್ ಸಿನ್ಯಾ ಮೆಡಿಕಲ್ ಸ್ಕೂಲಿನ ಪ್ರೊ.ವಿಕ್ಟರ್ ಹರ್ಬರ್ಟ್.)
'ಎಂಥ ಅನ್ನ ತಿಂದರೆ ಅಂಥ ಬುದ್ಧಿ ಬರುತ್ತದೆ' ಎಂದು ಒಂದು ಸಂಸ್ಕೃತ ಶ್ಲೋಕ ಹೇಳುತ್ತದೆ. ತಿನ್ನುವುದರಲ್ಲಿ ಹಿಡಿತವೇ ಇಲ್ಲದ ತಿಂಡಿಪೋತ ತನ್ನ ಇಂದ್ರಿಯವಿಕಾರಗಳಿಗೆ ಅಡಿಯಾಳಾಗುತ್ತಾನೆ. ನಾಲಗೆಯನ್ನು ಬಿಗಿಹಿಡಿಯಲಾರದವನು ಉಳಿದ ಇಂದ್ರಿಯಗಳನ್ನು ಹೇಗೆ ಬಿಗಿ ಹಿಡಿಯಬಲ್ಲ? ಇದು ನಿಜವಾದರೆ, ಮನುಷ್ಯ ತನ್ನ ದೇಹಪೋಷಣೆಗೆ ಎಷ್ಟು ಬೇಕೋ ಅಷ್ಟೇ ಆಹಾರ ತೆಗೆದುಕೊಳ್ಳಬೇಕು. ಹೆಚ್ಚು ಕೂಡದು. ಆಹಾರ, ಆರೋಗ್ಯವರ್ಧಕವೂ, ಸಮಧಾತುವೂ ಆಗಿರಬೇಕು. ನಾಲಗೆ ಬಯಸಿದುದನ್ನೆಲ್ಲ ತುರುಕಲು ಈ ದೇಹವೇನು ಕಸದ ತೊಟ್ಟಿಯೇ? ಆಹಾರ ದೇಹಪೋಷಣೆಗೆ. ಮನುಷ್ಯನಿಗೆ ದೇಹವನ್ನು ಕೊಟ್ಟಿರುವುದು ಆತ್ಮಸಾಧನೆಗೆ. ಆತ್ಮ ಸಾಧನೆಯೇ ಭಗವಂತನ ಸಾಕ್ಷಾತ್ಕಾರ. ಈ ಸಾಕ್ಷಾತ್ಕಾರ ಯಾರ ಜೀವನದ ಗುರಿಯೋ ಅವರು ಇಂದ್ರಿಯಾಭಿಲಾಷೆಯ ಗುಲಾಮರಾಗುವುದಿಲ್ಲ.
ನಾರು-ಬೇರುಗಳು
ಏನು ಈ ನಾರು-ಬೇರುಗಳು ? ಕಾರ್ಬೋಹೈಡ್ರೇಟ್ ನಲ್ಲಿ ಎರಡು ವಿಧ. ಒಂದು, ದೊರಕುವ ಕಾರ್ಬೋಹೈಡ್ರೇಟ್ (ಅವೈಲಬಲ್), ಮತ್ತೊಂದು, ದೊರಕದ ಕಾರ್ಬೋಹೈಡ್ರೇಟ್(ಅನ್ ಅವೈಲಬಲ್), ದೊರಕುವ ಕಾರ್ಬೋಹೈಡ್ರೇಟ್-ಶರ್ಕರ ಪಿಷ್ಟ, ನಾರು-ಬೇರುಗಳು ದೊರಕದ ಕಾರ್ಬೋಹೈಡ್ರೇಟ್ ಗಳು.
ಸಸ್ಯಗಳಲ್ಲಿನ ಜೀವಕಣತಂತುಕ(ಸೆಲ್ಯೂಲೋಸ್), ಅರೆಜೀವಕಣತಂತುಕ(ಹೆಮಿಸೆಲ್ಯೂಲೋಸ್), ಹಣ್ಣಂಟು(ಪೆಕ್ಟಿನ್), ಸಸ್ಯಗೋಂದು(ಪ್ಲಾಂಟ್ ಗಂ)-ಇವೆಲ್ಲಾ ಸೇರಿ ನಾರು-ಬೇರುಗಳಾಗುತ್ತವೆ.
ಇವುಗಳಲ್ಲಿ ಎರಡು ವಿಧ. ನೀರಿನಲ್ಲಿ ಕರಗುವ ನಾರು_ಬೇರುಗಳು, ನೀರಿನಲ್ಲಿ ಕರಗದ ನಾರು-ಬೇರುಗಳು, ಹುಳಿ ಹಣ್ಣುಗಳ ನಾರು, ಅಕ್ಕಿಯ ಮೇಲಿನ ಹೊಟ್ಟಿನ ಭಾಗ, ಸೇಬಿನ ನಾರು ಇತ್ಯಾದಿಗಳು ನೀರಿನಲ್ಲಿ ಕರಗುತ್ತವೆ. ಉಳಿದವು ನೀರಿನಲ್ಲಿ ಕರಗುವುದಿಲ್ಲ. ಶರೀರಕ್ಕೆ ಎರಡೂ ಬೇಕು.
ಹೆಗ್ಗರುಳಿನ ಕ್ಯಾನ್ಸರ್(ಕೊಲೋನ್ ಕ್ಯಾನ್ಸರ್), ಮೂಲವ್ಯಾಧಿ, ಸಕ್ಕರೆ ಕಾಯಿಲೆ, ಮಲಬದ್ಧತೆ, ಜಠರದ ಹುಣ್ಣು, ಅಧಿಕ ರಕ್ತದೊತ್ತಡ, ಅಪೆಂಡಿಸೈಟಿಸ್, ಅಧಿಕ ಕೊಲೆಸ್ಟ್ರಾಲ್, ಪಿತ್ತಕೋಶದಲ್ಲಿ ಕಲ್ಲು, ಬೊಜ್ಜು, ಹೃದಯಾಘಾತ - ಏನು ಇಷ್ಟೊಂದು ದೊಡ್ಡ ಕಾಯಿಗಳ ಪಟ್ಟಿ? ಏಕೆ ಈ ಪಟ್ಟಿ? - ಇವೆಲ್ಲಕ್ಕೂ ಒಂದೇ ಕಾರಣ, ರೋಗಿಯ ಆಹಾರದಲ್ಲಿ ನಾರು-ಬೇರುಗಳ ಅಂಶ ಕಡಿಮೆ.
ನಾರು-ಬೇರುಗಳು, ಮೇಲಿನ ಕಾಯಿಲೆಗಳಲ್ಲಿ ಹೇಗೆ ಸಹಾಯ ಮಾಡುತ್ತವೆ?
೧) ನಾರು-ಬೇರುಗಳು ದೊಡ್ಡಕರುಳಿನಲ್ಲಿನ ನೀರನ್ನು ಹೀರಿ ಮಲವು ಉಬ್ಬುವಂತೆ ಮಾಡುತ್ತವೆ. ಅದರ ಮೇಲೆ ಏಕಾಣುಜೀವಿಗಳು(ಬ್ಯಾಕ್ಟೀರಿಯಾ) ತಮ್ಮ ಕ್ರಿಯೆಯಿಂದ ಅದನ್ನು ಹಾಲಂದೀಕರಿಸಿ(ಎಮಲ್ಸಿಪ್ಫ಼ೈಡ್) ವಾಯುವನ್ನು ಬಿಡುಗಡೆ ಮಾದಿ ಮಲವನ್ನು ಮೃದು ಮಾಡುತ್ತವೆ.
೨) ದೊಡ್ಡಕರುಳಿನ ಮಲದಲ್ಲಿ ಕೆಲವು ಕ್ಯಾನ್ಸರ್ ಕಾರಕ ವಸ್ತುಗಳು ಕಂಡುಬಂದವು. ಅದಕ್ಕೆ ಕಾರಣ ದೊಡ್ಡಕರುಳಿನ ಕಡಿಮೆ ಆಮ್ಲೀಯತೆ. ಆಮ್ಲೀಯತೆ ಹೆಚ್ಚಾದಲ್ಲಿ ಈ ಕ್ಯಾನ್ಸರ್ ಕಾರಕಗಳು ಕಡಿಮೆಯಾದವು. ನಾರು-ಬೇರುಗಳ ಮೇಲಿನ ಏಕಾಣುಜೀವಿಗಳ ಕ್ರಿಯೆ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಏಕಾನುಜೀವಿಗಳು ವೃದ್ಧಿಯಾಗಲು ಸಾರಜನಕ ಬೇಕು. ಅವು ದೊಡ್ಡಕರುಳಿನಲ್ಲಿನ ಸಾರಜನಕವನ್ನು ಉಪಯೋಗಿಸಿಕೊಂಡರೆ ಅಮೋನಿಯಾ ಕಡಿಮೆಯಾಗುತ್ತದೆ. ಅಮೋನಿಯಾ ಹೆಚ್ಚಾಗಿದ್ದರೆ ಕ್ಯಾನ್ಸರ್ ಹೆಚ್ಚುತ್ತಿತ್ತು. ಹೀಗೆ ನಾರು-ಬೇರುಗಳು ಆಮ್ಲೀಯತೆಯನ್ನು ಹೆಚ್ಚಿಸಿ, ಅಮೋನಿಯಾವನ್ನು ತಗ್ಗಿಸಿ ಹೆಗ್ಗರುಳಿನ ಕ್ಯಾನ್ಸರನ್ನು ತಡೆಗಟ್ಟುತ್ತವೆ.
೩) ಹೆಗ್ಗರುಳಿನ ಸುತ್ತುಸರಿಕ ಕ್ರಿಯೆಗೆ(ಪೆರಿಸ್ಟಾಲ್ಟಿಕ್ ಮೋಷನ್) ನಾರು-ಬೇರುಗಳು ಸಹಾಯಮಾಡುತ್ತವೆ. ಇದು ಮಲಬದ್ಧತೆಯನ್ನು ಹೋಗಲಾಡಿಸುತ್ತದೆ.
೪) ನಾರು-ಬೇರುಗಳು ಸಣ್ಣಕರುಳಿನಲ್ಲಿ ಮೇದಸ್ಸನ್ನು ತಳ್ಳಿಕೊಂಡು ಹೋಗಿಬಿಡುತ್ತವೆ. ಆದ್ದರಿಂದ ರಕ್ತಕ್ಕೆ ಸೇರುವ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ. ಇದರಿಂದ ರಕ್ತದೊತ್ತಡ, ಹೃದಯಾಘಾತ, ಮುಂತಾದವು ಕಡಿಮೆಯಾಗುತ್ತವೆ.
೫) ಸಕ್ಕರೆಯು ರಕ್ತಕ್ಕೆ ಸೇರುವ ವೇಗವನ್ನು ನಾರು-ಬೇರುಗಳು ಕಡಿಮೆಮಾಡುತ್ತವೆ. ಅಲ್ಲದೆ, ಕೆಲವು ನಾರು-ಬೇರುಗಳು ಆಹಾರದ ಜಿಗುಟುತನವನ್ನು(ವಿಸ್ಕೋಸಿಟಿ) ಹೆಚ್ಚಿಸುತ್ತವೆ. ಈ ಜಿಗುಟಿನಿಂದ ಕೂಡಿದ ಆಹಾರಕ್ಕೆ ಕಡಿಮೆ ಇನ್ಸುಲಿನ್ ಸಾಕಾಗುತ್ತದೆ. ಹಣ್ಣಂಟು ಮತ್ತು ಸಸ್ಯಗೋಂದು ರಕ್ತದಲ್ಲಿನ ಗ್ಲೂಕೋಸನ್ನು ಕಡಿಮೆ ಮಾಡುತ್ತವೆ. ರಾಗಿಯಲ್ಲಿನ ಪಿಷ್ಟ, ಅಕ್ಕಿಯಲ್ಲಿನ ಪಿಷ್ಟಕ್ಕಿಂತ ನಿಧಾನವಾಗಿ ಗ್ಲೂಕೋಸ್ ಆಗುತ್ತದೆ. ಕಾರಣ ಅದರಲ್ಲಿನ ಹೊಟ್ಟು. ಅದಕ್ಕಾಗಿಯೇ ಸಕ್ಕರೆ ರೋಗಿಗಳಿಗೆ ಅಕ್ಕಿಗಿಂತ ರಾಗಿ ಉತ್ತಮವೆನಿಸುವುದು. ಈ ಕಾರಣಗಳಿಂದ ಸಕ್ಕರೆ ರೋಗದಲ್ಲಿ ನಾರು-ಬೇರುಗಳು ಸಹಾಯಮಾಡುತ್ತವೆ.
ಜೀವಕಣತಂತುಕ (ಸೆಲ್ಯೂಲೋಸ್) : ಇದು ಹಣ್ಣು, ತರಕಾರಿಗಳು, ಹೊಟ್ಟು, ಕಾಯಿಗಳಲ್ಲಿದೆ. ಇದು ನೀರಿನಲ್ಲಿ ಕರಗದ ನಾರು-ಬೇರು. ಇದು ನೀರನ್ನು ತಡೆಹಿಡಿದಿಟ್ಟುಕೊಂಡು ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತದೆ. ಏಕಾಣುಜೀವಿಯಿಂದ ಇದೇ ಮೃದುವಾಗುವುದು. ಇದು ಕರುಳಿನ ಕ್ಯಾನ್ಸರ್ ಉಂಟುಮಾಡುವ ವಿಷ ವಸ್ತುವನ್ನು ಹೊರದೂಡುತ್ತದೆ. ತೂಕವನ್ನು ಇಳಿಸುತ್ತದೆ. ಮಲಬದ್ಧತೆ ನಿವಾರಣೆಯಾಗುತ್ತದೆ.
ಹಣ್ಣಂಟು (ಪೆಕ್ಟಿನ್) : ಈ ಜಾತಿಯ ನಾರು-ಬೇರು ರಕ್ತದ ಕೊಲೆಸ್ಟರಾಲನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಹೆಗ್ಗರುಳಿನ ಏಡಿಗಂತಿ(ಕ್ಯಾನ್ಸರ್) ಮತ್ತು ಪಿತ್ತಕಲ್ಲು(ಗಾಲ್ ಸ್ಟೋನ್) ಆಗುವುದನ್ನು ತಡೆಯುತ್ತದೆ. ಇದು ಮಲ ಮೃದುವಾಗುವುದರಲ್ಲಿ ಸಹಾಯಮಾಡುವುದಿಲ್ಲ. ಆದ್ದರಿಂದ ಮಲಬದ್ಧತೆಯಲ್ಲಿ ಇದರ ಕಾರ್ಯ ಕಡಿಮೆ. ಇದು ಸೇಬು, ದ್ರಾಕ್ಷಿ, ಹುಳಿಹಣ್ಣುಗಳು, ಪಪಾಯಿ, ಸೀಬೆ, ಬಾಳೆ, ಹೊಟ್ಟು ಇವುಗಲ್ಲಿದೆ.
ಗೋಂದು ಮತ್ತು ಅಂಟು : ಡಯಾಬಿಟಿಸ್ ನಲ್ಲಿ ಸಹಾಯ ಮಾಡುತ್ತವೆ. ಹುರುಳಿ, ಓಟ್ಸ್, ತವುಡು ಇವುಗಳಲ್ಲಿವೆ.
ಲೆಗ್ನಿನ್ : ಏಕದಳ, ದ್ವಿದಳ ಧಾನ್ಯಗಳ ಹೊಟ್ಟು, ಕೋಸು, ಟೊಮೇಟೋ, ಇವುಗಳಲ್ಲಿದೆ. ಇದು ಪಿತ್ತರಸವನ್ನು ಕರುಳಿನಿಂದ ಹೊರದುಡಲು ಸಹಕರಿಸುತ್ತದೆ.
ನಾರಿರುವ ಆಹಾರಗಳು : ಕುಸುಬೆಬೀಜ, ನುಗ್ಗೇಕಾಯಿ, ಬಟಾಣಿ, ಸೋಯಾಬೀನ್, ಕಡ್ಲೇಕಾಳು, ಕರಿಬೇವು, ಮೆಂತೆಕಾಳು, ಹುಣಿಸೆ ಎಲೆ, ನೆಲ್ಲೀಕಾಯಿ, ಬೇಲದ ಹಣ್ಣು, ಅನಾನಸ್, ಸೀತಾಫಲ, ಸೀಬೆ, ದ್ರಾಕ್ಷಿ, ಕೊತ್ತಂಬರಿ, ಜೀರಿಗೆ, ಏಲಕ್ಕಿ, ಬಾರ್ಲಿ, ಜೋಳ, ರಾಗಿ, ಗೋಧಿ, ಉದ್ದಿನಕಾಳು, ತೊಗರೀಬೇಳೆ, ಹುಣಿಸೇಹಣ್ಣು, ಮೂಲಂಗಿ, ಆಲೂಗೆಡ್ಡೆ, ಗೆಣಸು, ಮಾವು, ಸೊಪ್ಪುಗಳು, ತರಕಾರಿಗಳು-ಕ್ಯಾರಟ್, ಬೀಟ್ ರೂಟ್, ಹುರುಳೀಕಾಯಿ, ಜವಳೆಕಾಯಿ ಇತ್ಯಾದಿ. ಪೂರ್ಣವಾಗಿ ನಾರಿಲ್ಲದ ಆಹಾರಗಳು : ಮಾಂಸ, ಮೀನು, ಮೊಟ್ಟೆ, ಹಾಲು, ಬೆಣ್ಣೆ, ಸಕ್ಕರೆಗಳು ಮಾತ್ರ.
೧೦೦ ಗ್ರಾಂ ಹೊಟ್ಟಿನಲ್ಲಿ ೧೦.೫ ರಿಂದ ೧೩.೫ ನಾರು-ಬೇರಿದೆ.
ಏಕದಳ ಧಾನ್ಯದ ಹೊಟ್ಟಿನಂಶ ೧.೦೦ ರಿಂದ ೨.೦೦
ದ್ವಿದಳ ಧಾನ್ಯದ ಹೊಟ್ಟಿನಂಶ ೧.೫೦ ರಿಂದ ೧.೭೦
ಕಾಯಿಗಳಲ್ಲಿ ೨.೦೦ ರಿಂದ ೫.೦೦
ತರಕಾರಿಗಳಲ್ಲಿ ೦.೫೦ ರಿಂದ ೧.೫೦ 
ಹಣ್ಣುಗಳಲ್ಲಿ ೦.೫೦ ರಿಂದ ೧.೫೦
ಒಣಗಿದ ಹಣ್ಣುಗಳಲ್ಲಿ ೧.೦೦ ರಿಂದ ೩.೦೦ 
ಒಬ್ಬರಿಗೆ ಎಷ್ಟು ನಾರು-ಬೇರು ? ಈ ಬಗ್ಗೆ ಇನ್ನೂ ಪ್ರಯೋಗಗಳು ನಡೆಯುತ್ತದಿ. ಆಫ್ರಿಕಾದ ಜನರು ದಿನಕ್ಕೆ ೧೫೦ ಗ್ರಾಂ ಗಳವರೆವಿಗೂ ತೆಗೆದುಕೊಳ್ಳುತ್ತಾರೆ. ಅವರಿಗೆ ಹೆಗ್ಗರುಳಿನ ಕ್ಯಾನ್ಸರ್ ಮುಂತಾದ ಕಾಯಿಲೆಗಳಿಲ್ಲ. ಅದೇ ಯೂರೋಪಿನ ಜನರು ದಿನಕ್ಕೆ ೨೦ ಗ್ರಾಂ ನಾರನ್ನು ಸೇವಿಸುತ್ತಾರೆ. ಇವರಲ್ಲಿ ಮೇಲಿನ ಕಾಯಿಲೆಗಳು ಹೆಚ್ಚು. ತುಂಬಾ ಹೆಚ್ಚು ನಾರಿನಂಶವನ್ನು ಸೇವಿಸಿದರೂ ತೊಂದರೆಯುಂಟಾಗುತ್ತದೆ. ಇದು ಶರೀರಕ್ಕೆ ತುಂಬಾ ಉಪಯುಕ್ತವಾದ ಖನಿಜಗಳಾದ ಕ್ಯಾಲ್ಸಿಯಂ, ರಂಜಕ, ಮೆಗ್ನೀಷಿಯಂ, ಪೊಟಾಷಿಯಂ ಗಳನ್ನು ಶ್ರೀರದಿಂದ ಹೊರಕ್ಕೆ ಹಾಕಿಬಿಡುತ್ತದೆ. ಅತಿ ಹೆಚ್ಚಾದ ನಾರಿನೀಮ್ದ ಟ್ಯಾನಿನ್, ಆಕ್ಸಲೇಟ್, ಪೈಟೇಟ್ ಎಂಬ ಅಂಶಗಳು ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಿ ಮಾಡುತ್ತವೆ.
ಹೊಟ್ಟೆಯ ಹುಣ್ಣು, ಇರ್ರ್ಟಬಲ್ ಬೋವಲ್ ಸಿಂಡ್ರೋಮ್, ಅರ್ಥವಾಗುವ ಭಾಷೆಯಲ್ಲಿ ಹೇಳುವುದಾದರೆ, ಗ್ಯಾಸ್ ಟ್ರಬಲ್ ಇರುವವರು ಹೆಚ್ಚು ನಾರು-ಬೇರುಗಳನ್ನು ಸೇವಿಸಿದರೆ ಹೆಚ್ಚು ಗ್ಯಾಸ್ ಉತ್ಪತ್ತಿಯಾಗಿ ಹೊಟ್ಟೆಯನೋವು ಜಾಸ್ತಿಯಾಗುತ್ತದೆ.
ಡಾ. ಎಚ್.ಕ್ಯುಮಿಂಗ್, ಇಂಗ್ಲೇಂಡ್ ನ ನಾರು-ಬೇರುಗಳ ತಜ್ನರ ಪ್ರಕಾರ ಆರೋಗ್ಯಕ್ಕೆ ದಿನ ಒಂದಕ್ಕೆ ೩೦ ಗ್ರಾಂ ನಾರು-ಬೇರುಗಳ ಅವಶ್ಯಕತೆ ಇದೆ.
ನಿಮ್ಮ ರಕ್ತನಾಳಗಳು
ನಿಮ್ಮ ರಕ್ತನಾಳಗಳನ್ನು ಶುಧ್ಹವಾಗಿಟ್ಟುಕೊಳ್ಳಿ. ಅಂದರೆ ನಿಮ್ಮ ದೊಡ್ಡ ಕರುಳನ್ನು ಶುದ್ಧವಾಗಿಟ್ಟುಕೊಂಡರೆ ನಿಮ್ಮ ರಕ್ತನಾಳಗಳೂ ಸಹಾ ಶುದ್ಧವಾಗಿರುತ್ತದೆ. ಇದಕ್ಕಾಗಿ ನೀವುಗಳು ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿ, ಹೊಟ್ಟಿನಿಂದ ಕೂಡಿದ ಎಲ್ಲ ತರಹದ ಧಾನ್ಯಗಳು, ಸಿಪ್ಪೆ ಸಮೇತವಾಗಿ ತಿನ್ನುವಂಥ ಹಣ್ಣುಗಳು ಮತ್ತು ಸಿಪ್ಪೆ ಸಮೇತವಾಗಿ ತಿನ್ನುವ ತರಕಾರಿಗಳನ್ನು ಊಟಮಾಡಿ. ಎಲ್ಲ ಹಣ್ಣುಗಳಲ್ಲಿರುವ ಸಿಪ್ಪೆಯಲ್ಲಿ ಹೇರಳವಾಗಿ ನಾರಿನ ಅಂಶ ಇರುತ್ತದೆ. ಕೆಲವು ತರಕಾರಿಗಳಲ್ಲಿ ಹೇರಳವಾದ ನಾರಿನ ಅಂಶವು ಇರುತ್ತದೆ. ಈ ತರಹದ ಊಟವನ್ನು ಮಾಡುವುದರಿಂದ ದೊಡ್ಡ ಕರುಳು ಶುದ್ಧವಾಗಿರುತ್ತದೆ. ಆಗ ನಿಮ್ಮ ರಕ್ತನಾಳಗಳೂ ಸಹಾ ಶುದ್ಧವಾಗಿರುತ್ತದೆ. ನಿಮ್ಮ ಹತ್ತಿರಕ್ಕೆ ಯಾವುದೇ ತರಹದ ರೋಗಗಳು ಹತ್ತಿರ ಸುಳಿಯಲಾರವು. ದೇಹ ಮತ್ತು ಮನಸ್ಸು ಸಹಾ ಶುದ್ಧವಾಗಿರುತ್ತದೆ, ಚಟುವಟಿಕೆಯಿಂದ ಕೂಡಿರುತ್ತದೆ ಮತ್ತು ಆನಂದಮಯವಾಗಿರುತ್ತದೆ.
ಹೊಟ್ಟು(ಫೈಬರ್)
ಹೊಟ್ಟು(ಫೈಬರ್)(ಭಾಗ-೧)
ಹೊಟ್ಟು ಎಂದರೆ ಭತ್ತ ಮಾತ್ರ ತೆಗೆದ ತಕ್ಷಣ ಒಳಗಡೆ ಒಂದು ಕವಚವಿರುತ್ತದೆ. ಅದೇ ಮುಖ್ಯವಾದ ಹೊಟ್ಟು. ಆ ಕವಚವನ್ನು ತೆಗೆದು ತಿಂದರೆ ನಾನಾ ರೋಗಗಳು ಉಂಟಾಗುವುವು. ಈಗ ಹಾಲಿ ಸಿಕ್ಕುತ್ತಿರುವುದೆಲ್ಲಾ ಆ ಕವಚ ತೆಗೆದಿರುವ ಅಕ್ಕಿಯೇ. ಆ ಕವಚಕ್ಕೆ ಇಂಗ್ಲೀಷಿನಲ್ಲಿ ಕರ್ನಲ್ ಎಂದೂ ಕರೆಯುತ್ತಾರೆ. ಹೊಟ್ಟು ತಿನ್ನುವವರು ೧೦೦ ರಿಂದ ೧೨೦ ವರ್ಷಗಳವರೆಗೂ ಯಾವುದೇ ರೋಗ ರುಜಿನಗಳಿಲ್ಲದೆ ಸಂತೋಷವಾಗಿ ಬಾಳಬಹುದು. ಎಲ್ಲಾ ಧಾನ್ಯಗಳಲ್ಲೂ ಹೊಟ್ಟು ಇರುತ್ತದೆ. ಹೊಟ್ಟು ದೇಹಕ್ಕೆ ಬಹಳ ಅತ್ಯಗತ್ಯ ವಸ್ತುವಾಗಿರುತ್ತದೆ. ಈ ಹೊಟ್ಟಿನಲ್ಲಿ ಬೇಕಾದಷ್ಟು ಪೌಷ್ಟಿಕಾಂಶ ಇರುತ್ತದೆ. ಹೊರಗಡೆ ಯಾವುದೇ ಔಷಧಿಗಳಲ್ಲಿ ಅಥವಾ ಲೇಹಗಳಲ್ಲಿ ಸಿಗದೇಇರುವ ಪೌಷ್ಟಿಕಾಂಶಗಳು ಈ ಹೊಟ್ಟಿನಲ್ಲಿ ಇರುತ್ತವೆ. ಕೆಂಪು ಅಕ್ಕಿಯ ಹೊಟ್ಟೇ ಅತ್ಯಂತ ಶಕ್ತಿದಾಯಕ ಮತು ತಂಪುಕಾರಕ ಗುಣವನ್ನು ಹೊಂದಿರುವಂಥಾದ್ದು. ಕೆಂಪು ಅಕ್ಕಿಯ ಹೊಟ್ಟಿನಲ್ಲಿ ರೈಸ್ ಬ್ರಾನ್ ಆಯಿಲ್ ತಯಾರುಮಾಡುತ್ತಾರೆ. ಇದಕ್ಕೆ ಹಾರ್ಟ್ ಆಯಿಲ್ ಎಂದೂ ಕರೆಯುತ್ತಾರೆ. ಇದನ್ನು ದೇಶವಿದೇಶಗಳಲ್ಲಿ ಹಾರ್ಟ್ ಅಟ್ಯಾಕ್ ಆಗದಿರಲಿ ಎಂದು ಡಾಕ್ಟರರು ಶಿಫಾರಸು ಮಾಡುತ್ತಾರೆ. ಗೋಧಿಯ ಹೊಟ್ಟು ಉಷ್ಣವನ್ನುಂಟು ಮಾಡುತ್ತದೆ. ಕೆಂಪು ಅಕ್ಕಿ ಮತ್ತು ರಾಗಿ ಮಾತ್ರ ದೇಹಕ್ಕೆ ತಂಪನ್ನು ಉಂಟುಮಾಡುತ್ತದೆ ಮತ್ತು ಇಡೀ ದಿನ ದೇಹ ಮತ್ತು ಮನಸ್ಸನ್ನು ಚುರುಕಾಗಿಟ್ಟಿರುತ್ತದೆ. ಕೆಂಪು ಅಕ್ಕಿ, ಗೋಧಿ, ರಾಗಿ ಮತ್ತು ಎಲ್ಲ ಧಾನ್ಯಗಳಲ್ಲಿ ಈ ಹೊಟ್ಟು ಬೇಕಾದಷ್ಟು ಇರುತ್ತದೆ. ನೀವು ಎಷ್ಟು ಸಲ ತಿಂಡಿ, ಊಟ ಮಾಡುತ್ತೀರೋ ಅಷ್ಟು ಸಲವೂ ಹೊಟ್ಟಿನಿಂದ ಕೂಡಿದ ಆಹಾರವನ್ನೇ ತಿನ್ನಿ. ಇದು ನಿಮ್ಮನ್ನು ೧೦೦ ಕ್ಕೆ ೧೦೦ ರಷ್ಟು ಆರೋಗ್ಯವನ್ನು ಕೊಡುತ್ತದೆ. ಇಡೀ ದಿನ ದೇಹ ಮತ್ತು ಮನಸ್ಸು ಉಲ್ಲಾಸಮಯವಾಗಿರುತ್ತದೆ. ಸ್ವಲ್ಪವೂ ಸಂಕಟವಾಗುವುದಿಲ್ಲ, ಗ್ಯಾಸ್ ಆಗುವುದಿಲ್ಲ, ಗ್ಯಾಸ್ಟ್ರ್‍ಐಟಿಸ್ ಆಗುವುದಿಲ್ಲ, ಹೊಟ್ಟೆ ಭಾರವಾಗುವುದಿಲ್ಲ, ಹೊಟ್ಟೆಯು ಮಲ್ಲಿಗೆ ಹೂವಿನಂತಿರುತ್ತದೆ, ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ ಬರುತ್ತದೆ, ಮಲಬದ್ಧತೆಯ ಸುಳಿವೇ ಇರುವುದಿಲ್ಲ, ಕರುಳಿನಲ್ಲಿ ಕಟ್ಟಿಕೊಂಡಿರುವ ಅತ್ಯಂತ ಕಟ್ಟಕಡೆ ಪಾಚಿಯೂ ಸಹ ಕೊಚ್ಚಿಕೊಂಡು ಹೊರಟುಹೋಗುತ್ತದೆ. ಮಲವಿಸರ್ಜನೆಯ ನಂತರ ಮನಸ್ಸು ಆನಂದಮಯವಾಗುತ್ತದೆ. 
ಹೊಟ್ಟು(ಬ್ರಾನ್)-ಭಾಗ-೨
ಹೊಟ್ಟು (ಬ್ರಾನ್ ಅಥವ ಕರ್ನಲ್) ಇರುವ ಕೆಂಪು ಅಕ್ಕಿ ಸಿಗದೇಇದ್ದಲ್ಲಿ ಫುಡ್ ವರ್ಲ್ಡ್ ಅಥವಾ ದೊಡ್ಡ ಡಿಪಾರ್ಟ್ ಮೆಂಟ್ ಸ್ಟೋರ್ಸ್ ಗಳಲ್ಲಿ ಸಿಗುವ ಸೀರಿಯಲ್(ಧಾನ್ಯಗಳ) ಮತ್ತು ಗೋಧಿಯ ಹೊಟ್ಟು ಸಿಗುತ್ತದೆ. ಇದನ್ನು ಪ್ರತಿದಿನದ ತಿಂಡಿ, ಊಟಗಳ ಜೊತೆಗೆ ಅಥವಾ ಊಟದ ನಂತರ ೩ ರಿಂದ ೬ ಟೀ ಚಮಚದವರೆಗೆ ನೀರಿನಲ್ಲಿ ಮಿಕ್ಸ್ ಮಾಡಿ ಕುಡಿದು ಮೇಲೆ ಒಂದು ದೊಡ್ಡ ಗ್ಲಾಸ್ ನೀರು ಕುಡಿಯಿರಿ. ಅದರ ಆನಂದವನ್ನು ಸ್ವಲ್ಪ ಹೊತ್ತಿನಮೇಲೆ ಅನುಭವಿಸಿರಿ. ಇದಲ್ಲದೆ ಜ್ಯೂಸ್, ಕುದಿಸಿದ ನೀರು, ಹಾಲು, ಮೊಸರು, ಉಪ್ಪಿಟ್ಟು, ಒಗ್ಗರಣೆ ಅವಲಕ್ಕಿ, ಚಿತ್ರಾನ್ನ, ಪಾಯಸ, ಯಾವುದೇ ರೀತಿಯ ಭಾತ್ ಗಳು, ರಾಯತ ಇತ್ಯಾದಿಗಳಿಗೆ ಮಿಕ್ಸ್ ಮಾಡಿ ಉಪಯೋಗಿಸಿ. ಹೊಟ್ಟಿಲ್ಲದೆ ಒಂದು ತುತ್ತನ್ನೂ ತಿನ್ನಬೇಡಿ. ಹೊಟ್ಟು ಜೀವರಕ್ಷಕ ಔಷಧಿಯಾಗಿರುತ್ತದೆ, ಮಲಬದ್ಧತೆಗೆ ಒಳ್ಳೇ ಪ್ರಾಕೃತಿಕ ಆಹಾರ. ನಿಮ್ಮ ದೇಹದಲ್ಲಿರುವ ಎಲ್ಲ ತರಹದ ವಿಷಪದಾರ್ಥಗಳನ್ನು ಹೊಡೆದೋಡಿಸುತ್ತದೆ. ನಿಮ್ಮ ದೇಹಕ್ಕೆ ಅತ್ಯಧಿಕ ಶಕ್ತಿಯನ್ನೂ ಸಹಾ ಕೊಡುತ್ತದೆ. ಹೊಟ್ಟುಳ್ಳ ಪದಾರ್ಥಗಳನ್ನು ಸೇವಿಸುತ್ತಿದ್ದರೆ ಯಾವುದೇ ರೋಗವಿಲ್ಲದೇ ೧೦೦ ರಿಂದ ೧೨೦ ವರ್ಷ ಬಾಳಬಹುದು. ಈಗ ನಾನಾ ರೀತಿಯ ರೋಗ ರುಜಿನಗಳಿಂದ ನರಳುತ್ತಿರುವವರೂ ಸಹಾ ಇದರ ಉಪಯೋಗ ಪಡೆದು ಆರೋಗ್ಯವನ್ನು ಸಂಪಾದಿಸಬಹುದು. ಹೊಟ್ಟು "ಅತ್ಯಾಶ್ಚರ್ಯಕರ ಆಹಾರ", ಅತ್ಯಾಶ್ಚರ್ಯಕರ ಶಕ್ತಿವರ್ಧಕ", "ಅತ್ಯಾಶ್ಚರ್ಯಕರ ಔಷಧಿ", "ಅತ್ಯಾಶ್ಚರ್ಯಕರ ಮಲವಿಸರ್ಜಕ".
ಇಂಥ ಅಮೂಲ್ಯವಾದ ಹೊಟ್ಟನ್ನು ಪ್ರಾಕೃತಿಕವಾಗಿ ’ದೇವರು’ ಸಮಸ್ತ ಜನಕೋಟಿಗೆಲ್ಲಾ ಅರ್ಪಿಸಿದ್ದಾನೆ. ಇಂಥ ಹೊಟ್ಟನ್ನು ಸೇವಿಸಿ ಅತ್ಯಾನಂದವಾದ ಆರೋಗ್ಯವನ್ನು ಪಡೆಯಿರಿ. ದೇವರು ನಿಮಗೆಲ್ಲಾ ಬೇಗ ಒಳ್ಳೆಯದನ್ನು ಮಾಡಲೆಂದು ಹಾರೈಸುತ್ತೇನೆ.
ನಿಮ್ಮ ಹೃದಯ ನಿಮಗೆ ಗೊತ್ತೇ ?
ಹೃದಯ ರೋಗ ಬಂದರಂತೂ ಅಂತಿಮ ಹಂತದಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಎಂದು ತಜ್ನ ಡಾಕ್ಟರರುಗಳು ತೀರ್ಮಾನಿಸಿಬಿಡುತ್ತಾರೆ. ವಿವಿಧ ಬಗೆಯ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಯೇ ಅಂತಿಮ ಎನ್ನುವ ಅಭಿಪ್ರಾಯವನ್ನು ರೋಗಿಗಳ ತಲೆಗೆ ತುರುಕುತ್ತಾರೆ. 
"ನೀವು ಅಸ್ಪತ್ರೆಗೆ ಬಂದಿದ್ದೇ ಅದೃಷ್ಟ, ಕಂಡಿಷನ್ ಕ್ರಿಟಿಕಲ್ ಆಗಿದೆ. ಆಪರೇಷನ್ ಮಾಡಲೇಬೇಕು" ಎಂದು ರೋಗಿ, ಮತ್ತವರ ಸಂಬಂಧಿಕರನ್ನು ಹೆದರಿಸಲಾಗುತ್ತದೆ. 
ಕೊಬ್ಬು ಒಂದೇ ದಿನ ಕಟ್ಟಿಕೊಳ್ಳುವುದಿಲ್ಲ. ಹಲವು ವರ್ಷದಲ್ಲಿ ಈ ಕ್ರಿಯೆ ನಡೆಯುತ್ತದೆ. ರಕ್ತದಲ್ಲಿ ಹೆಚ್ಚುವ ಕೊಬ್ಬಿನ ಅಂಶದಿಂದ ಬರುವ ಹೃದಯ ರೋಗವನ್ನು ಶಸ್ತ್ರಚಿಕಿತ್ಸೆಯ ಹೊರತಾಗಿಯೂ ನಿಯತ್ರಿಸಬಹುದು ಎನ್ನುತ್ತಾರೆ ದೆಹಲಿಯ ಖ್ಯಾತ ಹೃದಯ ರೋಗ ತಜ್ನ ಡಾ. ಬಿಮಲ್ ಚಜರ್. 
ಒಟ್ಟಾರೆ ಅಂಕಿ ಅಂಶಗಳ ಪ್ರಕಾರ ಹೃದಯ ರೋಗದಲ್ಲಿ ಐ. ಟಿ. ಯಂತೆ ಭಾರತವೇ ಮುಂಚೂಣಿ. ಡಾ. ಬಿಮಲ್ ಅಭಿಪ್ರಾಯ ಪಾಶ್ಚಾತ್ಯ ವೈದ್ಯ ಪದ್ಧತಿಗೆ ಅಂಟಿಕೊಂಡವರಿಗೆ ವಿಚಿತ್ರ ಎನಿಸಬಹುದು. ಆದರೆ ಇವರ ಅನುಭವದ ಮೂಸೆಯಿಂದ ಬರುವ ಮಾತು ಹಾಗೂ ಇವರ 
’ಟ್ರಾಕ್ ರೆಕಾರ್ಡ್’ ಗಮನಿಸಿದರೆ ದಾ. ಬಿಮಲ್ ಮಾತನ್ನು ಪಾಲಿಸುವುದೇ ಉತ್ತಮ ಎನಿಸುತ್ತದೆ.
ಮಾತ್ರೆಗಳನ್ನು ಕೊಡುವ ಬದಲು ರೋಗಿಗೆ ಕೊಬ್ಬು ಶೇಖರಣೆ ಕಡಿಮೆಯಾಗಲು ಜೀವನ ವಿಧಾನ ಬದಲಿಸಿ ಎಂದು ಹೇಳಿದರೆ ಅನುಕೂಲವಾಗುತ್ತದೆ. ಇದನ್ನು ಬಹುತೇಕ ಅಲೋಪಥಿ ವೈದ್ಯರು ಸೂಚಿಸುವುಧಿಲ್ಲ. ಆದ್ದರಿಂದ ಆಧುನಿಕ ಅಲೋಪಥಿ ವೈದ್ಯ ಪದ್ಧತಿಯಿಂದ ಈ ರೋಗವನ್ನು ಗುಣಪಡಿಸಲು ಸಾಧ್ಯವಾಗಲ್ಲ ಎಂದುಕೊಂಡರು. ಇದಕ್ಕೆ ಉತ್ತರ ಹುಡುಕುತ್ತಿದ್ದಾಗ ಅವರಿಗೆ ’ದಿ ಲಾನ್ಸೆಟ್’ ಎನ್ನುವ ವೈದ್ಯಕೀಯ ಪತ್ರಿಕೆಯಲ್ಲಿ ಅಮೇರಿಕದ ಟೆಕ್ಸಾಸ್ ಹೃದಯ ಕೇಂದ್ರದ ಡಾ. ಡೀನ್ ಆರ್ನಿಷ್ ಅವರ ಲೇಖನ ಗಮನ ಸೆಳೆಯಿತು. ಅವರು ಹೃದಯಕ್ಕೆ ರಕ್ತವನ್ನು ಸರಬರಾಜು ಮಾಡುವ ಕರೋನರಿ ಆರ್ಟರಿಗಳಲ್ಲಿ ಕಟ್ಟಿದ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ಬಗ್ಗೆ ತಿಳಿಸಿದ್ದರು. ಸಾಮಾನ್ಯವಾಗಿ ಅನಾವಶ್ಯವಾಗಿ ಎಣ್ಣೆ,ಬೆಣ್ಣೆ ತಿನ್ನುವ ವ್ಯಕ್ತಿಗೆ ವರ್ಷಕ್ಕೆ ಶೇ. ೨ರ ಪ್ರಮಾಣದಲ್ಲಿ ಕೊಬ್ಬು ರಕ್ತನಾಳದಲ್ಲಿ ಶೇಖರಣೆಯಾಗುತ್ತಿದೆ. ಒಬ್ಬ ವ್ಯಕ್ತಿ ಓಡಲು ಶೇ. ೩೦, ನಡೆದಾಡಲು ಶೇ. ೨೦, ಹಾಗೂ ಆರಾಮವಾಗಿ ಇರಲು ಶೇ. ೧೦ ರಷ್ಟು ರಕ್ತನಾಳ ರಕ್ತ ಚಲನೆಗೆ ತೆರೆದಿದ್ದರೆ ಸಾಕು ಎನ್ನುವುದು ಡಾ. ಬಿಮಲ್ ಅಭಿಪ್ರಾಯ. ರಕ್ತನಾಳದಲ್ಲಿ ಶೇ.೭೦ ಕ್ಕಿಂತ ಹೆಚ್ಚು ಕೊಬ್ಬು ಶೇಖರಣೆಯಾದರೆ ಹೃದಯ ತೊಂದರೆ ಕಾಣಿಸಿಕೊಳ್ಳುತ್ತದೆ.
ರಕ್ತನಾಳದಲ್ಲಿ ಶೇ. ೮೦ ರಿಂದ ೧೦೦ ರಷ್ಟು ಕೊಬ್ಬು ಶೇಖರಣೆಯಾಗಲು ೧೦ ವರ್ಷಗಳಾದರೂ ಬೇಕಾಗುತ್ತದೆ. ಆದರೆ ಕೊಬ್ಬಿನ ಮೇಲ್ಪದರ ಒಡೆದರೆ ರಕ್ತ ಹೆಪ್ಪುಗಟ್ಟಿ ಹೃಧಯಾಘಾತ ಖಂಡಿತ.
ರಕ್ತಸಂಚಾರ ಸರಾಗವಾಗಲು ಬಲೂನ್ ಆಂಜಿಯೋಪ್ಲಾಸ್ಟಿ ಹೆಚ್ಚಾಗಿದೆ. ಐದು ನಿಮಿಷದ ಚಿಕಿತ್ಸೆಗೆ ೧. ೫ ಲಕ್ಷ ರೂಪಾಯಿ ಖರ್ಚು. ಇದೇನು ಹೃದಯ ತೊಂದರೆಗೆ ಶಾಶ್ವತ ಪರಿಹಾರವಲ್ಲ ಎನ್ನುವುದು ಡಾ. ಬಿಮಲ್ ಅವರ ಅಭಿಪ್ರಾಯ. ಹೃದಯ ತೊಂದರೆಗಳಿಂದ ದೂರವಾಗಲು ಡಾ. ಬಿಮಲ್ ಹದಿನೆಂಟು ಪುಸ್ತಕಗಳನ್ನು ಹೊರತಂದಿದ್ದಾರೆ.
ಇದರಲ್ಲಿ ’ರಿವರ್ಸಲ್ ಆಫ್ ಹಾರ್ಟ್ ಡಿಸೀಸ್’, ಫ಼ುಡ್ ಫಾರ್ ರಿವರ್ಸಲ್ ಆಫ್ ಹಾರ್ಟ್ ಡಿಸೀಸ್’, ಅಡುಗೆ ಪುಸ್ತಕಗಳಾದ ’ಜೀರೋ ಆಯಿಲ್ ಕುಕ್ ಬುಕ್, ಜೀರೋ ಆಯಿಲ್ ಸ್ನಾಕ್ಸ್, ಜೀರೋ ಆಯಿಲ್ ಸ್ವೀಟ್ಸ್, ೨೦೦೧ ಡಯಟ್ ಟಿಪ್ಸ್ ಫಾರ್ ಹಾರ್ಟ್ ಡಿಸೀಸ್.
ಆಹಾರದಲ್ಲಿ ಎಣ್ಣೆ, ತುಪ್ಪ ಬಳಸಲೇಬೇಕಿಲ್ಲ. ಆರೋಗ್ಯಕ್ಕೆ ಉತ್ತಮ ಎನ್ನುವ ಎಣ್ಣೆಯೇ ಇಲ್ಲ.
ಇದೆಲ್ಲಾ ಬರೀ ಮಾರಾಟ ತಂತ್ರ. ಇದರ ಬದಲು ನೀರಲ್ಲೇ ಬೇಯಿಸಬಹುದು. ಇದರಿಂದ ಆರೋಗ್ಯ ಸುಧಾರಿಸುತ್ತದೆ. ಎಂದು ಸಲಹೆ ನೀಡುವರು.
ನಿಮ್ಮ ದೇಹದ ಚರಂಡಿಯನ್ನು ಶುದ್ಧವಾಗಿಟ್ಟುಕೊಳ್ಳಿ
ಆಸಿಡಿಟಿ, ಭಯ, ಆತಂಕ, ನರಗಳ ಶಕ್ತಿಹೀನತೆ, ಕೈ ಕಾಲುಗಳು ನಡುಗುವುದು, ವಿಪರೀತ ಕೋಪ ಬರುವುದು ಇತ್ಯಾದಿ ಬರುವುದು ಪಿತ್ತದ ಪ್ರಭಾವದಿಂದ. ಆಹಾರದಲ್ಲಿ ಕಟ್ಟುನಿಟ್ಟನ್ನು ಪಾಲಿಸಿದರೆ ಇದೆಲ್ಲದರ ತೊಂದರೆಯಿಂದ ಶಾಶ್ವತವಾಗಿ ಪರಿಹರಿಸಿಕೊಳ್ಳಬಹುದು. ಎಂದೆಂದಿಗೂ ಆನಂದದಿಂದ ಇರಬಹುದು. ನಿಮ್ಮ ದೇಹದ ಚರಂಡಿಯನ್ನು ಶುದ್ಧವಾಗಿಟ್ಟುಕೊಳ್ಳಿ.
ಮೈದಾ ಹಿಟ್ಟು - ಅತಿ ಅಪಾಯಕಾರಿ ಹಿಟ್ಟು(maida flour)
ನೀವು ಆಸಿಡಿಟಿಯನ್ನು ವಾಸಿಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈಗ ಹೇಳುತ್ತಿದ್ದೇನೆ.
ಆಸಿಡಿಟಿ ಬರಲು ಕಾರಣ ಏನೆಂದರೆ ಯಾವಾಗಲೂ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆ, ಅತಿಯಾದ ಸಿಹಿತಿಂಡಿಗಳ ಸೇವನೆ, ಅತಿಯಾದ ಕಾಫೀ ಮತ್ತು ಟೀ ಕುಡಿಯುವಿಕೆ, ಅತಿಯಾದ ಧೂಮಪಾನ ಮಾಡುವಿಕೆ, ಮೈದಾ ಹಿಟ್ಟಿನಿಂದ ಮಾಡಿದ ಪದಾರ್ಥಗಳ ಅತಿಯಾಗಿ ತಿನ್ನುವುದು, ಪಾಲೀಶ್ ಮಾಡಿದ ಅಕ್ಕಿಯ ಅನ್ನವನ್ನು ಊಟಮಾಡುವುದು, ಸಕ್ಕರೆಯನ್ನು ಉಪಯೋಗಿಸುವುದು, ಇತ್ಯಾದಿ ಪದಾರ್ಥಗಳಿಂದ ಅಸಿಡಿಟಿ ಬರುವುದು. ಇದು ಎಲ್ಲಕ್ಕಿಂತಲೂ ಮಲಬದ್ಧತೆ ಮೂಲ ಕಾರಣ ಈ ರೋಗ ಬರಲು.
ನಮ್ಮ ಮತ್ತು ನಿಮ್ಮ ಮನೆಗಳಲ್ಲಿ ಚರಂಡಿ ಇದೆ ತಾನೇ? ಹಾಗೆಯೇ ನಮ್ಮ ಮತ್ತು ನಿಮ್ಮ ದೇಹದಲ್ಲೂ ಚರಂಡಿ ಇದೆ. ಮನೆಯ ಚರಂಡಿ ಶುದ್ಧವಾಗಿದ್ದರೆ ಯಾವುದೇ ಥರಹದ ದುರ್ವಾಸನೆ ಇರುವುದಿಲ್ಲಾ ತಾನೇ. ಮನೆಗಳ ಚರಂಡಿ ಚೊಕ್ಕಟವಾಗಿಟ್ಟುಕೊಳ್ಲಲು ನಮಗೆಲ್ಲಾ ಗೊತ್ತು. ಅಲ್ವೇ??? ಸಿಕ್ಕಿದ್ದೆಲ್ಲಾ ಮನೆಯ ಚರಂಡಿಯಲ್ಲಿ ಹಾಕುತ್ತಿದ್ದರೆ ಏನಾಗುತ್ತದೆ? ನೀವೇ ಯೋಚನೆ ಮಾಡಿನೋಡಿ. ಹಾಗೆಯೇ ನಮ್ಮ ದೇಹದ ಚರಂಡಿಯನ್ನು ನೋಡಿಕೊಳ್ಳಬೇಕಲ್ಲವೇ? ಅದೂ ಶುದ್ಧವಾಗಿರಬೇಕು ತಾನೇ? ಅದು ಶುದ್ಧವಾಗಿರಲು ಏನು ಮಾಡಬೇಕು? ಮನೆಯ ಚರಂಡಿಯನ್ನು ಶುದ್ಧಗೊಳಿಸಲು ಪರಕೆ ಅಥವಾ ಬ್ರಷ್ ಉಪಯೋಗಿಸುತ್ತೇವೆ, ಹೌದು ತಾನೇ? ಆದರೆ ನಮ್ಮ ಮತ್ತು ನಿಮ್ಮ ದೇಹದ ಚರಂಡಿಯನ್ನು ಪರಕೆ ಹಾಗೂ ಬ್ರಷ್ ಹಾಕಿ ಶುದ್ಧಗೊಳಿಸಲು ಆಗುತ್ತದೆಯೇ? ಯೋಚನೆ ಮಾಡಿನೋಡಿ. ಮೇಲೆ ಹೇಳಿದ ಮೈದಾ ಮತ್ತು ಇತರೆ ವಸ್ತುಗಳನ್ನು ತಿನ್ನುವುದರಿಂದ ನಮ್ಮ ದೇಹದ ಚರಂಡಿಯೊಳಗೆ ಒಂದು ತರಹದ ಪೇಸ್ಟ್ ತಯಾರಾಗಿ ಅಲ್ಲಲ್ಲೇ ಕಟ್ತಿಕೊಳ್ಳಲು ಪ್ರಾರಂಭವಾಗುತ್ತದೆ. ಇದು ಎಲ್ಲರ ೧೦ನೇ ವಯಸ್ಸಿನಿಂದ ಶುರುವಾಗುತ್ತದೆ. ನಮಗೆ ಅದು ಗೊತ್ತಾಗುವ ಹೊತ್ತಿಗೆ ಸುಮಾರು ವಯಸ್ಸಾಗಿರುತ್ತದೆ. ಆಗ ಪರದಾಡಿಕೊಂದು ಡಾಕ್ಟರ್ ಬಳಿ ಓಡಿಹೋಗುತ್ತೇವೆ. ವಾಸಿಯಾಗದೇ ಪರದಾಡುತ್ತೇವೆ. ಇದಕ್ಕೆ ಕಾರಣ ನಾವು ಸರಿಯಾದ ಆಹಾರಗಳನ್ನು ತಿನ್ನುತ್ತಿದ್ದರೆ ಈ ಅಸಿಡಿಟಿ ಅನ್ನುವ ಗೋಜೇ ಇರುವುದಿಲ್ಲ. ಈ ಅಸಿಡಿಟಿ ಇಲ್ಲದಿದ್ದರೆ ಯಾವ ರೋಗವೂ ಹತ್ತಿರ ಸುಳಿಯುವುದಿಲ್ಲ.
ಇದಕ್ಕೆ ಏನು ಮಾಡಬೇಕು?
ಮೈದಾ ಹಿಟ್ಟಿನ ವಿಷಯ ಏನೆಂದರೆ ಅದರಲ್ಲಿ ಚೆನ್ನಾಗಿರುವ ಪೇಸ್ಟನ್ನು ತಯಾರಿಸಬಹುದು. ಇದನ್ನು ವಾಲ್ ಪೇಪರ್ ನ್ನು ಅಂಟಿಸಲು ಉಪಯೋಗಿಸುತ್ತಾರೆ. ಅದು ಎಷ್ಟು ಕಷ್ಟಪಟ್ಟರೂ ಕೀಳಲು ಆಗುವುದಿಲ್ಲ. ಇದು ನಿಮಗೆ ಗೊತ್ತಾ? ಅದೇ ತರಹ ಮೈದಾ ಹಿಟ್ಟಿನಿಂದ ತಯಾರಿಸಿದ ಎಲ್ಲಾ ತಿಂಡಿಗಳು, ಇದರಿಂದ ತಯಾರಿಸಿದ ಸಿಹಿ ತಿಂಡಿಗಳು, ಇದರಿಂದ ತಯಾರಿಸಿದ ಬ್ರೆಡ್, ಬಿಸ್ಕತ್, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಮಾಡಲು ಕೆಲವುಸಲ ಮೈದಾವನ್ನು ಉಪಯೋಗಿಸುತ್ತಾರೆ.
ಈ ಮೈದಾ ಹಿಟ್ಟನ್ನು ತಿಂದವರು ಅತ್ಯಂತ ಮಲಬದ್ಧತೆಯಿಂದ ನರಳುತ್ತಾರೆ. ಆದ್ದರಿಂದ ಇನ್ನುಮೇಲೆ ಅತ್ಯಂತ ಪವಿತ್ರವಾದ ನಿಮ್ಮ ದೇಹವನ್ನು ಕಾಪಾಡಿಕೊಳ್ಳಿ. ಯಾವುದೇ ರೋಗಗಳು ಹತ್ತಿರ ಸುಳಿಯುವುದಿಲ್ಲ. ನಿಮ್ಮ ದೇಹವನ್ನು ಶುದ್ಧವಾಗಿಟ್ಟುಕೊಳ್ಳಿರಿ.
ಇದಕ್ಕೆ ನೀವುಗಳು ಹೊಟ್ಟು ಇರುವ ಪದಾರ್ಥಗಳನ್ನು ಸೇವನೆ ಮಾಡಬೇಕು. ಕೆಂಪು ಅಕ್ಕಿ ಅಂದರೆ ಪಾಲೀಶ್ ಮಾಡದ ಕೆಂಪು ಅಕ್ಕಿ ಅತ್ಯಂತ ಶ್ರೇಷ್ಠ. ಇದಕ್ಕೆ ಮುಂಡಗ ಅಕ್ಕಿ ಎಂತಲೂ, ಕಜ್ಜಾಯ ಅಕ್ಕಿ ಎಂತಲೂ ಕರೆಯುತ್ತಾರೆ. ಗೋಧಿಯನ್ನು ಹಿಟ್ಟುಮಾಡಿಸಿದಾಗ ಅದರ ಹೊಟ್ಟನ್ನು ತೆಗೆಯದೇ ಉಪಯೋಗಿಸಿ. ಅಂದರೆ ಒಂದರಿ ಆಡದೇ ಉಪಯೋಗಿಸಬೇಕು. ಎಲ್ಲಾ ಕಾಳು, ಬೇಳೆಗಳನ್ನು ಅದರ ಸಿಪ್ಪೆ ಸಮೇತವಾಗಿ ತಿನ್ನಿ. ಏಲಕ್ಕಿ ಬಾಳೆಹಣ್ಣನ್ನು ಸಿಪ್ಪೇಸಮೇತವಾಗಿ ತಿನ್ನಿ. ಮೊಳಕೆ ಬರಿಸಿದ ಕಾಳುಗಳನ್ನು ಉಪಯೋಗಿಸಿ. ಒಂದು ಪಕ್ಷ ನಿಮಗೆ ಕೆಂಪು ಅಕ್ಕಿ ಸಿಕ್ಕದೇ ಇದ್ದ ಪಕ್ಷದಲ್ಲಿ ಅಂಗಡಿಯಲ್ಲಿ "WHEAT BRAN" ಎಂಬ ಗೋಧಿಯ ಹೊಟ್ಟು ಸಿಕ್ಕುತ್ತದೆ. ಅದನ್ನು ನಿಮ್ಮ ಅಕ್ಕಿಯ ಊಟದಲ್ಲಿ ಉಪಯೋಗಿಸಿ. ಇಲ್ಲವಾದರೆ ಅದರ ಪಾಯಸವನ್ನು ಮಾಡಿ ಕುಡಿಯಿರಿ. ಸಕ್ಕರೆಯನ್ನು ನಿಮ್ಮ ನಿತ್ಯ ಜೀವನದಲ್ಲಿ ಉಪಯೋಗಿಸಬೇಡಿ. ಸಕ್ಕರೆ ಉಪಯೋಗಿಸುವುದರಿಂದ 146 ತರಹ ಖಾಯಿಲೆಗಳು ಬರುತ್ತವೆ. ಎಲ್ಲಾ ರೋಗಕ್ಕೂ ಮೂಲ ಕಾರಣ ಸಕ್ಕರೆ, ಮೈದಾ ಮತ್ತು ಪಾಲೀಶ್ ಮಾಡಿದ ಅಕ್ಕಿ. ನೆನಪಿರಲಿ.
ಮನೆ ಮದ್ದು-ಮುಂದುವರಿದದ್ದು
ಕಫ ಮತ್ತು ಕೆಮ್ಮು: ಹಸಿ ಶುಂಠಿಯರಸ ಮತ್ತು ವೀಳ್ಯೆದೆಲೆಯರಸವನ್ನು ಒಟ್ಟುಗೂಡಿಸಿ ಅದರಲ್ಲಿ ಜೇನುತುಪ್ಪವನ್ನು ಬೆರೆಸಿ ತಿನ್ನಬೇಕು.
ಶೀಘ್ರ ವಾಸಿಯಾಗುತ್ತದೆ.
ಸ್ತನದಲ್ಲಿ ಹಾಲು ತುಂಬಿಕೊಂಡು ಊದಿಕೊಂಡರೆ: ಪೂರ್ಣ ಅರಳಿದ ಹಿಡಿಮಲ್ಲಿಗೆ ಹೂಗಳನ್ನು ಎರಡೂ ಸ್ತನಗಳ ಮೇಲೆ ಇಟ್ಟು ಕಟ್ಟಬೇಕು ಅಥವಾ
ಹಸಿ ವೀಳ್ಯೆದೆಲೆ ಕಟ್ಟಿದರೂ ನಡೆಯುತ್ತದೆ.
ಅಜೀರ್ಣವಾದಾಗ: 1)-ಸ್ವಲ್ಪ ಓಮಕಾಳು(ಅಜವಾನ) ಸೇವಿಸಿ ಅಥವಾ ಅದರ ಕಷಾಯವನ್ನು ಕುಡಿಯಬೇಕು.
2)-ನೀರಿಗೆ ಒಂದು ಟೀ ಚಮಚ ನಿಂಬೆರಸ ಮತ್ತು ಒಂದು ಚಿಟಿಕೆ ಅಡುಗೆ ಸೋಡ ಬೆರೆಸಿ ಸೇವಿಸಿ.
ವಾಂತಿಯಾದಾಗ: ನಿಂಬೆಹಣ್ಣನ್ನು ಅರ್ಧ ಹೆಚ್ಚಿ ಅರ್ಧ ಹೋಳಿನಲ್ಲಿ ಸಕ್ಕರೆ ಹಾಕಿ ಕಾಯಿಸಿ ಸೇವಿಸಬೇಕು.
ಗಂಟಲು ನೋವು: ಸ್ವಲ್ಪ ತಿನ್ನುವ ಸುಣ್ಣಕ್ಕೆ ಅಷ್ಟೇ ಪ್ರಮಾಣದಲ್ಲಿ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕದಡಬೇಕು. ಅದನ್ನು ಗಂಟಲಿನ ಹೊರಭಾಗಕ್ಕೆ ಚೆನ್ನಾಗಿ ಲೇಪಿಸಬೇಕು.
ಮನೆ ಮದ್ದು : ಮಲ್ಲಿಗೆ,ಕರಿಬೇವು ಮತ್ತು ಕೊತ್ತಂಬರಿ
[IST]
ಕರಿಬೇವು :
ಅಡುಗೆಯಲ್ಲಿ ಒಗ್ಗರಣೆ ಕೊಡುವಾಗ ಕರಿಬೇವಿನ ಎಲೆ ಇಲ್ಲದಿದ್ದರೆ ಅದು ಅಪೂರ್ಣವೆನ್ನಿಸುವುದು. ಕರಿಬೇವಿನ ಸೊಪ್ಪು ಗಂಧ-ರುಚಿಗಾಗಿ ಅಷ್ಟೇ ಅಲ್ಲ, ಆರೋಗ್ಯಕ್ಕೂ ಹಿತಕರ.
ಕರಿಬೇವಿನ ತವರು ಹಿಮಾಲಯ ಪ್ರದೇಶ. ಇದು ಎಲ್ಲೆಡೆ ಬೆಳೆಯುತ್ತದೆ. ಸಾರು, ಹುಳಿ, ಮಜ್ಜಿಗೆ, ಪಲ್ಯ, ಉಪಮಾ- ಇವಕ್ಕೆಲ್ಲ ಕರಿಬೇವಿನ ಕಂಪು ಬೇಕೇಬೇಕು. ಇದು ರುಚಿ-ಗಂಧ ಒದಗಿಸುವುದರ ಜೊತೆಗೆ ದೇಹದಲ್ಲಿರುವ ಸಕ್ಕರೆಯನ್ನೂ ಅಂಕೆಯಲ್ಲಿಡುತ್ತದೆ, ಅಲ್ಲದೆ ಅಜೀರ್ಣ, ಭೇದಿ, ಮಲಬದ್ಧತೆ, ಯಕೃತ್ ದೋಷಾದಿಗಳನ್ನು ಪರಿಹರಿಸಲು ವಿರಳ ಔಷಧಿಯಾಗಿದೆ. ಇದರಲ್ಲಿ ಅಸಂಖ್ಯ ರಾಸಾಯನಿಕ ದ್ರವ್ಯಗಳಿವೆ.
ಕರಿಬೇವಿನ ಎಲೆಯಲ್ಲಿರುವ ತೈಲಾಂಶವನ್ನು ಬೇರ್ಪಡಿಸಿದರೆ ಅದು ದಟ್ಟ ವಾಸನೆಯ ಎಣ್ಣೆ. ಇದನ್ನು ಸಾಬೂನು ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕರಿಬೇವಿನ ಗಿಡದ ಎಲೆ, ಬೇರು, ತೊಗಟೆ, ಮತ್ತು ಹಣ್ಣುಗಳು ಕೂಡ ಉಪಯುಕ್ತವಾಗಿವೆ.
ಔಷಧೀಯ ಗುಣಗಳ ಸಂಪತ್ತೇ ಕರಿಬೇವಿನಲ್ಲಿದೆ :
* ಜ್ವರದಿಂದ ಬಳಲುವಾಗ ಕರಿಬೇವಿನ ಕಷಾಯ ಸೇವಿಸಿದರೆ ದಾಹ, ಉಷ್ಣತೆ ಕಡಿಮೆಯಾಗುತ್ತದೆ.
* ಬೊಜ್ಜು ಕರಗಿಸಬೇಕೆನ್ನುವವರಿಗೆ ಸುಲಭೋಪಾಯ- ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕರಿಬೇವಿನ ಎಲೆ(10ರಿಂದ 20) ತಿನ್ನಬೇಕು.
* ಮಧುಮೇಹದಿಂದ ಬಳಲುವವರು ಪ್ರತಿದಿನ ಬೆಳಿಗ್ಗೆ 10 ಎಲೆ ತಿನ್ನಬೇಕು.
* ಮೂಲವ್ಯಾಧಿಯಿಂದ ಬಳಲುವವರು ಕರಿಬೇವಿನ ಚಿಗುರು ಎಲೆಗಳನ್ನು ಜೇನುತುಪ್ಪದಲ್ಲಿ ಅದ್ದಿ ತಿನ್ನಬೇಕು.
* ಆಮ್ಲಪಿತ್ತದಿಂದ (‘ಎಸಿಡಿಟಿ’ಯಿಂದ) ಬಳಲುವವರು ಕರಿಬೇವಿನ ಮರದ ತೊಗಟೆಯ ಒಂದು ಚಮಚೆ ಪುಡಿಯನ್ನು ನೀರಲ್ಲಿ ಬೆರೆಸಿ ಸೇವಿಸಬೇಕು.
* ಕರಿಬೇವಿನ ತಾಜಾ ಎಲೆಗಳಿಂದ ತೆಗೆದ ಶುದ್ಧ ರಸವನ್ನು ಕಣ್ಣಲ್ಲಿ ಹಾಕಿದರೆ ಕಣ್ಣಿನ ಪೊರೆಬರುವುದನ್ನು ತಡೆಯಬಹುದು.(ರಸ ತಯಾರಿಸುವಾಗ ಎಚ್ಚರ ಅವಶ್ಯ, ಸ್ವಚ್ಛತೆ ಬಹುಮುಖ್ಯ.)
* ಆಮಶಂಕೆ ಭೇದಿಯಾಗುತ್ತಿದ್ದರೆ ಕರಿಬೇವಿನ ಕಷಾಯ ಉತ್ತಮ.
* ರಕ್ತಭೇದಿಯ ಬಾಧೆ ಇದ್ದವರು ಕರಿಬೇವಿನ ಚಟ್ನಿ ತಿನ್ನಬೇಕು.
* ಕರಿಬೇವಿನ ಎಣ್ಣೆ ಬಳಸಿದರೆ ತಲೆಗೂದಲು ಉದುರುವಿಕೆ ನಿಲ್ಲುತ್ತದೆ, ಕೂದಲು ಕಪ್ಪಾಗಿ, ಸೊಂಪಾಗಿ ಬೆಳೆಯುತ್ತವೆ.
ಕರಿಬೇವಿನ ತೈಲ ತಯಾರಿಸುವ ವಿಧಾನ :
ಒಂದು ಭಾಗ ಕೊಬ್ಬರಿ ಎಣ್ಣೆ ಇಲ್ಲವೆ ಎಳ್ಳೆಣ್ಣೆಗೆ ಕಾಲು ಭಾಗ ಕರಿಬೇವಿನ ರಸ ಬೆರೆಸಿ, ಒಲೆಯ ಮೇಲಿಟ್ಟು ಕಾಯಿಸಬೇಕು. ಸಣ್ಣಗಿನ ಉರಿಯ ಮೇಲೆ ನೀರಿನಂಶ ಹೋಗುವ ವರೆಗೆ ಕಾಯಿಸಬೇಕು. (ಒಂದು ಸೌಟಿನಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಟ್ಟಾಗ ಚಟ್ ಚಟ್ ಶಬ್ದ ಬಾರದಿದ್ದರೆ ತೈಲ ತಯಾರಾಗಿದೆ ಎಂದರ್ಥ.) ನಂತರ ಇಳಿಸಿ, ಆರಿಸಿ, ಶೋಧಿಸಿ ಬಾಟಲಿಯಲ್ಲಿ ತುಂಬಿಡಬೇಕು.
ಸಂಶೋಧನೆ :
ಇಲಿಗಳಮೇಲೆ ಕರಿಬೇವಿನ ಎಲೆಗಳ ಪ್ರಯೋಗ ಮಾಡಿದಾಗ ರಕ್ತದಲ್ಲಿ ಸಕ್ಕರೆಯ ಅಂಶ ಗಣನೀಯ ಪ್ರಮಾಣದಲ್ಲಿ ಇಳಿಮುಖವಾದುದು ರುಜುವಾತಾಗಿದೆ.
ಅಡಿಗೆಯಲ್ಲಿ ಕರಿಬೇವಿನ ಎಲೆಗಳನ್ನು ಯಥೇಚ್ಛ ಬಳಸಿ ಚಟ್ನಿಪುಡಿ, ಪಲ್ಯ, ಒಡೆ, ಚಿತ್ರಾನ್ನ, ಸಾರು, ಗೊಜ್ಜು, ತಂಬುಳಿ ತಯಾರಿಸುವ ವಿಧಾನ ಲೇಖಕರು ತಿಳಿಸಿದ್ದಾರೆ. ಕರಿಬೇವಿನ ಚಿತ್ರಾನ್ನ ಜ್ವರ ಬಂದು ಹೋದ ನಂತರ ಮತ್ತು ಅಜೀರ್ಣದಿಂದ ಬಳಲುವವರಿಗೆ ಸ್ವಾದಿಷ್ಟ ಆಹಾರವಾಗಿದೆ.
ಮನೆ ಮದ್ದು : ತುಳಸಿ ಮತ್ತು ಪಪ್ಪಾಯ
ಮನೆಯಂಗಳವನ್ನು ಅಲಂಕರಿಸುವ ಶ್ರೀತುಳಸಿ, ಪೂಜೆಯಲ್ಲಿ ಇರಲೇಬೇಕಾದ ತುಳಸಿ, ಧಾರ್ಮಿಕವಾಗಿ ಎಷ್ಟು ಮಹತ್ವದ್ದೋ ಅಷ್ಟೇ ಔಷಧಿಸತ್ವದಿಂದ ಕೂಡಿದ ವನಸ್ಪತಿ. ಸಂಸ್ಕೃತದಲ್ಲಿ ತುಳಸಿಗೆ ಸುರಸಾ, ಗ್ರಾಮ್ಯ, ಸುಲಭಾ, ಗೌರಿ, ಬಹುಮಂಜರಿ, ಶೂಲಘ್ನಿ, ದೇವದುಂದುಭಿ, ಪಾವನಿ, ವಿಷ್ಣುಪ್ರಿಯೆ, ದಿವ್ಯ, ಭಾರತಿ ಮುಂತಾದ ಅನೇಕ ಪರ್ಯಾಯ ನಾಮಗಳಿವೆ. 
ತುಳಸಿಗೆ ‘ಸರ್ವರೋಗ ನಿವಾರಕ’ ಎಂಬ ಬಿರುದೂ ಇದೆ. ಇದು ಪುರಾಣಪ್ರಸಿದ್ಧವಾಗಿದೆ, ಶ್ರದ್ಧೆಯ ಕೇಂದ್ರವಾಗಿದೆ. 
ತುಳಸಿಯಲ್ಲಿ ಅಮೂಲ್ಯ ರಾಸಾಯನಿಕ ಘಟಕಗಳಿವೆ. ತುಳಸಿ ಇದ್ದಲ್ಲಿ ಸೊಳ್ಳೆಗಳ ಕಾಟ ಕಡಿಮೆ. ಅನೇಕ ಬಗೆಯ ಸೂಕ್ಷ್ಮ ರೋಗಾಣುಗಳನ್ನು ಇದು ನಾಶಮಾಡುತ್ತದೆ, ಪರಿಸರವನ್ನು ಶುದ್ಧಗೊಳಿಸುತ್ತದೆ. ತುಳಸಿಯಲ್ಲಿ ಔಷಧಿಗುಣಗಳು ವಿಪುಲವಾಗಿವೆ.
ಕೆಮ್ಮುನೆಗಡಿ ಇರುವಾಗ ತುಳಸಿಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು.
ಗಂಟಲ ನೋವು ಇದ್ದಾಗ, ಸ್ವರಕಳೆದಾಗ ತುಳಸಿಯ ಎಲೆಹಾಕಿ ನೀರನ್ನು ಕುದಿಸಿ ಬಾಯಿಮುಕ್ಕಳಿಸಬೇಕು.
ಎಲ್ಲ ಬಗೆಯ ಜ್ವರದ ಪೀಡೆಗೆ ತುಳಸಿಯ ಕಷಾಯ ಪರಿಣಾಮಕಾರಿಯಾಗಿದೆ.
ಉರಿಮೂತ್ರದ ತೊಂದರೆಗೆ ತುಳಸಿಯ ರಸವನ್ನು ಹಾಲುಸಕ್ಕರೆಯೊಂದಿಗೆ ಬೆರೆಸಿ ಕುಡಿಯಬೇಕು.
ಚರ್ಮರೋಗಕ್ಕೆ (ಇಸಬು,ಗಜಕರ್ಣಕ್ಕೆ) ತುಳಸಿಯ ಎಲೆಯನ್ನು ಉಪ್ಪಿನೊಂದಿಗೆ ಬೆರೆಸಿ ಅರೆದು ಲೇಪಿಸಬೇಕು, ತುಳಸಿ ಕಷಾಯ ಕುಡಿಯಬೇಕು.
ಮಕ್ಕಳಿಗೆ ಕಫಕೂಡಿದ ಕೆಮ್ಮು ಬಂದಾಗ ತುಳಸಿಯ ದಳ ಜೇನಿನಲ್ಲಿ ಅದ್ದಿ ತಿನ್ನಿಸಬೇಕು.
ಯಕೃತ್ತಿನ(ಲಿವರ್) ತೊಂದರೆಗೆ ತುಳಸಿ ಕಷಾಯ ಉಪಶಮನಕಾರಿ.
ಕಿವಿಯ ನೋವಿಗೆ ತುಳಸಿಯ ರಸ ಕಿವಿಯಲ್ಲಿ ಹಾಕಬೇಕು. (ರಸದ ಶುದ್ಧಿಯ ಬಗ್ಗೆ ಗಮನವಿರಬೇಕು.)
ರೋಗನಿರೋಧಕ ಶಕ್ತಿ ಹೆಚ್ಚಿಸಲು ಖಾಲಿಹೊಟ್ಟೆಯಲ್ಲಿ 5ರಿಂದ 10 ತುಳಸಿಯ ದಳ ತಿನ್ನಬೇಕು.
ವಾಂತಿಭೇದಿ ಆದಾಗ ತುಳಸಿಯ ಬೀಜ ಬಳಸಬೇಕು.
ಪಪ್ಪಾಯ :
ಮನೆಯ ಅಂಗಳದಲ್ಲಿ ಬೆಳೆಯುವ ಪಪ್ಪಾಯಕ್ಕೆ ‘ಫರಂಗಿಹಣ್ಣು’ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಇದು ವಿದೇಶದಿಂದ ಬಂದದ್ದಾಗಿದೆ. ಇದರ ಮೂಲ ದಕ್ಷಿಣ ಅಮೆರಿಕಾ ಇದನ್ನು ಕಂಡುಹಿಡಿದವ ಕೋಲಂಬಸ್. ಆದಿವಾಸಿ ಜನ ಕೋಲಂಬಸ್‌ನನ್ನು ಸ್ವಾಗತಿಸಿದಾಗ ಅವನಿಗೆ ಕೊಟ್ಟ ಹೂವುಹಣ್ಣುಗಳಲ್ಲಿ ಪಪ್ಪಾಯ ಒಂದಾಗಿತ್ತು. ವಾಷಿಂಗ್‌ಟನ್ ವಿಜ್ಞಾನ ಕೇಂದ್ರದವರು ಸಾರ್ವಜನಿಕ ಹಿತದ ದೃಷ್ಟಿಯಿಂದ ಆರೋಗ್ಯರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವ ಹಣ್ಣುಗಳ ಪಟ್ಟಿ ಪ್ರಕಟಿಸಿದ್ದಾರೆ. ಅದರಲ್ಲಿ ‘ಪಪ್ಪಾಯ’ಕ್ಕೆ ಅಗ್ರಸ್ಥಾನ.
ಪಪ್ಪಾಯ ಕಾಯಿಯನ್ನು ತರಕಾರಿಯಂತೆ ಕೂಡ ಬಳಸುತ್ತಾರೆ. ಅದರ ಹಸಿರು ಸಿಪ್ಪೆ ಗೀರಿದಾಗ ಬಿಳಿಯ ಬಣ್ಣದ ರಸವೊಂದು ಸ್ರವಿಸುತ್ತದೆ. ಇದನ್ನು ಸಂಗ್ರಹಿಸಿ ಸಂಸ್ಕರಿಸಿದಾಗ ‘ಪೆಪೇನ್’ ಎಂಬ ಕಿಣ್ವ ದೊರೆಯುತ್ತದೆ. ಇದಕ್ಕೆ ದೇಶವಿದೇಶಗಳಲ್ಲಿ ಬೇಡಿಕೆ ಇದೆ. ಅನೇಕ ಔಷಧಿಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ.
ಪಪ್ಪಾಯದಲ್ಲಿಯ ಔಷಧೀಯ ಗುಣಗಳು :
ಪಪ್ಪಾಯ ಜೀರ್ಣಕಾರಿ ಶಕ್ತಿಯನ್ನು ಪಡೆದಿದೆ, ಜೀರ್ಣಾಂಗದ ಅನೇಕ ತೊಂದರೆಗಳಿಗೆ ನಿವಾರಣೆ ನೀಡುತ್ತದೆ.
ಪಪ್ಪಾಯದಲ್ಲಿ ವಿಟಮಿನ್ ‘ಎ’ ಅಧಿಕವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇರುಳುಗಣ್ಣು ದೋಷ ನಿವಾರಣೆಗೆ ಸಹಕಾರಿ.
ಮೂಲವ್ಯಾಧಿಯಿಂದ ಬಳಲುವವರಿಗೆ ಇದು ಒಳ್ಳೆಯದು.
ನರದ ದೌರ್ಬಲ್ಯ ಇರುವವರಿಗೆ, ಹೃದ್ರೋಗದಿಂದ ಬಳಲುವವರಿಗೆ ಇದು ಉತ್ತಮವಾಗಿದೆ.
ಬಾಣಂತಿಯರು ಪಪ್ಪಾಯ ಸೇವಿಸಿದರೆ ಅವರ ಎದೆಹಾಲು ವರ್ಧಿಸುವುದು. (ಗರ್ಭಿಣಿ ಸ್ತ್ರೀಯರು ಮೂರು ತಿಂಗಳ ವರೆಗೆ ಪಪ್ಪಾಯ ಸೇವಿಸಬಾರದು, ನಂತರ ಸೇವಿಸಬಹುದು.)
ಮಲಬದ್ಧತೆ ಇರುವವರು ಊಟದ ನಂತರ ಇದನ್ನು ಸೇವಿಸಬಹುದು.
ಮೊಡಮೆ ಮತ್ತು ಗುಳ್ಳೆಗಳಿಗೆ ಪಪ್ಪಾಯ ತಿರುಳನ್ನು ಲೇಪಿಸಬೇಕು.
ಕೂದಲಿನ ಆರೋಗ್ಯಕ್ಕೆ, ಹದಿನೈದು ದಿನಗಳಿಗೊಮ್ಮೆ, ಚೆನ್ನಾಗಿ ಹಣ್ಣಾಗಿರುವ ಪಪ್ಪಾಯ ಸಿಪ್ಪೆ, ತಿರುಳು, ಬೀಜ ಸಮೇತ ನುಣ್ಣಗೆ ಅರೆಯಬೇಕು. ಇದನ್ನು ತಲೆಗೆ ಲೇಪಿಸಿ ಅರ್ಧ ಗಂಟೆಯ ನಂತರ ತೊಳೆಯಬೇಕು. ಇದರಿಂದ ಕೂದಲು ಕಾಂತಿಯುಕ್ತವಾಗುತ್ತವೆ, ಆರೋಗ್ಯಕರವಾಗುತ್ತವೆ.
ಪಪ್ಪಾಯಹಣ್ಣಿನ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ. ಮಲೇಶಿಯಾದಲ್ಲಿ ನಡೆದ ಸಂಶೋಧನೆಯ ಪ್ರಕಾರ ಇದರ ಸೇವನೆಯಿಂದ ಕೊಲೆಸ್ಟ್ರಾಲ್ ಕಡಿಮೆಯಗುತ್ತದೆಯಂತೆ. ಬ್ರಾಜಿಲ್‌ನಲ್ಲಿ ನಡೆದ ಸಂಶೋಧನೆಯ ಪ್ರಕಾರ ಪಪ್ಪಾಯ ಬೀಜದಲ್ಲಿ ಗರ್ಭನಿರೋಧಕ ಗುಣ ಇದೆಯಂತೆ.
ಪಪ್ಪಾಯದಿಂದ ಬರ್ಫಿ, ಉಪ್ಪಿನಕಾಯಿ, ಜ್ಯೂಸ್, ಸೀಕರಣೆ, ಚಟ್ನಿ, ಕ್ಯಾಂಡಿ, ಜೆಲ್ಲಿ, ಟೂಟಿಫ್ರೂಟಿ, ಜಾಂ, ಸಲಾಡ್ ಮಾಡಬಹುದು. ಪಪ್ಪಾಯ ಕಾಯಿ ಹುಳಿಮಜ್ಜಿಗೆ, ಖೀರ, ಕೂಟ ಮಾಡಲು ವಿಧಾನ ತಿಳಿಸಿದ್ದಾರೆ. 
ಮನೆ ಮದ್ದು :ಹೂವುಗಳ ರಾಣಿ ಗುಲಾಬಿ – Home Medicine : Rose
ಮನೆಯಂಗಳದಲ್ಲಿ ಔಷಧಿವನಪುಸ್ತಕದ ಉಪಯುಕ್ತ ಮಾಹಿತಿಗಳು ಇಲ್ಲಿವೆ.ಗುಲಾಬಿಯ ಔಷಧೀಯ ಗುಣಗಳನ್ನು ಈ ವಾರ ಅರಿಯೋಣ.
ಗುಲಾಬಿ ಅಂದರೆ ಹೂವುಗಳಲ್ಲಿ ರಾಣಿ. ಇದರ ಪರ್ಶಿಯನ್ ಹೆಸರು ‘ಗುಲಾಬ್’, ಇದು ಕನ್ನಡದಲ್ಲಿ ಗುಲಾಬಿಯಾಯಿತು. ಸಂಸ್ಕೃತದಲ್ಲಿ ಈ ಹೂವಿನ ಹೆಸರು ‘ಶತಪರ್ಣಿ’, ‘ತರುಣಿ’ ಎಂದಿದೆ.
ಜಗತ್ತಿನ ಅತ್ಯಂತ ಪುರಾತನ ಗುಲಾಬಿ ಜರ್ಮನಿಯಲ್ಲಿ ದೊರೆಯಿತಂತೆ. ಅದಕ್ಕೆ ಸಾವಿರ ವರ್ಷ ಆಗಿರಬಹುದು. ಅಮೇರಿಕಾದ ಕೊಲೆರೊಡೊದಲ್ಲಿ ದೊರಕಿದ (‘ಫಾಸಿಲ್’)ಪಳೆಯುಳಿಕೆಯ ಪ್ರಕಾರ ಗುಲಾಬಿ ನಾಲ್ಕು ಕೋಟಿ ವರ್ಷಗಳ ಹಿಂದಿನದೆಂದು ವಿಜ್ಞಾನಿಗಳು ಹೇಳುತ್ತಾರೆ. ಮಾನವನ ಉಗಮಕ್ಕಿಂತ ಗುಲಾಬಿ ಪುರಾತನ.
ಕಮಲೋಧ್ಭವನಾದ ಬ್ರಹ್ಮನು ಕಮಲವೇ ಶ್ರೇಷ್ಠ ಹೂವೆಂದು ಬಣ್ಣಿಸುತ್ತಿರುವಾಗ ವಿಷ್ಣು ಅವನನ್ನು ವೈಕುಂಠಕ್ಕೆ ಕರೆದೊಯ್ದು ಶತಪರ್ಣಿಯನ್ನು (ಬಿಳಿಯ ಗುಲಾಬಿಯ ಪೊದೆಯನ್ನು) ತೋರಿಸಿದನಂತೆ. ನಂತರ ಗುಲಾಬಿ ಶ್ರೇಷ್ಠ ಹೂವೆಂದು ಬ್ರಹ್ಮ ಒಪ್ಪಿದನಂತೆ. ಗ್ರೀಕರ ಪ್ರೇಮದೇವತೆ ವೀನಸ್(ರತಿ) ತನ್ನ ಪ್ರಿಯಕರ ಅಡೋನಿಸ್(ಕಾಮ)ನನ್ನು ಭೇಟಿಯಾಗಲು ಆತುರದಿಂದ ಹೋಗುವಾಗ ಕಾಲಿಗೆ ಮುಳ್ಳು ಚುಚ್ಚಿದಾಗ ಸೋರಿದ ರಕ್ತದಿಂದ ಗುಲಾಬಿ ಕೆಂಪುವರ್ಣಕ್ಕೆ ತಿರುಗಿತಂತೆ. ಗ್ರೀಕ್ ವೀರ ಅಕಿಲ್ಲೇಸನ ಗುರಾಣಿಯ ಮೇಲೆ ಗುಲಾಬಿಯನ್ನು ಕೆತ್ತಿರುವದರ ವರ್ಣನೆ ಆದಿಕವಿ ಹೋಮರ್ ಬಣ್ಣಿಸಿದ್ದಾನೆ.
ಕವಿಗಳಿಗೆ ಪ್ರಿಯವಾದ ಹೂವು ಗುಲಾಬಿ. ಪ್ರೀತಿಯನ್ನು ಕೆಂಪು ಗುಲಾಬಿಗೆ ಕವಿಗಳು ಹೋಲಿಸುತ್ತಾರೆ. ಷೇಕ್ಸ್‌ಪಿಯರ್, ಕೀಟ್ಸ್, ಶೆಲ್ಲಿ, ಬ್ಲೇಕ್, ಥಾಮಸ್ ಮೂರ ಗುಲಾಬಿಯನ್ನು ಬಣ್ಣಿಸಿದ್ದಾರೆ. ಟಾಗೋರರು ಬಣ್ಣಿಸಿದ್ದಾರೆ. (ಮಹರ್ಷಿ ಶ್ರಿಅರವಿಂದರ ಪ್ರಸಿದ್ಧ ಕವನ ‘ದಿ ರೋಸ್ ಆಫ್ ಗಾಡ್’ ಬೇಂದ್ರೆ ಕನ್ನಡಿಸಿದ್ದಾರೆ.)
ಗುಲಾಬಿಯ ಅಂದಚೆಂದಕ್ಕೆ ಭೂಲೋಕದಲ್ಲಿ ಮನಸೋಲದವರಿಲ್ಲ. ಗುಲಾಬಿಯ ಜಲ, ಅತ್ತರ್, ಎಣ್ಣೆ, ಗುಲ್ಕಂದ್ ಬಹಳ ಪ್ರಸಿದ್ಧ. ಯುರೋಪಿನ ಗುಲಾಬಿಯನ್ನು ಭಾರತಕ್ಕೆ ತಂದ ಕೀರ್ತಿ ಮೊಗಲರದು. ಬಾಬರ್ ಗುಲಾಬಿಯ ವ್ಯವಸಾಯಕ್ಕೆ ಉತ್ತೇಜನ ನೀಡಿದ್ದನಂತೆ. ಗುಲಾಬಿ ಎಣ್ಣೆಗೆ ಹೊರದೇಶಗಳಲ್ಲಿ (ಅಮೇರಿಕಾ, ಫ್ರಾನ್ಸ್, ಸ್ವಿಟ್ಜರ್‌ಲ್ಯಾಂಡ್, ಮಧ್ಯಯುರೋಪ್ ದೇಶಗಳಲ್ಲಿ) ಹೆಚ್ಚಿನ ಬೇಡಿಕೆ ಇದೆ.
ಗುಲಾಬಿಯು ಅಲಂಕಾರಕ್ಕೆ, ಸೌಂದರ್ಯವರ್ಧನೆಗೆ ಮಹತ್ವದ್ದಾಗಿರುವಂತೆ ಔಷಧೀಯ ಗುಣಗಳಿಂದಾಗಿಯೂ ಮಹತ್ವದ್ದಾಗಿದೆ.
* ಮಲಬದ್ಧತೆಯಿಂದ ಬಳಲುತ್ತಿರುವವರು ಎರಡು ಚಮಚ ಗುಲಾಬಿಹೂವಿನ ರಸಕ್ಕೆ ಒಂದು ಚಮಚೆ ತುಪ್ಪ ಬೆರಸಿ ರಾತ್ರಿ ಮಲಗುವಮುನ್ನ ಸೇವಿಸಿದರೆ ಇದು ಪರಿಣಾಮಕಾರಿಯಾಗಿರುತ್ತದೆ.
* ರಕ್ತಭೇದಿ ಬಾಧೆಗೆ 10 ಗ್ರಾಂ ಗುಲಾಬಿಹೂಗಳನ್ನು ಎರಡು ಗಂಟೆಕಾಲ ನೀರಲ್ಲಿ ನೆನೆಯಿಟ್ಟು, ನುಣ್ಣಗೆ ಅರೆದು, ಅದಕ್ಕೆ ಕಲ್ಲುಸಕ್ಕರೆಪುಡಿ ಬೆರಸಿ ದಿನದಲ್ಲಿ ಎರಡು ಬಾರಿ ಸೇವಿಸಬೇಕು. ನೆಗಡಿಗೆ ಗುಲಾಬಿಚಹ ಕುಡಿಯಬೇಕು.
* ಬಾಯಿಯ ದುರ್ಗಂಧ ನಿವಾರಣೆಗೆ ಗುಲಾಬಿ(10 ಗ್ರಾಂ), ಕಲ್ಲುಸಕ್ಕರೆ(5 ಗ್ರಾಂ), ಪಚ್ಚಕರ್ಪೂರ(ಸ್ವಲ್ಪ) ಬೆರೆಸಿದ ಮಾತ್ರೆ ತಯಾರಿಸಿ, ಆಗಾಗ ಬಾಯಿಯಲ್ಲಿ ಹಾಕಿಕೊಂಡು ಚಪ್ಪರಿಸಿದರೆ ದುರ್ಗಂಧ ತೊಲಗುವದು. ಕೆಮ್ಮಿಗೂ ಇದು ಉಪಶಮನಕಾರಿ.
* ನಿದ್ರಾಹೀನತೆಗೆ ದಿಂಬಿನ ಮೇಲೆ ಗುಲಾಬಿ ಪಕಳೆಗಳನ್ನು ಹರಡಬೇಕು, ಇಲ್ಲವೆ ಗುಲಾಬಿ ಎಣ್ಣೆಯ ಕೆಲ ಹನಿ ಸಿಂಪರಿಸಬೇಕು.
* ರಕ್ತಮೂಲವ್ಯಾಧಿ, ದಾಹ, ಉರಿಮೂತ್ರ, ಗಂಟಲನೋವು, ಅಧಿಕ ರಕ್ತಸ್ರಾವ, ಬಾಯಿಹುಣ್ಣಿಗೆ ಗುಲಾಬಿಹೂವಿನ ಗುಲ್ಕಂದ ಸೇವಿಸಬೇಕು.
* ಗುಲಾಬಿ ಎಣ್ಣೆಯ ಅಭ್ಯಂಗ ಸ್ನಾನದಿಂದ ಚರ್ಮ ಕೋಮಲವಾಗುತ್ತದೆ.
* ಈ ಎಣ್ಣೆಯನ್ನು ಕಣ್ಣಿನ ಸುತ್ತಲೂ ಲೇಪಿಸಿದರೆ ಕಣ್ಣಿನ ಸುತ್ತಲೂ ಇದ್ದ ಕಪ್ಪು ತೊಲಗುತ್ತದೆ.
ಗುಲ್ಕಂದ್(ಗುಲ್ಕನ್) ತಯಾರಿಕಾ ವಿಧಾನ :
ಕಲ್ಲುಸಕ್ಕರೆ ಪುಡಿ ಅರ್ಧ ಭಾಗ, ಜೇನುತುಪ್ಪ ಅರ್ಧಭಾಗ, ಗುಲಾಬಿ ದಳಗಳು ಒಂದು ಭಾಗ ಅಥವಾ ಗುಲಾಬಿ ದಳಗಳು ಒಂದು ಭಾಗ, ಜೇನುತುಪ್ಪ ಒಂದು ಭಾಗ.
ಉತ್ತಮ ಗುಣಮಟ್ಟದ ಗುಲಾಬಿಯ ದಳಗಳನ್ನು ಆಯ್ದು, ಸ್ವಚ್ಛವಾಗಿ ತೊಳೆದು, ಒಣಗಿಸಿ, ಒಂದು ಪಿಂಗಾಣಿ ಜಾಡಿಯಲ್ಲಿ ಕಲ್ಲುಸಕ್ಕರೆ ಜೇನುತುಪ್ಪ ಹಾಕಿ ನಂತರ ಗುಲಾಬಿ ದಳಗಳನ್ನು ಹರಡಬೇಕು. ಮತ್ತೆ ಅದರ ಮೇಲೆ ಕಲ್ಲುಸಕ್ಕರೆ ಪುಡಿ, ಜೇನುತುಪ್ಪ ಹಾಕಿ ಗುಲಾಬಿ ದಳ(ಪಕಳೆ) ಹರಡಬೇಕು. ಈ ರೀತಿ ಹತ್ತು ಪದರುಗಳ ವರೆಗೆ ಹರಡಬೇಕು. ನಂತರ ಜಾಡಿಯನ್ನು ಸ್ವಚ್ಛವಾದ ಬಿಳಿಯ ಬಟ್ಟೆಯಿಂದ (ತೇವಾಂಶ ಒಳಗೆ ಹೋಗದಂತೆ ಗಟ್ಟಿಯಾಗಿ) ಮುಚ್ಚಬೇಕು. ನಂತರ ಆ ಜಾಡಿಯನ್ನು ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಬಿಸಿಲಿನಲ್ಲಿ ಇಡಬೇಕು. ಸಂಜೆಯಾದೊಡನೆ ಮನೆಯೊಳಗೆ ಇಡಬೇಕು.
ಮೇಲೆ ಹೇಳಿದಂತೆ 20ದಿನ (ಮೂರು ವಾರ) ಬಿಸಿಲಿನಲ್ಲಿ ಇಡಬೇಕು. ಆಮೇಲೆ ಬಟ್ಟೆ ತೆಗೆಯಬೇಕು. ರುಚಿಕರವಾದ ಗುಲ್ಕಂದ್ ಸಿದ್ಧವಾಗುತ್ತದೆ. ಏಲಕ್ಕಿ ಬೆರೆಸಬಹುದು. ಜೇನುತುಪ್ಪ ಮಾತ್ರ ಬಳಸಿ ತಯಾರಿಸಿದ ಗುಲಕಂದ್ ಅತ್ಯುತ್ತಮ. ಇದನ್ನು ಬಹಳ ಕಾಲ ಇಡಬಹುದು
ಧೂಮಲೀಲೆ ತಡೆಗೆ ಮನೆಮದ್ದು
ಸಿಗರೇಟು ಬೀಡಿ ಸೇದುವುದನ್ನು ಬಿಡಿ ಎಂದು ಚಟ ಅಂಟಿಸಿಕೊಂಡವರಿಗೆ ತಿಳಿಯಹೇಳುವುದು ಕಷ್ಟಸಾಧ್ಯ. ಬುದ್ದಿ ಹೇಳಿದರೆ ಕೆಲವೊಮ್ಮೆ ಮಹಾಪರಾಧವೇ ಆಗುತ್ತದೆ!ಯಾಕೆಂದರೆ, ತಂಬಾಕು ಬುದ್ದಿ ಹೇಳುವವರಿಗಿಂತ ಹೆಚ್ಚು ಬುದ್ದಿವಂತ. ಧೂಮಪಾನದ ಚಟ ದೆವ್ವ ಹಿಡಿದಹಾಗೆ. ಮಾವು ಬೇವು ನಿಂಬೆ ಸೊಪ್ಪಿಗೆ ಅದು ಬೆದರುವುದಿಲ್ಲ. ತಾನೇ ತಾನಾಗಿ ಕಾಲಿಗೆ ಬುದ್ದಿಹೇಳಿ ಹೋಗುವವವರೆಗೂ ಚಟ ಬೆಳೆಸಿಕೊಂಡವರ ಬೆನ್ನು ಹತ್ತಿದ ಬೇತಾಳನಾಗಿ ಕಾಟಕೊಡುವುದು ಶತಸ್ಸಿದ್ಧ.
ಆದರೂ ಸಹ ಧೂಮಪಾನ ಚಟವನ್ನು ಹೋಗಲಾಡಿಸಲು ಮಾರ್ಗೋಪಾಯಗಳು ಹಲವಾರಿವೆ. ಮೊದಲನೆಯದು ಆತ್ಮ ಬಲ ಅಂದರೆ ವಿಲ್ ಪವರ್, ಎರಡನೆಯದು ಔಷಧ. ಆಲೋಪತಿ, ಆಯುರ್ವೇದ, ಹೋಮಿಯೋಪತಿ ಮುಂತಾದ ಎಲ್ಲ ವೈದ್ಯಕೀಯ ಪದ್ದತಿಗಳಲ್ಲೂ ಧೂಮಪಾನ ತ್ಯಜಿಸುವುದಕ್ಕೆ ಔಷಧಗಳಿವೆ. ಔಷಧವನ್ನು ಸೇವಿಸಲು ಮನಸ್ಸಿರಬೇಕು, ಅದೇ ಮೊದಲ ಮದ್ದು.
ಇವತ್ತು ಅಂದರೆ ಜುಲೈ 13ರ ಸೋಮವಾರ ಬೆಳಗ್ಗೆ 10 ಗಂಟೆಗೆ ಜೀ ಕನ್ನಡ ಚಾನೆಲ್ಲಿನಲ್ಲಿ ಒಂದು ಆರೋಗ್ಯ ಅಂಕಣ ಪ್ರಸಾರವಾಯಿತು. ಕಾರ್ಯಕ್ರಮದ ಇವತ್ತಿನ ವಿಶೇಷ - ಧೂಮಪಾನ ಚಟ ನಿವಾರಣೆಗೆ ಮನೆ ಮದ್ದು. ಡಾ. ಆದರ್ಶ ಎಂಬುವವರು ಅವರು ಹೇಳಿದ ಔಷಧ ರೆಸಿಪಿ ವಿವರಗಳನ್ನು ನಾನು ಬರೆದುಕೊಂಡೆ. ಅದು ಹೀಗಿವೆ. ಧೂಮಪಾನ ಮಾಡುವವರು ಸ್ವತಃ ಪ್ರಯೋಗ ಮಾಡಬಹುದು. ಅಥವಾ, ಅವರ ಪರವಾಗಿ ರೋಗಿಗೆ ಅತ್ಯಂತ ಬೇಕಾದವರು ಅಂದರೆ, ಹೆಂಡತಿ, ಅಕ್ಕ, ತಂಗಿ, ಸ್ನೇಹಿತರು ಯಾರಾದರೂ ತಯಾರಿಸಬಹುದು.
ಬೇಕಾಗುವ ಪದಾರ್ಥ :
2-3 ಹಿಪ್ಪಲಿ ತುಂಡುಗಳು
1/4 ಚಮಚ ಗಸಗಸೆ
1/4 ಕಲ್ಲು ಸಕ್ಕರೆ
1/2 ಚಮಚ ಟೀಪುಡಿ
ಮಾಡುವ ವಿಧಾನ:
ಒಲೆಯ ಮೇಲಿನ ಪಾತ್ರೆಯಲ್ಲಿ ಗಸಗಸೆ ಮತ್ತು ಹಿಪ್ಪಲಿಯನ್ನು ಬಾಕಿ ಸ್ವಲ್ಪ ಬೆಚ್ಚಗೆ ಮಾಡಬೇಕು. ಆನಂತರ ಒಂದು ಲೋಟ ನೀರು ಹಾಕಿ ಕುದಿಸಬೇಕು. ಕುದಿಯುವ ನೀರಿಗೆ ಕಲ್ಲುಸಕ್ಕರೆ ಮತ್ತು ಟೀ ಪುಡಿ ಹಾಕಿ ಮತ್ತಷ್ಟು ಕುದಿಸಬೇಕು. ತಳ ಹತ್ತದಂತೆ ಸೌಟಿನಲ್ಲಿ ಕೈಯಾಡಿಸುತ್ತಿರಬೇಕು. ಈ ಕಷಾಯವನ್ನು ಸೋಸಿ ಆನಂತರ ಅದಕ್ಕೆ ಅರ್ಧ ನಿಂಬೆಹಣ್ಣಿನ ರಸ ಹಿಂಡಬೇಕು. ಈ ಕಷಾಯವನ್ನು ಬೆಳಗ್ಗೆ ಮಾಡಿ ಕುಡಿದ ಪಕ್ಷದಲ್ಲಿ ಸಿಗರೇಟು ಬೀಡಿ ಸೇದುವುದಕ್ಕೆ ಸಾಧ್ಯವೇ ಇಲ್ಲ. ತಂಬಾಕಿನ ವಾಸನೆ ಬಂದಾಕ್ಷಣ ವಾಕರಿಕೆ ಬಂದು ಸಿಗರೇಟು ಸೇದುವ ಆಸೆ ಕಮರಿಹೋಗುತ್ತದೆ.
ಎಷ್ಟೋ ಮಂದಿ ಧೂಮಪಾನ ಚಟಕ್ಕೆ ಬಲಿಯಾಗಿ ಸೇದಲಾರದೆ ಬಿಡಲಾರದೆ ನರಳುತ್ತಿರುತ್ತಾರೆ. ಅಂಥವರು ಗಟ್ಟಿ ಮನಸ್ಸು ಮಾಡಿ ಈ ಔಷಧ ಮಾಡಿ ಕುಡಿದು ಧೂಮಪಾನ ಚಟಕ್ಕೆ ಗುಡ್ ಬೈ ಹೇಳಬಹುದು. ಶ್ವಾಸಕೋಸದ ಅರ್ಬುದ ರೋಗ ಹತ್ತಿರ ಸುಳಿಯದಂತೆ ತಮ್ಮ ಆರೋಗ್ಯ ಸಂರಕ್ಷಿಸಿಕೊಳ್ಳಬಹುದು.
ಅಯ್ಯೋ ಹಲ್ಲು ನೋವು!
ಅಯ್ಯೋ ಹಲ್ಲು ನೋವು ಎಂದು ಕೆಲವರು ಮುಖ ಕಿವುಚಿಕೊಳ್ಳುವುದನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ. ಹಲ್ಲು ನೋವು ಪ್ರಾರಂಭವಾದರೆ ನೋವು ಬೇಗ ಶಮನವಾಗುವುದಿಲ್ಲ. ಬಿಸಿಯ ಅಥವಾ ತಣ್ಣಗಿನ ಪಧಾರ್ಥವನ್ನು ಸೇವಿಸುತ್ತಿದ್ದಂತೆ ನೋವು ಉಲ್ಬಣಗೊಳ್ಳುತ್ತದೆ. ಹಲ್ಲುಗಳು ಮುಂದೆ ಬಂದಂತೆ, ತಲೆ ಹಾಗೆ ಕೆನ್ನೆಯ ಪಾರ್ಶ್ವ ಭಾಗ ಒಳಗೆ ಹೋದಂತೆ ಇತ್ಯಾದಿ ಅನುಭವಗಳು ನೋವು ಕಾಣಿಸಿಕೊಂಡ ರೋಗಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. 
ಹಲ್ಲು ನೋವಿನ ಪ್ರಮಖ ಕಾರಣವೆಂದರೆ ಹಲ್ಲಿನ ಬೇರಿನ ಸೋಂಕು. ಕೆಲವೊಮ್ಮೆ ವಸಡಿನಲ್ಲಿ ಊತವೂ ಕಾಣಿಸಿಕೊಳ್ಳಬಹುದು. ಹಲ್ಲುಗಳು ಹುಳಕಾಗಿ ಕ್ರಮೇಣ ಸೋಂಕು ಹಲ್ಲಿನ ಒಳಭಾಗಕ್ಕೆ ಇಳಿಯುತ್ತದೆ. ಹಲ್ಲಿನ ಬಿಳಿಭಾಗ ಎನಾಮಲ್ ಹಾನಿಯಾದರೆ ಸೋಂಕು ಸುಲಭವಾಗಿ ಒಳಪ್ರವೇಶಿಸುತ್ತದೆ. ಆಹಾರ ಸೇವನೆಯ ನಂತರ ಬಾಯಿಯನ್ನು ಸರಿಯಾಗಿ ಸ್ವಚ್ಛಗೊಳಿಸದೆ ಇರುವುದರಿಂದ, ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳು ನಡೆಸುವ ಕ್ರಿಯೆಯಲ್ಲಿ ಆಮ್ಲೀಯ ಪಧಾರ್ಥಗಳು ಹೆಚ್ಚು ಬಿಡುಗಡೆಗೊಂಡು ಹಲ್ಲಿನ ಎನಾಮಲ್ ಮೇಲೆ ಹಾನಿಯನ್ನುಂಟು ಮಾಡುತ್ತದೆ. 
ನಿಮ್ಮ ಹಲ್ಲಿನ ಒಳಗಡೆ ಅಥವಾ ಹೊರಗಡೆ ಕಪ್ಪು ಚುಕ್ಕೆಗಳು ಕಂಡುಬಂದಿವೆಯಾ? ಹಾಗಾದರೆ ನಿಮ್ಮ ಹಲ್ಲಿಗೆ ಸೋಂಕು ತಗುಲಲು ಪ್ರಾರಂಭವಾಗಿದೆ ಎನ್ನುವುದರ ಸೂಚನೆ ಅದು. ಯಾವುದೇ ಪಧಾರ್ಥವನ್ನು ತಿಂದ ನಂತರ ಬಾಯಿಯನ್ನು ಸ್ಪಚ್ಛಗೊಳಿಸಬೇಕು. ದಿನಾಲೂ ಎರಡು ಬಾರಿ ಬ್ರೆಶ್ ಮಾಡುವುದು ಉತ್ತಮ ಹವ್ಯಾಸ. ಸಾಮಾನ್ಯ ಹಲ್ಲು ನೋವು ಕಾಣಿಸಿಕೊಂಡರೆ ಮನೆ ಮದ್ದು ತೆಗೆದುಕೊಂಡು ಶಮನ ಮಾಡಬಹುದು. ಆದರೆ ಪದೆ ಪದೆ ಹಲ್ಲು ನೋವು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. 
ಇದೀಗ ಹಲ್ಲಿನ ಒಳಭಾಗದ ಹುಳುಕುಗಳನ್ನು ತೆಗೆದು, ಸ್ವಚ್ಛಗೊಳಿಸಿ, ರೂಟ್ ಕ್ಯಾನಲ್ ಚಿಕಿತ್ಸೆ ಮಾಡಲಾಗುತ್ತದೆ. (Root canal Theraphy) ಹಲ್ಲಿಗೆ ರಕ್ಷಣಾ ಕವಚಗಳನ್ನು ಹಾಕುವ ಸೌಲಭ್ಯವೂ ಈಗ ಲಭ್ಯವಿದೆ. ಹಲ್ಲಿನ ಸಂದಿಗಳಲ್ಲಿ ಕಡ್ಡಿಯಿಂದ ತಿವಿಯುವುದು, ನೋವು ಶಮನಗೊಳಿಸಲು ಇತರೆ ಪಧಾರ್ಥಗಳನ್ನು ತುರುಕುವುದು ಅಪಾಯಕಾರಿ. ಹಲ್ಲು ನೋವು ಯಾಕೆ ಕಾಣಿಸಿಕೊಂಡಿದೆ ಎನ್ನುವುದನ್ನು ಧೃಡಪಡಿಸಿಕೊಂಡು ನಂತರ ಚಿಕಿತ್ಸೆಗೆ ಮುಂದಾಗಿ. 
ಶರೀರ ನವೆಗೆ ಇಲ್ಲಿದೆ ಪರಿಹಾರ!
ಮಲಿನ ರಕ್ತದಿಂದ ಶರೀರ ನವೆ ಪ್ರಾರಂಭವಾಗುತ್ತದೆ. ಇದೊಂದು ಚರ್ಮ ರೋಗವಾಗಿದ್ದು, ದೇಹದ ಮೇಲೆಲ್ಲಾ ತುರಿಕೆಯಿಂದಾಗಿ ಚಿಕ್ಕ ಚಿಕ್ಕ ಗುಳ್ಳೆಗಳು ಏಳುತ್ತವೆ. ನಂತರ ಈ ಗುಳ್ಳೆಗಳು ಒಡೆದು, ಶರೀರದ ತುಂಬೆಲ್ಲಾ ನವೆ ಆವರಿಸಿಕೊಳ್ಳುತ್ತದೆ. ನಂತರ ಅಸಾಧಾರಣ ಕಿರಿಕಿರಿಗೆ ಈ ರೋಗಿಗಳು ತುತ್ತಾಗುತ್ತಾರೆ. 
ನವೆಯಿಂದ ರಕ್ಷಣೆ ಪಡೆಯಲು ಸುಲಭ ಮಾರ್ಗವೆಂದರೆ ರಕ್ತವನ್ನು ಶುದ್ಧಿಯಾಗಿ ಇಟ್ಟುಕೊಳ್ಳುವುದು. ರಕ್ತವನ್ನು ಶುದ್ಧಗೊಳಿಸುವ ಸುಲಭ ಮಾರ್ಗವೆಂದರೆ ಕ್ಲುಪ್ತ ಸಮಯದಲ್ಲಿ ಮಲ ಹಾಗೂ ಮೂತ್ರ ವಿಸರ್ಜನೆಯಾಗುವಂತೆ ನೋಡಿಕೊಳ್ಳುವುದು. ಶರೀರದಿಂದ ವಿಷವಸ್ತುಗಳನ್ನು ಹೊರಚೆಲ್ಲುವಂತೆ ಹಾಗೂ ಚೆನ್ನಾಗಿ ಬೆವರು ಬರುವಂತೆ ನೋಡಿಕೊಳ್ಳಬೇಕು.
ಸಾಕಷ್ಟು ನೀರು ಕುಡಿಯುವುದು, ರೋಗಿಗಳು ಪ್ರತಿದಿನ ಎನಿಮಾ ತೆಗೆದುಕೊಳ್ಳುವುದು, ದೇಹವನ್ನು ತಣ್ಣನೆಯ ಬಟ್ಟೆಯಿಂದ ಸುತ್ತಿ ಕೆಲಕಾಲ ಕಳೆಯುವುದು ಮುಂತಾದ ಕ್ರಮಗಳಿಂದ ರಕ್ತವನ್ನು ಶುದ್ಧಿಯಾಗಿ ಇಟ್ಟುಕೊಳ್ಳಬಹುದು. ದೇಹವನ್ನು ಚೆನ್ನಾಗಿ ಬೆವರುವಂತೆ ಮಾಡಿ, ಆ ಮೂಲಕ ಕಲ್ಮಶಗಳು ಹೊರಹೋಗುವಂತೆ ನೋಡಿಕೊಳ್ಳಬಹುದು.
ಒಂದು ಕಪ್ಪು ಬಿಸಿ ನೀರು ಕುಡಿದು, ಎರಡು-ಮೂರು ಬ್ಲಾಂಕೆಟ್‌ಗಳನ್ನು ಶರೀರದ ತುಂಬಾ ಹೊದ್ದುಕೊಂಡು, ಹತ್ತರಿಂದ ಹದಿನೈದು ನಿಮಿಷ ಮಲಗಿದರೆ ದೇಹದ ಎಲ್ಲ ಭಾಗಗಳಿಂದ ಬೆವರು ಜಿನುಗುತ್ತದೆ. ವಾರಕ್ಕೆ ಎರಡು ಮೂರು ಬಾರಿ ಈ ರೀತಿ ಮಾಡಿ ನಂತರ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ನವೆ ನಿಯಂತ್ರಣಕ್ಕೆ ಬರುತ್ತದೆ. 
ನವೆಯಿದ್ದಾಗ ಉಪ್ಪಿಲ್ಲದ ಆಹಾರ ಸೇವಿಸುವುದು ಉತ್ತಮ. ಆಹಾರದಲ್ಲಿ ತರಕಾರಿ ಹಾಗೂ ಕಾಳುಗಳನ್ನು ಹೆಚ್ಚು ಸೇವಿಸಬೇಕು. ನವೆಯಿರುವ ಜಾಗಕ್ಕೆ ನಿಂಬೆರಸ ಹಾಗೂ ಕೊಬ್ಬರಿ ಎಣ್ಣೆ ಬೆರೆಸಿ ತಯಾರಿಸಿದ ಪೇಸ್ಟ್‌ನಿಂದ ಲೇಪಿಸಿದರೆ ಅದು ನವೆ ಉಂಟುಮಾಡುವ ರೋಗಾಣುಗಳನ್ನು ಕೊಲ್ಲುತ್ತದೆ. ನವೆ ಸಾಂಕ್ರಾಮಿಕ ರೋಗವಾಗಿರುವುದರಿಂದ ನವೆ ಹೊಂದಿದ ವ್ಯಕ್ತಿಯಿಂದ ಸಾಧ್ಯವಾದಷ್ಟು ಅಂತರ ಕಾಪಾಡಬೇಕು. 
ಬೊಜ್ಜು ಕರಗಿಸಬಹುದು, ಚಿಂತೆ ಬೇಡ
ಇಂದಿನ ವೇಗಪ್ರಪಂಚದಲ್ಲಿ ಅನಿಯಮಿತ ಆಹಾರ ಸೇವನೆ ಮತ್ತು ದೈಹಿಕ ವ್ಯಾಯಾಮದ ಕೊರತೆ, ಶಿಸ್ತುರಹಿತ ಜೀವನ ಶೈಲಿಯಿಂದಾಗಿ ಬೊಜ್ಜು ಮೈನವರ ಸಂಖ್ಯೆ ದಿನೇದಿನೇ ಏರುತ್ತಿದೆ. ಕೆಲವು ಸುಲಭೋಪಾಯಗಳನ್ನು ಅನುಸರಿಸವ ಮೂಲಕ ದೇಹದಲ್ಲಿ ಬೊಜ್ಜು ಶೇಖರಣೆಯಾಗುವುದನ್ನು ತಡೆಯಬಹುದು. ಹೇಗೆಂದರೆ, ಈ ಕೆಳಗಿನ ಸುಲಭ ವಿಧಾನಗಳ ಮೂಲಕ.
ಅವುಗಳಲ್ಲಿ ಮೊದಲನೆಯದು, ಪ್ರತಿದಿನದ ಆಹಾರದಲ್ಲಿ ಸಿಂಹ ಪಾಲು ತಾಜಾ ಹಣ್ಣು ಮತ್ತು ತರಕಾರಿಗಳಿಗಿರಲಿ. ಎರಡನೆಯದು, ನಿರಂತರ ವ್ಯಾಯಾಮ. ಮೂರನೆಯದು, ಕರಿದ ತಿಂಡಿಗಳು, ಮಸಾಲೆ ಪದಾರ್ಥಗಳು, ಮಾಂಸಾಹಾರ, ಮೊಟ್ಟೆ, ದ್ವಿದಳ ಧಾನ್ಯಗಳು, ಸಂಸ್ಕರಿಸಿದ ಹಿಟ್ಟು, ಪಾಲಿಶ್ ಮಾಡಿದ ಅಕ್ಕಿ, ಐಸ್ ಕ್ರೀಂ, ಜಂಕ್‌ಫುಡ್, ಫಾಸ್ಟ್‌ಫುಡ್‌ಗಳಿಂದ ದೂರವಿರಿ. 
ಇವುಗಳೊಂದಿಗೆ, ಪ್ರತಿದಿನ ಮುಂಜಾನೆ ಒಂದು ಲೋಟ ಹದಾ ಬಿಸಿ ನೀರಿಗೆ ನಿಂಬೆರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಹಾಕಿಕೊಂಡು ಕುಡಿಯುವುದರಿಂದ ಅಥವಾ ಟೊಮ್ಯಾಟೊ ಜ್ಯೂಸ್ ಅಥವಾ ಸೌತೇಕಾಯಿ ಜ್ಯೂಸನ್ನು ನಿಯಮಿತವಾಗಿ ಸೇವಿಸುವುದರಿಂದ ಸಹ ಬೊಜ್ಜನ್ನು ಗಣನೀಯ ಪ್ರಮಾಣದಲ್ಲಿ ಕರಗಿಸಬಹುದು. 
ಸ್ವಲ್ಪ ಬಾಯಿಕಟ್ಟಿ ಮತ್ತು ಸ್ವಲ್ಪ ಶ್ರಮಪಡಿ. ಕೆಲವೇ ಸಮಯದಲ್ಲಿ ಬೊಜ್ಜು ಕರಗಿ ಮೊದಲಿನ ಸೌಂದರ್ಯಕ್ಕೆ ಮರಳುತ್ತೀರಿ.
ಬೊಕ್ಕ ತಲೆಗೆ ಇಲ್ಲಿದೆ ಪರಿಹಾರ!
ಸುಮ್ಮನೆ ನಿಮ್ಮ ತಲೆಯ ಮೇಲೊಮ್ಮೆ ಕೈಯಾಡಿಸಿ. ಕೂದಲಿದೆಯೇ, ಹಾಗಾದರೆ ಆರಾಮಾಗಿ ಓದಿ. ನಿಮ್ಮ ತಲೆಯಲ್ಲಿ ಕೂದಲಿಲ್ಲವೇ, ಬೊಕ್ಕ ತಲೆಯೇ, ಹಾಗಾದರೆ ಗಮನವಿಟ್ಟು ಓದಿ! 
ಕೂತೂಹಲಕರ ಸಂಗತಿಯೆಂದರೆ ಮನುಷ್ಯನ ತಲೆಯಲ್ಲಿ ಸರಾಸರಿ 20 ಲಕ್ಷ ಕೂದಲು ಇರುತ್ತವೆ ಮತ್ತು ಅವು ದಿನಕ್ಕೆ 0.3 ಮಿ.ಮೀಟರಿನಷ್ಟು ಬೆಳೆಯುತ್ತಿರುತ್ತದೆ. ಆದರೆ ಕೆಲವರಿಗೆ ತಲೆಯಲ್ಲಿ ಕೂದಲಿಲ್ಲ ಎನ್ನುವ ಸಂಕಟ. ಬಾಂಡ್ಲಿ ಎನ್ನುವ ಹಣೆಪಟ್ಟಿ. ಇಂತವರು ತಲೆ ಕೂದಲಿನ ರಕ್ಷಣೆಗಾಗಿ ಲಕ್ಷಾಂತರ ರೂಗಳನ್ನು ಖರ್ಚು ಮಾಡುತ್ತಾರೆ. ಬೊಕ್ಕ ತಲೆಯ ಮೇಲೆ ಇಂದಲ್ಲಾ ನಾಳೆ ಕೂದಲು ಮೊಳೆಯಬಹುದು ಎನ್ನುವ ನಿರೀಕ್ಷೆಯಲ್ಲಿ ನಾನಾ ಚಿಕಿತ್ಸೆಗಳಿಗೆ ತಲೆಯೊಡ್ಡಿರುತ್ತಾರೆ. 
ಸಾಮಾನ್ಯವಾಗಿ ನಾವು ಸ್ನಾನ ಮಾಡುವಾಗ, ಮಲಗಿದಾಗ ಇತರೆ ಸಂದರ್ಭಗಳಲ್ಲಿ ಒತ್ತಡಕ್ಕೆ ಸಿಲುಕಿ 80-100 ಕೂದಲು ದಿನನಿತ್ಯ ಉದುರಿ ಹೋಗುತ್ತವೆ. ಇದು ಸಹಜ ಪ್ರಕ್ರಿಯೆ. ಗಾಬರಿ ಪಡಬೇಕಾಗಿಲ್ಲ. ನಮ್ಮ ಕೂದಲು ಬೆಳವಣಿಗೆ, ವಿಶ್ರಾಂತಿ ಮತ್ತು ಉದುರುವಿಕೆ ಎಂಬ ಮೂರು ಪ್ರಕ್ರಿಯೆಗಳಿಗೆ ಒಳಪಟ್ಟಿರುತ್ತದೆ. ಆದರೆ ನಿರ್ದಿಷ್ಟ ಪ್ರಮಾಣದ ಸಂಖ್ಯೆಯನ್ನು ಮೀರಿ ಕೂದಲು ಉದುರಲು ಪ್ರಾರಂಭಿಸಿದಾಗ ಸಮಸ್ಯೆ ಪ್ರಾರಂಭವಾಗುತ್ತದೆ. ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯವಾಗಿ ಪುರುಷರಿಗೆ ಸೀಮಿತವಾದ ಸಮಸ್ಯೆ. ಮಹಿಳೆಯರಲ್ಲಿ ಕೂದಲು ಉದುರುವಿಕೆ ಕಂಡು ಬಂದರೂ ಪುರಷರಂತೆ ಪೂರ್ಣ ಬೊಕ್ಕ ತಲೆ ಆಗುವುದು ತೀರಾ ಅಪರೂಪ. 
ಹಾಗಾದರೆ ಕೂದಲು ಉದುರುವಿಕೆಗೆ ಚಿಕಿತ್ಸೆ ಏನು? ತೀವ್ರ ಮಾನಸಿಕ ಒತ್ತಡ, ತೀವ್ರ ಜ್ವರ, ದೇಹದ ತೂಕ ಇಳಿದಾಗ, ಅಪರೇಷನ್ ನಂತರ ಮುಂತಾದ ಸಂದರ್ಭಗಳಲ್ಲಿ ಕೂದಲು ಉದುರುತ್ತವೆ. ಕೆಲವರಲ್ಲಿ ಹಾರ್ಮೋನ್ ವ್ಯತ್ಯಾಸದಿಂದ ಕೂದಲು ಉದರುವುದು ಕಂಡುಬರುತ್ತದೆ. ಮಹಿಳೆಯರಲ್ಲಿ ಹಾರ್ಮೋನ್‌ ಮಾತ್ರೆಗಳ ಬಳಕೆಯಿಂದ ಕೂದಲು ಉದುರುತ್ತಿದ್ದರೆ ವೈದ್ಯರಲ್ಲಿ ಚರ್ಚಿಸಿ ಚಿಕಿತ್ಸೆ ಪಡೆಯಬಹುದು. ಥೈರಾಯ್ಡ್ ಹಾಗೂ ಸಕ್ಕರೆ ಕಾಯಿಲೆ ಇರುವವರಿಗೆ ಕೂಡ ಹಲವು ಚಿಕಿತ್ಸೆಗಳು ಲಭ್ಯವಿದೆ. 
ಯಾವುದೇ ರೋಗವಿಲ್ಲದೆ ಉಂಟಾಗುವ ಬೊಕ್ಕ ತಲೆಗೆ ಕೂದಲನ್ನು ಕಸಿ ಮಾಡುವ ಚಿಕಿತ್ಸೆ ಈಗ ಲಭ್ಯವಿದೆ. ತಲೆಯಲ್ಲಿ ಕೂದಲಿರುವ ಭಾಗದಿಂದ ಕೂದಲುಗಳನ್ನು ಬೇರು ಸಹಿತ ತೆಗೆದು ಕೂದಲಿಲ್ಲದ ಭಾಗಗಳಲ್ಲಿ ಕಸಿ ಮಾಡಲಾಗುತ್ತದೆ. ಆದರೆ ಇದು ಸ್ಪಲ್ಪ ದುಬಾರಿ ಚಿಕಿತ್ಸೆ. ನಿಮಗೆ ಸರಿಹೊಂದುವ ವಿಗ್ ಧರಿಸುವುದು ಸಮಸ್ಯೆಗೆ ಇನ್ನೊಂದು ಪರಿಹಾರ. ಜೊತೆಗೆ ನಿಮಗೆ ಮಾಸಿಕ ಖಿನ್ನತೆಯಿದ್ದರೆ ಅದರಿಂದ ಮೊದಲು ಹೊರಬನ್ನಿ. ಕೂದಲು ಉದುರುವುದು ತಂತಾನೇ ನಿಯಂತ್ರಣಕ್ಕೆ ಬರುತ್ತದೆ. 
ಇದ್ದಕ್ಕಿದ್ದಂತೆ ಕೂದಲು ಉದುರಲು ಪ್ರಾರಂಭಿಸಿದರೆ, ನಿಮ್ಮ ತಲೆ, ಮುಖಗಳಲ್ಲಿ ಅಲ್ಲಲ್ಲಿ ಕೂದಲು ಉದುರುವುದು ಪ್ರಾರಂಭವಾದರೆ ವೈದ್ಯರ ಸಲಹೆ ಅಗತ್ಯ. ಕೂದಲಿಲ್ಲ ಎನ್ನುವ ನಿರಾಶೆಯಲ್ಲಿ ನೀವೇ ಹಲವು ಚಿಕಿತ್ಸೆಗಳ ಪ್ರಯೋಗಕ್ಕೆ ಮುಂದಾಗುವುದು, ಅಥವಾ ವೈದ್ಯರ ಸಲಹೆಯಿಲ್ಲದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೇಶವರ್ಧಿನಿ ತೈಲವನ್ನು ಹಚ್ಚುವುದು ಅತ್ಯಂತ ಅಪಾಯಕಾರಿ. ಅಳಲೆಕಾಯಿ ಪಂಡಿತರ ಮಾತಿಗೆ ಮೋಸ ಹೋಗಬೇಡಿ. ಆಮೇಲೆ ನಿಮ್ಮ ಬೊಕ್ಕ ತಲೆಯಲ್ಲಿ ಒಂದೂ ಕೂದಲು ಹುಟ್ಟುವುದಿಲ್ಲ!
ಆಲೂವಿನ ಹಲವು ಪರಿಣಾಮಕಾರಿ ಗುಣ
ಆಲೂಗಡ್ಡೆಯು ಹೆಚ್ಚು ಜನಪ್ರಿಯ ಆಹಾರಗಳಲ್ಲಿ ಒಂದು. ಇದನ್ನು ಎಲ್ಲ ಖುತುಮಾನಗಳಲ್ಲಿ ಪ್ರಪಂಚದ ವಿವಿಧ ಭಾಗಗಳಲ್ಲಿ ನಾನಾ ರೀತಿಯಾಗಿ ಉಪಯೋಗಿಸುತ್ತಾರೆ. ಇದು ಎಲ್ಲ ವಯಸ್ಸಿನವರಿಗೂ ಹಿತಕಾರಿಯಾಗಿದ್ದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಕ್ಷಾರ ಪ್ರಧಾನ ಆಲೂಗಡ್ಡೆ ಶರೀರದ ಆಮ್ಲತೆ ಕಡಿಮೆ ಮಾಡುತ್ತದೆ ಮತ್ತು ಶರೀರದಲ್ಲಿರುವ ಕ್ಷಾರವನ್ನು ರಕ್ಷಿಸುತ್ತದೆ. 
ಹೊಟ್ಟೆ ಬೇನೆಯಿರುವವರಿಗೆ ಆಲೂವಿನ ರಸ ದಿವ್ಯಔಷಧಿ. ಆಲೂವಿನ ರಸವೂ ಜಠರದಲ್ಲಿ ಆಹಾರವನ್ನು ಹುಳಿಯಾಗಲು ಬಿಡುವುದಿಲ್ಲ. ಜಠರದಲ್ಲಿ ಜೀವಾಣುಗಳಿಗೆ ಉತ್ತೇಜನ ನೀಡುತ್ತದೆ. 
ಡಾ.ಜೆ.ಎಚ್.ಕೆ.ಲಾಂಗ್ ಅವರ ಪ್ರಕಾರ ಆಲೂ ರಸದಿಂದ ಹೊಟ್ಟೆ ಕಟ್ಟುವಿಕೆ ನಿವಾರಣೆಯಾಗುತ್ತದೆ. ರಸದಲ್ಲಿ ಸೋಡಾ ಮತ್ತು ಪೊಟ್ಯಾಷ್ ಇರುವುದರಿಂದ ಶರೀರದ ಆಮ್ಲತೆ ಕೂಡ ಕಡಿಮೆಯಾಗುತ್ತದೆ.
ಮೂಸಂಬಿ ಹಣ್ಣಿನ ಚಿಕಿತ್ಸೆ
ಸಾಮಾನ್ಯವಾಗಿ ಹೃದಯ ದೌರ್ಬಲ್ಯವುಳ್ಳವರು ಮೂಸಂಬಿ ರಸವನ್ನು ಜೇನು ತುಪ್ಪದಲ್ಲಿ ಪ್ರತಿನಿತ್ಯ ಸೇವಿಸುತ್ತಾ ಹೋದರೆ ಉತ್ತಮ ಆರೋಗ್ಯ ಪಡೆದುಕೊಳ್ಳುವರು.
ಮೂಸಂಬಿ ಹಣ್ಣಿನ ರಸವನ್ನು ಸೇವಿಸುವುದರಿಂದ ಆಯಾಸ ಪರಿಹಾರವಾಗುವುದು. ಬಾಯಾರಿಕೆ ಹೋಗಿ ಹಸಿವು ಕಾಣಿಸಿಕೊಳ್ಳುವುದು. ರಕ್ತ ಶುದ್ಧಿಯಲ್ಲಿ ಈ ರಸ ವಿಶೇಷವಾಗಿ ಕಾರ್ಯ ನಿರ್ವಹಿಸುವುದು.
ಗರ್ಭಿಣಿಯರಿಗೆ ಮೂಸಂಬಿ ರಸವನ್ನು ಧಾರಾಳವಾಗಿ ನೀಡಬೇಕು. ಇದರಿಂದ ಹೆರಿಗೆ ಹೆಚ್ಚು ಸುಸೂತ್ರವಾಗುವುದರೊಂದಿಗೆ ತಾಯಿ ಮತ್ತು ಮಗುವಿಗೆ ರೋಗ ನಿರೋಧಕ ಶಕ್ತಿ ವೃದ್ಧಿಗೊಳ್ಳುತ್ತದೆ. ಟೈಫಾಯಿಡ್‌ ಮತ್ತು ಕ್ಷಯರೋಗದಿಂದ ಪೀಡಿತರಾದವರು ಮೂಸಂಬಿ ರಸವನ್ನು ನಿಯಮಿತವಾಗಿ ಸೇವಿಸುತ್ತಾ ಹೋದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ಕರಿಎಳ್ಳಿನ ಚಿಕಿತ್ಸೆ
ಗರ್ಭಧರಿಸಿದ ಪ್ರಾರಂಭದ ದಿನಗಳಲ್ಲಿ ಗರ್ಭಪಾತವಾಗಬೇಕೆಂದು ಬಯಸಿದರೆ ಕರಿ ಎಳ್ಳಿಗೆ ತಾಟಿ ಬೆಲ್ಲ ಕೂಡಿಸಿ ಕುಟ್ಟಿ ಚಿಗಳಿ ಮಾಡಿಕೊಂಡು ಪ್ರತಿದಿನ ಏನಿಲ್ಲಾವೆಂದರೂ ಮೂರು ಬಾರಿ ತಿಂದರೆ ಗರ್ಭಪಾತವಾಗುತ್ತದೆ.
ಕರಿ ಎಳ್ಳಿನ ಒಂದು ಚಮಚಕ್ಕೆ ಅರ್ಧ ಚಮಚದಷ್ಟು ಕಲ್ಲು ಸಕ್ಕರೆಯ ಪುಡಿಯನ್ನು ಬೆರೆಸಿ ಜಗಿದು ತಿಂದು, ನಂತರ ಮೇಕೆಯ ಹಾಲನ್ನು ಸೇವಿಸಬೇಕು. ಇದೇ ರೀತಿಯಾಗಿ 13 ದಿನಗಳ ವರೆಗೆ ಮಾಡುವುದರಿಂದ ಮೂಲವ್ಯಾಧಿಯಲ್ಲಿ ರಕ್ತ ಬೀಳುವುದು ನಿಲ್ಲುತ್ತದೆ.
ಸುಟ್ಟಗಾಯಗಳನ್ನು ಶೀಘ್ರವೇ ಗುಣಪಡಿಸಲು ಕರಿ ಎಳ್ಳಿನ ಎಣ್ಣೆಯನ್ನು ಹಚ್ಚಬೇಕು. ರಕ್ತ ಪುಷ್ಟಿ ಇಲ್ಲದ ಅವಿವಾಹಿತ ತರುಣಿಯರ ಮುಟ್ಟು ನೋವು ಶಾಂತವಾಗಲು ಒಂದು ಟೀ ಸ್ಪೂನ್‌ ಕರಿ ಎಳ್ಳಿನ ಪುಡಿಯನ್ನು ಬಿಸಿ ಹಾಲಿನೊಂದಿಗೆ ಸೇವಿಸ ಬೇಕು.
ಕರಿ ಎಳ್ಳು ಮತ್ತು ಬೇವಿನ ಎಲೆಗಳನ್ನು ತೆಗೆದು ಕೊಂಡು ಹರಳೆಣ್ಣೆಯಲ್ಲಿ ಹುರಿದುಕೊಳ್ಳಬೇಕು. ಅರಿಶಿನ ಕರ್ಪೂರದ ಜೊತೆಗೆ ಅರೆದು ಅದನ್ನು ಮುಲಾಮು ಮಾಡಿಕೊಂಡು ಗಾಯಗಳಿಗೆ ಲೇಪಿಸಿದರೆ ಗಾಯಗಳು ಬಹು ಬೇಗ ವಾಸಿಯಾಗುವುವು.
ವಿವಿಧ ರೋಗಗಳಿಗೆ ಎಳ್ಳು ಚಿಕಿತ್ಸೆ
ಕರಿ ಎಳ್ಳು ಮತ್ತು ಬೇವಿನ ಎಲೆಗಳನ್ನು ತೆಗೆದು ಕೊಂಡು ಹರಳೆಣ್ಣೆಯಲ್ಲಿ ಹುರಿದು ಕೊಳ್ಳಬೇಕು. ಅರಿಶಿನ ಕರ್ಪೂರದ ಜೊತೆಗೆ ಅರೆದು ಮುಲಾಮು ಮಾಡಿಕೊಂಡು ಗಾಯಗಳಿಗೆ ಹಚ್ಚಿದರೆ ಗಾಯಗಳು ಬಹುಬೇಗ ವಾಸಿಯಾಗುವುವು. ಗರ್ಭಧರಿಸಿದ ಪ್ರಾರಂಭದ ದಿನಗಳಲ್ಲಿ ಗರ್ಭಪಾತವಾಗಬೇಕೆಂದು ಬಯಸಿದರೆ ಕರಿ ಎಳ್ಳಿಗೆ ತಾಟಿ ಬೆಲ್ಲ ಸೇರಿಸಿಕುಟ್ಟಿ ಚಿಗಳಿ ಮಾಡಿಕೊಂಡು ದಿನಕ್ಕೆ ಮೂರು ಬಾರಿ ತಿಂದರೆ ಗರ್ಭಪಾತವಾಗುವುದು. 
ಕರಿಯ ಎಳ್ಳಿಗೆ ಒಂದು ಚಮಚಕ್ಕೆ ಅರ್ಧ ಚಮಚ ಕಲ್ಲು ಸಕ್ಕರೆಯ ಪುಡಿಯನ್ನು ಬೆರೆಸಿ ಜಗಿದುತಿಂದು, ಬಳಿಕ ಮೇಕೆಯ ಹಾಲನ್ನು ಕುಡಿಯಯ ಬೇಕು. 13 ದಿನಗಳ ಕಾಲ ವರೆಗೆ ಈ ರೀತಿ ಮಾಡುವುದರಿಂದ ಮೂಲವ್ಯಾಧಿಯಲ್ಲಿ ರಕ್ತಬೀಳುವುದು ನಿಂತುಹೋಗುತ್ತದೆ. ಸುಟ್ಟಗಾಯಗಳನ್ನು ಶೀಘ್ರವೇ ಗುಣಪಡಿಸಲು ಕರಿ ಎಳ್ಳಿನ ಎಣ್ಣೆಯನ್ನು ಹಚ್ಚಬೇಕು. 
ಶಕ್ತಪುಷ್ಠಿ ಇಲ್ಲದ ಅವಿವಾಹಿತ ತರುಣಿಯರ ಮುಟ್ಟುನೋವು ಶಾಂತವಾಗಲು ಒಂದು ಟೀಸ್ಪೂನ್‌ ಕರಿ ಎಳ್ಳಿನ ಪುಡಿಯನ್ನು ಬಿಸಿಯ ಹಾಲಿನೊಂದಿಗೆ ಸೇವಿಸಬೇಕು. 
ಎಳ್ಳೆಣ್ಣೆಯನ್ನು ಅಂಗಾಂಗಗಳಿಗೆ ತಿಕ್ಕಿಕೊಂಡು ಸ್ವಲ್ಪ ಸಮಯ ನನೆದು ಬಿಸಿ ನೀರಿನಿಂದ ಸ್ನಾನ ಮಾಡಿದರೆ ಮೈಕೈ ನೋವು ಮಾಯವಾಗುವುದು. ಚರ್ಮರೋಗ ಬರುವ ಸಂಭವವಿಲ್ಲ.
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ ಸೇವನೆಯು ಪಿತ್ತಕೋಶದ ಕ್ಯಾನ್ಸರ್ ಸಾಧ್ಯತೆಯನ್ನ ತಡೆಯುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
ನೇಪಲ್ಸ್‌ನ ಇಸ್ಟಿಟ್ಯೂಟೊ ಟ್ಯೂಮೊರಿಯ ಸಂಶೋಧಕರು ಈ ಅಂಶವನ್ನು ಪತ್ತೆ ಹಚ್ಚಿದ್ದಾರೆ.
ಪಿತ್ತಕೋಶದ ಸೋಂಕಿನಿಂದುಂಟಾಗುವ ಹೆಪಟೊಸೆಲ್ಯುಲರ್ ಕಾರ್ಸಿನೊಮ ಎಂಬ ಪಿತ್ತಕೋಶದ ಕಾನ್ಸರ್ ಅಭಿವೃದ್ಧಿಶೀಲ ಜಗತ್ತಿನಲ್ಲಿ ಮಾಮೂಲಿಯಾಗುತ್ತಿದೆ ಎಂದು ಹೇಳಿರುವ ಅಧ್ಯಯನ ಈ ಅಪಾಯವನ್ನು ತಪ್ಪಿಸುವಲ್ಲಿ ಕಾಫಿ ಸೇವನೆ ಸಹಕರಿಸುತ್ತದೆ ಎಂದು ಹೇಳಿದೆ.
ಇಟಲಿಯಲ್ಲಿ ಕಾಫಿ ಸೇವನೆ ಅಧಿಕ. ಸಂಶೋಧಕರು ತಮ್ಮ ಕಾಫಿ-ಕಾನ್ಸರ್ ಸಂಬಂಧದ ಅಧ್ಯಯನಕ್ಕಾಗಿ ಕ್ಯಾನ್ಸರ್ ಪೀಡಿತ 185 ಮಂದಿ ಹಾಗೂ ರೋಗ ನಿಯಂತ್ರಿತ 412 ಮಂದಿಯನ್ನು ಆಯ್ದುಕೊಂಡಿದ್ದರು.
ವಾರದಲ್ಲಿ ಕನಿಷ್ಠ ಪಕ್ಷ 28 ಕಪ್ ಕಾಫಿ ಕುಡಿಯುವವರಲ್ಲಿ, ವಾರಕ್ಕೆ 14 ಕಪ್‌ಗಿಂತ ಕಡಿಮೆ ಕಾಫಿ ಕುಡಿಯುವವರಿಗಿಂದ ಕ್ಯಾನ್ಸ್‌ರ್ ಅಪಾಯ ಕಡಿಮೆ ಇದೆ. ಆದರೆ ವಾರಕ್ಕೆ 14ಕಪ್‌ಗಿಂತಲೂ ಕಡಿಮೆ ಕಾಫಿ ಕುಡಿಯುವವರಿಗಿಂತ ಕಾಫಿ ಕುಡಿಯದೇ ಇರುವವರಲ್ಲಿ ಕ್ಯಾನ್ಸರ್ ಅಪಾಯ ದುಪ್ಪಟ್ಟು ಹೆಚ್ಚಿದೆ ಎಂದು ಅಧ್ಯಯನ ಕಂಡುಕೊಂಡಿದೆ.
ಹೆಪಟೈಟಿಸ್ ಹಾಗೂ ಮದ್ಯಪಾನಕ್ಕೆ ನೇರ ಸಂಬಂಧವಿದೆ. ಆದರೆ ಚಹಾ ಅಥವಾ ಕೆಫೆನ್ ರಹಿತ ಕಾಫಿ ಹಾಗೂ ಕ್ಯಾನ್ಸರ್ ತಡೆಗೂ ಯಾವುದೇ ಸಂಬಂಧವಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ಆದರೆ ಕಾಫಿಯಲ್ಲಿರುವ ಇತರ ಹಲವಾರು ಅಂಶಗಳು ಮದ್ಯಪಾನ ಅಥವಾ ಅಮಲು ಪದಾರ್ಥಗಳಿಂದಾಗಿ ಲಿವರ್‌ಗೆ ಉಂಟುಮಾಡುವ 
ಹಾನಿಯನ್ನು ತಡೆಯಬಹುದೆಂದು ಹೇಳಲಾಗಿದೆ.
ಮನೆಯಲ್ಲೇ ಮೊಡವೆಗಳಿಗೆ ಔಷಧಿ
೧. ಮೆಣಸನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಾ ಬಂದರೆ ಕೆಲವೇ ದಿನಗಳಲ್ಲಿ ಮೊಡವೆಗಳು ಮುಖದಲ್ಲಿ ಇಲ್ಲದಂತಾಗುವುದು.
೨. ಕೊತ್ತಂಬರಿಸೊಪ್ಪಿನ ರಸದೊಂದಿಗೆ ನಿಂಬೆರಸ ಮಿಶ್ರ ಮಾಡಿ, ಕ್ರಮವಾಗಿ ಹಚ್ಚುತ್ತಿದ್ದರೆ ಮೊಡವೆ ಹಾಗೂ ಚರ್ಮದ ಮೇಲಿನ ಕಲೆಗಳು ಕಣ್ಮರೆ ಆಗುವುವು.
೩. ಬಾದಾಮಿ ಬೀಜಗಳನ್ನು ಶುದ್ಧವಾದ ಹಸುವಿನ ಹಾಲಿನಲ್ಲಿ ಅರೆದು, ಹತ್ತಿಯೊಂದಿಗೆ ಆ ಮಿಶ್ರಣವನ್ನು ಅದ್ದಿ ಮೊಡವೆಯ ಮೇಲೆ ಸವರುತ್ತಿದ್ದರೆ ಮೊಡವೆಯ ಗುರುತು ಮಾಯವಾಗುವುದು.
೪. ಸೇಬಿನ ಹಾಗೂ ನಿಂಬೆಯ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ನುಣ್ಣಗೆ ಅರೆದು ಪುಡಿ ಮಾಡಿ ಚೂರ್ಣವನ್ನು ಹಾಲಿನಲ್ಲಿ ಬೆರೆಸಿ ಮೊಡವೆಗಳಿಗೆ ಹಚ್ಚಿದರೆ ಶೀಘ್ಹ್ರದಲ್ಲಿಯೇ ಮೊಡವೆಯ ಗುಳ್ಳೆ ಕರಗುವುದು.
೫. ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ವಾರದ ಒಳಗಾಗಿ ಮೊಡವೆ ಗುಳ್ಳೆಗಳು ಮಾಯ ಆಗುವುವು. ಜೊತೆಗೆ ಮುಖ ಕಾಂತಿ ಹೆಚ್ಚುವುದು.
೬. ಎಳೆನೀರಿನಲ್ಲಿ ಕೆಲವು ವಾರ ಮುಖ ತೊಳೆಯುತ್ತಿದ್ದರೆ ಮೊಡವೆಗಳು ಮಾಗುತ್ತವೆ. ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಮಾಯ ಆಗುವುವು. ಮುಖದ ಮೇಲೆ ಹೊಳಪು ಹೆಚ್ಚುವುದು.
೭. ಕಿತ್ತಲೆ ಸಿಪ್ಪೆಯನ್ನು ಮುಖದಮೇಲೆ ಉಜ್ಜುತ್ತಿದ್ದರೆ ಅದರಿಂದ ಸುವಾಸನೆಯ ದ್ರವ ಹೊರಬಂದು ಮೊಡವೆ ಗುಳ್ಳೆಗಳು ಒಣಗುವುವು.
೮. ನಿಂಬೇರಸದಲ್ಲಿ ದಾಲ್ಚಿನ್ನಿಯನ್ನು ತೇಯ್ದು ಮೊಡವೆಗಳಿಗೆ ಹಚ್ಚಿದರೆ ಬೇಗ ಒಣಗುವುವು.
೯. ಗರಿಕೆ ಹುಲ್ಲಿನ ರಸವನ್ನು ಮುಖದಮೇಲೆ ಲೇಪಿಸುವುದರಿಂದ ಮೊಡವೆಗಳು ಮಾಗುವುವು.
೧೦. ಹಿಂಗನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಿದ್ದರೂ ಸಹಾ ಮೊಡವೆ ಗುಳ್ಳೆಗಳು ಮುಖದ ಮೇಲೆ ಕಾಣದಂತಾಗುವುದು. 
ಇದಕ್ಕಿಂತ ಮುಖ್ಯವಾಗಿ ಈ ಯಾವುದೇ ಚರ್ಮ ರೋಗಗಳು ಬರುವುದು ಹೊಟ್ಟೆಯೊಳಗಿಂದ. ಹೊಟ್ಟೆ ಶುದ್ಧ ಆಗಿದ್ದರೆ ಯಾವುದೇ ತರಹದ ಚರ್ಮ ರೋಗಗಳು ಬರುವುದಿಲ್ಲ. ಇದಕ್ಕಾಗಿ ತಿಂಗಳಿಗೆ ಒಂದು ಸಲ ಭೇದಿ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದ ಪಕ್ಷದಲ್ಲಿ ಹೊಟ್ಟುಳ್ಳ ಧಾನ್ಯಗಳನ್ನು ಸೇವಿಸಬೇಕು. ನಮ್ಮ ದೇಹವೂ ಸಹಾ ನಮ್ಮ ಮನೆಯಲ್ಲಿರುವ ಚರಂಡಿಯಂತೆ. ಮನೆಯಲ್ಲಿರುವ ಚರಂಡಿಗೆ ಏನೇನೊ ಹಾಕಿದರೆ ಹೇಗೆ ಮನೆಯೆಲ್ಲಾ ಹಾಳಾಗುತ್ತದೋ, ಅದೇ ರೀತಿ ನಮ್ಮ ದೇಹದ ಚರಂಡಿ ಕೂಡ. ಎಣ್ಣೆಯಲ್ಲಿ ಕರಿದ ತಿಂಡಿಗಳು, ಮೈದಾ ಹಿಟ್ಟಿನಿಂದ ಮಾಡಿದ ಸಿಹಿ ತಿಂಡಿಗಳು ಮತ್ತು ಕರಿದ ತಿಂಡಿಗಳು, ಮೈದಾ ದೋಸೆ, ಮೈದಾ ಬ್ರೆಡ್ ಇತ್ಯಾದಿಗಳನ್ನು ತಿಂದರೆ ಹೊರಗಿನ ಯಾವ ಔಷಢಿಗಳಿಗೂ ಈ ರೋಗಗಳು ವಾಸಿಯಾಗುವುದಿಲ್ಲ. ವೃಥಾ ಹಣ ಪೋಲು.
ಗಂಟಲು ನೋವು
೨)-ಸೋಮಾರಿ ಬೇರನ್ನು ಲಿಂಬೆರಸದಲ್ಲಿ ತೇಯ್ದು ಗಂಟಲಿನ ಹೊರ್ಭಾಗಕ್ಕೆ ಹಚ್ಚಬೇಕು.
೩)-ಉಪ್ಪಿನಕಾಯಿಯನ್ನು ಸ್ವಲ್ಪ ತೆಗೆದುಕೊಂಡು ಗಂಟಲು ಮೂಳೆಗೆ(ಕೆನ್ನಾಲಿಗೆಗೆ) ಹಚ್ಚಬೇಕು. ಬಂದ ಎಂಜಲನ್ನು ಉಗುಳಬೇಕು.
೪)-ಸ್ವಲ್ಪ ಬಿಸಿನೀರನ್ನು ಕುಡಿಯುತ್ತಿರಬೇಕು
ಅಜೀರ್ಣದಿಂದ ಹೊಟ್ಟೆ ಉಬ್ಬರಿಸಿದರೆ: 
೧)-ಊಟದ ಜೊತೆ ಬೆಳ್ಳುಳ್ಳಿ ತಿನ್ನಬೆಕು.
೨)-ಹಸಿ ಶುಂಠಿಯನ್ನು ತಿನ್ನಬೇಕು.
೩)-ಸ್ವಲ್ಪ ಜೀರಿಗೆಯನ್ನು ಅಗಿದು ತಿನ್ನಬೇಕು.
ಆಮಶಂಕೆಯಲ್ಲಾಗುವ ರಕ್ತಸ್ರಾವ ತಡೆಗಟ್ಟಲು: 
ನಿಂಬೆಹಣ್ಣಿನ ಪಾನಕಕ್ಕೆ ಅಡಿಗೆ ಉಪ್ಪನ್ನು ಸೇರಿಸಿ ಕುಡಿಯುವುದರಿಂದ ಸ್ವಲ್ಪಮಟ್ಟಿನ ಗುಣ ಕಂಡುಬರುವುದು.
ಮೂತ್ರದ ಕಟ್ಟುವಿಕೆ:
೧)-ಚೆನ್ನಾಗಿ ಮಾಗಿದ ಅನಾನಸ್ ಹಣ್ಣಿನಿಂದ ತಯಾರಿಸಿದ ಪಾನಕ(ರಸ) ಸೇವಿಸಬೇಕು.
೨)-ಬಾಳೆಪಟ್ಟಿಯನ್ನು ಹಿಂಡಿ ರಸ ತೆಗೆದು ಒಂದು ಕಪ್ ರಸಕ್ಕೆ ಒಂದು ಸ್ಪೂನ್ ಹಸುವಿನ ತುಪ್ಪ ಸೇರಿಸಿ ಕುಡಿಯಬೇಕು.
ತಕ್ಷಣವೇ ಮೂತ್ರ ಸರಾಗವಾಗಿ ವಿಸರ್ಜನೆಯಾಗುತ್ತದೆ.
೩)-ಒಂದು ಕಪ್ ಟೀ ತಯಾರಿಸಿ ಅದಕ್ಕೆ ಒಂದು ಚಿಟಿಕೆ ಏಲಕ್ಕಿಪುಡಿ ಸೇರಿಸಿ ಕುಡಿದರೆ ಸರಾಗ ಮೂತ್ರವಿಸರ್ಜನೆಯಾಗುತ್ತದೆ.
೪)-ಕಬ್ಬಿನ ಹಾಲಿಗೆ ಎಳೆನೀರು, ಹಸಿಶುಂಠಿರಸ, ನಿಂಬೆರಸ ಸೇರಿಸಿ ಸೇವಿಸುವುದರಿಂದ ಗುಣಕಾರಿ.
೫)-ಎಳೆನೀರನ್ನು ಸೇವಿಸಿ.
೬)-ಮೂಲಂಗಿ ಸೊಪ್ಪಿನ ರಸ ಕುಡಿಯಬೇಕು.
ಜೇನುನೊಣ ಕಚ್ಚಿದಾಗ:
ಈರುಳ್ಳಿಯನ್ನು ಹೋಳುಮಾಡಿ ಒಂದು ಹೋಳಿನಿಂದ ಕಚ್ಚಿದ ಜಾಗಕ್ಕೆ ತಿಕ್ಕಬೇಕು.
ಶ್ರವಣಶಕ್ತಿ ಹೆಚ್ಚಿಸಲು: 
ಒಂದು ಬಟ್ಟಲು ಮಾವಿನಹಣ್ಣಿನ ರಸವನ್ನು ಹಾಲು ಮತ್ತು ಜೇನಿನೊಂದಿಗೆ ಪ್ರತಿದಿನ ಸೇವಿಸಬೇಕು.
ವಿಷಾಹಾರ ಸೇವಿಸಿದಾಗ: ಒಂದು ಟೀ ಚಮಚದಷ್ಟು ಸಾಸಿವೆ ಪುಡಿಯನ್ನು ಉಗುರುಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯಬೇಕು.
ನಿದ್ರೆ ಬಾರದಿದ್ದರೆ:
 ಗಸಗಸೆಯ ಹಾಲನ್ನು ತೆಂಗಿನಕಾಯಿಯ ಹಾಲಿನೊಂದಿಗೆ ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಸೇವಿಸಬೇಕು.

2 comments:

  1. I am really surprised by the quality of your constant posts.You really are a genius, I feel blessed to be a regular reader of such a blog Thanks so much
    onlinekaj.com/
    What is love
    Mobile price bd
    font copy and paste

    ReplyDelete